ಕೊರೊನಾದಿಂದ ಇಲ್ಲವಾಯ್ತು ಪಬ್ಲಿಕ್ ಟಿವಿ ಅರುಣ್ ಬಡಿಗೆರ್ ರ ಸಂಪೂರ್ಣ ಕುಟುಂಬ..

0 views

ಕೊರೊನಾ ಈ ಎರಡನೇ ಅಲೆ ಸಾಕಷ್ಟು ಜೀವಗಳನ್ನು ಪಡೆಯುತ್ತಿದ್ದು ದಿನವಿಡೀ ಕೊರೊನಾದಿಂದ ಜೀವ ಕಳೆದುಕೊಂಡವರ ಫೋಟೋಗಳಿಗೆ ಸಾಂತ್ವಾನ ಸೂಚಿಸುವ ಪೋಸ್ಟ್ ಗಳೇ ಸಾಮಾಜಿಕ ಜಾಲತಾಣದಲ್ಲಿ ತುಂಬಿ ಹೋಗಿದೆ.. ಕಳೆದ ವರ್ಷ ವೈರಸ್ ಹೊಸದು.. ಆದರೂ ಸಹ ಜನರು ಇಷ್ಟೊಂದು ಪರದಾಡುವಂತಾಗಿರಲಿಲ್ಲ.. ಸರ್ಕಾರಗಳು ಸಹ ಸರಿಯಾದ ರೀತಿಯಲ್ಲಿ ಸಮರ್ಥವಾಗಿ ಪರಿಸ್ಥಿತಿಯನ್ನು ಎದುರಿಸಿತ್ತು.. ಆದರೆ ಈ ಬಾರಿಯ ಎರಡನೇ ಅಲೆ ನಿಜಕ್ಕೂ ಜನರನ್ನು ನಲುಗಿಸುತ್ತಿದೆ.. ಸಾಮಾನ್ಯ ಜನರು ಮಾತ್ರವಲ್ಲ ಸೆಲಿಬ್ರೆಟಿಗಳು ಕಲಾವಿದರು.. ಪ್ರಖ್ಯಾತರು ಎಲ್ಲರೂ ಸಾಲು ಸಾಲಾಗಿ ಕೊರೊನಾಗೆ ತುತ್ತಾಗುತ್ತಿದ್ದಾರೆ..

ಮುಖ್ಯಮಂತ್ರಿ ಯಡಿಯೂರಪ್ಪನವರು.. ಕುಮಾರಸ್ವಾಮಿ ಅವರು.. ಸಿದ್ದರಾಮಯ್ಯನವರು ಎಲ್ಲರೂ ಕೊರೊನಾಗೆ ತುತ್ತಾಗಿ ಚೇತರಿಸಿಕೊಂಡವರೇ.. ಇನ್ನು ಸಿನಿಮಾ ಇಂಡಸ್ಟ್ರಿಯಲ್ಲಂತೂ ಬಹುತೇಕ ಅರ್ಧದಷ್ಟು ಕಲಾವಿದರು ಕೊರೊನಾಗೆ ತುತ್ತಾಗಿ ಸದ್ಯ ಗುಣಮುಖರಾಗುತ್ತಿದ್ದಾರೆ.. ಹಾಗೂ ಸಹ ಹಿರಿಯ ನಟಿ ಮಾಲಾಶ್ರೀ ಅವರ ಪತಿ ನಿರ್ಮಾಪಕ ರಾಮು ಅವರು ಸೇರಿದಂತೆ ಇನ್ನೂ ಕೆಲ ಕಲಾವಿದರು ಹಾಗೂ ನಿರ್ಮಾಪಕರು ಕೊರೊನಾಗೆ ಜೀವ ಕಳೆದುಕೊಂಡರು.. ಇದೀಗ ಮತ್ತೊಂದು ಸಂಪೂರ್ಣ ಕುಟುಂಬವೇ ಕೊರೊನಾದಿಂದಾಗಿ ಜೀವ ಕಳೆದುಕೊಂಡಿದೆ..

ಹೌದು ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗರ್ ಎಲ್ಲರಿಗೂ ಚಿರಪರಿತರೇ.. ಬಹಳಷ್ಟು ವರ್ಷಗಳಿಂದ ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡುತ್ತಿರುವ ಅರುಣ್ ಬಡಿಗೆರ್ ಅವರು ಪ್ರೈಮ್ ಟೈಂ ನ ಪ್ರಮುಖ ನಿರೂಪಕರಲ್ಲಿ ಒಬ್ಬರಾಗಿದ್ದರು.. ಆದರೆ ಕಳೆದ ಬಹಳಷ್ಟು ದಿನಗಳಿಂದ ಅರುಣ್ ಬಡಿಗೆರ್ ಅವರು ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.. ತಮ್ಮ ನಿರೂಪಣೆ ಕೆಲಸ ಎಲ್ಲದರಿಂದ ದೂರಾಗಿದ್ದರು.. ಇದಕ್ಕೆಲ್ಲಾ ಕಾರಣ ಕೊರೊನಾ.‌. ಹೌದು ನಿರೂಪಕ ಅರುಣ್ ಬಡಿಗೆರ್ ಅವರು ಅಕ್ಷರಶಃ ಕೊರೊನಾದಿಂದ ನಲುಗಿಹೋಗಿದ್ದಾರೆ.. ಅವರ ಸಂಪೂರ್ಣ ಕುಟುಂಬ ಕೊರೊನಾಗೆ ಹೊರಟೇ ಹೋಗಿದೆ.. ಹೌದು ಅರುಣ್ ಬಡಿಗೆರ್ ಅವರ ಅಪ್ಪ ಅಮ್ಮ ಇಬ್ಬರೂ ಸಹ ಕೊರೊನಾದಿಂದಾಗಿ ಜೀವ ಕಳೆದುಕೊಂಡಿದ್ದಾರೆ..

ಹೌದು ಸುದ್ದಿ ನಿರೂಪಣೆಯ ಮೂಲಕ ಲಕ್ಷಾಂತರ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಅರುಣ್ ಅವರು ಇದೀಗ ತನ್ನ ಸ್ವಂತ ತಂದೆ ತಾಯಿ ಇಬ್ಬರನ್ನೂ ಸಹ ಕಳೆದುಕೊಳ್ಳುವಂತಾಗಿದೆ.. ಮೂರು ದಿನಗಳ ಹಿಂದಷ್ಟೇ ಅರುಣ್ ಬಡಿಗೆರ್ ಅವರ ತಾಯಿ ಕಸ್ತೂರಮ್ಮ ಅವರು ಕೊರೊನಾದಿಂದಾಗಿ ಜೀವ ಕಳೆದುಕೊಂಡಿದ್ದಾರೆ.. ಇದೀಗ ಮೂರು ದಿನಗಳ ನಂತರ ತಂದೆಯೂ ಸಹ ಇಲ್ಲವಾಗಿದ್ದಾರೆ.. ಹೌದು ಅರುಣ್ ಅವರ ತಂದೆ ಚಂದ್ರಶೇಖರ್ ಬಡಿಗೆರ್ ಅವರಿಗೆ ಅರವತ್ತೆಂಟು ವರ್ಷ ವಯಸ್ಸಾಗಿತ್ತು.. ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಅವರನ್ನು ಹುಬ್ಬಳ್ಳಿಯ ಕಿಂಸ್ ಆಸ್ಪತ್ರೆಗೆ ಸೇರಿಸಲಾಗಿತ್ತು.. ಅಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ..