ಅರವಿಂದ್ ನ ಆ ಖಾಸಗಿ ವೀಡಿಯೋ ಪ್ರಶಾಂತ್ ಸಂಬರ್ಗಿ ಬಳಿ ಇದೆ.. ಹೊರಬಿತ್ತು ಶಾಕಿಂಗ್ ವಿಚಾರ..

0 views

ಬಿಗ್ ಬಾಸ್ ಸೀಸನ್ ಎಂಟು ಮುಗಿದರೂ ಸಹ ಅದರ ಕಾವು ಮಾತ್ರ ಕಡಿಮೆಯಾಗಿಲ್ಲ.. ಒಂದು ಕಡೆ ಬಿಗ್ ಬಾಸ್ ಸೀಸನ್ ಎಂಟನ್ನು ಗೆದ್ದ ಮಂಜು ಪಾವಗಡ ಶಿವಣ್ಣನ್ನು ಭೇಟಿಯಾಗಿ ತನಗೆ ಶುಭ ಕೋರಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿ ಹಲವಾರು ದೇವಸ್ಥಾನಗಳಿಗೆ ಭೇಟಿ ಕೊಟ್ಟು ದೇವರ ದರ್ಶನ ಪಡೆದು ಸ್ನೇಹಿತರ ಜೊತೆ ಸಂಭ್ರಮಾಚರಣೆ ಮಾಡುತ್ತಿದ್ದರೆ.. ಇತ್ತ ದಿವ್ಯಾ ಉರುಡುಗ ಸಾಲು ಸಾಲು ಸಂದರ್ಶನಗಳಲ್ಲಿ ಪಾಲ್ಗೊಳ್ಳುತ್ತಾ ತಮ್ಮ ಬಿಗ್ ಬಾಸ್ ಅನುಭವಗಳನ್ನು ಹಂಚಿಕೊಳ್ಳುತ್ತಾ ತಾವು ಹಾಗೂ ಅರವಿಂದ್ ಬಿಗ್ ಬಾಸ್ ಗೆಲ್ಲದಕ್ಕೆ ಬೇಸರ ಸಹ ವ್ಯಕ್ತ ಪಡಿಸುತ್ತಿದ್ದಾರೆ.. ಇನ್ನು ಇತ್ತ ದಿವ್ಯಾ ಸುರೇಶ್ ಮಾತ್ರ ತಾವೇ ಬಿಗ್ ಬಾಸ್ ಗೆದ್ದಷ್ಟು ಸಂಭ್ರಮ ಪಟ್ಟು ಮಾದ್ಯಮಗಳಲ್ಲಿ ಸಂತೋಷ ಹಂಚಿಕೊಳ್ಳುತ್ತಿದ್ದಾರೆ.

ಆದರೆ ಇದೆಲ್ಲದರ ನಡುವೆ ಪ್ರಶಾಂತ್ ಸಂಬರ್ಗಿ ಹಾಗೂ ಚಕ್ರವರ್ತಿ ಚಂದ್ರಚೂಡ ಅವರ ನಡುವಿನ ವಾಗ್ವಾದಗಳು ತಾರಕಕ್ಕೇರಿದೆ.. ದಿವ್ಯಾ ಉರುಡುಗ ಅವರ ಹಳೆಯ ಫೋಟೋ ವನ್ನು ಪ್ರಶಾಂತ್ ಸಂಬರ್ಗಿ ಅವರೇ ಬಿಡುಗಡೆ ಮಾಡಿದ್ದು ಅಷ್ಟೇ ಅಲ್ಲದೇ ಅರವಿಂದ್ ಹಾಗೂ ಶಮಂತ್ ಅವರ ಹಳೆಯ ಫೋಟೋ ವೀಡಿಯೋವನ್ನೂ ಸಹ ಪ್ರಶಾಂತ್ ಅವರೇ ಬಿಗ್ ಬಾಸ್ ಗೆಲ್ಲುವ ಸಲುವಾಗಿ ವೈರಲ್ ಮಾಡಿಸಿದ್ದರು ಎಂದು ಆರೋಪಿಸಿದ್ದರು.. ಆದರೆ ಇದೆಲ್ಲದರ ನಡುವೆ ಇದೀಗ ಅರವಿಂದ್ ಕುರಿತ ಹೊಸ ವಿಚಾರವೊಂದು ಹೊರ ಬಂದಿದೆ..

ಹೌದು ಇತ್ತ ಚಕ್ರವರ್ತಿ ಚಂದ್ರಚೂಡ ಅವರ ಮಾತಿಗೆ ತಿರುಗೇಟು ಕೊಟ್ಟಿದ್ದ ಪ್ರಶಾಂತ್ ಸಂಬರ್ಗಿ ನನಗೂ ಅದಕ್ಕೂ ಯಾವ ಸಂಬಂಧವೂ ಇಲ್ಲ.. ನಾನೇ ಇದನ್ನೆಲ್ಲಾ ಮಾಡಿಸಿದ್ದು ಎನ್ನುವುದಾದರೆ ದಾಖಲೆ ಬಿಡುಗಡೆ ಮಾಡಲಿ.. ಅಷ್ಟಕ್ಕೂ ದಿವ್ಯಾ ಉರುಡುಗ ಅವರ ಫೋಟೋ ವೈರಲ್ ಮಾಡಿದ್ದವನು ಅದಾಗಲೇ ದಿವ್ಯಾ ಅವರ ತಾಯಿಯ ಬಳಿ ಹೋಗಿ ಕ್ಷಮೆ ಕೇಳಿದ್ದಾನೆ ಎಂದಿದ್ದಾರೆ..

