ಪುನೀತ್ ಕೊನೆ ಆಸೆಯನ್ನು ಇಂದು ನೆರವೇರಿಸಿ ಕಣ್ಣೀರಿಟ್ಟು ಹೊರಟ ಪತ್ನಿ ಅಶ್ವಿನಿ..

0 views

ಪುನೀತ್ ರಾಜ್ ಕುಮಾರ್ ಅಗಲಿಕೆ ಸಂಬಂಧವಿಲ್ಲದ ನಮ್ಮಗಳಿಗೆ ಇಷ್ಟೆಲ್ಲಾ ಕಾಡುತ್ತಿರುವಾಗ ಹಲವಾರು ವರ್ಷಗಳ ಕಾಲ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿ ಇಪ್ಪತ್ತೆರೆಡು ವರ್ಷಗಳ ಕಾಲ ಒಟ್ಟಿಗೆ ಸಂಸಾರ ಮಾಡಿ ಕುಟುಂಬವೇ ಸರ್ವಸ್ವ ಎನ್ನುತ್ತಿದ್ದ ಪತಿ ಇದೀಗ ಸಣ್ಣ ಸುಳಿವೂ ನೀಡದೇ ಇದ್ದಕಿದ್ದ ಹಾಗೆ ಬಿಟ್ಟು ಹೋದರೆಂದರೆ ಆ ನೋವು ಅಶ್ವಿನಿ ಅವರಿಗೆ ಎಷ್ಟರ ಮಟ್ಟಕ್ಕಿರಬೇಕೆಂಬುದರ ಸಣ್ಣ ಊಹೆಯನ್ನೂ ಸಹ ಮಾಡಲಾಗದು.. ಕಳೆದ ಹನ್ನೊಂದು ದಿನಗಳಿಂದ ನೋವ ನುಂಗಿಕೊಂಡು ದಿನ ದೂಡುತ್ತಿರುವ ಅಶ್ವಿನಿ ಅವರು ಇಂದು ತಮ್ಮ ಗಂಡನ ಅಂತಿಮ ಆಸೆಯನ್ನು ನೆರವೇರಿಸಿ ಕಣ್ಣೀರಿಟ್ಟಿದ್ದಾರೆ..

ಹೌದು ಅಪ್ಪು ಅಗಲಿ ಹನ್ನೆರೆಡು ದಿನಗಳ ಕಳೆದೇ ಹೋದವು.. ಒಂದು ಕಡೆ ರಾಜ್ಯಾದ್ಯಂತ ಕೋಟ್ಯಾಂತರ ಕನ್ನಡಿಗರು ಅಪ್ಪುಗಾಗಿ ಕಂಬನಿ ಮಿಡಿದರು.. ಮತ್ತೆ ಕೆಲ ಅಭಿಮಾನಿಗಳು ದುಡುಕಿನ ನಿರ್ಧಾರ ತೆಗೆದುಕೊಂಡು ಇದುವರೆಗೂ ಒಟ್ಟು ಹದಿನಾಲ್ಕು ಮಂದಿ ಅಪ್ಪುವಿನ ಜೊತೆಯೇ ಜೀವ ಕಳೆದುಕೊಂಡು ಹೊರಟುಬಿಟ್ಟರು.. ಎಷ್ಟೇ ನೋವಿದ್ದರೂ ಅಭಿಮಾನಿಗಳ ಮುಂದೆ ತೋರಿದರೆ ಅವರ ನೋವು ಮತ್ತಷ್ಟು ಹೆಚ್ಚಾಗಿ ಅಭಿಮಾನಿಗಳು ದುಡುಕಿ ಏನಾದರು ನಿರ್ಧಾರ ತೆಗೆದುಕೊಳ್ಳಬಹುದೆಂದು ಅಶ್ವಿನಿ ಅವರನ್ನೂ ಸೇರಿದಂತೆ ರಾಘಣ್ಣ ಶಿವಣ್ಣ ಎಲ್ಲರೂ ಸಹ ಜನರ ಮುಂದೆ ನೋವು ತೋರಿಸಿಕೊಳ್ಳಲಾಗದೇ ದುಃಖ ವನ್ನೆಲ್ಲಾ ನುಂಗಿ ಗಟ್ಟಿಯಾಗಿ ನಿಂತು ಪುನೀತ್ ಅವರಿಗೆ ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ನೆರವೇರಿಸಿದರು..

