ಬೆಂಗಳೂರಿನ ನಡು ರಸ್ತೆಯಲ್ಲಿ ಇಲ್ಲವಾದ ಕೋಟ್ಯಾಧಿಪತಿ ಅರ್ಚನಾ ರೆಡ್ಡಿ ಪ್ರಕರಣಕ್ಕೆ ಊಹಿಸಿರದ ತಿರುವು.. ಅಮ್ಮ ಮಗಳು ಇಬ್ಬರಿಗೂ ಆ ಕೆಲಸಕ್ಕೆ ಒಬ್ಬನೇ ಬೇಕಿತ್ತು.. ಕೊನೆಗೆ ಮಗಳೇ..

0 views

ಮನುಷ್ಯನಿಗೆ ಕೈಯಲ್ಲಿ ಹಣವಿಲ್ಲದಾಗ ಕೆಲವೊಂದು ಮಾಡಬಾರದ ಕೆಲಸಕ್ಕೆ ಕೈ ಹಾಕುತ್ತಾನೆ ಎನ್ನುವ ಮಾತಿದೆ.. ಆದರೆ ಇದಕ್ಕೂ ಮೀರಿ ವಾಸ್ತವ ಎಂದರೆ ಕೈತುಂಬಾ ಹಣ.. ಒಳ್ಳೆಯ ಜೀವನ ಇದ್ದಾಗಲೂ ಸಹ ಮನುಷ್ಯ ತನ್ನ ಚಟಗಳಿಗೆ ಅಡಿಯಾಳಾಗಿ ಮಾಡಬಾರದ ಕೆಲಸ ಮಾಡುತ್ತಾನೆ.. ಇದಕ್ಕೆ ನೈಜ್ಯ ಉದಾಹರಣೆಯೇ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆ.. ಹೌದು ನಿಜಕ್ಕೂ ಇದೊಂದು ರೋಚಕ ಸ್ಟೋರಿ ಎನ್ನುವಂತಾಗಿ ಹೋಗಿದೆ.. ಹೌದು ಅರ್ಚನಾ ರೆಡ್ಡೆ ಎಂಬ ಬೆಂಗಳೂರಿನ ಕೋಟ್ಯಾಧೀಶ್ವರಿಯ ಕತೆ ಇದು.. ಅರ್ಚನಾ ರೆಡ್ಡಿ ಒಂದಲ್ಲಾ ಎರಡಲ್ಲಾ ಮೂರು ಮದುವೆಯಾದಾಕೆ.. ಅದು ಅವಳ ವ್ಯಯಕ್ತಿಕ ವಿಚಾರವಾದರೂ ಸಹ ಇದೀಗ ಬೀದಿಗೆ ಬಿದ್ದಿದೆ.‌ ಹೌದು ಅರ್ಚನಾ ರೆಡ್ಡಿ ಅರವಿಂದ್ ಜೊತೆ ಪ್ರೀತಿಸಿ ಮದುವೆಯಾದಳು.. ಹತ್ತು ವರ್ಷ ಸಂಸಾರವನ್ನೂ ಸಹ ಮಾಡಿದಳು.. ಆದರೆ ಆ ಸಂಸಾರ ಹೆಚ್ಚು ದಿನ ಉಳಿಯಲಿಲ್ಲ.. ಇಬ್ಬರ ನಡುವೆ ಮನಸ್ತಾಪ ಮೂಡಿ ಇಬ್ಬರು ಕಾನೂನಿನ ಮೂಲಕ ದೂರವಾದರು.. ಇತ್ತ ಇವರಿಬ್ಬರಿಗೆ ಯುವಿಕಾ ರೆಡ್ಡಿ ಹಾಗೂ ತ್ರಿವಿದ್ ಎಂಬ ಮಕ್ಕಳಿದ್ದರು.. ಅರವಿಂದ್ ಜೊತೆ ದೂರಾದ ನಂತರ ಆತನಿಂದ ಹದಿನೈದು ಕೋಟಿ ರೂಪಾಯಿ ಜೀವನಾಂಶವನ್ನೂ ಸಹ ಪಡೆದಳು..

