ಅಪ್ಪು ಎರಡನೇ ತಿಂಗಳ ಕಾರ್ಯಕ್ಕೆ ಸಮಾಧಿ ಬಳಿಗೆ ಅಮೇರಿಕಾದಿಂದ ಬಂದ ಈ ಮಹಿಳೆ ನಿಜಕ್ಕೂ ಯಾರು ಗೊತ್ತಾ.. ಅಪ್ಪುಗೆ ಏನಾಗಬೇಕು ಗೊತ್ತಾ..

0 views

ಪುನೀತ್ ರಾಜ್ ಕುಮಾರ್ ಅವರು ಅಗಲಿ ಇಂದಿಗೆ ಎರಡು ತಿಂಗಳು ಕಳೆದೇ ಹೋಯಿತು.. ನೋಡು ನೋಡುತ್ತಿದ್ದಂತೆ ದಿನಗಳು ಕಳೆದವು ಹೊರತು ನೋವು ಮಾತ್ರ ಕಡಿಮೆಯಾಗಲಿಲ್ಲ..‌ ಅಪ್ಪು ಅಗಲಿಕೆಯ ಸಂಕಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.. ಈಗಲೂ ಅವರ ನಗುಮುಖದ ಫೋಟೋ ನೋಡಿದಾಗ ಹೇಗಾಗಿ ಹೋಯ್ತು ಇದೆಲ್ಲಾ.. ಈಗ ನಡೆಯುತ್ತಿರುವ ಆಗು ಹೋಗುಗಳನ್ನು ನೋಡಲು ಅಪ್ಪು ಇಲ್ಲ.. ಮುಂದೆಂದೂ ಅವರು ಬರೋದಿಲ್ಲ.. ಮತ್ತೆ ಎಲ್ಲಿಯೂ ಮಾತನಾಡೋದಿಲ್ಲ ಎಂದು ಒಂದು ಕ್ಷಣ ನೆನೆದರೂ ಹೊಟ್ಟೆಯಲ್ಲಿ ಏನೋ ಒಂದು ರೀತಿ ಸಂಕಟ ತರುತ್ತದೆ.. ಇನ್ನು ಇಂದು ಪುನೀತ್ ಅವರ ಎರಡನೇ ತಿಂಗಳ ಕಾರ್ಯದ ಕಾರಣ ಅಪ್ಪು ಸಮಾಧಿಗೆ ಅಶ್ವಿನಿ ಅವರು ಹಾಗೂ ಕುಟುಂಬಸ್ಥರು ತೆರಳಿ ಪೂಜೆ ಸಲ್ಲಿಸಿ ಬಂದಿದ್ದಾರೆ.. ಆದರೆ ಇಂದು ಅದೇ ಜಾಗಕ್ಕೆ ಮತ್ತೊಬ್ಬ ಮಹಿಳೆ ಬಂದಿದ್ದು ಅವರನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ..

ಹೌದು ಪುನೀತ್ ಅವರ ಅಗಲಿಕೆಯ ನೋವನ್ನು ಒಂದು ಕಡೆ ಕುಟುಂಬದವರು ಅ‌ನುಭವಿಸುತ್ತಿದ್ದರೆ ಮತ್ತೊಂದು ಕಡೆ ಅಭಿಮಾನಿಗಳು ಅನುಭಬಿಸುತ್ತಿದ್ದಾರೆ.. ಆದರೆ ವಾಸ್ತವ ಅರಿತು ಮುಂದೆ ಸಾಗಲೇ ಬೇಕಾದ್ದರಿಂದ ಅತ್ತ ಅಶ್ವಿನಿ ಅವರು ಪುನೀತ್ ಅವರ ಸಿನಿಮಾಗಳ ಕನಸನ್ನು ನನಸು ಮಾಡಲು ಮುಂದಾಗಿದ್ದು ಆ ಕೆಲಸಗಳಲ್ಲಿ ತಮ್ಮ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ.. ಮತ್ತೊಂದು ಕಡೆ ಶಿವಣ್ಣ ತಮ್ಮ ಸಿನಿಮಾ ಕೆಲಸ ಹಾಗೂ ಸ್ನೇಹಿತರು ಮತ್ತು ಶಕ್ತಿಧಾಮದ ಮಕ್ಕಳ ಜೊತೆಗೆ ಸಮಯ ಕಳೆಯುವ ಮೂಲಕ ನೋವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.. ಆದರೂ ಇಷ್ಟು ಚಿಕ್ಕ ವಯಸ್ಸಿಗೆ ಪುನೀತ್ ಅವರ ಬಗ್ಗೆ ಭಗವಂತ ತೆಗೆದುಕೊಂಡ ನಿರ್ಣಯ ನಿಜಕ್ಕೂ ಎಂದೂ ಸಹ ಕ್ಷಮಿಸಲಾಗದ್ದು ಎಂಬುದು ಅಷ್ಟೇ ಸತ್ಯ.. ಇನ್ನು ಇತ್ತ ಪುನೀತ್ ಅವರ ಅಭಿಮಾನಿಗಳು ಮಾತ್ರವಲ್ಲದೇ ನಾಡಿನ ಎಲ್ಲರೂ ಸಹ ಪುನೀತ್ ಅವರಿಗಾಗಿ ಕಣ್ಣೀರಿಟ್ಟಿದ್ದರು..

