ಅರವಿಂದ್ ದಿವ್ಯಾ ಮಾಡುತ್ತಿದ್ದ ಕೆಲಸ ಕಂಡು ನೇರವಾಗಿಯೇ ಪ್ರಶಾಂತ್ ಸಂಬರ್ಗಿ ಶುಭಾ ಪೂಂಜಾ ಹೇಳಿದ ಮಾತು ನೋಡಿ..

0 views

ಬಿಗ್ ಬಾಸ್ ಮನೆಯ ಜೋಡಿ ಹಕ್ಕಿಗಳು ಎಂದೇ ಹೆಸರು ಮಾಡಿರುವ ಅರವಿಂದ್ ದಿವ್ಯಾ ಜೋಡಿ ಸದ್ಯವಿ ರ ಸದಿಂದ ದೂರವಾಗಿ ಬಿಗ್‌ ಬಾಸ್‌ ಮನೆಯಲ್ಲಿ ಸಂತೋಷದ ಸಮಯ ಕಳೆಯುತ್ತಿದ್ದು ಇದೀಗ ಮಧ್ಯರಾತ್ರಿ ಪ್ರಶಾಂತ್ ಹಾಗೂ ಶುಬಾ ಪೋಂಜಾಗೆ ಸಿಕ್ಕಿ ಬಿದ್ದು ಮುಜುಗರ ಪಟ್ಟಿದ್ದಾರೆ.. ಹೌದು ಬಿಗ್ ಬಾಸ್ ನ ಪ್ರತಿ ಸೀಸನ್ ನಲ್ಲಿಯೂ ಒಂದೊಂದು ಜೋಡಿ ಇದ್ದೇ ಇರುತ್ತದೆ.. ಇದು ಕಾಕತಾಳಿಯವೋ ಅಥವಾ ಟಿಆರ್ ಪಿಗಾಗಿಯೋ ತಿಳಿಯದು. ಆದರೆ ಈ ಸೀಸನ್ ನಲ್ಲಿ ಮಾತ್ರ ಅರವಿಂದ್ ದಿವ್ಯಾ ಜೋಡಿ ಜನರ ಮನಗೆದ್ದಿದ್ದಷ್ಟೇ ಅಲ್ಲದೇ ನಿಜ ಜೀವನದಲ್ಲಿಯೂ ಜೋಡಿಯಾಗೋದು ಬಹುತೇಕ ಖಚಿತವಾಗಿದೆ.. ಹೌದು ದಿವ್ಯಾ ಉರುಡುಗ ಹಾಗೂ ಅರವಿಂದ್ ಪರಸ್ಪರ ಪರಿಚಯವಿಲ್ಲದೇ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದರು.. ಆದರೆ ಕೆಲವೇ ವಾರಗಳಲ್ಲಿ ನಡೆದ ಜೋಡಿ ಟಾಸ್ಕಿನಲ್ಲಿ ಬೇರೆ ಯಾರೂ ಸಹ ಬೇಡವೆಂದು ಅರವಿಂದ್ ರನ್ನು ಜೋಡಿ ಮಾಡಿಕೊಂಡ ದಿವ್ಯಾ ಉರುಡುಗ ಅವರ ನಿರ್ಧಾರ ಬಿಗ್ ಬಾಸ್ ಆಟದಲ್ಲಿ ಮಾತ್ರವಲ್ಲ ಅವರ ಜೀವನದಲ್ಲಿಯೂ ತಿರುವು ನೀಡಿತು..

ಹೌದು ಆ ಜೋಡಿ ಟಾಸ್ಕ್ ನಿಂದ ಇಬ್ಬರೂ ಬಹಳ ಹತ್ತಿರವಾದರು. ಅರ್ಥ ಮಾಡಿಕೊಂಡರು. ಜೊತೆಗೆ ತಮ್ಮ ಮೈಮೇಲೆ ಎಷ್ಟು ನಟ್ಟು ಬೋಲ್ಟ್ ಇದೆ ಎಂಬುದನ್ನು ಸಹ ಶರ್ಟ್ ಬಿಚ್ಚಿ ಅರವಿಂದ್ ಅವರು ದಿವ್ಯಾಗೆ ತೋರಿಸುವಷ್ಟು ಹತ್ತಿರವಾದರು. ಇನ್ನು ಆ ಟಾಸ್ಕಿನ ನಂತರ ಇಬ್ಬರೂ ಎಲ್ಲಿ ಹೋದರೂ ಎಲ್ಲಿ ಬಂದರೂ ಸಹ ಅಂಟಿಕೊಂಡೇ ಇದ್ದದ್ದು ಹೊರಗೆ ಅದಾಗಲೇ ಅವರಿಬ್ಬರ ನಡುವಿನ ಆತ್ಮೀಯತೆಯ ಕುರಿತು ಪೋಸ್ಟ್ ಗಳು ಟ್ರೋಲ್ ಗಳು ಸುದ್ದಿಗಳು ಹರಿದಾಡಿದವು.. ಬಹಳಷ್ಟು ಮಂದಿ ಈ ಜೋಡಿಯನ್ನು ಮೆಚ್ಚಿಕೊಂಡಿದ್ದರು.. ನೋಡು ನೋಡುತ್ತಾ ದಿವ್ಯಾ ಉರುಡುಗ ಅರವಿಂದ್ ಅವರಿಗೆ ರಿಂಗ್ ತೊಡಿಸಿದ್ದೂ ಆಯಿತು.. ಇತ್ತ ದಿವ್ಯಾಗೆ ಆರೋಗ್ಯ ಕೆಟ್ಟಾಗ ಅವರ ಬಟ್ಟೆಯನ್ನು ಅರವಿಂದ್ ಒಗೆದು ಕೊಟ್ಟಿದ್ದು ಆಯಿತು.. ಇನ್ನು ಕೊರೊನಾ ಕಾರಣದಿಂದಾಗಿ ಮನೆಯಿಂದ ಹೊರ ಬಂದ ಅರವಿಂದ್ ದಿವ್ಯಾಗೆ ತಮ್ಮಿಬ್ಬರ ಬಗ್ಗೆ ಇದ್ದ ಪಾಸಿಟಿವ್ ಪ್ರತಿಕ್ರಿಯೆ ನೋಡಿ ಆಶ್ಚರ್ಯ ಪಟ್ಟಿದ್ದೂ ಉಂಟು..

