ಯಶ್ ಬಳಿ ಇದ್ದ ಅದೊಂದು ವಸ್ತುವನ್ನು ಬಹಳ ಆಸೆ ಪಟ್ಟು ಕೇಳಿದ್ದ ಪುನೀತ್.. ಕೊನೆಗೂ ಅದು ಸಿಗಲೇ ಇಲ್ಲ..

0 views

ಪುನೀತ್ ರಾಜ್ ಕುಮಾರ್ ಅವರ ಸರಳತೆ ಯಾವ ಮಟ್ಟಕ್ಕೆ ಇತ್ತೆಂದು ಬಹುತೇಕ ಎಲ್ಲರಿಗೂ ತಿಳಿದೇ ಇದೆ.. ಅದರಲ್ಲೂ ಪುನೀತ್ ಅವರು ತಮ್ಮ ಸಹನಟರ ಜೊತೆ ಸ್ಯಾಂಡಲ್ವುಡ್ ನ ಇತರ ಸ್ಟಾರ್ ನಟರ ಜೊತೆ ನಡೆದುಕೊಳ್ಳುತ್ತಿದ್ದ ರೀತಿ ನಿಜಕ್ಕೂ ಆ ಪುಣ್ಯಾತ್ಮನ ದೊಡ್ಡಗುಣವೇ ಸರಿ.. ಸದಾ ಮತ್ತೊಬ್ಬರಿಗೆ ಕೈತುಂಬಾ ನೀಡುತ್ತಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಯಶ್ ಬಳಿ ಇದ್ದ ಆ ಒಂದು ವಸ್ತು ಬಹಳ ಇಷ್ಟವಾಗಿತ್ತು.. ಆ ಬಗ್ಗೆ ಯಶ್ ಅವರ ಜೊತೆಯೂ ಸಾಕಷ್ಟು ಬಾರಿ ಹೇಳಿಕೊಂಡಿದ್ದರು..

ಅಷ್ಟೇ ಅಲ್ಲದೇ ಕಾರ್ಯಕ್ರಮವೊಂದರಲ್ಲಿ ಯಶ್ ಬಳಿ ಇರುವ ಆ ವಸ್ತು ಬೇಕು ಎಂದೂ ಸಹ ಕೇಳಿದ್ದರು.. ಹೌದು ಪುನೀತ್ ರಾಜ್ ಕುಮಾರ್ ಅವರು ಅಗಲಿದಾಗ ಆ ದಿನ ಯಶ್ ಅವರು ಎಷ್ಟು ದುಃಖ ಪಟ್ಟಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ.. ವಿಚಾರ ತಿಳಿದ ತಕ್ಷಣ ಆಸ್ಪತ್ರೆಗೆ ಬಂದ ಯಶ್ ಕಾರ್ ನಿಂದ ಇಳಿಯುತ್ತಿದ್ದಂತೆ ಆಸ್ಪತ್ರೆಗೆ ಓಡಿ ಹೋದರು.. ಆ ಸಮಯದಲ್ಲಿ ಆ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತರು.. ಶಿವಣ್ಣನನ್ನು ಅಪ್ಪಿಕೊಂಡು ಸಮಾಧಾನ ಪಡಿಸಿದರು..

ಅಷ್ಟೇ ಅಲ್ಲದೇ ಎರಡು ದಿನಗಳ ಕಾಲ ಸಂಪೂರ್ಣವಾಗಿ ಪುನೀತ್ ಅವರ ಕುಟುಂಬದ ಜೊತೆಯೇ ನಿಂತರು.. ಪುನೀತ್ ಅವರ ಮನೆಗೆ ಆಗಮಿಸಿ ಅಲ್ಲಿ ನಡೆಯಬೇಕಾದ ಕೆಲಸಗಳಿಗೆ ತಮ್ಮ ಅವಶ್ಯಕತೆ ಇದ್ದರೆ ಸಹಾಯವಾಗಬಹುದೆಂದು ಸದಾಶಿವನಗರದ ಪುನೀತ್ ಅವರ ನಿವಾಸಕ್ಕೂ ಹೋದರು.. ಆನಂತರ ಕಂಠೀರವ ಸ್ಟೇಡಿಯಂ ನಲ್ಲಿ ಸತತವಾಗಿ ಎರಡು ದಿನಗಳ ಕಾಲ ಅಲ್ಲಿಯೇ ಇದ್ದರು. ಮೊದಲ ದಿನ ರಾತ್ರಿ ಕಣ್ಣೀರಿಟ್ಟು ಬಹಳ ಸುಸ್ತಾಗಿದ್ದ ಶಿವಣ್ಣನನ್ನು ದಯವಿಟ್ಟು ಸ್ವಲ್ಪ ಹೊತ್ತು ಮಲಗಿ ಎಂದು ಬಹಳಷ್ಟು ಮನವಿ ಮಾಡಿ ಸ್ವಲ್ಪ ವಿಶ್ರಾಂತಿ ಪಡೆಯುವಂತೆ ಮಾಡಿದ್ದರು.