ಇನ್ನು ಹದಿನೈದು ಕೋಟಿ ಕೈಯಲ್ಲಿದ್ದ ಅರ್ಚನಾ ರೆಡ್ಡಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿದಳು.. ಸಾಕಷ್ಟು ಹಣ ಸಂಪಾದಿಸಿದಳು.. ಆ ಸಮ್ಯದಲ್ಲಿ ಸಿದ್ದಿಕ್ ಎಂಬಾತನ ಪರಿಚಯವಾಯಿತು.. ಅವನ ಜೊತೆ ಎರಡನೇ ಮದುವೆಯಾದ ಅರ್ಚನಾ ರೆಡ್ಡಿ ಎರಡೇ ವರ್ಷಕ್ಕೆ ಆತನಿಂದಲೂ ದೂರವಾದಳು.. ನಂತರ ತನ್ನ ವ್ಯವಹಾರ ನೋಡಿಕೊಂಡು ಇದ್ದಳು.. ಆ ಸಮಯದಲ್ಲಿ ಪರಿಚಯವಾದವನೇ ನವೀನ್‌‌.. ಹೌದು ಅರ್ಚನಾ ಮಗಳು ಯುವಿಕಾಗೆ ಜಿಮ್ ಟ್ರೈನಿಂಗ್ ನೀಡುತ್ತಿದ್ದ ನವೀನ್ ನೋಡಿ ಅರ್ಚನಾ ಜಾರಿ ಬಿದ್ದಿದ್ದಾಳೆ.. ಹೌದು ಮೊದಲೇ ಜಿಮ್ ಟ್ರೈನರ್ ಆಗಿದ್ದರಿಂದ ಕಟ್ಟುಮಸ್ತಾಗಿದ್ದ ನವೀನ್ ಗೆ ಅರ್ಚನಾ ಮನಸೋತಿದ್ದಾಳೆ.. ಇತ್ತ ಅರ್ಚನಾ ಆಸ್ತಿ ನೋಡಿದ್ದ ನವೀನ್ ಕೂಡ ಅರ್ಚನಾಳ ಜೊತೆ ಮುಂದುವರೆದಿದ್ದಾನೆ.. ಇಬ್ಬರ ನಡುವಿನ ಸಂಬಂಧ ಶುರುವಾಗುತ್ತಿದ್ದಂತೆ ನವೀನ್ ನ ಜೀವನವೇ ಬದಲಾಗಿ ಹೋಗಿತ್ತು.. ಬೈಕ್ ನಲ್ಲಿ ಓಡಾಡುತ್ತಿದ್ದ ನವೀನ್ ಐಶಾರಾಮಿ‌ ಕಾರಿನಲ್ಲಿ ಓಡಾಡುವಂತಾದ.. ಪಬ್ ಗಳಲ್ಲಿ ರೆಸಾರ್ಟ್ ಗಳಲ್ಲಿ ಪಾರ್ಟಿ ಹೀಗೆ ಫುಲ್ ಬಿಂದಾಸ್ ಜೀವನ ಅವನದ್ದಾಗಿತ್ತು..ಅರ್ಚನಾ ಜೊತೆಗೆ ಕಳೆದ ನಾಲ್ಕು ವರ್ಷದಿಂದ ಲಿವ್ ಇನ್ ಟುಗೆದರ್ ನಲ್ಲಿದ್ದ..

ಅರ್ಚನಾಳನ್ನು ನೀನೇ ಸರ್ವಸ್ವ ಎನ್ನುತ್ತಿದ್ದ ಆದರೆ ಕೊನೆಗೆ ಅದ್ಯಾಕೋ ನವೀನ್ ಗೆ ಅರ್ಚನಾ ಬೋರಾದಳೇನೋ.. ಆಕೆಯ ಮಗಳು ಯುವಿಕಾಗೆ ಜಿಮ್ ಟ್ರೈನ್‌ ಮಾಡುವಾಗಲೇ ಆಕೆಯನ್ನು ಬುಟ್ಟಿಗೆ ಹಾಕಿಕೊಂಡ.. ಹೌದು ಜಿಮ್ ಟ್ರೈನ್ ಮಾಡುತ್ತಲೇ ಯುವಿಕಾಳನ್ನು ತನ್ನ ಪ್ರೀತಿಗೆ ಬೀಳಿಸಿಕೊಂಡ..ಅತ್ತ ಯುವಿಕಾ ಸಹ ವಯಸ್ಸಿನ ಆಕರ್ಷಣೆಗೆ ಬಿದ್ದು ನವೀನ್ ನನ್ನು ಪ್ರೀತಿಸಲು ಶುರು ಮಾಡಿದಳು.. ಇಬ್ಬರೂ ರೆಸಾರ್ಟ್ ಪಬ್ ಪ್ರವಾಸ ಹೀಗೆ ಎಲ್ಲಾ ಕಡೆ ಸುತ್ತಾಡಿ ಎಲ್ಲವನ್ನೂ ಮುಗಿಸಿಕೊಂಡಿದ್ದರು.. ಈ ವಿಚಾರ ಯುವಿಕಾಳ ತಾಯಿ ಅರ್ಚನಾ ರೆಡ್ಡಿ ಕಿವಿಗೆ ಬಿತ್ತು.. ತನ್ನ ಜೊತೆ ಸಂಬಂಧ ಇರುವ ನವೀನ್ ತನ್ನ ಮಗಳ ಜೊತೆಯೂ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಇದರಿಂದ ಕೋಪಗೊಂಡ ಅರ್ಚನಾ ರೆಡ್ಡಿ ನವೀನ್ ಹಾಗೂ ಯುವಿಕಾ ಇಬ್ಬರಿಗೂ ಸಹ ವಾರ್ನ್ ಮಾಡಿದ್ದಾಳೆ.. ಆದರೆ ಅದಕ್ಕೆ ಬಗ್ಗದ ನವೀನ್ ಯುವಿಕಾ ಜೊತೆ ತನ್ನ ಪ್ರಣಯದಾಟವನ್ನು ಮುಂದುವರೆಸಿದ್ದ..

