ಸಧ್ಯದಲ್ಲಿಯೇ ಬಿಗ್ ಬಾಸ್ ಅರವಿಂದ್ ಮದುವೆ.. ಆದರೆ ಹುಡುಗಿ ಯಾರು ಗೊತ್ತಾ..

0 views

ಬಿಗ್ ಬಾಸ್ ಸೀಸನ್ ಎಂಟು ಸಾಕಷ್ಟು ವಿಶೇಷತೆಗಳಿಂದ ಗಮನ ಸೆಳೆದಿತ್ತು.. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎರಡು ಇನ್ನಿಂಗ್ಸ್ ಗಳಾಗಿ ನಡೆದ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಸಾಕಷ್ಟು ಸ್ಪರ್ಧಿಗಳು ಜನರಿಗೆ ಬಹಳಷ್ಟು ಹತ್ತಿರವಾದರು.. ಅದರಲ್ಲಿಯೂ ಕೆಲವರ ಮೇಲಿನ ಜನರ ಅಭಿಪ್ರಾಯಗಳೇ ಬದಲಾಗಿ ಅವರ ಜೀವನವೇ ಬದಲಾಗಿದ್ದು ನಿಜಕ್ಕೂ ಒಳ್ಳೆಯ ವಿಚಾರ ವಾಗಿತ್ತು.. ಇನ್ನು ಇದೆಲ್ಲವನ್ನು ಹೊರತು ಪಡಿಸಿ ಸಧ್ಯ ಕಲಾವಿದನಾಗದಿದ್ದರೂ ಬಿಗ್ ಬಾಸ್ ಮನೆಗೆ ಎಂಟ್ರಿ‌ ಕೊಟ್ಟು ಜನರ ಮನಗೆದ್ದು ಕೊನೆವರೆಗೂ ಅದರಲ್ಲೂ ಫಿನಾಲೆ ವೇದಿಕೆಗೆ ಬಂದು ಟಾಪ್ ಎರಡನೇ ಸ್ಥಾನದಲ್ಲಿ ಉಳಿದು ರನ್ನರ್ ಅಪ್ ಆದವರು ಅರವಿಂದ್ ಕೆಪಿ.. ಹೌದು ಅರವಿಂದ್ ಕೆಪಿ ಬಿಗ್ ಬಾಸ್ ಮನೆಯಲ್ಲಿದ್ದಾಗ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗಿದ್ದರು.. ಆದರೀಗ ಮನೆಯಿಂದ ಹೊರ ಬಂದ ನಂತರ ಮದುವೆಯ ವಿಚಾರವಾಗಿ ಸದ್ದು ಮಾಡುತ್ತಿದ್ದು ಸಧ್ಯದಲ್ಲಿಯೇ ಅರವಿಂದ್ ಅವರ ನಿಶ್ಚಿತಾರ್ಥ ನೆರವೇರಲಿದೆ ಎನ್ನಲಾಗುತ್ತಿದೆ.. ಅಷ್ಟಕ್ಕೂ ಅರವಿಂದ್ ಕೈಹಿಡಿಯುತ್ತಿರುವ ಆ ಹುಡುಗಿ ಯಾರು ಗೊತ್ತಾ.. ಇಲ್ಲಿದೆ ನೋಡಿ..

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಆಗಮಿಸಿದ್ದ ಬಹಳಷ್ಟು ಸ್ಪರ್ಧಿಗಳಲ್ಲಿ ಕೆಲವರು ಜನರ ಮನಸ್ಸಿಗೆ ಬಹಳ ಹತ್ತಿರವಾದರು.. ಅದರಲ್ಲೂ ಶುಭಾ ಪೂಂಜಾ ಅವರ ಮೇಲೆ ಮೊದಲು ಜನರಿಗೆ ಬೇರೆಯದ್ದೇ ಅಭಿಪ್ರಾಯವಿದ್ದು ಬಿಗ್ ಬಾಸ್ ಗೆ ಬಂದ ನಂತರ ಅವರ ನಿಜವಾದ ಗುಣ ಹಾಗೂ ನಡೆಯನ್ನು ನೋಡಿ ಅದೆಷ್ಟೋ ಮಂದಿ ಈ ಬಗ್ಗೆ ಶುಭಾ ಅವರ ಬಳಿ ಕ್ಷಮೆ ಕೇಳಿದ್ದೂ ಉಂಟು.. ಪಡ್ಡೆ ಹೈಕಳು ಮಾತ್ರ ಅಭಿಮಾನಿಗಳಾಗಿದ್ದ ಶುಭಾ ಪೂಂಜಾ ಅವರಿಗೀಗ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ಅಜ್ಜಿಯಂದಿರೂ ಸಹ ಅಭಿಮಾನಿಗಳೆನ್ನಬಹುದು.. ಇನ್ನು ಮಂಜು ಪಾವಗಡ ಮೊದಲ ದಿನದಿಂದಲೂ ಮನರಂಜನೆ ನೀಡುತ್ತಾ ಬಂದರೂ ಸಹ ಮೊದಲ ಇನ್ನಿಂಗ್ಸ್ ನಲ್ಲಿ ದಿವ್ಯಾ ಸುರೇಶ್ ಜೊತೆ ಹೆಚ್ಚು ಸಮಯ ಕಳೆದು ಸ್ವಲ್ಪ ಗುರಿ ತಪ್ಪಿದರೂ ಸಹ ಎರಡನೇ ಇನ್ನಿಂಗ್ಸ್ ನಲ್ಲಿ ತಮ್ಮೆಲ್ಲರ ತಪ್ಪನ್ನು ತಿದ್ದಿಕೊಂಡು ಗೆಲುವಿನ ಕಿರೀಟ ಮುಡಿಗೇರಿಸಿಕೊಂಡರು..

ಇನ್ನು ಇವರೆಲ್ಲರ ನಡುವೆ ಜನರ ಮನಗೆದ್ದ ಮತ್ತಿಬ್ಬರು ಸ್ಪರ್ಧಿಗಳೆಂದರೆ ಅದು ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ.. ಹೌದು ಅರವಿಂದ್ ಕೆಪಿ ಸಧ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ ಸಹ ಅವರಿಗೆ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯರಾಗಿರಲಿಲ್ಲ.. ಮಂಗಳೂರು ಭಾಗಕ್ಕೆ ಮಾತ್ರ ಹೆಚ್ವು ಜನಪ್ರಿಯರಾಗಿದ್ದ ಅರವಿಂದ್ ಅವರು ಬಿಗ್ ಬಾಸ್ ಗೆ ಬಂದ ನಂತರ ಇಡೀ ನಾಡೇ ಅವರ ಸಾಧನೆ ಹಾಗೂ ಅವರ ನಡವಳಿಕೆಗೆ ಫಿದಾ ಆಗಿ ಹೋಯಿತು.. ಆದರೆ ಮೊದಲ ಇನ್ನಿಂಗ್ಸ್ ನಲ್ಲಿ ಅರವಿಂದ್ ಅವರೇ ಬಿಗ್ ಬಾಸ್ ಗೆಲ್ಲುವರು ಎನ್ನಲಾಗುತಿತ್ತು.. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಹೆಚ್ಚು ಸಮಯವನ್ನು ದಿವ್ಯಾ ಉರುಡುಗ ಅವರ ಜೊತೆಯೇ ಕಳೆದು ಬಹುಶಃ ಗೆಲುವಿಗೆ ಒಂದೆಜ್ಜೆ ಹಿಂದೆ ಉಳಿದರು ಎಂಬ ಮಾತು ಸಹ ಇದೆ.. ಇನ್ನು ಅರವಿಂದ್ ಹಾಗೂ ದಿವ್ಯಾ ಅವರ ಪ್ರೀತಿ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸುದ್ದಿಯಾಗಿತ್ತು.. ಕೆಲವೊಮ್ಮೆ ಟ್ರೋಲ್ ಕೂಡ ಆಗಿತ್ತು..

