ಅಪ್ಪು ಬಗ್ಗೆ ಯಾರಿಗೂ ತಿಳಿಯದ ವಿಚಾರ ಹಂಚಿಕೊಂಡ ಶಿವಣ್ಣ..

0 views

ಪುನೀತ್ ರಾಜ್ ಕುಮಾರ್ ಅವರು ಅಗಲಿ ನೋಡುನೋಡುತ್ತಿದ್ದಂತೆ ಐದು ತಿಂಗಳು ಆಗೇ ಹೋಯಿತು.. ಇತ್ತ ಈ ಮಾರ್ಚ್ ತಿಂಗಳು ಅಪ್ಪು ಅಭಿಮಾನಿಗಳಿಗೆ ಹಾಗೂ ದೊಡ್ಮನೆ ಕುಟುಂಬಕ್ಕೆ ಬಹಳ ವಿಶೇಷವಾದ ತಿಂಗಳು‌‌.. ಮಾರ್ಚ್ ಹದಿನೇಳರಂದು ಅಪ್ಪು ಹುಟ್ಟಿದ ದಿನವಾದರೆ ಮಾರ್ಚ್ ಹದಿನಾಲ್ಕರಂದು ಅಶ್ವಿನಿ ಅವರ ಹುಟ್ಟಿದ ದಿನ.. ಪ್ರತಿ ವರ್ಷ ಈ ತಿಂಗಳಲ್ಲಿ‌ ಅಪ್ಪು ಮನೆಯಲ್ಲಿ ಸಾಲು ಸಾಲು ಸಂಭ್ರಮಾಚರಣೆಗಳು ನಡೆಯುತ್ತಿದ್ದವು.. ಆದರೆ ಈ ವರ್ಷ ಅಪ್ಪು ಇಲ್ಲದ ಹುಟ್ಟುಹಬ್ಬವನ್ನು ಸವಿನೆನಪಾಗಿ ನೆನಪಿಸಿಕೊಳ್ಳಬೇಕಾದ ಪರಿಸ್ಥಿತಿ.. ಇನ್ನು ಇತ್ತ ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ಇದೇ ಮಾರ್ಚ್ ಹದಿನೇಳರಂದು ಬಿಡುಗಡೆಯಾಗುತ್ತಿದ್ದು ಹೊಸ ದಾಖಲೆ ಬರೆಯುವಂತೆ ಕಾಣುತ್ತಿದೆ..

ಇನ್ನು ಈ ನಡುವೆ ರಾಜನಂತೆ ಬಾಳಿದ ಅಪ್ಪು ಹುಟ್ಟಿದ ಹಬ್ಬವನ್ನು ಈಗಲೂ ಸಹ ರಾಜನ ಹುಟ್ಟುಹಬ್ಬದಂತೆಯೇ ಆಚರಿಸಲು ಅಭಿಮಾನಿಗಳು‌ ನಿರ್ಧಾರ ಮಾಡಿದ್ದು ಮಾರ್ಚ್ ಹದಿನಾರರ ಮಧ್ಯ ರಾತ್ರಿಯೇ ಕಂಠೀರವ ಸ್ಟುಡಿಯೋದಲ್ಲಿ ಆಚರಣೆ ನಡೆಯಲಿದ್ದು ಅಶ್ವಿನಿ ಅವರು ಹಾಗೂ ದೊಡ್ಮನೆ ಕುಟುಂಬ ಭಾಗಿಯಾಗಲಿದೆ ಎಂದು ತಿಳಿದು ಬಂದಿದೆ.. ಇನ್ನು ಕಿರುತೆರೆ ವಾಹಿನಿಗಳಲ್ಲಿಯೂ ಸಹ ಸಾಲು ಸಾಲು ಕಾರ್ಯಕ್ರಮಗಳು ಅಪ್ಪುವಿನ ಕುರಿತು ಪ್ರಸಾರವಾಗುತ್ತಿದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಪ್ಪುವಿಗಾಗಿ ಡ್ಯಾನ್ಸಿಂಗ್ ಚಾಂಪಿಯನ್ ಶೋವನ್ನು‌ ಡೆಡಿಕೇಟ್ ಮಾಡಲಾಗಿದ್ದು ಕಾರ್ಯಕ್ರಮದಲ್ಲಿ ಶಿವಣ್ಣ ಸಹ ಭಾಗಿಯಾಗಿದ್ದಾರೆ..