ನಿನ್ನೆಯಷ್ಟೇ ಪುನೀತ್ ಅವರ ಹನ್ನೊಂದನೇ ದಿನದ ಕಾರ್ಯವನ್ನು ಕುಟುಂಬ ನೆರವೇರಿಸಿತು.. ಸದಾಶಿವ ನಗರದ ಮನೆಯಲ್ಲಿ ಹಾಗೂ ಕಂಠೀರವ ಸ್ಟುಡಿಯೋ ಬಳಿಯ ಅಪ್ಪು ಸಮಾಧಿಯ ಬಳಿ ಅಪ್ಪುಗೆ ಇಷ್ಟವಾದ ಊಟಗಳನ್ನೆಲ್ಲಾ ಮಡಿಯಿಂದ ತಯಾರಿಸಿ ಎಡೆಯಿಟ್ಟು ಪೂಜೆ ಸಲ್ಲಿಸಿದರು.. ಎಲ್ಲರಿಗೂ ತಿಳಿದಿರುವಂತೆ ಅಪ್ಪುಗೆ ಊಟವೆಂದರೆ ಬಹಳ ಇಷ್ಟ.. ಮನಸ್ಪೂರ್ತಿಯಾಗಿ ಯಾವುದೇ ಅಹಂಕಾರವಿಲ್ಲದೇ ಊಟ ಮಾಡುತ್ತಿದ್ದರು.. ಫುಟ್ ಪಾತ್ ಹೊಟೆಲ್ ಗಳಿಂದ ಹಿಡಿದು ಆಡಿ ಜನರ ಮನೆಯಲ್ಲಿಯೂ ಸಹ ಅಷ್ಟೇ ಸಾಮಾನ್ಯ ಮನುಷ್ಯನ ರೀತಿ ನೆಲದ ಮೇಲೆ ಕೂತು ಊಟ ಸವಿಯುತ್ತಿದ್ದವರು ಅಪ್ಪು.. ಇದು ನಮ್ಮೆಲ್ಲರಗಿಂತ ಪತ್ನಿ ಅಶ್ವಿನಿ ಅವರಿಗೆ ಅಪ್ಪುವಿನ ಆ ಗುಣ ಬಹಳ ಚೆನ್ನಾಗಿ ಗೊತ್ತಿರುತ್ತದೆ. ಪ್ರತಿ ಭಾರಿ ಊಟ ಸವಿದು ಖುಷಿ ಪಡುತ್ತಿದ್ದ ಗಂಡನಿಗೆ ಈ ರೀತಿ ಸಮಾಧಿಯ ಮೇಲೆ ಊಟ ಇಡುವಂತಹ ಪರಿಸ್ಥಿತಿ ನೋಡಿ ಅಶ್ವಿನಿ ಅವರು ಸಮಾಧಿ ಬಳಿಯೇ ಕಣ್ಣೀರಿಟ್ಟಿದ್ದು ನಿಜಕ್ಕೂ‌ ಮನಕಲಕುವಂತಿತ್ತು..

ಆದರೂ ಸಹ ಎಷ್ಟೇ ನೋವಿದ್ದರೂ ಈ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಅನೇಕ ನಿರ್ಧಾರಗಳನ್ನು ಅಶ್ವಿನಿ ಅವರು ತೆಗೆದುಕೊಂಡರು.. ಹಾಗೆಯೇ ಇಂದು ಅಪ್ಪುವಿನ ಕೊನೆಯ ಆಸೆಯನ್ನೂ ಸಹ ನೆರವೇರಿಸಿದರು.. ಹೌದು ಇಷ್ಟು ವರ್ಷ ಯಾರಿಗೂ ಗೊತ್ತಾಗದ ರೀತಿಯಲ್ಲಿ ಅಪ್ಪು ಮಾಡುತ್ತಿದ್ದ ಸಮಾಜಸೇವೆ ಅಪ್ಪು ಅಗಲಿಕೆ ನಂತರ ಸುದ್ದಿಯಾಗಲು ಶುರುವಾಯಿತು.. ಇದೆಲ್ಲವೂ ಬೇರೆ ರೀತಿಯ ತಿರುವು ಪಡೆಯುವ ಮೊದಲೇ ಅಪ್ಪು ಇಷ್ಟ ಪಟ್ಟು ಮಾಡುತ್ತಿದ್ದ ಎಲ್ಲಾ ಕೆಲಸಗಳು ಹಾಗೆಯೇ ಮುಂದುವರೆಯಲಿದೆ ಎಂಬ ನಿರ್ಧಾರವನ್ನು ಅಶ್ವಿನಿ ಅವರು ಕೈಗೊಂಡರು.. ಅಷ್ಟೇ ಅಲ್ಲದೇ ಇಂದು ಹನ್ನೆರೆಡನೇ ದಿನ ಅಪ್ಪುವಿನ ಬಹಳ ದೊಡ್ಡ ಆಸೆಯೊಂದನ್ನು ನೆರವೇರಿಸಿ ಕಣ್ಣೀರಿಟ್ಟು ಮನೆಗೆ ತೆರಳಿದ್ದಾರೆ..

