ಫಿನಾಲೆ ತಲುಪಿದ ಅರವಿಂದ್ ಕೆಪಿ ಅವರಿಗೆ ಬಿಗ್ ಬಾಸ್ ಕೊಡುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ..

0 views

ಬಿಗ್ ಬಾಸ್ ನಲ್ಲಿ ಈ ಬಾರಿ ಆಯ್ಕೆಯಾದ ಸ್ಪರ್ಧಿಗಳ ಬಗ್ಗೆ ಶುರುವಿನಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದರೂ ಸಹ ಬರುಬರುತ್ತಾ ಇವರು ಕಳೆದ ಸೀಸನ್ ನಂತೆಯೇ ಅಷ್ಟೇ ಎನ್ನುವಂತಾಗಿತ್ತು.. ಆದರೆ ಇದೆಲ್ಲದರ ನಡುವೆಯೂ ಜನರ ಗಮನ ಸೆಳೆದವರು ಕೆಪಿ ಅರವಿಂದ್.. ಹೌದು ದಿವ್ಯಾ ಉರುಡುಗ ಅವರ ಜೊತೆಗಿನ ಆತ್ಮೀಯತೆಯ ವಿಚಾರಗಳ ಹೊರತಾಗಿಯೂ ಅರವಿಂದ್ ಕೆಪಿ ಅವರು ತಮ್ಮನ್ನು ತಾವು ಒಬ್ಬ ಒಳ್ಳೆಯ ಆಟಗಾರನಾಗಿ ಗುರುತಿಸಿಕೊಂಡರು.. ಬೈಕರ್ ಆಗಿ ದೇಶವನ್ನೇ ಪ್ರತಿನಿಧಿಸಿದ್ದ ಅರವಿಂದ್ ಅವರಿಗೆ ಬಿಗ್ ಬಾಸ್ ಮೂಲಕ ಜನರ ಪ್ರೀತಿಯೂ ದೊರೆಯಿತು.. ಅವರ ಪ್ರತಿಭೆ ಹೆಚ್ಚು ಜನರನ್ನು ತಲುಪಲು ಒಂದೊಳ್ಳೆ ವೇದಿಕೆಯೂ ಆಯಿತು..

ಇನ್ನು ಬಿಗ್ ಬಾಸ್ ಮನೆಯಲ್ಲಿ ಕೆಲಸದ ವಿಚಾರ ಬಂದರೆ ಬಹಳ ಡಿಸಿಪ್ಲಿನ್ ಆಗಿರುವ ಅರವಿಂದ್ ಟಾಸ್ಕ್ ಅಂತ ಬಂದರೆ ಮೊದಲ ದಿನದಿಂದಲೂ ನಂಬರ್ ಒನ್ ಎನ್ನಬಹುದು.. ಇನ್ನು ಇಂತಹ ಅರವಿಂದ್ ಕೆಪಿ ಅವರಿಗೆ ಬಿಗ್ ಬಾಸ್ ನಿಂದ ಬರುತ್ತಿರುವ ಸಂಭಾವನೆಯಾದರೂ ಎಷ್ಟು ಎಂಬ ಸಣ್ಣ ಕುತೂಹಲ ಎಲ್ಲರಿಗೂ ಇದ್ದೇ ಇದೆ.. ಹೌದು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಅರವಿಂದ್ ಕೆಪಿ ಅವರಿಗೆ ದುಬಾರಿ ಸಂಭಾವನೆಯನ್ನೇ ನೀಡಲಾಗುತ್ತಿದೆ.. ಹೌದು ಬಿಗ್ ಬಾಸ್ ಈ ಸೀಸನ್ ನಲ್ಲಿನ ಎಲ್ಲಾ ಸ್ಪರ್ಧಿಗಳ ಪೈಕಿ ಅರವಿಂದ್ ಕೆಪಿ ಅವರಿಗೆ ಅತಿ ಹೆಚ್ಚು ಸಂಭಾವನೆ ಎನ್ನುವ ಮಾತಿದೆ..

ಹೌದು ಮೊದ ಮೊದಲು ಅರವಿಂದ್ ಕೆಪಿ ಅವರನ್ನು ಬಿಗ್ ಬಾಸ್ ನಲ್ಲಿ ಭಾಗವಹಿಸುವಂತೆ ಹೇಳಲು ಅವರ ಬಳಿ ಎರಡು ಮೂರು ಬಾರಿ ಬಿಗ್ ಬಾಸ್ ಆಯೋಜಕರು ಹೋಗಿದ್ದರಂತೆ.. ಆದರೆ ಮೊದಲು ಆಯೋಜಕರಿಗೆ ಸಿಗದ ಅರವಿಂದ್ ಶುರುವಿನಲ್ಲಿ ಬಿಗ್ ಬಾಸ್ ನಲ್ಲಿ ಭಾಗವಹಿಸಲು ಅಷ್ಟು ಆಸಕ್ತಿಯನ್ನೂ ಸಹ ತೋರಿರಲಿಲ್ಲವಂತೆ.. ಆದರೆ ಪ್ರತಿ ಸೀಸನ್ ನಲ್ಲಿಯೂ ಒಬ್ಬೊಬ್ಬ ಸ್ಪೋರ್ಟ್ ಪರ್ಸನ್ ಅನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸುವುದು ಅಭ್ಯಾಸ.. ಆದರೆ ಕಳೆದ ಅಷ್ಟೂ ಸೀಸನ್ ಗಳಲ್ಲಿ ಕ್ರಿಕೆಟ್ ಗೆ ಸಂಬಂಧಪಟ್ಟವರೇ ಬಿಗ್ ಬಾಸ್ ಮನೆಗೆ ಹೋಗಿದ್ದರು.. ಈ ಬಾರಿ ಕೊಂಚ ಬದಲಾವಣೆ ಇರಲಿ ಎಂಬ ಕಾರಣಕ್ಕೆ ಬೈಕರ್ ಒಬ್ಬರನ್ನು ಬಿಗ್ ಬಾಸ್ ಮನೆಗೆ ಕಳುಹಿಸಲು ನಿರ್ಧಾರ ಮಾಡಿದ್ದರು.. ಅದರಂತೆ ಅರವಿಂದ್ ರನ್ನು ಮನವೊಲಿಸಿ ಬಿಗ್ ಬಾಸ್ ಮನೆಗೆ ಕಳುಹಿಸಲಾಯಿತು..