ಮೊದಲು ಅಲ್ಲಿಂದ ಹೋಗಲು ಒಪ್ಪದ ಶಿವಣ್ಣನಿಗೆ ನಾನು ಈ ಜಾಗದಲ್ಲಿ ಇಲ್ಲೇ ಇರ್ತೀನಿ.. ನೀವು ಹೋಗಿ ಮಲಗಿ ಎಂದು ಕಳುಹಿಸಿದ್ದರು. ಅಷ್ಟೇ ಅಲ್ಲದೇ ಆ ದಿನದಿಂದ ಮಾರನೇ ದಿನದವರೆಗೂ ಆ ಜಾಗದಿಂದ ಕದಲದ ಯಶ್ ಅವರು ಕಂಠೀರವ ಸ್ಟೇಡಿಯಂ ನ ಒಂದು ರೂಮಿನಲ್ಲಿ ಕೂತು ಪುನೀತ್ ಅವರ ಮಗಳು ಧೃತಿ ಅವರನ್ನು ಅಮೇರಿಕಾದಿಂದ ಮರಳಿ ಕರೆತರಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಖುದ್ದಾಗಿ ನಿಂತು ಮಾಡಿದರು..

ಅಲ್ಲಿಗೂ ಸಹ ಶಿವಣ್ಣ ಬಂದಾಗ ಆಗಲೂ ಸಹ ಶಿವಣ್ಣನಿಗೆ ಯಾವುದೇ ಜವಾಬ್ದಾರಿ ನೀಡದೇ ನೀವು ಸ್ವಲ್ಪ ರೆಸ್ಟ್ ಮಾಡಿ ಶಿವಣ್ಣ ನಾನು ನೋಡಿಕೊಳ್ತೇನೆ ಎಂದು ಧೃತಿ ಅಮೇರಿಕಾದಿಂದ ಮರಳಿ ಭಾರತಕ್ಕೆ ಬಂದು ಬೆಂಗಳೂರಿಗೆ ಆಗಮಿಸುವವರೆಗೂ ಮನೆಗೆ ತೆರಳದ ಯಶ್ ಅವರು ಧೃತಿ ಬಂದ ನಂತರ ಮನೆಗೆ ಹೋದರು.. ಮಾರನೆ ದಿನ ಮತ್ತೆ ಅಂತ್ಯ ಸಂಸ್ಕಾರ ನಡೆಯುವ ಕಾರಣ ಬೆಳ್ಳಂಬೆಳಿಗ್ಗೆ ಕಂಠೀರವ ಸ್ಟೇಡಿಯಂ ಗೆ ಆಗಮಿಸಿ ಅಪ್ಪುವಿನ ಕೊನೆ ಕ್ಷಣದಲ್ಲಿ ಜೊತೆಯಾದರು..

ಕಣ್ಣೀರಿಟ್ಟು ಮರುಗಿದರು.. ಪುನೀತ್ ರಾಜ್ ಕುಮಾರ್ ಅವರು ಎಂದೂ ಸಹ ಯಾವೊಬ್ಬ ನಟನ ಜೊತೆಯೂ ಯಾವುದೇ ಕೋಪವನ್ನಾಗಲಿ ಅಥವಾ ಮತ್ತಿನೇನೋ ಆಗಲಿ ಮಾಡಿಕೊಳ್ಳಲಿಲ್ಲ.. ಸದಾ ಎಲ್ಲರೂ ಬೆಳಿಬೇಕು..‌ ಮುಖ್ಯವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿ ಬೆಳಿಬೇಕು ಎನ್ನುತ್ತಿದ್ದವರು. ಕಾರ್ಯಕ್ರಮಗಳಲ್ಲಿ ಇತರ ನಟರು ಸಿಕ್ಕರೆ ಅವರನ್ನು ಮಗುವಿನಂತೆ ಬಳಸಿ ತಬ್ಬಿಕೊಳ್ಳುತ್ತಿದ್ದರು..

