ಸ್ಯಾಂಡಲ್ವುಡ್ ನ ಖ್ಯಾತ ನಟ ಈಗ ಮಾಡುತ್ತಿರುವ ಕೆಲಸ ನೋಡಿ..

0 views

ಕೊರೊನಾ ಬಂದ ನಂತರ ಬಹಳಷ್ಟು ಜನರ ಜೀವನ ಬದಲಾಗಿದೆ.. ಸಾವಿರಾರು ಮಂದಿ ತಮ್ಮ ಕೆಲಸ ಬಿಟ್ಟು ಊರಿನ ಕಡೆ ಮುಖ ಮಾಡಿದ್ದಾರೆ.. ಇನ್ನು ಕಳೆದ ವರ್ಷದಿಂದ ಸಿನಿಮಾ ಇಂಡಸ್ಟ್ರಿ ಸಂಪೂರ್ಣ ನಿಲಕಚ್ಚಿತ್ತು.. ಈ ವರ್ಷ ಶುರುವಾಗುತ್ತಿದ್ದಂತೆ ಒಂದಷ್ಟು ಸ್ಟಾರ್ ಗಳ ಸಾಲು ಸಾಲು ಸಿನಿಮಾಗಳ ಬಿಡುಗಡೆಯಿಂದಾಗಿ ಚೇತರಿಸಿಕೊಂಡಿತ್ತೆನ್ನಬಹುದು.. ಮತ್ತೆ ಸ್ಯಾಂಡಲ್ವುಡ್ ಗೆ ಮೊದಲ ಕಳೆ ಬಂತು ಎಂದುಕೊಳ್ಳುವ ಸಮಯದಲ್ಲಿಯೇ ಕೊರೊನ ಎರಡನೇ ಅಲೆ ಅಬ್ಬರಿಸುತ್ತಿದೆ.. ಸಿನಿಮಾ ಇಂಡಸ್ಟ್ರಿ ಸೇರಿದಂತೆ ಇತರ ಉದ್ಯಮಗಳಿ ಸಹ ಮತ್ತೆ ಅದೇ ಹಳೆಯ ಕಳೆದ ವರ್ಷದ ಸ್ಥಿತಿಗೆ ಮರಳುತ್ತಿದೆ..

ಇನ್ನು ಅನೇಕ ಕಲಾವಿದರು ಬೆಂಗಳೂರು ಬಿಟ್ಟು ಊರು ಸೇರಿದ್ದೂ ಉಂಟು.. ಮೊನ್ನೆಯಷ್ಟೇ ಲಾಕ್ ಡೌನಿಗೂ ಮುನ್ನ ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ಸಹ ಬೆಂಗಳೂರು ತೊರೆದು ಮಂಗಳೂರಿನ ತಮ್ಮ ಮನೆಗೆ ತೆರಳಿದ್ದರು.. ಇನ್ನು ಸಿನಿಮಾ ಕಲಾವಿದರ ವಿಚಾರಕ್ಕೆ ಬಂದರೆ ಬಹಳಷ್ಟು ಸ್ಟಾರ್ ನಟರು ಕಳೆದ ವರ್ಷ ಸಾಮಾನ್ಯ ಜನರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದರು.. ರೇಷನ್ ಕಿಟ್.‌. ಆಹಾರ ಪೂರೈಕೆ.. ಮಾಸ್ಕ್ ವಿತರಣೆ ಹೀಗೆ ಸಾಕಷ್ಟು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದರು..

