ಇಂದು ಈ ರೀತಿ ನಾನು ಬರೆಯುವೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ..

0 views

ಇಂದು ದಿವಂಗತ ಚಿರಂಜೀವಿ ಸರ್ಜಾ ಅವರ ಜನುಮ ದಿನ.. ಚಿರು ಸರ್ಜಾ ಇಲ್ಲವಾಗಿ ನಾಲ್ಕು ತಿಂಗಳು ಕಳೆದಿದೆ.. ಇಂದೋ ನಾಳೆಯೋ ಚಿರು ಮತ್ತೆ ಹುಟ್ಟಿ ಬರುವನೆಂಬ ಭರವಸೆಯಲ್ಲಿ ಕುಟುಂಬ ಮಾತ್ರವಲ್ಲದೇ ಸಂಪೂರ್ಣ ಸರ್ಜಾ ಕುಟುಂಬದ ಅಭಿಮಾನಿಗಳು ಇದ್ದಾರೆ.. ಈ ದಿನ ಚಿರುವನ್ನು ಎಲ್ಲಾ ನಟರು, ಸ್ನೇಹಿತರು ಅಭಿಮಾನಿಗಳು ನೆನೆದಿದ್ದಾರೆ.. ಈ ದಿನ ನೀನಿರಬೇಕಿತ್ತು ಎಂದು ಕಂಬನಿ ಮಿಡಿದಿದ್ದಾರೆ..

ಇದೇ ದಿನ ಅರ್ಜುನ್ ಸರ್ಜಾ ಅವರು ಆಡಿರುವ ಮಾತುಗಳು ಮನಕಲಕುವಂತಿದೆ.. ಹೌದು ಇಂದು ನಟ ಸುದೀಪ್, ದರ್ಶನ್, ಪ್ರಜ್ವಲ್ ದೇವರಾಜ್, ಸೃಜನ್ ಲೋಕೇಶ್ ಸೇರಿದಂತೆ ಎಲ್ಲಾ ಸ್ನೇಹಿತರು ಚಿರುವನ್ನು‌ ನೆನೆದು ನೀನೆಂದೂ ಸದಾ ನಮ್ಮ ನೆನಪಿನಲ್ಲಿ ಚಿರಂಜೀವಿ ಎಂದಿದ್ದಾರೆ..‌ ಧೃವ ಸರ್ಜಾ ಕೂಡ ಅಣ್ಣನ ಫೋಟೋ ಹಂಚಿಕೊಂಡು ಲವ್ ಯು ಫಾರ್ ಎವರ್ ಎಂದು ಬರೆದು ಹಳೆಯ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ..‌ ಅತ್ತ ಮೇಘನಾ ರಾಜ್ ಅವರು ಸಹ ನನ್ನ ಜೀವಕ್ಕೆ ಹುಟ್ಟು ಹಬ್ಬದ ಶುಭಾಶಯಗಳೆಂದು ತಿಳಿಸಿ ಪುಟ್ಟ ಕಂದನಿಗೆ ಅಪ್ಪನೆಂದರೆ ಸಂಭ್ರಮ ಎಂದು ತಿಳಿಸಿದ್ದಾರೆ..

ಆದರೆ ಅರ್ಜುನ್ ಸರ್ಜಾ ಅವರು ಮಾತ್ರ ತಮ್ಮೊಳಗಿನ ನೋವನ್ನು ಹೊರ ಹಾಕಿದ್ದಾರೆ.. ಹೌದು ಅಂದು ಚಿರು ಹುಟ್ಟಿದ ದಿನ ಕುಣಿದಾಡಿದ್ದ ಸೋದರ ಮಾವ ಇಂದು ಅದೇ ಚಿರುವಿನ ಅಗಲಿಕೆಯ ನೆನಪಿನಲ್ಲಿ ಹುಟ್ಟುಹಬ್ಬದ ಬಗ್ಗೆ ಸಾಲುಗಳನ್ನು ಬರೆಯಬೇಕೆಂದಾಗ ಆ ಜೀವಕ್ಕೆ ಆಗುವ ನೋವು ಮಾತ್ರ ಹೇಳಲು ಅಸಾಧ್ಯ.. ಹೌದು ಇಂದು ಚಿರುವಿನ ಹುಟ್ಟುಹಬ್ಬದ ನೆನಪಿನಲ್ಲಿ ಚಿರು ಸರ್ಜಾರ ಫೋಟೋ ಹಂಚಿಕೊಂಡಿರುವ ಅರ್ಜುನ್ ಸರ್ಜಾ ಅವರು “ಮೂವತ್ತಾರು ವರ್ಷಗಳ ಹಿಂದೆ ನೀನು ಹುಟ್ಟಿದಾಗ ನಾನು ಸಂತೋಷದಿಂದ ಕುಣಿದು ಕುಪ್ಪಳಿಸಿದ್ದೆ..