ಆದರೆ ಈ ಮುದ್ದು ಜೋಡಿಗೆ ಸಾಕಷ್ಟು ಅಭಿಮಾನಿಗಳು ಸಹ ಇದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿ ಪೇಜ್ ಗಳು ಕೂಡ ತೆರೆಯಲಾಗಿತ್ತು.. ಇತ್ತ ಬಿಗ್ ಬಾಸ್ ಪ್ರತಿ ಸೀಸನ್ ನಲ್ಲಿಯೂ ಒಂದೊಂದು ಜೋಡಿ ಇರೋದು ಸಾಮಾನ್ಯ.. ಕಳೆದ ಸೀಸನ್ ನಲ್ಲಿಯೂ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಅವರ ಜೋಡಿಗೆ ಸಾಕಷ್ಟು ಅಭಿಮಾನಿಗಳಿದ್ದು ಸೀಸನ್ ಮುಗಿದ ಬಳಿಕ ಆ ಅಭಿಮಾನಿಗಳು ಸಹ ಮರೆಯಾದರು.. ಆದರೆ ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿ ಬೇರೆಯದ್ದೇ ರೀತಿ ಎನ್ನಬಹುದು.. ಹೌದು ಇಬ್ಬರ ನಡುವಿನ ಪ್ರೀತಿ ಕೇವಲ ಶೋಗೆ ಮಾತ್ರವಲ್ಲ.. ಬದಲಿಗೆ ಇಬ್ಬರ ನಡುವೆ ನಿಜವಾಗಿಯೂ ಪ್ರೀತಿ ಮೂಡಿದ್ದು ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕಾಣುತಿತ್ತು.. ಇತ್ತ ಮೊದಲ ಇನ್ನಿಂಗ್ಸ್ ಮುಗಿಸಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಅವರಿಬ್ಬರ ಜೋಡಿ ಯಶಸ್ಸು ಕಂಡಿದ್ದು ನೋಡಿ ಸ್ವತಃ ಅವರೇ ಆಶ್ಚರ್ಯ ಪಟ್ಟುಕೊಂಡಿದ್ದರು. ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಬಿಗ್ ಬಾಸ್ ಮನೆಗೆ ಹೋದಾಗ ಅರವಿಂದ್ ತಮ್ಮ ಹಾಗೂ ದಿವ್ಯಾರ ಬಟ್ಟೆಗಳನ್ನು ಒಂದೇ ರೀತಿ ಡಿಸೈನ್ ಮಾಡಿ ಕಳುಹಿಸಲು ಡಿಸೈನರ್ ಒಬ್ಬರನ್ನು ಸಹ ನೇಮಕ ಮಾಡಿದ್ದು ವಿಶೇಷವಾಗಿತ್ತು..

ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಇಬ್ಬರು ಮೊದಲಿಗಿಂತ ಹೆಚ್ಚು ಆತ್ಮೀಯರಾಗಿದ್ದು ಬಹುಶಃ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಬೇರೆ ಬೇರೆಯಾಗಿ ಇರಿವ ವೀಡಿಯೋ ಸಿಗುವುದೇ ಅಪರೂಪವೆನ್ನಬಹುದು.. ಈ ಬಗ್ಗೆ ಸಾಕಷ್ಟು ಟ್ರೋಲ್ ಕೂಡ ಆಗಿತ್ತು.. ಇನ್ನು ಮದುವೆ ವಿಚಾರಕ್ಕೆ ಬಂದರೆ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಇಬ್ಬರ ಮದುವೆ ನೆರವೇರಲಿದೆ ಎನ್ನಲಾಗುತಿತ್ತು.. ಆದರೆ ಬಿಗ್ ಬಾಸ್ ನಿಂದ ಹೊರ ಬಂದು ಸಾಕಷ್ಟು ತಿಂಗಳು ಕಳೆದರೂ ಸಹ ಇಬ್ಬರ ಮದುವೆಯ ಸಿಹಿ ಸುದ್ದಿ ಮಾತ್ರ ಅಭಿಮಾನಿಗಳಿಗೆ ಕೇಳಿ ಬರಲಿಲ್ಲ.. ಆದರೀಗ ಅರವಿಂದ್ ಅವರ ಕಲ್ಯಾಣ ನಡೆಯಲಿದ್ದು ಸಧ್ಯದಲ್ಲಿಯೇ ನಿಶ್ಚಿತಾರ್ಥ ನೆರವೇರಲಿದೆ ಎನ್ನಲಾಗುತ್ತಿದೆ.. ಇನ್ನು ನಮ್ಮ ಈ ಬೈಕ್ ರೇಸರ್ ಅರವಿಂದ್ ಕೈ ಹಿಡಿಯುತ್ತಿರುವ ಹುಡುಗಿ ಮತ್ಯಾರೂ ಅಲ್ಲ ಅದು ಬಿಗ್ ಬಾಸ್ ಮನೆಯಲ್ಲಿ ಸಿಕ್ಕ ಅರವಿಂದ್ ರ ಮನದರಸಿ ದಿವ್ಯಾ ಉರುಡುಗ..

ಹೌದು ಎರಡನೇ ಇನ್ನಿಂಗ್ಸ್ ಸಮಯದಲ್ಲಿ ಇತ್ತ ಹೊರಗೆ ಸಾಮಾಜಿಕ ಜಾಲತಾಣದಲ್ಲಿ ದಿವ್ಯಾ ಹಾಗೂ ಅರವಿಂದ್ ಇಬ್ಬರ ಹಳೆಯ ಫೋಟೋಗಳು ಸಾಕಷ್ಟು ವೈರಲ್ ಆಗಿತ್ತು.. ಇದರಿಂದಾಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಇಬ್ಬರ ನಡುವೆ ಈ ವಿಚಾರವಾಗಿ ಭಿನ್ನಾಭಿಪ್ರಾಯವೇನಾದರೂ ಮೂಡಬಹುದಾ ಎನ್ನಲಾಗುತಿತ್ತು.. ಆದರೆ ಅದಾಗಲೇ ಬಹಳ ಆತ್ಮೀಯರಾಗಿದ್ದ ಅರವಿಂದ್ ಹಾಗೂ ದಿವ್ಯಾ ಉರುಡುಗ.. ಅವರ ನಡುವಿನ ಪ್ರೀತಿಯೂ ಸಹ ಅಷ್ಟೇ ಗಟ್ಟಿಯಾಗಿತ್ತು.. ಸಧ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರವೂ ಪ್ರತಿಯೊಂದು ಕಾರ್ಯಕ್ರಮಗಳಿಗೂ ಜೋಡಿಯಾಗೇ ತೆರಳುತ್ತಿರುವ ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರ ಕಲ್ಯಾಣ ಖಚಿತ ಎಂದು ತಿಳಿದು ಬಂದಿದ್ದು ಸಧ್ಯದಲ್ಲಿಯೇ ನಿಶ್ಚಿತಾರ್ಥ ನೆರವೇರಲಿದೆ ಎಂದು ತಿಳಿದುಬಂದಿದೆ.. ಒಟ್ಟಿನಲ್ಲಿ ಚಂದನ್ ಹಾಗೂ ನಿವೇದಿತಾ ನಂತರ ಮತ್ತೊಂದು ಬಿಗ್ ಬಾಸ್ ಜೋಡಿ ಸಧ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡೋದು ಖಚಿತವಾಗಿದೆ..