ಇನ್ನು ಈ ವರ್ಷವೂ ಸಹ ಕೆಲವರು ಈ ಕೆಲಸ ಮಾಡುತ್ತಿದ್ದು ಮತ್ತಷ್ಟು ಜನ ಜನರಲ್ಲಿ ಕೊರೊನಾದಿಂದ ಎಚ್ಚರಿಕೆಯಾಗಿ ಇರುವಂತೆ ಅರಿವು ಮೂಡಿಸುತ್ತಿದ್ದಾರೆ.. ಇನ್ನು ಸ್ಯಾಂಡಲ್ವುಡ್ ನ ಖ್ಯಾತ ನಟ ಒಬ್ಬರು ಇದೀಗ ಮಾಡುತ್ತಿರುವ ಕೆಲಸ ನಿಜಕ್ಕುಇ ಆಶ್ಚರ್ಯವನ್ನುಂಟು ಮಾಡುತ್ತಿದೆ.. ಹೌದು ಸ್ಯಾಂಡಲ್ವುಡ್ ನ ನಟ ಒಬ್ಬರು ಇದೀಗ ಆಂಬ್ಯುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ.. ಹೌದು ದರ್ಶನ್ ಅವರ ಜೊತೆ ಒಡೆಯ ಹಾಗೂ ಇನ್ನಿತರ ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ಅರ್ಜುನ್ ಗೌಡ ಅವರೀಗ ಆಂಬ್ಯುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ..

ನಿಜಕ್ಕೂ ಇವರ ಈ ಸೇವೆ ಮೆಚ್ಚುವಂತದ್ದು.. ಇದಕ್ಕೆ ಕಾರಣ ಅದಾಗಲೇ ಬಹಳಷ್ಟು ಆಂಬುಲೆನ್ಸ್ ಗಳು ಜನರ ಬಳಿ ಸಾವಿರಗಟ್ಟಲೇ ಹಣ ಪಡೆಯುತ್ತಿದ್ದಾರೆ ಎಂದು ಸುದ್ದಿಯಾಗಿತ್ತು.. ಇದನ್ನೆಲ್ಲಾ ಮನಗಂಡು ಅರ್ಜುನ್ ಗೌಡ ಅವರು ಉಚಿತವಾಗಿ ಆಂಬ್ಯುಲೆನ್ಸ್ ಸೇವೆ ಮಾಡುತ್ತಿದ್ದು ಖುದ್ದು ಅವರೇ ಡ್ರೈವರ್ ಆಗಿ ಕೆಲಸ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.. ಯಾರೇ ಫೋನ್ ಮಾಡಿದರು ಸಹ ಉಚಿತವಾಗಿ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುತ್ತಿದ್ದಾರೆ.. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ತಾವು ಹೋಗುವ ಚಿತಾಗಾರದಲ್ಲಿ ಸ್ಥಳಾವಕಾಶ ಇದೆಯೋ ಇಲ್ಲವೋ ಎಂಬ ಮಾಹಿತಿಯನ್ನು ಸಹ ಹಂಚಿಕೊಳ್ಳುತ್ತಿದ್ದು ಜನರಿಗೆ ನೆರವಾಗುತ್ತಿದ್ದಾರೆ..

ಇನ್ನು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅರ್ಜುನ್ ಗೌಡ ಅವರು.. ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ಸಹ ತಮ್ಮ ತಮ್ಮ ಕೈಲಾದ ಸೇವೆಯನ್ನು ರಾಜ್ಯದ ಜನರಿಗೆ ಮಾಡಬೇಕಾದ್ದು ನಮ್ಮ ಕರ್ತವ್ಯ.. ಇದರಲ್ಲಿ ವಿಶೇಷವೇನೂ ಇಲ್ಲ.. ಆದರೆ ನೀವೆಲ್ಲರೂ ತೋರಿದ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು.. ನನ್ನ ಸೇವೆ ಹೀಗೆ ಮುಂದುವರೆಯಲಿದೆ ಎಂದಿದ್ದಾರೆ.‌ ಇನ್ನು ಅರ್ಜುನ್ ಗೌಡ ಅವರ ಈ ಕಾರ್ಯಕ್ಕೆ ಜನರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಜ್ತಪಡಿಸಿ ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ.. ಉಳ್ಳವರು ಹೀಗೆ ತಮ್ಮ ಕೈಲಾದ ರೀತಿಯಲ್ಲಿ ಇಲ್ಲದವರಿಗೆ ನೆರವಾದರೆ ಕಷ್ಟದಲ್ಲಿರುವ ಜನರಿಗೆ ಎಷ್ಟೋ ಉಪಕಾರ ಮಾಡಿದಂತಾಗುತ್ತದೆ.. ಒಳ್ಳೆಯದಾಗಲಿ ಅರ್ಜುನ್ ಗೌಡ ಅವರಿಗೆ..