ಹೌದು ಅಪ್ಪು ಸಾಕಷ್ಟು ಬಾರಿ ಅಶ್ವಿನಿ ಅವರ ಬಳಿ ಈ ಆಸೆಯನ್ನು ಪದೇ ಪದೇ ಹೇಳಿಕೊಳ್ಳುತ್ತಿದ್ದರಂತೆ.. ಹೌದು ಅಪ್ಪುಗೆ ಒಂದು ದಿನ ದೊಡ್ಡ ಮಟ್ಟದಲ್ಲಿ ಎಲ್ಲರಿಗೂ ನಾನ್ ವೆಜ್ ಊಟವನ್ನು ಹಾಕಿಸಬೇಕು ಎನ್ನುತ್ತಿದ್ದರಂತೆ.. ಹೌದು ಯಾವುದೇ ಸಮಾರಂಭಗಳಿಗೆ ಹೋಗಿ ಊಟ ಮಾಡಿ ಬಂದಾಗಲೆಲ್ಲಾ ನಾವು ಒಂದು ದಿನ ಎಲ್ಲಾ ಅಭಿಮಾನಿಗಳಿಗೂ ದೊಡ್ಡದಾಗಿ ವ್ಯವಸ್ಥೆ ಮಾಡಿ ಊಟ ಹಾಕಿಸಬೇಕು ಎನ್ನುತ್ತಿದ್ದರಂತೆ.. ಆದರೆ ಅವರ ಆಸೆ ನೆರವೇರುವ ಮುನ್ನವೇ ಅದ್ಯಾಕೋ ಆ ಭಗವಂತ ಆತುರ ಪಟ್ಟುಬಿಟ್ಟ.. ಆದರೆ ಇದೀಗ ಅಪ್ಪು ಹೋದ ಬಳಿಕ ಅಪ್ಪುವಿನ ಆ ಮಹಾದಾಸೆಯನ್ನು ಅಶ್ವಿನಿ ಅವರು ನೆರವೇರಿಸಿದ್ದಾರೆ.. ಹೌದು ಇಂದು ಅಪ್ಪು ಅಗಲಿದ ಹನ್ನೆರಡನೇ ದಿನ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಿ ಸ್ವತಃ ಅಶ್ವಿನಿ ಅವರು ಶಿವಣ್ಣ ರಾಘಣ್ಣ ಅಭಿಮಾನಿಗಳಿಗೆ ಊಟ ಬಡಿಸಿದ್ದಾರೆ..

ಆ ಸಮಯದಲ್ಲಿಯೂ ಸಹ ಅಶ್ವಿನಿ ಅವರು ಊಟ ಬಡಿಸುತ್ತಲೇ ಕಣ್ಣೀರಿಟ್ಟಿದ್ದು ಮನಕಲಕುವಂತಿತ್ತು.. ಹೌದು ಮೊದಲು ಇಪ್ಪತ್ತು ಸಾವಿರ ನಾನ್ ವೆಜ್ ಐದು ಸಾವಿರ ವೆಜ್ ಊಟದ ತಯಾರಿ ನಡೆದಿತ್ತು.. ಆದರೆ ಅಭಿಮಾನಿಗಳು ಹೆಚ್ಚಾಗುತ್ತಿದ್ದ ಕಾರಣ ಬಂದವರು ಹಾಗೆಯೇ ಮರಳಬಾರದೆಂದು ಆ ಕ್ಷಣದಲ್ಲಿಯೇ ನಿರಂತರವಾಗಿ ಮತ್ತಷ್ಟು ಅಡುಗೆಯ ವ್ಯವಸ್ಥೆ ಮಾಡಿ ಸಂಜೆ ನಾಲ್ಕು ಮೂವತ್ತರ ವರೆಗೂ ಅಭಿಮಾನಿಗಳಿಗೆ ಊಟ ಬಡಿಸುತ್ತಿದ್ದಾರೆ..

