ಕಾಟೇರ ಸಿನಿಮಾದಲ್ಲಿ ದರ್ಶನ್‌ ಜೊತೆ ಅಭಿನಯಿಸಲು ಮಾಲಾಶ್ರೀ ಅವರ ಮಗಳು ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತಾ? 

0 views

ಕನ್ನಡ ಸಿನಿಮಾ ಇಂಡಷ್ಟ್ರಿಯಲ್ಲಿ ಈಗನ ಕಲಾವಿದರಿಗಿಂತಲೂ ಹಳೇಯ ಅಂದರೆ ಒಂದು ಹದಿನೈದು ಇಪ್ಪತ್ತು ವರ್ಷದ ಹಿಂದಿನ ಕಲಾವಿದರುಗಳು ಮನಸ್ಸಿಗೆ ಹೆಚ್ಚು ಹತ್ತಿರವಾಗಿದ್ದರು.. ಅದರಲ್ಲೂ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಆಳಿದ ಕೆಲವೇ ನಾಯಕಿಯರಲ್ಲಿ ಮಾಲಾಶ್ರೀ ಅವರು ಮೊದಲ ಸ್ಥಾನದಲ್ಲಿರುತ್ತಾರೆಂದರೆ ಅದು ಸುಳ್ಳಲ್ಲ.. ಇದಕ್ಕೆ ಕಾರಣ ಆ ಸಮಯದಲ್ಲಿ ಯಾವ ಸ್ಟಾರ್‌ ನಟರೂ ಕೂಡ ಬ್ಯುಸಿ ಆಗದಷ್ಟು ಮಾಲಾಶ್ರೀ ಅವರು ಬ್ಯುಸಿ ಆಗಿದ್ದರು.. ಒಂದೇ ದಿನಕ್ಕೇ ಮೂರು ಮೂರು ಸಿನಿಮಾಗಲ್ಲಿ ಅಭಿನಯಿಸುತ್ತಿದ್ದ ಮಾಲಾಶ್ರೀ ಅವರು ಸ್ಟಾರ್‌ ನಟರುಗಳಿಗಿಂತ ಹೆಚ್ಚು ಸಂಭಾವನೆಯನ್ನು ಪಡೆದಿದ್ದರು ಎನ್ನುವ ಮಾತುಗಳಿದೆ.. ಕನಸಿನ ರಾನಿ ಎಂದೇ ಹೆಸರು ಮಾಡಿದ್ದ ಮಾಲಾಶ್ರೀ ಅವರನ್ನು ತೆರೆ ಮೇಲೆ ನೋಡುವುದೇ ಒಂದು ಆನಂದವೆನ್ನಬಹುದು ಬಹುಶಃ ಈ ಮಾತು ಎಂಭತ್ತು ಹಾಗೂ ತೊಂಭತ್ತರ ದಶಕದವರಿಗೆ ಬಹಳ ಹತ್ತಿರವಾಗುತ್ತದೆ.. ಇನ್ನು ಇದೀಗ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್‌ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಅದರಲ್ಲೂ ಮೊದಲನೇ ಸಿನಿಮಾವೇ ಡಿ ಬಾಸ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಜೊತೆ ಅಭಿನಯಿಸುವ ಅವಕಾಶ ದೊರೆತಿದ್ದು ಸಿನಿಮಾ ಇಂಡಷ್ಟ್ರಿಯಲ್ಲಿ ಭದ್ರವಾಗಿ ನಿಲ್ಲಲು ಸಕಲ ತಯಾರಿಯನ್ನೂ ನಡೆಸಿ ಚಿತ್ರರಂಗಕ್ಕೆ ಬಂದಿದ್ದಾರೆನ್ನಬಹುದು..

ಇನ್ನು ಕಾಟೇರ ಸಿನಿಮಾ ಇದೇಡಿಸೆಂಬರ್‌ಇಪ್ಪತೊಂಭತ್ತಕ್ಕೆ ಬಿಡುಗಡೆಯಾಗುತ್ತಿದ್ದು ಆರಾಧನಾ ರಾಮ್‌ ಅವರ ಮೊದಲ ಸಿನಿಮಾಗೆ ಅವರ ಕುಟುಂಬ ಕಾದಿದೆ ಎನ್ನಬಹುದು.. ಇನ್ನು ಈ ಹಿಂದೆ ದರ್ಶನ್‌ ಅವರ ಜೊತೆ ಮೊದಲ ಸಿನಿಮಾ ಅವಕಾಶ ಪಡೆದ ರಚಿತಾ ರಾಮ್‌ ಕೂಡ ದೊಡ್ಡ ಸಕ್ಸಸ್‌ ಪಡೆದಿದ್ದು ಇದೀಗ ಆರಾಧನಾ ರಾಮ್‌ ಕೂಡ ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಲಿದ್ದಾರಾ ಕಾದು ನೋಡಬೇಕಿದೆ.. ಇನ್ನು ಸಿನಿಮಾದಲ್ಲಿ ಹೇಳಿದ್ದನ್ನು ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಚಿತ್ರತಂಡ ತಿಳಿಸಿದ್ದು ನಟನೆಯಲ್ಲಿ ಅಮ್ಮನಂತೆಯೇ ಆರಾಧನಾ ಕೂಡ ಪ್ರತಿಭಾವಂತೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.. ಇನ್ನು ಆರಾಧನಾ ರಾಮ್‌ ಅವರ ಸಂಭಾವನೆಯ ವಿಚಾರಕ್ಕೆ ಬರುವುದಾದರೆ ಮೊದಲ ಸಿನಿಮಾದಲ್ಲಿಯೇ  ಆರಾಧನಾ ಅವರಿಗೆ ದುಬಾರಿ ಸಂಭಾವನೆ ನೀಡಲಾಗಿದೆ ಎಂದು ತಿಳಿದುಬಂದಿದೆ..

