ಗಟ್ಟಿಮೇಳ ಧಾರಾವಾಹಿಯಿಂದ ಹೊರ ನಡೆದ ಆರತಿ..‌ ನಿಜವಾದ ಕಾರಣ ಬೇರೆಯೇ ಇದೆ.. ಮುಲಾಜಿಲ್ಲದೇ ಇರೋ ವಿಚಾರ ತಿಳಿಸಿದ ನಟಿ..

0 views

ಗಟ್ಟಿಮೇಳ ಧಾರಾವಾಹಿ ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ‌ ಒಂದಾಗಿದ್ದು ಕಳೆದ ಎರಡು ವರ್ಷಗಳಿಂದ ಧಾರಾವಾಹಿ ಪ್ರಸಾರ ವಾಗುತ್ತಿದ್ದು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.. ಅಷ್ಟೇ ಅಲ್ಲದೇ ರೇಟಿಂಗ್ ವಿಚಾರದಲ್ಲಿಯೂ ಸಹ ಕಳೆದ ಎರಡು ವರ್ಷಗಳಲ್ಲಿ ಬಹುತೇಕ ಒಂದು ವರ್ಷ ನಂಬರ್ ಒನ್ ಧಾರಾವಾಹಿಯಾಗಿದ್ದು ಈಗಲೂ ಸಹ ಟಾಪ್ ಮೂರು ಧಾರಾವಾಹಿಗಳಲ್ಲಿ‌ ಒಂದಾಗಿದೆ.ಇನ್ನೂ ಗಟ್ಟಿಮೇಳ ಧಾರಾವಾಹಿ ಮಾತ್ರ ಯಶಸ್ವಿಯಾಗಲಿಲ್ಲ ಬದಲಿಗೆ ಧಾರಾವಾಹಿಯ ಎಲ್ಲಾ ಕಲಾವಿದರು ಸಹ ಸಿಕ್ಕಾಪಟ್ಟೆ ಫೇಮಸ್ ಆದರು.. ಕಲಾವಿದರನ್ನಿ ಗಟ್ಟಿಮೇಳ ಧಾರಾವಾಹಿಯ ಕಲಾವಿದರೆಂದೆ ಜನರು ಗುರುತಿಸಲು ಆರಂಭಿಸಿದ್ದರು. ಇನ್ನು ಕೆಲ ತಿಂಗಳ ಹಿಂದಷ್ಟೇ ಧಾರಾವಾಹಿಯ ಹೀರೋ ಆಗಿದ್ದ ವೇದಾಂತ್ ಪಾತ್ರಧಾರಿ ನಟ ರಕ್ಷ್ ಇದೀಗ ಧಾರಾವಾಹಿಗೆ ನಿರ್ಮಾಪಕರೂ ಸಹ ಆಗಿದ್ದು ಅವರ ನಿರ್ಮಾಣದಲ್ಲಿಯೇ ಇದೀಗ ಧಾರಾವಾಹಿ ಮುಂದುವರೆಯುತ್ತಿದೆ..

ಬಹುತಾರಂಗಣ ಇರುವ ಗಟ್ಟಿಮೇಳ ಧಾರಾವಾಹಿಯಲ್ಲಿ ಕಳೆದ ಎರಡು ವರ್ಷಗಳಿಂದ ಸುಹಾಸಿನಿ ಪಾತ್ರವನ್ನು ಹೊರತು ಪಡಿಸಿದರೆ ಬೇರೆ ಯಾವ ಪಾತ್ರಧಾರಿಗಳೂ ಸಹ ಬದಲಾಗಿರಲಿಲ್ಲ.. ಧಾರಾವಾಹಿಯ ಯಶಸ್ಸಿಗೆ ಇದೂ ಸಹ ಒಂದು ಕಾರಣವಾಗಿತ್ತು.. ಆದರೀಗ ಧಾರಾವಾಹಿಯಿಂದ ಪ್ರಮುಖ ಪಾತ್ರಧಾರಿಯೊಬ್ಬರು ಹೊರ ನಡೆದಿದ್ದಾರೆ. ಹೌದು ಗಟ್ಟಿನೇಳ ಧಾರಾವಾಹಿಯ ನಟಿ ಆರತಿ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.. ಇದಕ್ಕೆ ಕಾರಣ ಯಾವುದೇ ಡೇಟ್ ಸಮಸ್ಯೆಯೂ ಅಲ್ಲ ಅಥವಾ ತೆಲುಗು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಕಾರಣವೂ ಅಲ್ಲ.. ನಿಜವಾದ ಕಾರಣ ಬೇರೆಯೇ ಇದೆ.. ಹೌದು ಆರತಿ ಪಾತ್ರಧಾರಿ ನಟಿ ಅಶ್ವಿನಿ ಮೊದಲು ರಾಧ ರಮಣ ಧಾರಾವಾಹಿಯಲ್ಲಿ ರಮಣ್ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡರೂ ಸಹ ಅಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ.. ಇನ್ನು ಅದಾದ ಬಳಿಕ ಆರತಿಯಾಗಿ ಗಟ್ಟಿ ಮೇಳದಲ್ಲಿ ಕಾಣಿಸಿಕೊಂಡಿದ್ದು ದೊಡ್ಡ ಯಶಸ್ಸನ್ನು ತಂದುಕೊಟ್ಟಿತ್ತು..

