ಎಪ್ಪತ್ತೈದು ಲಕ್ಷ ಬೆಲೆಯ ಕಾರ್ ಕೊಂಡುಕೊಂಡು ಸಂತೋಷ ಹಂಚಿಕೊಂಡ ಕನ್ನಡ ಕಿರುತೆರೆಯ ಖ್ಯಾತ ನಟಿ..

0 views

ಕನ್ನಡ ಕಿರುತೆರೆಯ ಕಲಾವಿದರ ಸಂಭಾವನೆ ಇದೀಗ ಮೊದಲಿನಂತಿಲ್ಲ.. ಸಹ ಕಲಾವಿದರಿಗೆ ತಕ್ಕಮಟ್ಟಿಗೆ ಇದ್ದರೂ ಸಹ ಪ್ರಮುಖ ಪಾತ್ರಧಾರಿಗಳಿಗೆ ದೊಡ್ಡ ಮಟ್ಟದಲ್ಲಿಯೇ ಸಂಭಾವನೆ ನೀಡಲಾಗುತ್ತಿದೆ.. ಮೊದಲೆಲ್ಲಾ ಹಿಂದಿ ತೆಲುಗು ತಮಿಳು ಕಿರುತೆರೆಯಲ್ಲಿ ಕಿರುತೆರೆಯ ಕಲಾವಿದರಿಗೆ ಸಂಭಾವನೆ ಹೆಚ್ಚು ಕೊಡುತ್ತಾರೆ.. ಕನ್ನಡದಲ್ಲಿ ಕೊಡೋದಿಲ್ಲ ಎನ್ನುವ ಮಾತಿತ್ತು.. ಆದರೆ ಇದೀಗ ಕಿರುತೆರೆಯ ನಾಯಕರು ದಿನವೊಂದಕ್ಕೆ ಮೂವತ್ತೈದು ಸಾವಿರ ರೂಪಾಯಿಯ ವರೆಗೂ ಸಂಭಾವನೆ ಪಡೆದರೆ ಇತ್ತ ಕಿರುತೆರೆಯ ನಾಯಕ ನಟಿಯರು ದಿನವೊಂದಕ್ಕೆ ಹದಿನೈದು ಸಾವಿರದ ವರೆಗೂ ಸಂಭಾವನೆ ಪಡೆಯುತ್ತಿದ್ದಾರೆ.‌

ಇನ್ನು ಧಾರಾವಾಹಿಯಲ್ಲಿ ನಟಿಸುವುದರ ಮೂಲಕ ಖ್ಯಾತಿ ಹಾಗೂ ಹೆಸರಿನ ಜೊತೆಗೆ ಜೀವನದಲ್ಲಿ ಸೆಟಲ್ ಕೂಡ ಆಗುತ್ತಿದ್ದಾರೆನ್ನಬಹುದು.. ಇನ್ನು ಕಳೆದ ವರ್ಷದಿಂದ ಸಾಕಷ್ಟು ಕಿರುತೆರೆ ಕಲಾವಿದರು ತಮ್ಮ ಮನೆಗೆ ಹೊಸ ಕಾರ್ ಗಳನ್ನು ಬರಮಾಡಿಕೊಂಡಿದ್ದರು.. ಇದೀಗ ಕನ್ನಡ ಕಿರುತೆರೆ ಮತ್ತೊಬ್ಬ ಖ್ಯಾತ ನಟಿ ದುಬಾರಿ ಕಾರ್ ಕೊಂಡುಕೊಂಡಿದ್ದು‌ ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಸಧ್ಯ ನಟನೆಯನ್ನು ಬಿಟ್ಟು ವಿದೇಶದಲ್ಲಿ ನೆಲೆಸಿರುವ ಕನ್ನಡ ಕಿರುತೆರೆಯ ಖ್ಯಾತ ನಟಿ ಹೊಸ ಕಾರ್ ಕೊಂಡುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.. ಹೌದು ಮನೆ ದೇವ್ರು ಧಾರಾವಾಹಿಯ ನಾಯಕನಟಿ ಅರ್ಚನಾ ಅವರು ಸಧ್ಯ ವಿಘ್ನೇಶ್ ಎಂಬುವವರನ್ನು ಮದುವೆಯಾಗಿ ನ್ಯೂಯಾರ್ಕ್ ನಲ್ಲಿ ನೆಲೆಸಿದ್ದಾರೆ.. ಅರ್ಚನಾ ಕೂಡ ಕೆಲಸಕ್ಕೆ ಸೇರಿಕೊಂಡಿದ್ದಾರೆ..

ಹೌದು ಮನೆದೇವ್ರು.. ಮಧುಬಾಲ.. ಹಾಗೂ ತಮಿಳಿನ ಎರಡು ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಅರ್ಚನಾ ಅವರು ವಿಘ್ನೇಶ್ ಎಂಬುವವರನ್ನು ಮದುವೆಯಾಗಿ ನ್ಯೂಯಾರ್ಕ್ ನಲ್ಲಿ ನೆಲೆಸಿದ್ದರು.. ನಟನೆಗೂ ಬರುವ ಮುನ್ನ ಹೆಚ್ ಆರ್ ಆಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅರ್ಚನಾ ಅವರು ನ್ಯೂಯಾರ್ಕ್ ತೆರಳಿದ ಮೇಲೆ ಅಲ್ಲಿಯೂ ಸಹ ಆರು ತಿಂಗಳ ಕಾಲ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದಾರೆ..

ನಂತರ ನ್ಯೂಯಾರ್ಕ್ ನಿಂದ ಫ್ಲೋರಿಡಾಗೆ ಬಂದು ನೆಲೆಸಿರುವ ಅರ್ಚನಾ ಅವರು ಅಲ್ಲಿಯೇ ಕಂಪನಿಯೊಂದರಲ್ಲಿ ಹೆಚ್ ಆರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದು ಇದೀಗ ಹೊಸ ಕಾರ್ ಖರೀದಿಸಿದ್ದಾರೆ.. ಹೌದು ವಿದೇಶದಲ್ಲಿ ನೆಲೆಸಿದ್ದರೂ ಕೂಡ ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆಯದ ಅರ್ಚನಾ ಅಲ್ಲಿಯೂ ಸಹ ನಮ್ಮ ಎಲ್ಲಾ ಹಬ್ಬಗಳನ್ನು ಆಚರಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.‌. ಇದೀಗ ಕಾರ ಖರೀದಿಸಿದ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ದುಬಾರಿ ಬೆಲೆಯ ಬೆಂಜ್ ಕಾರ್ ಖರೀದಿಸಿದ ಅರ್ಚನಾ ಅವರು “ಹೊಸ ಆರಂಭ.. ಹೊಸ ಜೀವನ.. ಹೊಸ ಸ್ಥಳ.. ಎಲ್ಲವೂ ಹೊಸದು.. ಹೊಸ ಕೆಲಸ.. ಹೊಸ ಅನುಭವ.. ಜೀವನ ಸದಾ ಖುಷಿಯಿಂದ ಆಸಕ್ತಿದಾಯಕವಾಗಿರುವುದು..” ಎಂದು ಬರೆದು ಪೋಸ್ಟ್ ಮಾಡಿದ್ದು ಸ್ನೇಹಿತರು ಅರ್ಚನಾ ಅವರ ಹೊಸ ವೃತ್ತಿ ಜೀವನಕ್ಕೆ ಶುಭ ಹಾರೈಸಿದ್ದಾರೆ‌..