ಇತ್ತ ಅರಮನೆ ಮೈದಾನಕ್ಕೆ ಬಂದ ಅಶ್ವಿನಿ ಅವರು ಅಪ್ಪುವಿನ ಫೋಟೋ ಮುಂದೆ ನಿಂತು ಕಣ್ಣೀರು ಹರಿಸಿದ್ದು ಯಾವ ಶತ್ರುವಿಗೂ ಇಂತಹ ಸ್ಥಿತಿ ಬಾರದಿರಲಿ‌ ಎನ್ನುವಂತಿತ್ತು.. ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಜನರು ಮತ್ತೊಬ್ಬರಿಗೆ ನೋವ ನೀಡುತ್ತಾ ಬದುಕುವವರು ಇನ್ನೂ ಸಹ ಹಾಗೆಯೇ ಬದುಕುತ್ತಲೇ ಇದ್ದಾರೆ.. ಆದರೆ ಬುದ್ದಿ ಬಂದಾಗಿನಿಂದ ಮತ್ತೊಬ್ಬರಿಗೆ ಒಳ್ಳೆಯದನ್ನೇ ಬಯಸುತ್ತಾ ದಾನ ಧರ್ಮಗಳನ್ನು ಮಾಡಿಕೊಂಡು ಬಂದು ಜನಮಾನಸದಲ್ಲಿ ಉಳಿದ ಅಪ್ಪುವನ್ನು ಕರೆದುಕೊಂಡು ಆ ಕುಟುಂಬಕ್ಕೆ ಇಷ್ಟು ನೋವು ಕೊಡುವುದು ಎಷ್ಟು ಸರಿ ಎನ್ನುವಂತಿತ್ತು..

ಇನ್ನು ಅಭಿಮಾನಿಗಳಿಗೆ ಊಟ ಬಡಿಸಿ ನಂತರ ಕಣ್ಣೀರಿಡುತ್ತಲೇ ಅಶ್ವಿನಿ ಅವರು ಕಾರ್ ನಲ್ಲಿ ಮನೆಗೆ ಮರಳಿದ್ದಾರೆ.. ಅಪ್ಪು ಇದ್ದಾಗ ಜನರಿಗೆ ಊಟ ಹಾಕಿಸಬೇಕು ಎಂಬ ಆಸೆಯನ್ನು ಈ ರೀತಿ ಇಂತಹ ಸಂದರ್ಭದಲ್ಲಿ ಮಾಡಬೇಕಾದದ್ದೇ ನಿಜಕ್ಕೂ ದುರ್ವಿಧಿ.. ಆದರೆ ಬಂದ ಅಷ್ಟೂ ಸಾವಿರ ಜನರು ಮಾತ್ರ ಅಲ್ಲಿ ಕೂತು ಇದು ಊಟವಲ್ಲ ಪ್ರಸಾದ ಎಂದು ಊಟ ಮಾಡುತ್ತಿದ್ದೇವೆ ಎಂದು ಕಣ್ಣೀರು ಇಟ್ಟಿದ್ದು ಹನ್ನೆರೆಡು ದಿನವಲ್ಲ ಇನ್ನಿ ಅದೆಷ್ಟು ವರ್ಷ ಕಳೆದರೂ ಪುನೀತ್ ಮಾತ್ರ ಜನರ ಮನಸ್ಸಿನಲ್ಲಿ ಸದಾ ಜೀವಂತವಾಗಿರುವರು ಎನಿಸಿತ್ತು.. ಪುನೀತ್ ಅವರಿಗೆ ಶಾಂತಿ ಸಿಗಲಿ..