ಆ ಬಳಿಕ ತೆಲುಗಿನ ನಾಗಭೈರವಿ ಧಾರಾವಾಹಿಯಲ್ಲಿ ನಾಗದೇವತೆ ಪಾತ್ರವನ್ನೂ ಸಹ ಮಾಡುತ್ತಿರುವ ಅಶ್ವಿನಿ ಕಳೆದ ಒಂದು ವರ್ಷದಿಂದ ತೆಲುಗಿನ ನಾಗಭೈರವಿ ಹಾಗೂ ಕನ್ನಡದ ಗಟ್ಟಿಮೇಳ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.. ಆದರೆ ಇದೀಗ ಗಟ್ಟಿಮೇಳ ಧಾರಾವಾಹಿಯಿಂದ ಹೊರ ನಡೆದಿದ್ದು ಇದೀಗ ಆರತಿ ಪಾತ್ರಕ್ಕೆ ಹೊಸ ನಟಿ ಎಂಟ್ರಿಯಾಗಿದೆ.. ಹೌದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ನಟ ವಿವೇಕ್ ಸಿಂಹ ಅವರ ಜೊತೆಗೆ ಕಾಣಿಸಿಕೊಂಡಿದ್ದ ನಟಿ ಗಗನಾ ಇನ್ನುಮುಂದೆ ಆರತಿಯಾಗಿ ವಿಕ್ಕಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.. ಈ ಮೊದಲು ಗಗನಾ ದೊಡ್ಮನೆ ಸೊಸೆ ಎಂಬ ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದು ಇದೀಗ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿಯಾಗಿ ಮುಂದುವರೆಯಲಿದ್ದಾರೆ.. ಆದರೆ ಇತ್ತ ಆರತಿ ಪಾತ್ರಧಾರಿ ಅಶ್ವಿನಿ ಧಾರಾವಾಹಿಯನ್ನು ಏಕೆ ಬಿಟ್ಟರು ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಕಾಡಿದ್ದು ಈ ಬಗ್ಗೆ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದವು..

ಹೌದು ಅಶ್ವಿನಿ ಧಾರಾವಾಹಿಯಿಂದ ಹೊರ ಬರಲು ಆಕೆ ತೆಲುಗಿನ ಧಾರಾವಾಹಿಯಲ್ಲಿ ನಟಿಸುತ್ತಿರುವುದರಿಂದ ಡೇಟ್ ಸಮಸ್ಯೆ ಎಂದು ಕೆಲ ಸುದ್ದಿ ಹಬ್ಬಿತ್ತು ಆದರೆ ಅದು ಸತ್ಯವಲ್ಲ.. ಇನ್ನು ತೆಲುಗು ಧಾರಾವಾಹಿಗೋಸ್ಕರ ಕನ್ನಡ ಧಾರಾವಾಹಿ ಬಿಟ್ಟರು ಎಂಬ ಸುದ್ದಿ ಹಬಿತ್ತು ಅದೂ ಸಹ ಸತ್ಯವಲ್ಲ.. ಹಾಗಿದ್ದರೆ ನಿಜವಾದ ಕಾರಣ ಏನು.. ಖುದ್ದು ಅಶ್ವಿನಿ ಅವರೇ ತಿಳಿಸಿದ್ದಾರೆ.. ಹೌದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗಟ್ಟಿಮೇಳ ಧಾರಾವಾಹಿ ಬಿಟ್ಟಿರುವ ಬಗ್ಗೆ ಹಂಚಿಕೊಂಡಿರುವ ನಟಿ ಅಶ್ವಿನಿ “ನನಗೆ ಯಾವ ಡೇಟ್ ಸಮಸ್ಯೆಯೂ ಇಲ್ಲ.. ಡೇಟ್ ಸಮಸ್ಯೆಯಿಂದ ನಾನು ಧಾರಾವಾಹಿ ಬಿಟ್ಟಿಲ್ಲ.. ಹಾಗೆಯೇ ತೆಲುಗು ಧಾರಾವಾಹಿಗೋಸ್ಕರ ಕನ್ನಡದ ಧಾರಾವಾಹಿಯನ್ನು ಬಿಟ್ಟಿಲ್ಲ.. ನಾನು ಒಂದು ವರ್ಷದಿಂದ ತೆಲುಗು ಹಾಗೂ ಕನ್ನಡದ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದೇನೆ.. ನನಗೆ ಯಾವ ಡೇಟ್ ಸಮಸ್ಯೆಯೂ ಆಗಿಲ್ಲ.. ಒಂದು ತಿಂಗಳಲ್ಲಿ ಹದಿನೈದು ದಿನ ಹೈದರಾಬಾದ್ ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆ.. ಇನ್ನು ಹದಿನೈದು ದಿನ ಬೆಂಗಳೂರಿನಲ್ಲಿಯೇ ಇರುತ್ತೇನೆ..