ಇನ್ನು ಈ ಸಮಯದಲ್ಲಿ ಅಪ್ಪುವಿನ ಕುರಿತು ಸಾಕಷ್ಟು ನೆನಪುಗಳನ್ನು‌ ಹಂಚಿಕೊಂಡಿರುವ ಶಿವಣ್ಣ ಭಾವುಕರಾಗಿ ಕಣ್ಣೀರಿಟ್ಟರು.. ಹೌದು ಈ ವಾರದ ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿ ಭಾಗಿಯಾಗಿರುವ ಶಿವಣ್ಣ ತಮ್ಮನ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಎಂಟ್ರಿ ನೀಡಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಪವರ್ ತುಂಬಿದ್ದಾರೆ.. ಅಪ್ಪುವಿನ ಹಾಡಿಗೆ ಡ್ಯಾನ್ಸ್ ಮಾಡೋದೆ ಒಂದು ಚೆಂದ.. ಅದೊಂದು ರೀತಿ ಎನರ್ಜಿ ಎಂದಿದ್ದಾರೆ.. ಅಷ್ಟೇ ಅಲ್ಲದೇ ಬಾಲ್ಯದಲ್ಲಿ ಅಪ್ಪು ನಡೆದುಕೊಳ್ಳುತ್ತಿದ್ದ ರೀತಿಯನ್ನು ಸಹ ಹಂಚಿಕೊಂಡಿದ್ದಾರೆ..

ಹೌದು ಅಪ್ಪು ಚಿಕ್ಕವರಿದ್ದಾಗಿನಿಂದಲೂ ಆಹಾರಪ್ರಿಯರಾಗಿದ್ದು ಹೊಟೆಲ್ ಊಟದ ಬಗ್ಗೆ ಒಲವು ಜಾಸ್ತಿ ಇತ್ತು.. ಇನ್ನು ಚಿತ್ರೀಕರಣಕ್ಕಾಗಿ ಹೊರಗಿನ ಜಾಗಗಳಿಗೆ ಹೋದಾಗಾಗಲಿ ಅಥವಾ ಬೆಂಗಳೂರಿನಲ್ಲಾಗಲಿ ವಿವಿಧ ಹೊಟೆಲ್ ಗಳಿಗೆ ತೆರಳಿ ಸವಿಯುತ್ತಿದ್ದರು.. ಆದರೆ ಅಪ್ಪು ಯಾವಗಲೂ ಹೊಟೆಲ್ ಗಳಿಗೆ ಒಬ್ಬರೇ ಹೋಗುತ್ತಿರಲಿಲ್ಲ.. ಬದಲಿಗೆ ತಮ್ಮ ಮನೆಯ ವಾಚ್ ಮೆನ್ ಅನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು.. ಹೌದು ತಾವು ತಿನ್ನುವ ಊಟವನ್ನೇ ಅವರಿಗೂ ತಿನ್ನಿಸಿ ಖುಷಿ ಪಡುತ್ತಿದ್ದ ಜೀವವದು..