ಹೌದು ಹೇಳಿ ಕೇಳಿ ಇದು ದರ್ಶನ್‌ ಅವರ ಸಿನಿಮಾ ಆಗಿದ್ದು ಚಿತ್ರದ ಮೇಕಿಂಗ್‌ ಅದ್ಧೂರಿಯಾಗಿಯೇ ಇದೆ.. ಅದರಲ್ಲೂ ತರುನ ಸುಧೀರ್‌ ಅವರ ನಿರ್ದೇಶನದ ಕಾಟೇರ ಸಿನಿಮಾ ದರ್ಶನ್‌ ಅವರ ಸಿನಿಮಾ ಕೆರಿಯರ್‌ ನಲ್ಲಿ ಹೊಸದೊಂದು ಮೈಲಿಗಲ್ಲಾಗುವುದು ಎನ್ನಲಾಗುತ್ತಿದ್ದು ಇಂತಹ ಸಿನಿಮಾದಲ್ಲಿ ಆರಾಧನಾಗೆ ಅವಕಾಶ ಕೊಟ್ಟ ಚಿತ್ರತಂಡ ದೊಡ್ಡ ಮೊತ್ತದ ಸಂಭಾವನೆಯನ್ನೇ ನೀಡಿದ್ದಾರೆ.. ಹೌದು ಆರಾಧನಾ ರಾಮ್‌ ಅವರಿಗೆ ಕಾಟೇರ ಸಿನಿಮಾಗಾಗಿ ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ತಿಳಿದುಬಂದಿದೆ.. ಮೊದಲ ಸಿನಿಮಾಗೆ ಸಾಮಾನ್ಯವಾಗಿ ಇಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ನಾಯಕಿಯರಿಗೆ ಕೊಟ್ಟ ಉದಾಹರಣೆಗಳು ತೀರಾ ಕಡಿಮೆ.. ಆದರೆ ದೊಡ್ಡ ನಿರ್ಮಾಣ ಸಂಸ್ಥೆಯಿಂದ ತಯಾರಾದ ಸಿನಿಮಾ ಆದ್ದರಿಂದ ನಾಯಕಿಗೆ ಮೊದಲ ಚಿತ್ರವಾದರೂ ಹತ್ತು ಲಕ್ಷ ರೂಪಾಯಿ ಸಂಭಾವನೆ ನೀಡಿದ್ದು ಇನ್ನು ಆರಾಧನಾ ಪ್ರತಿಭೆಯುಳ್ಳವರಾದರೂ ಕೂಡ ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಅವರ ಮಗಳು ಎನ್ನುವುದು ಕೂಡ ಇಲ್ಲಿ ಬಹಳ ಮುಖ್ಯವಾಗುತ್ತದೆ..

ಒಟ್ಟಿನಲ್ಲಿ ಸಿನಿಮಾರಂಗಕ್ಕೆ ಕಾಲಿಡಲು ನಟನೆ ನೃತ್ಯ ಹಾಗೂ ಇನ್ನಿತರ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಇದರ ಜೊತೆಗೆ ಹೆಸರನ್ನೂ ಸಹ ಬದಲಿಸಿಕೊಂಡು ಡಿ ಬಾಸ್‌ ಅವರ ಜೊತೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಆರಾಧನಾ ರಾಮ್‌ ಅವರ ಭವಿಷ್ಯ ಕಾಟೇರ ಸಿನಿಮಾ ನೋಡಿದ ನಂತರ ಗೊತ್ತಾಗಲಿದೆ.. ಹಾಡುಗಳು ಹಾಗೂ ಟ್ರೇಲರ್‌ ಗಳಲ್ಲಿ ಗಮನ ಸೆಳೆದಿರುವ ಆರಾಧನಾ ರಾಮ್‌ ಅವರಿಗೆ ಈ ಸಿನಿಮಾ ಮೂಲಕ ದೊಡ್ಡ ಮಟ್ಟದ ಯಶಸ್ಸು ಸಿಗಲಿ ಚಿತ್ರರಂಗದಲ್ಲಿ ಭರವಸೆಯ ನಾಯಕಿಯಾಗುವಂತಾಗಲಿ ಎನ್ನುವುದೇ ಸಿನಿಮಾ ಪ್ರಯರ ಆಶಯವಾಗಿದೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.