ಇನ್ನು ಸಂಭಾವನೆ ವಿಚಾರಕ್ಕೆ ಬಂದರೆ ಅರವಿಂದ್ ಅವರಿಗೂ ಸಹ ಎಲ್ಲರಂತೆಯೇ ವಾರದ ಸಂಭಾವನೆಯನ್ನು ನಿಗಧಿ ಮಾಡಲಾಗಿದೆ.. ಬಿಗ್ ಬಾಸ್ ಮನೆಯಲ್ಲಿ ಉಳಿದಷ್ಟು ವಾರಗಳ ಲೆಕ್ಕದಲ್ಲಿ ಅವರಿಗೆ ಸಂಭಾವನೆ ಸಿಗಲಿದೆ.. ಇನ್ನು ಸಧ್ಯ್ ಬಿಗ್ ಬಾಸ್ ಫೈನಲಿಸ್ಟ್ ಆಗಿರುವ ಅರವಿಂದ್ ಅವರು ಒಟ್ಟು ನೂರ ಇಪ್ಪತ್ತು ದಿನ ಬಿಗ್ ಬಾಸ್ ಮನೆಯಲ್ಲಿ ಉಳಿಯಲು ಯಶಸ್ವಿಯಾಗಿದ್ದು ಒಟ್ಟು ಹದಿನೇಳು ವಾರಗಳ ಸಂಭಾವನೆ ಅರವಿಂದ್ ಅವರ ಕೈ ಸೇರಲಿದೆ.. ಹೌದು ಅರವಿಂದ್ ಅವರಿಗೆ ಒಂದು ವಾರಕ್ಕೆ ಅರವತ್ತು ಸಾವಿರ ರೂಪಾಯಿ ಸಂಭಾವನೆ ನಿಗಧಿಯಾಗಿದ್ದು ಹದಿನೇಳು ವಾರಕ್ಕೆ ಒಟ್ಟು ಹತ್ತು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಅರವಿಂದ್ ಅವರ ಕೈ ಸೇರಲಿದೆ..

ಇದರ ಜೊತೆಗೆ ಫಿನಾಲೆ ವಾರದಲ್ಲಿ ಸರಣಿ ಟಾಸ್ಕ್ ಗಳನ್ನು ನೀಡಿ ಎರಡು ಲಕ್ಷ ರೂಪಾಯಿ ಬಹುಮಾನ ಗೆಲ್ಲುವ ಅವಕಾಶ ನೀಡಲಾಗಿತ್ತು.. ಈ ಟಾಸ್ಕ್ ನಲ್ಲಿಯೂ ಸಹ ಅರವಿಂದ್ ಅವರೇ ವಿಜಯಿಯಾಗಿದ್ದು ಈ ಎರಡು ಲಕ್ಷ ರೂಪಾಯಿ ಸಹ ಅರವಿಂದ್ ಅವರ ಕೈ ಸೇರಲಿದೆ.. ಇನ್ನು ಫಿನಾಲೆಯ ಪ್ರಮುಖ ಹಾಗೂ ಪ್ರಬಲ ಸ್ಪರ್ಧಿಯಾಗಿರುವ ಅರವಿಂದ್ ಅವರೇ ಈ ಸೀಸನ್ ನ ವಿನ್ನರ್ ಆಗಬಹುದು ಎಂದು ಬಹಳಷ್ಟು ಪ್ರೇಕ್ಷಕರು ಹೇಳುತ್ತಿದ್ದು ಒಂದು ವೇಳೆ ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಪಟ್ಟ ಅರವಿಂದ್ ಅವರ ಮುಡಿಗೇರಿದರೆ ಆ ಬಹುಮಾನದ ಮೊತ್ತ ಐವತ್ತು ಲಕ್ಷ ರೂಪಾಯಿಯಲ್ಲಿ ಟ್ಯಾಕ್ಸ್ ಕಡಿತಗೊಂಡು ಮೂವತ್ತ ನಾಲ್ಕು ಲಕ್ಷ ರೂಪಾಯಿ ಸಹ ಅರವಿಂದ್ ಅವರ ಪಾಲಾಗಲಿದೆ.. ಒಟ್ಟಿನಲ್ಲಿ ಸೀಸನ್ ಎಂಟರ ವಿಜೇತರು ಯಾರಾಗುವರೋ ನಾಳೆ ಕುತೂಹಲಕ್ಕೆ ತೆರೆ ಬೀಳಲಿದೆ..