ಆದರೆ ತಮ್ಮ ತಮ್ಮ ಜೀವನ ಮುಂದೆ ಸಾಗಿಸುವತ್ತ ದಿನನಿತ್ಯದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದರೂ ಸಹ ಪುನೀತ್ ಅವರ ಫೋಟೋ ಬ್ಯಾನರ್ ಅಥವಾ ಸಿನಿಮಾಗಳನ್ನು ನೋಡಿದರೆ ಸಂಕಟ ವಾಗುತ್ತದೆ..ಇನ್ನು ಕೆಲವರು ಕಣ್ಣೀರು ಹಾಕಿ ಅಸಾಹಯಕತೆಯಿಂದ ಸುಮ್ಮನಾದರೆ ಮತ್ತೆ ಕೆಲವರು ಈಗಲೂ ಪುನೀತ್ ಅವರ ಸಮಾಧಿ ಬಳಿ ತೆರಳಿ ಅವರ ದರ್ಶನ ಪಡೆದು ಕೈ ಮುಗಿದು ಬರುತ್ತಿದ್ದಾರೆ.. ಹೌದು ಎರಡು ತಿಂಗಳಾದರೂ ಸಹ ಈಗಲೂ ಪ್ರತಿದಿನ ಸಾವಿರಾರು ಜನರು ಸಮಾಧಿ ಬಳಿ ಆಗಮಿಸಿ ಪೂಜೆ ಸಲ್ಲಿಸಿ ಕೈ ಮುಗಿಯುತ್ತಿದ್ದಾರೆ.. ಇಂದು ಸಹ ಎರಡನೇ ತಿಂಗಳ ಕಾರ್ಯವೆಂದು ಒಂದು ಕಡೆ ಅಭಿಮಾನಿಗಳು ಮುಂಜಾನೆಯಿಂದಲೇ ಸಮಾಧಿ ಅವರ ಬಳಿ ಆಗಮಿಸಿ ಪೂಜೆ ಸಲ್ಲಿಸಿದರೆ.. ಮತ್ತೊಂದು ಕಡೆ ಅಶ್ವಿನಿ ಅವರು ಹಾಗೂ ಕುಟುಂಬಸ್ಥರು ಆಗಮಿಸಿ ಪೂಜೆ ಸಲ್ಲಿಸಿ ಕಾರ್ಯ ಮಾಡಿ ಹೋದರು..

ಆದರೆ ಅದೇ ಜಾಗಕ್ಕೆ ಮತ್ತೊಬ್ಬ ವ್ಯಕ್ತಿ ಬಂದಿದ್ದು ಇವರ ಕತೆ ಕೇಳಿದರೆ ನಿಜಕ್ಕೂ ಆಶ್ವರ್ಯವಾಗುತ್ತದೆ.. ಹೌದು ಪುನೀತ್ ಅವರ ಎರಡನೇ ತಿಂಗಳ ಕಾರ್ಯಕ್ಕೆ ಅಮೇರಿಕಾದಿಂದ ಒಬ್ಬ ಮಹಿಳೆ ಆಗಮಿಸಿದ್ದರು.. ಹೌದು ಅಷ್ಟಕ್ಕೂ ಅಷ್ಟು ದೂರದಿಂದ ಬಂದಿರುವ ಈ ಮಹಿಳೆ ಯಾರು.. ಪುನೀತ್ ಅವರ ಸಂಬಂಧಿಕರಾ.. ಸ್ನೇಹಿತರಾ ಅಥವಾ ಆಪ್ತರ ಎಂಬ ಪ್ರಶ್ನೆ ಮೂಡುವುದು ಸಹಜ ಆದರೆ.. ಆದರೆ ಈಕೆ ಪುನೀತ್ ಅವರಿಗೆ ಸಂಬಂಧಿಕಳೂ ಅಲ್ಲ ಸ್ನೇಹಿತರೂ ಅಲ್ಲ.. ಆಪ್ತರೂ ಅಲ್ಲ.. ಹೌದು ಈಕೆಯ ಹೆಸರು ಲಿಂದಾ ಅಮೇರಿಕಾದ ಕ್ಯಾಲಿಫೋರ್ನಿಯಾ ನಿವಾಸಿ.. ಈಕೆ ಅಷ್ಟು ದೂರದಿಂದ ಇಂದು ಪುನೀತ್ ಅವರ ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ.. ಇವರು ಮತ್ಯಾರೂ ಅಲ್ಲ ಪುನೀತ್ ಅವರ ಅಭಿಮಾನಿ..‌ ಹೌದು ಅಭಿಮಾನಿಗಳನ್ನು ದೇವರೆಂದ ಕುಟುಂಬ ಅದು.. ದೇವರಂತೆಯೇ ಕಂಡ ಕುಟುಂಬ ಅದು..