ಪುನೀತ್ ಅವರು ಅಗಲುವ ಕೇವಲ ಎರಡು ದಿನದ ಮುಂಚೆ ಶಿವಣ್ಣನ ಭಜರಂಗಿ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿ ಯಶ್ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದರು. ಆ ದಿನವೂ ಕೂಡ ಯಶ್ ಅವರನ್ನು ಮಗುವಿನಂತೆ ಅಪ್ಪಿಕೊಂಡಿದ್ದ ಅಪ್ಪು ಯಶ್ ಹಾಗೂ ಶಿವಣ್ಣ ಅವರ ಜೊತೆ ಡ್ಯಾನ್ಸ್ ಮಾಡಿದ್ದರು.. ಅದೇ ಅಪ್ಪುವಿನ ಕೊನೆಯ ಡ್ಯಾನ್ಸ್ ಆಗಿ ಹೋಯಿತು.. ಇನ್ನು ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಪುನೀತ್ ಅವರಿಗೆ ಯಶ್ ಅವರ ಮೇಲೆ ಕೊಂಚ ಹೆಚ್ಚು ಅಭಿಮಾನವಿತ್ತು..

ಇದಕ್ಕೆ ಕಾರಣ ಪುನೀತ್ ಅವರಿಗೂ ಸಹ ಕನ್ನಡ ಇಂಡಸ್ಟ್ರಿಯನ್ನು ಹೊಸ ರೀತಿ ತೆಗೆದುಕೊಂಡು ಹೋಗಬೇಕು ಎನ್ನುವ ಕನಸಿತ್ತು. ಇತ್ತ ಯಶ್ ಅವರಿಗೂ ಕೂಡ ಅದೇ ಆಸೆಯಿದ್ದ ಕಾರಣ ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗ ದೊಡ್ಡ ಹೆಸರು ಮಾಡಿತು. ಈ ಬಗ್ಗೆ ಬಹಳಷ್ಟು ಬಾರಿ ಮಾತನಾಡಿದ್ದ ಅಪ್ಪು ಯಶ್ ಅವರಿಗೆ ಶುಭ ಕೋರಿದ್ದರು. ಅಷ್ಟೇ ಅಲ್ಲದೇ ಯಶ್ ಅವರ ಬಳಿಯಿದ್ದ ಆ ವಸ್ತುವನ್ನು ಇಷ್ಟಪಟ್ಟು ಯಶ್ ಅವರ ಬಳಿ ಹೇಳಿಕೊಂಡಿದ್ದರು. ಹೌದು ಪುನೀತ್ ಆಸೆ ಪಟ್ಟಿದ್ದು ಮತ್ತಿನ್ನೇನು ಅಲ್ಲ ಯಶ್ ಅವರ ಗಡ್ಡವನ್ನು.

ಹೌದು ಈ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದ ಅಪ್ಪು ಯಶ್ ಅವರ ಕೆಜಿಎಫ್ ಗಡ್ಡ ಬಹಳ ಇಷ್ಟ. ಆದ್ರೆ ಏನ್ಮಾಡೋದು ನಮಗೆ ಆ ರೀತಿ ಗಡ್ಡ ಬರಲ್ಲ. ಅಂತ ಮಗುವಿನಂತೆ ನಗುತ್ತಿದ್ದರು. ಈ ಬಗ್ಗೆ ನಿರೂಪಕಿ ರಶ್ಮಿ ಅವರ ಕಾರ್ಯಕ್ರಮದಲ್ಲಿಯೂ ಹೇಳಿಕೊಂಡಿದ್ದ ಅಪ್ಪು ಅವರು ನನಗೆ ಯಶ್ ಅವರಿಂದ ಅವರ ಕೆಜಿಎಫ್ ಸಿನಿಮಾ ಶೈಲಿಯ ಗಡ್ಡ ಪಡೆಯುವ ಆಸೆ ಎಂದು ನಕ್ಕಿದ್ದರು.. ತಾವು ನಗುವದಷ್ಟೇ ಅಲ್ಲದೇ ತಮ್ಮ ಮುಗ್ಧ ನಗುವಿನ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಶಾಸ್ವತವಾಗಿ ನೆಲೆಯೂರಿ ನೋವ ಕೊಟ್ಟು ಹೊರಟೇ ಬಿಟ್ಟರು. ಭಗವಂತ ದಯವಿಟ್ಟು ಸತ್ಯ ನುಡಿ‌ ನೀ ಮಾಡಿದ್ದು ಸರಿಯಾದ ನಿರ್ಧಾರವಾ.. ತಪ್ಪೆಂದು ಒಪ್ಪಿಕೊಂಡರು ಖಂಡಿತ ಕ್ಷಮಿಸಲಾರರು ಕನ್ನಡಿಗರು.