ಇದನ್ನು ನೋಡಿದ ಅರ್ಚನಾ ಜಿಗಣಿ‌ ಪೊಲೀಸ್ ಠಾಣೆಗೆ ದೂರು ಕೊಟ್ಟಳು.. ನವೀನ್ ನನ್ನು ಕರೆಸಿದ ಪೊಲೀಸರು ಅರ್ಚನಾ ರೆಡ್ಡಿ ಕುಟುಂಬದ ವಿಚಾರಕ್ಕೆ ಹೋಗದಂತೆ ವಾರ್ನ್‌ ಮಾಡಿ ಕಳುಹಿಸಿದರು.. ಆದರೆ ಆನಂತರ ಕೆಲವೇ ದಿನಗಳಲ್ಲಿ ನವೀನ್ ಯುವಿಕಾ ಜೊತೆ ಬೆಂಗಳೂರನ್ನೇ ಬಿಟ್ಟು ಪರಾರಿಯಾದ.. ಯುವಿಕಾ ಜೊತೆ ಮೋಜು ಮಸ್ತಿ ಜೊತೆಗೆ ಯುವಿಕಾ ಖಾತೆಯಲ್ಲಿದ್ದ ಹಣದಲ್ಲೊ ಐಶಾರಾಮಿ ಜೀವನ ಸಾಗಿಸುತ್ತಿದ್ದ.. ಇದರಿಂದ ಕೋಪಗೊಂಡ ಅರ್ಚನಾ ರೆಡ್ಡಿ ಯುವಿಕಾಳ ಅಕೌಂಟ್ ಅನ್ನು ಲಾಕ್ ಮಾಡಿಸಿದಳು.. ಇತ್ತ ನವೀನ್ ಕಾರ್ ನಲ್ಲಿ‌ ಓಡಾಡುತ್ತಿದ್ದವ ಮತ್ತೆ ಬೈಕ್ ನಲ್ಲಿ ಓಡಾಡುವಂತಾಯಿತು.. ಹಣದ ತೊಂದರೆಯಾಯಿತು.. ಕೊನೆಗೆ ಇದೆಲ್ಲದರಿಂದ ಕೋಪಗೊಂಡ ನವೀನ್ ಯುವಿಕಾ ಜೊತೆ ಸೇರಿ ಅರ್ಚನಾ ರೆಡ್ಡಿಯನ್ನೇ ಇಲ್ಲವಾಗಿಸಲು ಪ್ಲಾನ್ ಮಾಡುತ್ತಾರೆ.. ಹೌದು ಅರ್ಚನಾ ರೆಡ್ಡಿ ಇದ್ದರೆ ತಾನೇ ಇದೆಲ್ಲಾ ತೊಂದರೆ.. ಅವಳೇ ಇಲ್ಲವಾದರೆ ಕೋಟ್ಯಾಂತರ ರೂಪಾಯಿ ಆಸ್ತಿ ಯನ್ನು ಚೆನ್ನಾಗಿ ಮಜಾ ಮಾಡಬಹುದೆಂದು ತೀರ್ಮಾನಿಸಿ ಯುವಿಕಾ ಹಾಗೂ ಕೆಲ ಸ್ನೇಹಿತರ ಜೊತೆ ನಿರ್ಧಾರ ಮಾಡಿಯೇ ಬಿಟ್ಟ..