ಅಂತಹ ಕುಟುಂಬದ ಕುಡಿಯನ್ನು ನೋಡಲು ಅಮೇರಿಕಾದಿಂದ ಅದೇ ಅಭಿಮಾನಿ ದೇವರು ಆಗಮಿಸಿದ್ದಾರೆ.. ಹೌದು ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಅಭಿಮಾನಿಗಳು ಪುನೀತ್ ಅವರ ಸಮಾಧಿ ಬಳಿಗೆ ಆಗಮಿಸಿ ದರ್ಶನ ಮಾಡಿದ್ದಾರೆ.. ಅನೇಕರು ಕಾಲ್ನಡಿಗೆಯಲ್ಲಿ ನೂರಾರು ಕಿಲೋಮೀಟರ್ ನಿಂದ ಬಂದು ದೇವರ ದರ್ಶನ ಪಡೆಯುವಂತೆ ಪುನೀತ್ ಅವರ ದರ್ಶನ ಪಡೆದಿದ್ದಾರೆ.. ಈಗ ಅದೇ ದೇವರ ಕಾಣಲು ಅಭಿಮಾನಿ ದೇವರು ಅಮೇರಿಕಾದಿಂದ ಆಗಮಿಸಿದ್ದು ನಿಜಕ್ಕೂ ಇವರ ಕತೆ ಕೇಳಿ ಆಶ್ವರ್ಯವಾಗಿದೆ.. ಹೌದು ಲಿಂದಾ ಸಾಕಷ್ಟು ವರ್ಷಗಳಿಂದ ಪುನೀತ್ ಅವರ ಅಭಿಮಾನಿ.. ಅವರ ಎಲ್ಲಾ ಸಿನಿಮಾಗಳನ್ನು ನೋಡುತ್ತಿದ್ದರಂತೆ.. ಕನ್ನಡ ಅರ್ಥವಾಗದ ಕಾರಣ ಇಂಗ್ಲೀಷ್ ಸಬ್ ಟೈಟಲ್ ಗಳಲ್ಲಿ ಸಿನಿಮಾ ನೋಡಿ ಸಂತೋಷ ಪಡುತ್ತಿದ್ದರಂತೆ..

ಅಪ್ಪು ಅಗಲಿದ ವಿಚಾರ ತಿಳಿದು ಬಹಳ ದುಃಖದಲ್ಲಿದ್ದ ಲಿಂದಾ ಪುನೀತ್ ಅವರ ಸಮಾಧಿಯ ದರ್ಶನ ಪಡೆಯಲೆಂದೇ ಇದೊಂದೇ ಕಾರಣಕ್ಕೆ ಭಾರತಕ್ಕೆ ಆಗಮಿಸಿದ್ದಾರೆ.. ಹೌದು ಪುನೀತ್ ಅವರನ್ನು ನೋಡುವ ಸಲುವಾಗಿ ಭಾರತಕ್ಕೆ ವೀಸಾ ಪಡೆದು ಸಾಗರ ದಾಟಿ ಬಂದಿದ್ದಾರೆ.. ಇದೇ ಅಲ್ಲವೇ ನಿಷ್ಕಲ್ಮಶವಾದ ಅಭಿಮಾನ.. ವ್ಯಕ್ತಿ ಇದ್ದಾಗ ಆತನನ್ನು‌ ನೋಡಲು ಬರುವುದು ಸಹಜ.. ಆದರೆ ಆ ವ್ಯಕ್ತಿ ಇಲ್ಲವಾದ ಬಳಿಕ ಅವರ ಸಮಾಧಿ ದರ್ಶನ ಮಾಡುವ ಸಲುವಾಗಿ ಸಾವಿರಾರು ಕಿಲೋಮೀಟರ್ ದೂರದಿಂದ ಸಾಗರಗಳ ದಾಟಿ ಬರುವುದು ಎಂದರೆ ಅದು ಮಾತಿನಲ್ಲಿ ಹೇಳಿದಷ್ಟು ಸುಲಭದ ಮಾತಲ್ಲ.. ಇತ್ತ ಲಿಂದಾ ಅವರ ವಿಚರ ತಿಳಿದು ಅಶ್ವಿನಿ ಅವರು ಲಿಂದಾ ಅವರನ್ನು ಮಾತನಾಡಿಸಿ ಯೋಗಕ್ಷೇಮ ವಿಚಾರಿಸಿದ್ದಾರೆ.. ನಿಜಕ್ಕೂ ಪುನೀತ್ ಅವರು ಹೋದ ಬಳಿಕ ಜನರಿಗೆ ಮನಸ್ಸಿನಲ್ಲಿ ಆಗುತ್ತಿರುವ ನೋವು ಅಭಿಮಾನಿಗಳ ಸಂಕಟ ಎಂದೂ ಸಹ ಕಡಿಮೆ ಮಾಡಲು ಸಾಧ್ಯವೇ ಇಲ್ಲ..