ಮಗನಿಗೆ ನಾಮಕರಣದ ಸಂಭ್ರಮ.. ಫೋಟೋ ಹಂಚಿಕೊಂಡ ಅಶ್ವಿನಿ‌ ನಕ್ಷತ್ರ ನಟಿ ಮಯೂರಿ.. ಮಗನಿಗೆ ಇಟ್ಟ ವಿಶೇಷ ಹೆಸರೇನು ಗೊತ್ತಾ?

0 views

ಕನ್ನಡ ಕಿರುತೆರೆಯ ಖ್ಯಾತ ನಟಿ ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ ಅವರ ಮನೆಯಲ್ಲೀಗ ಮಗುವಿನ ನಾಮಕರಣದ ಸಂಭ್ರಮ.. ಹೌದು ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಮದುವೆಯಾಗಿದ್ದ ಮಯೂರಿ ಅವರು ಕೆಲವೇ ತಿಂಗಳಲ್ಲಿ ಮಗುವಿನ ಆಗಮನದ ಸಿಹಿಸುದ್ದಿ ನೀಡಿದ್ದರು.. ಇದೀಗ ಎರಡು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದು ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಬರಮಾಡಿಕೊಂಡಿದ್ದರು.. ಸಧ್ಯ ಇದೀಗ ಮಗನಿಗೆ ನಾಮಕರಣ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಮಯೂರಿ ಅವರು ಕಳೆದ ವರ್ಷ ಜೂನ್ ನಲ್ಲಿ ಮಯೂರಿ ಅವರು ತಮ್ಮ ಬಹುಕಾಲದ ಗೆಳೆಯ ಅರುಣ್ ಅವರ ಜೊತೆ ನೂತನ ಜೀವನಕ್ಕೆ ಕಾಲಿಟ್ಟಿದ್ದರು.. ಕೊರೊನಾ ಇದ್ದ ಕಾರಣ ಬೆಂಗಳೂರಿನ ಜೆಪಿ ನಗರದ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಸರಳವಾಗಿ ಕುಟುಂಬದ ಕೆಲವೇ ಸದಸ್ಯರ ನಡುವೆ ಮದುವೆ ಸಮಾರಂಭ ನೆರವೇರಿತ್ತು.. ಇನ್ನು ಮಯೂರಿ ಅವರ ಮದುವೆಯಲ್ಲಿ ನಟ ಜೆಕೆ ಅವರ ತಂದೆ ತಾಯಿ ಮಯೂರಿ ಅವರ ಅಪ್ಪ ಅಮ್ಮನ ಸ್ಥಾನದಲ್ಲಿ ನಿಂತು ಧಾರೆ ಎರೆದು ಶಾಸ್ತ್ರಗಳನ್ನು ನೆರವೇರಿಸಿದ್ದು ವಿಶೇಷ..

ಇನ್ನು ಮದುವೆಯಾದ ನಾಲ್ಕು ತಿಂಗಳಲ್ಲಿ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗುತ್ತಿರುವ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದರು.. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇದ್ದ ಮಯೂರಿ ಅವರ ಆಗಾಗ ತಮ್ಮ ತಾಯ್ತನದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.. ಆಗಾಗ ಪ್ರೆಗ್ನೆನ್ಸಿ ಫೋಟೋ ಚಿತ್ರೀಕರಣ ಮಾಡಿಸುತ್ತಿದ್ದ ಮಯೂರಿ ಅವರ ಫೋಟೋಗಳು ವೈರಲ್ ಆಗುತ್ತಿದ್ದವು.. ಇನ್ನು ಈ ವರ್ಷ ಮಾರ್ಚ್ ಹದಿನೈದರಂದು ಮಯೂರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು ಅರುಣ್ ಹಾಗೂ ಮಯೂರಿ ಅವರ ಹತ್ತು ವರ್ಷದ ಪ್ರೀತಿಗೆ ಸಾಕ್ಷಿಯಾಗಿ ಹೊಸ ಜೀವವೊಂದರ ಅಗಾಮನವಾಗಿತ್ತು..

ಇನ್ನು ಮಗು ಹುಟ್ಟಿದಾಗಿನಿಂದ ತಮ್ಮ ಚೊಚ್ಚಲ ತಾಯ್ತನದ ಅನುಭವಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇದ್ದರು.. ಇದೀಗ ಮಗನಿಗೆ ನಾಮಕರಣ ಮಾಡಿದ್ದು ತಮ್ಮ ಮುದ್ದು ಕಂದನಿಗೆ ಇಟ್ಟ ವಿಶೇಷ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಹೌದು ಮಗು ಹುಟ್ಟುದಾಗಿನಿಂದ ಸ್ಟಾರ್ ಬಾಯ್ ಎಂದೇ ಕರೆಯುತ್ತಿದ್ದ ಮಯೂರಿ ಹಾಗೂ ಅರುಣ್ ಅವರು ಇದೀಗ ಮಗನಿಗೆ ಆರವ್ ಎಂಬ ಹೆಸರನ್ನಿಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರೊಂದಿಗೆ ಸಂತೋಷ ಹಂಚಿಕೊಂಡಿದ್ದಾರೆ..

ಇನ್ನು ಮಗು ಹುಟ್ಟಿದ ಹದಿನೈದು ದಿನದಲ್ಲಿ ವಿಶೇಷ ಫೋಟೋ ಚಿತ್ರೀಕರಣ ಮಾಡಿಸಿದ್ದ ಮಯೂರಿ ಅವರು ಇದೀಗ ಆ ಫೋಟೋಗಳನ್ನು ಹಂಚಿಕೊಂಡಿದ್ದು “ಮಾರ್ಚ್ ಹದಿನೈದರಂದು ಮಗ ಹುಟ್ಟಿದ್ದಾನೆ.. ಬದುಕು ಸಂಪೂರ್ಣವಾಗಿ ಬದಲಾಗಿದೆ.. ನನ್ನ ನಗನೇ ನನಗೀಗ ಹೊಸ ಪ್ರಪಂಚ.. ನನ್ನ ಮಗು ಆರವ್.. ಎಂದು ಬರೆದು ಪೋಸ್ಟ್ ಮಾಡಿದ್ದು ಪುಟ್ಟ ಆರವ್ ಗೆ ಸ್ನೇಹಿತರು ಆಪ್ತರು ಅಭಿಮಾನಿಗಳು ಶುಭ ಹಾರೈಸಿದ್ದಾರೆ..