ಆದರೆ ಇದೀಗ ಮತ್ತೆ ಈ ಬಗ್ಗೆ ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ ಅವರು ಹೊಸ ವಿಚಾರವೊಂದನ್ನು ತಿಳಿಸಿದ್ದಾರೆ.. ಹೌದು ಎರಡನೇ ಇನ್ನಿಂಗ್ಸ್ ಗೆ ಬಿಗ್ ಬಾಸ್ ಮನೆಗೆ ಒಳ ಹೋಗುವ ಮುನ್ನ ವಾಹಿನಿಯವರು ನಮ್ಮನ್ನೆಲ್ಲಾ ಕ್ವಾರಂಟೈನ್ ನಲ್ಲಿ ಇರಿಸಿದ್ದರು.. ಆ ಸಮಯದಲ್ಲಿ ಪ್ರಶಾಂತ್ ಸಂಬರ್ಗಿ ಆಯೋಜಕರಿಗೆ ತಿಳಿಯದಂತೆ ಇದ್ದ ಜಾಗಕ್ಕೆ ಎಲ್ಲವನ್ನೂ ತರಿಸಿ‌ ಪಾರ್ಟಿ ಮಾಡಿಸಿದ್ದರು.. ಅರವಿಂದ್ ಹಾಗೂ ನಾನು ಕುಡಿಯುತ್ತಿರುವ ಸಮಯದಲ್ಲಿ ಪ್ರಶಾಂತ್ ಸಂಬರ್ಗಿ ತನ್ನ ಫೋನ್ ನಲ್ಲಿ ಎಲ್ಲವನ್ನು ವೀಡಿಯೋ ಮಾಡಿಕೊಂಡಿದ್ದಾನೆ.. ನನಗೆ ಭಯ ಇದೆ ಸ್ವಾಮಿ.. ನನ್ನ ವೀಡಿಯೋ ಪ್ರಶಾಂತ್ ಬಳಿ ಇದೆ.. ಅರವಿಂದ್ ವೀಡಿಯೋ ಸಹ ಪ್ರಶಾಂತ್ ಬಳಿ ಇದೆ.. ಇದನ್ನೆಲ್ಲಾ ಆತ ಯಾಕೆ ವೀಡಿಯೋ ಮಾಡಿಕೊಂಡ.. ಈ ವಿಚಾರ ಅರವಿಂದ್ ಗೆ ತಿಳಿದಿರಲಿಲ್ಲ.. ನಾನು ಆನಂತರ ತಿಳಿಸಿದ್ದೇನೆ‌ ಎಂದಿದ್ದಾರೆ..

ಅಷ್ಟೇ ಅಲ್ಲದೇ ಸುದೀಪ್ ಸರ್ ನನಗೆ ಅನುಮತಿ ನೀಡಿದರೆ ನಾನು ಪ್ರಶಾಂತ್ ಸಂಬರ್ಗಿ ಅವರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟು ನ್ಯಾಯಲಯಕ್ಕೆ ಕರೆತರುತ್ತೇನೆ ಎಂದಿದ್ದು ಈ ವಿಚಾರ ಯಾವ ಹಂತಕ್ಕೆ ಹೋಗಿ ನಿಲ್ಲುವುದೋ ಕಾದು ನೋಡಬೇಕಷ್ಟೇ.. ಆದರೆ ಬಿಗ್ ಬಾಸ್ ಸೀಸನ್ ಎಂಟು ಮುಗಿದ ನಂತರ ಬಹುತೇಕ ಫಿನಾಲೆಯ ಕೊನೆ ಎರಡ ವಾರದಲ್ಲಿದ್ದ ವೈಷ್ಣವಿ ದಿವ್ಯಾ ಉರುಡುಗ ಮಂಜು ಪಾವಗಡ ಪ್ರಶಾಂತ್ ಸಂಬರ್ಗಿ ಶಮಂತ್ ದಿವ್ಯಾ ಸುರೇಶ್ ಚಕ್ರವರ್ತಿ ಚಂದ್ರ ಚೂಡ ಎಲ್ಲರೂ ಸಹ ಮಾದ್ಯಮದ ಸಂದರ್ಶನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.. ಆದರೆ ಅರವಿಂದ್ ಅವರು ಮಾತ್ರ ಎಲ್ಲಿಯೂ ಕಾಣಿಸಿಕೊಳ್ಳದೇ ಯಾವುದೇ ಸಂದರ್ಶನಗಳಲ್ಲಿ ಪಾಲ್ಗೊಳ್ಳದೇ ಇರುವುದು ಕುತೂಹಲ ಮೂಡಿಸಿದೆ.. ಜೊತೆಗೆ ಮುಂಬರುವ ದಿನಗಳಲ್ಲಿ ಮಾದ್ಯಮದ ಮುಂದೆ ಈ ಬಗ್ಗೆ ಯಾವ ರೀತಿ‌ ಪ್ರತಿಕ್ರಿಯೆ ನೀಡುವರೋ ಕಾದು ನೋಡಬೇಕಿದೆ..