ಹೌದು ವಾಚ್ ಮೆನ್ ಮಾತ್ರವಲ್ಲ ತಮ್ಮ‌ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನೂ ಸಹ ದೊಡ್ಡ ದೊಡ್ಡ ಐಶಾರಾಮಿ ಹೊಟೆಲ್ ಗಳಿಗೆ ಕರೆದುಕೊಂಡು ಹೋಗಿ ತಾವು ತಿನ್ನುತ್ತಿದ್ದ ಊಟವನ್ನೇ ಅವರಿಗೂ ಕೊಡಿಸಿ ಸಂತೋಷ ಪಡುತ್ತಿದ್ದರಂತೆ.. ಈ ಬಗ್ಗೆ ಹಂಚಿಕೊಂಡ ಶಿವಣ್ಣ.. ಅವನು ಚಿಕ್ಕವಯಸ್ದಿನಿಂದಲೂ ಕೊಡುವ ಕೈ.. ಅವನು‌ ಆಗಿನಿಂದಲೂ ಸಹ ಸ್ಪೆಷಲ್ ಎಂದಿದ್ದಾರೆ.. ಅಷ್ಟೇ ಅಲ್ಲದೇ ಇತ್ತೀಚೆಗೆ ಕಳೆದ ವರ್ಷ ಪುನೀತ್ ಅವರು ರಾಜ್ ಕುಮಾರ್ ಅವರ ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕತೆಯ ಹೇಳಿದೆ ಹಾಡನ್ನು ಹಾಡಿ ರೆಕಾರ್ಡ್ ಮಾಡಿದ್ದರು.. ಆ ಹಾಡಿನಲ್ಲಿ ಬಹಳ ಭಾವನಾತ್ಮಜ ಸಾಲುಗಳಿದ್ದು ಆ ಹಾಡನ್ನು ಹಾಡಿದಾಗ “ಯಾಕ್ ಅಪ್ಪು ಅದೂ ಸಹ ಅಪ್ಪಾಜಿ ಹುಟ್ಟಿದ ಹಬ್ಬದ ದಿನ ಈ ಹಾಡನ್ನು ಹಾಡಿದೆ” ಎಂದು ಕೇಳಿದ್ದರಂತೆ..

ಆಗ ಉತ್ತರ ನೀಡಿದ ಅಪ್ಪು “ಯಾಕೋ ಗೊತ್ತಿಲ್ಲ ಶಿವಣ್ಣ ಹಾಡ್ಬೇಕು ಅನ್ಸ್ತು ಅದಕ್ಕೆ ರೆಕಾರ್ಡ್ ಮಾಡಿದೆ” ಎಂದಿದ್ದರಂತೆ.. ಆ ದಿನದಿಂದಲೂ ಮನಸ್ಸಿನಲ್ಲಿ ಯಾಕೋ‌ ಒಂದು ರೀತಿ ಕಳವಳ ಅನಿಸ್ತಿತ್ತು ಎಂದು ಶಿವಣ್ಣ ಅಪ್ಪುವನ್ನು ನೆನೆದು ಭಾವುಕರಾದರು.. ಆದರು ದೇವ್ರು ಯಾಕ್ ಅಪ್ಪು ವಿಚಾರದಲ್ಲಿ ಈತರ ತಪ್ಪು ನಿರ್ಧಾರ ಮಾಡಿದ್ರು.. ನಿಜಕ್ಕೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ.. ಆದರೆ ಅಶ್ವಿನಿ ಅವರಿಗೆ ಶಿವಣ್ಣ ರಾಘಣ್ಣ ಹಾಗೂ ಆ ಕುಟುಂಬಕ್ಕೆ ಈ ಜನ್ಮದಲ್ಲಿ ಈ ನೋವನ್ನು‌ ಮರೆಯಲು ಸಾಧ್ಯವಿಲ್ಲ.. ಆದರೆ ಆ ನೋವಿನ ಜೊತೆಗೇ ಗಟ್ಟಿಯಾಗಿ ಜೀವನ ಮಾಡುವ ಧೈರ್ಯವನ್ನು ಗಟ್ಟಿಯಾದ ಮನಸ್ಸನ್ನಾದರು ಆ ಭಗವಂತ ಅವರಿಗೆ ನೀಡಿಬಿಡಲಿ..