ಅಂದುಕೊಂಡಂತೆ ಅರ್ಚನಾ ರೆಡ್ಡಿಯನ್ನು ಮೊನ್ನೆ ಡಿಸೆಂಬರ್ ಇಪ್ಪತ್ತೇಳರಂದು ಹೊಸೂರು ಮುಖ್ಯರಸ್ತೆಯ ಹೊಸರೋಡ್ ಜಂಕ್ಷನ್ ಬಳಿ ನವೀನ್ ಹಾಗೂ ಸ್ನೇಹಿತರು ನಡುರಸ್ತೆಯಲ್ಲಿಯೇ ಇಲ್ಲವಾಗಿಸಿ ಬಿಟ್ಟರು.. ಇತ್ತ ಮಗ ತ್ರಿವೇದ್ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ನವೀನ್ ಮೇಲೆ ದೂರು ನೀಡಲಾಗಿ ಮಗಳು ಯುವಿಕಾಳನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ.. ಆಗ ಎಲ್ಲಾ ಸತ್ಯ ಬಯಲಾಗಿದೆ.. ಮಗಳು ಹಾಗೂ ನವೀನ್ ಸೇರಿಯೇ ಹೆತ್ತ ಅಮ್ಮನನ್ನು ಇಲ್ಲವಾಗಿಸೋ ಪ್ಲಾನ್ ಮಾಡಿ ಕೊನೆಗೆ ಯಶಸ್ವಿಯೂ ಆದರು.. ಸಧ್ಯ ಘಟನೆಗೆ ಕಾರಣವಾದ ಎಲ್ಲರನ್ನೂ ಸಹ ಪೊಲೀಸರು ತಮ್ಮ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ..

ಇತ್ತ ಚೆನ್ನಪಟ್ಟಣದಲ್ಲಿ ಹತ್ತಾರು ಎಕರೆ ಜಮೀನು.. ಜಿಗಣಿಯಲ್ಲಿ ಐಶಾರಾಮಿ‌ಮನೆ.. ನಿವೇಶನಗಳು.. ಹೆಚ್ ಎಸ್ ಆರ್ ಲೇಔಟ್ ನಲ್ಲಿ ಬಡಾವಣೆ.. ಬೆಳ್ಳಂದೂರಿನಲ್ಲಿ ಐಶಾರಾಮಿ ಮನೆ.. ಕುಂದಳಹಳ್ಳಿ ಬಳಿ ಕೋಟಿ ಕೋಟಿ ಆಸ್ತಿ.. ಇನ್ನು ಸಾಕಷ್ಟು ಜಾಗಗಳಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿದ್ದ ಅರ್ಚನಾ ರೆಡ್ಡಿ ಕೊನೆಗೆ ತಾನೇ ಬೆಳೆಸಿದ್ದ ಸಂಬಂಧದ ಫಲವಾಗಿ ಅದೇ ನವೀನ್ ನಿಂದ ನಡುರಸ್ತೆಯಲ್ಲಿ ಇಲ್ಲವಾಗಿ ಹೋದಳು.. ಕೈತುಂಬಾ ಹಣವಿತ್ತು.. ಮಕ್ಕಳ ಭವಿಷ್ಯ ರೂಪಿಸುತ್ತ ತನ್ನ ಜೀವನವನ್ನು ಒಳ್ಳೆಯ ರೀತಿ ಕಟ್ಟಿಕೊಂಡಿದ್ದರೆ ಆಕೆಗೆ ಇಂದು ಮಗಳಿಂದಲೇ ಇಂತಹ ಸ್ಥಿತಿ ಬರುತ್ತಿರಲಿಲ್ಲ.. ಮಕ್ಕಳು ದೊಡ್ಡವರಾಗುತ್ತಿದ್ದಾರೆ ಎಂದು ಆಕೆ ಅರಿಯಲೇ ಇಲ್ಲ.. ಅವಳ ಆಸೆಗಳ ಕಾರಣ ಹಾಗೂ ಮಗಳು ಹೆತ್ತ ತಾಯಿ ಎಂದೂ ಸಹ ನೋಡದೇ ಮೋಹಕ್ಕೆ ಬಿದ್ದ ಕಾರಣ ಇಂದು ಒಂದಿಡೀ ಕುಟುಂಬವೇ ಚಿತ್ರ ವಿಚಿತ್ರವಾಗಿ ಹೋಯ್ತು ಅಷ್ಟೇ..