ವಿಧಿಯ ಈ ಕೆಲಸವನ್ನು ನಾನು ನಂಬಿರಲಿಲ್ಲ. ನಿನ್ನ ಹುಟ್ಟುಹಬ್ಬದಂದು ಈ ರೀತಿಯ ಪದಗಳನ್ನು ಬರೆಯುತ್ತೇನೆಂದು ನನ್ನ ಯಾವ ಕೆಟ್ಟ ಕನಸಿನಲ್ಲಿಯೂ ಊಹೆಯೂ ಕೂಡ ಮಾಡಿರಲಿಲ್ಲ.. ನನ್ನ ಪ್ರತಿಯೊಂದು ಯೋಚನೆ, ಪ್ರತಿಯೊಂದು ಸಂದೇಶಗಳಲ್ಲಿಯೂ ನೀನು ಸದಾ ಜೊತೆಗಿರುವೆ ಮಗನೆ.. ಲವ್ ಯು ಸೋ ಮಚ್ ಮೈ ಬೇಬಿ.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಇನ್ನು ಮೇಘನಾ ಅವರು ಇಂದು ಮಾದ್ಯಮದವರ ಜೊತೆ ಮಾತನಾಡಿ ಚಿರು ಯಾವಾಗ ನನ್ನ ಬಳಿ ಬರಬೇಕು ಅಂತ ಪ್ಲಾನ್ ಮಾಡಿದ್ದಾರೋ ಆಗಲೇ ಬರಲಿ.. ಅವರ ಇಷ್ಟ ಯಾವಗ ಇದೆಯೋ ಹಾಗೆ ಆಗಲಿ ಎಂದಿದ್ದಾರೆ.. ಇನ್ನು ಇದೇ ದಿನ ಚಿರು ಅವರು ಕ್ಷತ್ರಿಯ ಸಿನಿಮಾದ ಟೀಸರ್ ಬಿಡಿಗಡೆಯಾಗಿದ್ದು, ಕಾಕತಾಳಿಯವೋ ಏನೋ ಸಿನಿಮಾದ ದೃಶ್ಯ ಒಂದರಲ್ಲಿ ಚಿರು ಪುಟ್ಟ ಕಂದನನ್ನು ಎತ್ತಿಕೊಂಡು ಸಂಭ್ರಮಿಸಿದ್ದಾರೆ.. ಇಂದು ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಸಿನಿಮಾದ ದೃಶ್ಯ ನಿಜವಾಗಲಿಲ್ಲವೇಕೆ ಎಂದು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ..

ನಿಜಕ್ಕೂ ಒಂದು ಮಗು ಹುಟ್ಟುವುದನ್ನು ನೋಡುವ ಹಿರಿಯರು ಅದೇ ಕಂದ ಬೆಳೆದು ದೊಡ್ಡವನಾಗುವುದನ್ನು ನೋಡಿ ಆ ಸಂತೋಷವನ್ನು ಕಣ್ತುಂಬಿಕೊಳ್ಳುತ್ತಾರೆ.. ಆದರೆ ಅದೇ ಮಗು ತಮ್ಮ ಕಣ್ಣ ಮುಂದೆಯೇ ಇಲ್ಲವಾಗುವಂತಹ ಕೆಟ್ಟ ಅನುಭವ.. ಆ ನೋವು… ಅನುಭವಿಸದವಿರಗಷ್ಟೇ ತಿಳಿಯುತ್ತದೆ.. ಕಣ್ಣ ಮುಂದೆ ಹೀಗೆ ಬಂದು ಹಾಗೆ ಹೋಗುವ ಜೀವದ ನೆನಪು ಮಾತ್ರ ಪ್ರತಿ ಕ್ಷಣವೂ ಕಾಡುತ್ತಿರುತ್ತದೆ.. ಆ ಕುಟುಂಬಕ್ಕೆ ಚಿರು ಇಲ್ಲದ ನೋವನ್ನು ಇನ್ನೆಂದೂ ಮರೆಯಲು ಸಾಧ್ಯವಿಲ್ಲ… ಆದರೆ ಭಗವಂತನ ಆಶೀರ್ವಾದದಿಂದ ಚಿರು ಮತ್ತೆ ಹುಟ್ಟಿ ಬಂದು ಆ ನೋವನ್ನು ಕಡಿಮೆ ಮಾಡುವಂತಾಗಲಿ.. ಆ ಕಂದ ಚಿರಕಾಲ ಸಂತೋಷದಿಂದ ಆ ಕುಟುಂಬದ ಕಣ್ಣಮುಂದೆ ಬಾಳಲಿ.. ಮೇಘನಾರಿಗೆ ಸದಾ ಜೊತೆಯಾಗಲಿ..