ಆದರೆ ಕೆಲ ಸಮಸ್ಯೆಗಳಿಗೆ ಪರಿಹಾರ ಸಿಗೋದೇ ಇಲ್ಲ.. ಅದೇ ಕಾರಣಕ್ಕಾಗಿ ನಾನು ಗಟ್ಟಿಮೇಳ ಧಾರಾವಾಹಿಯನ್ನು ಬಿಟ್ಟಿದ್ದೇನೆ.. ಆದರೆ ಮುಂದಿನ ದಿನಗಳಲ್ಲಿ ನಾನು ಕನ್ನಡದ ಬೇರೆ ಧಾರಾವಾಹಿಗಳಲ್ಲಿ ಅಭಿನಯಿಸುವೆ ಎಂದಿದ್ದಾರೆ.. ಒಟ್ಟಿನಲ್ಲಿ ತಾನು ಧಾರಾವಾಹಿ ಬಿಡಲು ಡೇಟ್ ಹಾಗೂ ಬೇರೆ ವ್ಯಯಕ್ತಿಕ ಯಾವುದೇ ಕಾರಣವಿಲ್ಲ.‌ ಕೆಲ ಸಮಸ್ಯೆಗಳಿಗೆ ಪರಿಹಾರ ಸಿಗೀದೇ ಇಲ್ಲ ಎಂದು ಮಾರ್ಮಿಕವಾಗಿಯೇ ಬರೆದುಕೊಂಡಿದ್ದಾರೆ.. ಆದರೆ ಬಲ್ಲ ಮೂಲಗಳ ಪ್ರಕಾರ ಶುರುವಿನಲ್ಲಿ ಆರತಿ ವಿಕ್ಕಿ ಜೋಡಿಯ ಕಲ್ಯಾಣದ ಸಮಯದಲ್ಲಿ ಧಾರಾವಾಹಿಯಲ್ಲಿ ಆರತಿ ಪಾತ್ರಕ್ಕೆ ಪ್ರಾಮುಖ್ಯತೆ ಇತ್ತು.. ಆದರೆ ಕಳೆದ ಕೆಲ ತಿಂಗಳುಗಳಿಂದ ಅಶ್ವಿನಿ ಅವರ ಪಾತ್ರಕ್ಕೆ ಯಾವುದೇ ಪ್ರಾಮುಖ್ಯತೆ ಇಲ್ಲದಿರುವುದು ಹಾಗೂ ಸಹಕಲಾವಿದರಲ್ಲಿ‌ ಒಬ್ಬರಂತೆ ಕಾಣಿಸಿಕೊಳ್ಳುತ್ತಿರುವುದರಿಂದ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲದ ಕಾರಣ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ.. ಒಟ್ಟಿನಲ್ಲಿ ಕಲಾವಿದರು ಧಾರಾವಾಹಿ ಬಿಡೋದು ಮತ್ತೆ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದು ಹೊಸ ವಿಚಾರವೇನು ಅಲ್ಲ.. ಸಧ್ಯ ಗಟ್ಟಿಮೇಳ ಜರ್ನಿಗೆ ಗುಡ್ ಬೈ ಹೇಳಿರುವ ಅಶ್ವಿನಿ ಸಧ್ಯದಲ್ಲಿಯೇ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಬಹುದಾಗಿದೆ..