ಅರವಿಂದ್ ಗಾಗಿ ಬಿಗ್ ಬಾಸ್ ಮನೆಯೊಳಗೆ ಬಂದ ಸ್ಪೆಷಲ್ ಎಂಟ್ರಿ.. ನೋಡಿ ಭಾವುಕರಾದ ಅರವಿಂದ್.. ಅರವಿಂದ್ ಗೋಸ್ಕರ ಬಂದವರು ಯಾರು ಗೊತ್ತಾ..

0 views

ಬಿಗ್ ಬಾಸ್ ಮನೆಯಲ್ಲಿ ಇಂದಿನಿಂದ ಫಿನಾಲೆ ವಾರದ ಸಂಭ್ರಮ ಶುರುವಾಗಿದೆ.. ಈ ನಡುವೆ ಬಿಗ್ ಬಾಸ್ ನಲ್ಲಿ ಬಹುದೊಡ್ಡ ತಿರುವು ಒಂದನ್ನು ನೀಡಲಾಗಿದೆ.. ಹೌದು ಬಿಗ್ ಬಾಸ್ ಫಿನಾಲೆಗೆ ಇನ್ನೊಂದು ವಾರವಷ್ಟೇ ಬಾಕಿ ಇದ್ದು ಸಧ್ಯ ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಕೆಪಿ ದಿವ್ಯಾ ಉರುಡುಗ ಮಂಜು ಪಾವಗಡ ದಿವ್ಯಾ ಸುರೇಶ್ ಪ್ರಶಾಂತ್ ಸಂಬರ್ಗಿ ಹಾಗೂ ವೈಷ್ಣವಿ ಸೇರಿದಂತೆ ಒಟ್ಟು ಆರು ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದು ಮತ್ತೆ ನಾಳೆ ಬಿಗ್ ಬಾಸ್ ನಲ್ಲಿ ಎಲಿಮಿನೇಷನ್ ಒಂದು ನಡೆಯಲ್ಲಿದ್ದು ಸೀಸನ್ ಎಂಟರ ಫೈನಲಿಸ್ಟ್ ಗಳಾಗಿ ಐವರು ಉಳಿಯಲಿದ್ದಾರೆ.. ಇನ್ನು ಬಿಗ್ ಬಾಸ್ ಮನೆಯಲ್ಲಿ‌ ಇದ್ದ ಏಳು ಸದಸ್ಯರ ಪೈಕಿ ಮೊನ್ನೆ ಶುಭಾ ಪೂಂಜಾ ಹಾಗೂ ನಿನ್ನೆ ಶಮಂತ್ ಎಲಿಮಿನೇಟ್ ಆಗಿದ್ದು ತಮ್ಮ ನೂರ ಹದಿನೈದು ದಿನಗಳ ಬಿಗ್ ಬಾಸ್ ಜರ್ನಿಯನ್ನು ಮುಗಿಸಿ ಮನೆಯಿಂದ ಹೊರ ನಡೆದಿದ್ದರು.. ಅತ್ತ ಶುಭಾ ಪೂಂಜಾ ಎಲಿಮಿನೇಟ್ ಆದರೂ ಅವರು ಇಷ್ಟು ದಿನ ಅವರು ಮನೆಯಲ್ಲಿ ಇದ್ದದ್ದಕ್ಕೆ ಸ್ವತಃ ಶುಭಾ ಪೂಂಜಾ ಹಾಗೂ ಪ್ರೇಕ್ಷಕರು ಸಹ ಸಂತೋಷವಾಗಿಯೇ ಅವರನ್ನು ಬೀಳ್ಕೊಟ್ಟರೆನ್ನಬಹುದು..

ಆದರೆ ಶಮಂತ್ ಎಲಿಮಿನೇಟ್ ಆಗಿದ್ದಕ್ಕೆ ಬಹಳಷ್ಟು ಜನರು ಬೇಸರ ವ್ಯಕ್ತಪಡಿಸಿದ್ದು ಶಮಂತ್ ಟಾಪ್ ಐದು ಫೈನಲಿಸ್ಟ್ ಗಳಲ್ಲಿ ಒಬ್ಬರಾಗಬೇಕಿತ್ತು ಎನ್ನುವ ಮಾತು ಕೇಳಿಬಂತು.. ಇನ್ನು ಇದೆಲ್ಲದರ ನಡುವೆ ಉಳಿದಿರುವ ಸದಸ್ಯರಲ್ಲಿ ಬಿಗ್ ಬಾಸ್ ಗೆಲ್ಲುವ ಸ್ಪರ್ಧಿಯ ಬಗ್ಗೆ ಅದಾಗಲೇ ಲೆಕ್ಕಾಚಾರಗಳು ಶುರುವಾಗಿದೆ.. ಇನ್ನೊಂದು ವಾರವಷ್ಟೇ ಇದ್ದು ಅರವಿಂದ್ ಕೆಪಿ ಮಂಜು ಪಾವಗಡ ಇಬ್ಬರಲ್ಲಿ ಒಬ್ಬರು ಗೆಲ್ತಾರೆ ಅನ್ನೋ ಮಾತು ಸಹ ಕೇಳಿಬಂದಿದ್ದು ಮತ್ತಷ್ಟು ಮಂದಿ ವೈಷ್ಣವಿ ಅವರಿಗೆ ಬೆಂಬಸಿದ್ದಾರೆ.. ಆದರೆ ಜನರ ಈ ಎಲ್ಲ ಲೆಕ್ಕಾಚಾರದ ನಡುವೆ ಅತ್ತ ಸದ್ದಿಲ್ಲದೇ ಬಿಗ್ ಬಾಸ್ ನಲ್ಲಿ ಟ್ವಿಸ್ಟ್ ನೀಡಿದ್ದಾರೆ.. ಹೌದು ಅರವಿಂದ್ ಗಾಗಿ ಬಿಗ್ ಬಾಸ್ ಮನೆಯೊಳಗೆ ವಿಶೇಷ ಎಂಟ್ರಿಯಾಗಿದ್ದು ನೋಡಿ ಅರವಿಂದ್ ಭಾವುಕರಾಗಿದ್ದಾರೆ.. ಹೌದು ಬಿಗ್ ಬಾಸ್ ನಲ್ಲಿ ಇಷ್ಟೂ ಸೀಸನ್ ಗಳಲ್ಲಿ ಫ್ಯಾಮಿಲಿ ರೌಂಡ್ ನಡೆಯುತಿತ್ತು.. ಬಿಗ್ ಬಾಸ್ ಸದಸ್ಯರ ಕುಟುಂಬದವರು ಬಿಗ್ ಬಾಸ್ ಮನೆಗೆ ಆಗಮಿಸುವುದು ಬಹಳ ವಿಶೇಷವಾಗಿರುತಿತ್ತು.. ಆ ಸಂಚಿಕೆಗಳು ಬಿಗ್ ಬಾಸ್ ಸದಸ್ಯರನ್ನು ಮಾತ್ರವಲ್ಲದೇ ಪ್ರೇಕ್ಷಕರನ್ನು ಸಹ ಬಹಳ ಭಾವುಕರನ್ನಾಗಿಸುತ್ತಿದ್ದವು.

ಆದರೆ ಈ ಬಾರಿ ಆ ಕುರಿತು ತಿರುವೊಂದನ್ನು ನೀಡಿದ್ದಾರೆ.. ಹೌದು ಹಬ್ಬದಂತೆ ನಡೆಯಬೇಕಿದ್ದ ಫಿನಾಲೆ ವಾರದಲ್ಲಿ ಕುಟುಂಬಸ್ಥರ ಆಗಮನದ ಸಂಚಿಕೆಗಳನ್ನು ತೆಗೆದು ಹಾಕಿದ್ದಾರೆ.. ಹೌದು ಈ ಬಾರಿ ಕೊರೊನಾ ಇರುವ ಕಾರಣ ಬಿಗ್ ಬಾಸ್ ಮನೆಯೊಳಗೆ ಯಾವೊಬ್ಬ ಸ್ಪರ್ಧಿಯ ಕುಟುಂಬದವರನ್ನೂ ಸಹ ಒಳಗೆ ಬಿಡುತ್ತಿಲ್ಲ.. ಒಟ್ಟಿನಲ್ಲಿ ಫ್ಯಾಮಿಲಿ ಸಂಚಿಕೆಗಳನ್ನೇ ಕ್ಯಾನ್ಸಲ್ ಮಾಡಲಾಗಿದೆ.. ಆದರೂ ಸಹ ಅರವಿಂದ್ ಗಾಗಿ ಮಾತ್ರ ವಿಶೇಷ ಎಂಟ್ರಿ ಆಗಿದೆ.. ಹೌದು ಫಿನಾಲೆ ವಾರವನ್ನು ರಂಗೇರಿಸಬೇಕೆಂಬ ಆಲೋಚನೆಯಲ್ಲಿ ಬಿಗ್ ಬಾಸ್ ಮನೆಯೊಳಗೆ ವಿಶೇಷ ಎಂಟ್ರಿ ಗಳನ್ನು ನೀಡುತ್ತಿದ್ದಾರೆ.. ಆದರೆ ಅವರು ಕುಟುಂಬದ ಸದಸ್ಯರಲ್ಲ ಬದಲಾಗಿ ಬಿಗ್ ಬಾಸ್ ಸದಸ್ಯರು ಆಸೆ ಪಟ್ಟದ್ದು..

ಹೌದು ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಂದು ಕಿವಿಯಾಕಾರದ ದೊಡ್ಡ ಆಕೃತಿಯನ್ನು ಇಡಲಾಗಿದ್ದು ಅದರ ಬಳಿ ಬಂದು ತಮಗೆ ಏನು ಬೇಕೋ ಅದನ್ನು ಕೇಳಬಹುದು ಎಂದಿದ್ದರು.. ಅದರಂತೆ ಬಿಗ್ ಮನೆಯ ಸದಸ್ಯರು ಒಬ್ಬೊಬ್ಬರು ಒಂದೊಂದು ಮನವಿ ಮಾಡಿಕೊಂಡರು.. ಅತ್ತ ವೈಷ್ಣವಿ ತನ್ನ ಕುಟುಂಬದವರಿಂದ ವಾಯ್ಸ್ ನೋಟ್ ಅನ್ನು ಕಳುಹಿಸಿ ಎಂದರು ಹೀಗೆ ಎಲ್ಲರೂ ಸಹ ತಮಗೆ ಬೇಕಾದದ್ದನ್ನು ಮನವಿ ಮಾಡಿಕೊಂಡರು.. ಆದರೆ ಇತ್ತ ಅರವಿಂದ್ ಅವರು ಕೇಳಿಕೊಂಡದ್ದು ಮಾತ್ರ ತಮ್ಮ ಜೀವನದ ಅತಿ ವಿಶೇಷವಾದದ್ದನ್ನು.. ಅವರ ಮಾತಿನಂತೆ ಬಿಗ್ ಬಾಸ್ ಮನೆಗೆ ಅದನ್ನು ಕಳುಹಿಸಿಕೊಡಲಾಯಿತು.. ನೋಡಿ ಅರವಿಂದ್ ಅಕ್ಷರಶಃ ಭಾವುಕರಾದರು.. ಅಷ್ಟೇ ಅಲ್ಲದೇ ಅರವಿಂದ್ ಗಾಗಿ ದೊಡ್ಡದೊಂದು ಫೋಟೋ ವಾಲ್ ನಿರ್ಮಿಸಿ ಅದರಲ್ಲಿ ಅರವಿಂದ್ ಅವರ ಸಂಪೂರ್ಣ ಬಿಗ್ ಬಾಸ್ ಜರ್ನಿಯನ್ನು ತೋರಿಸಲಾಯಿತು.. ಮನೆಯ ಎಲ್ಲಾ ಸದಸ್ಯರು ಅರವಿಂದ್ ಬಗ್ಗೆ ಮಾತನಾಡಿ ಇತ್ತ ದಿವ್ಯಾ ಉರುಡುಗ ತಮ್ಮ ಮನದ ಮಾತನ್ನು‌ ಸಹ ಹೇಳಿಕೊಂಡರು..

ಹೌದು ಬಿಗ್ ಬಾಸ್ ಮನೆಗೆ ಅರವಿಂದ್ ಗಾಗಿ ಬಂದ ಆ ವಿಶೇಷ ಎಂಟ್ರಿ ಅರವಿಂದ್ ಅವರ ಬೈಕ್.. ಹೌದು ಅರವಿಂದ್ ಅವರು ಇಂದು ಜನರ ಮುಂದೆ ಗುರುತಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ಕಾರಣವೇ ಬೈಕ್.. ಇಷ್ಟು ಹೆಸರು ಹಣ ಎಲ್ಲವನ್ನೂ ಸಹ ಅರವಿಂದ್ ಅವರಿಗೆ ತಂದು ಕೊಟ್ಟದ್ದು ಈ ಬೈಕ್.. ಅದೇ ಕಾರಣಕ್ಕೆ ಅರವಿಂದ್ ಬಹಳಷ್ಟು ಬಾರಿ ಬೈಕ್ ಎಂದರೆ ನನ್ನ ಜೀವನದ ಒಂದು ಭಾಗ.. ಅದಿಲ್ಲವಾದರೆ ಇರೋದೆ ಕಷ್ಟ ಎನ್ನುವ ಮಾತುಗಳನ್ನು ಆಡಿದ್ದರು.. ಅದೇ ಕಾರಣಕ್ಕೆ ನನ್ನ ಬೈಕ್ ಅನ್ನು ನಾನು ಇಲ್ಲಿ ಗಾರ್ಡನ್ ಏರಿಯಾದಲ್ಲಿ ನೋಡಬೇಕು ಎಂದು ಅರವಿಂದ್ ಮನವಿ ಮಾಡಿಕೊಂಡಿದ್ದರು..

ಅವರ ಮನವಿಯಂತೆ ಅರವಿಂದ್ ಅವರ ಬೈಕ್ ಅನ್ನು ಗಾರ್ಡನ್ ಏರಿಯಾಗೆ ಕಳುಹಿಸಲಾಗಿದ್ದು ಅದನ್ನು ನೋಡಿ ಅರವಿಂದ್ ಅಕ್ಷರಶಃ ಭಾವುಕರಾಗಿ ಕಣ್ಣೀರಿಟ್ಟರು.. ಇದೆಲ್ಲದರ ಜೊತೆಗೆ ಅರವಿಂದ್ ಅವರ ದೊಡ್ಡ ಫೋಟೋ ವಾಲ್ ನಿರ್ಮಿಸಿ ಅದರಲ್ಲಿ ಬಿಗ್ ಬಾಸ್ ಜರ್ನಿಯ ಸಂಪೂರ್ಣ ಫೋಟೋಗಳನ್ನು ಹಾಕಿದ್ದು ಮಿಕ್ಕ ಸದಸ್ಯರು ಅರವಿಂದ್ ಅವರ ಬಗ್ಗೆ ಮಾತನಾಡಿ ಸಂತೋಷ ಹಂಚಿಕೊಂಡರು.. ಪ್ರತಿದಿನ ಒಬ್ಬೊಬ್ಬ ಸ್ಪರ್ಧಿಯ ಫೋಟೋ ವಾಲ್ ನಿರ್ಮಾಣವಾಗಲಿದ್ದು ಬಹುಶಃ ಫೋಟೋ ವಾಲ್ ನಿರ್ಮಾಣವಾಗುವ ಐದು ಸ್ಪರ್ಧಿಗಳು ಬಿಗ್ ಬಾಸ್ ಫೈನಲಿಸ್ಟ್ ಗಳಾಗಿರಬಹುದು ಎನ್ನಲಾಗುತ್ತಿದೆ..