ಇನ್ನು ಇವರಿಬ್ಬರ ಕುಟುಂಬದವರು ಸಹ ಮದುವೆಗೆ ಒಪ್ಪಿಗೆ ಸೂಚಿಸಿದ್ದು ಇಬ್ಬರೂ ಮದುವೆಯಾಗೋದು ಬಹುತೇಕ ಖಚಿತವೆನ್ನಬಹುದು.‌ ಇಬ್ಬರೂ ಸಹ ಅದಾಗಲೇ ಕಮಿಟ್ ಆಗಿದ್ದು ಸಾಕಷ್ಟು ಸಂದರ್ಶನಗಳಲ್ಲಿ ಪರೋಕ್ಷವಾಗಿ ಮದುವೆಯ ವಿಚಾರವನ್ನು ತಿಳಿಸಿದರು.. ಆ ಬಳಿಕ ಬಿಗ್ ಬಾಸ್ ಎರಡನೇ ಇನ್ನಿಣ್ಗ್ಸ್ ಆರಂಭಗೊಂಡು ಇಬ್ಬರು ಮತ್ತಷ್ಟು ದಿನಗಳು ಒಟ್ಟಿಗೆ ಕಳೆಯುವಂತಾಯಿತು.. ಇನ್ನು ವಾರಾಂತ್ಯದಲ್ಲಿ ದಿವ್ಯಾ ಹಾಗೂ ಅರವಿಂದ್ ಇಬ್ಬರೂ ಸಹ ಒಂದೇ ರೀತಿಯ ಬಟ್ಟೆ ಹಾಕಿಕೊಳ್ಳಬೇಕೆಂದು ನಿರ್ಧರಿಸಿ ಅದಕ್ಕಾಗಿಯೇ ಡಿಸೈನರ್ ಒಬ್ಬರನ್ನು ನೇಮಿಸಿ ಅವರಿಂದಲೇ ಪ್ರತಿ ವಾರ ಬಟ್ಟೆಗಳನ್ನು ತರಿಸಿಕೊಳ್ಳುತ್ತಿದ್ದಾರೆ..

ಇನ್ನೂ ಇತ್ತ ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ಆತ್ಮೀಯವಾಗಿ ನಡೆದುಕೊಳ್ಳುತ್ತಿರುವ ಅರವಿಂದ್ ದಿವ್ಯಾ ಅವರ ಮಧ್ಯ ರಾತ್ರಿಯ ಮಾತುಗಳು ಹೆಚ್ಚಾಗಿದ್ದು ಒಮ್ಮೆ ಮನಸ್ಥಾಪವೂ ಸಹ ಉಂಟಾಗಿ ನಂತರ ಆಲಿಂಗನದ ಮೂಲಕ ಸರಿ ಮಾಡಿಕೊಂಡರು.. ಆದರೀಗ ಮಧ್ಯ ರಾತ್ರಿ ಎಲ್ಲರೂ ಮಲಗಿದ್ದ ಸಮಯದಲ್ಲಿ ದಿವ್ಯಾ ಅರವಿಂದ್ ಬಳಿ ತೆರಳಿ ಮಾಡಿದ ಕೆಲಸಕ್ಕೆ ಪ್ರಶಾಂತ್ ಸಂಬರ್ಗಿ ಹಾಗೂ ಶುಭಾ ಪೂಂಜಾ ಬೈದಿದ್ದಾರೆ.. ಹೌದು ಎಲ್ಲರೂ ಮಲಗಿದ ಬಳಿಕ ದಿವ್ಯಾ ಅರವಿಂದ್ ಬಳಿ ಹೋಗಿ ಪದೇ ಪದೇ ಎಬ್ಬಿಸಿ ಮಾತನಾಡುತ್ತಿರುವುದು ಇತರರಿಗೆ ಕಿರಿಕಿರಿಯನ್ನುಂಟು ಮಾಡಿದ್ದು ನೇರವಾಗಿ ಬೈದಿದ್ದಾರೆ. ಹೌದು ಅವನು ಮಲಗಿದ್ದರೂ ಸಹ ನೀನು ಹೋಗಿ ಅವನನ್ನು ಎಬ್ಬಿಸಿ ಗುಸುಗುಸು ಅಂತ ಮಾತನಾಡ್ತೀಯಾ.. ಆಗ ತಾನೆ ನಮಗೆ ನಿದ್ರೆ ಬರ್ತಾ ಇರತ್ತೆ ನಿನ್ನ ಮಾತಿಂದ ಅದೂ ಸಹ ಹೋಗತ್ತೆ.. ದಿನ ಪೂರ್ತಿ ನಿದ್ರೆ ಮಾಡೋಕೆ ಅವಕಾಶ ಇರೋದಿಲ್ಲ.. ಐಗುವ ಸ್ವಲ್ಪ ಸಮಯ ಕೂಡ ನಿನ್ನ ಮಾತಿಂದ ನಿದ್ರೆ ಹಾಳಾಗತ್ತೆ ಎಂದಿದ್ದಾರೆ..

ಇತ್ತ ಅರವಿಂದ್ ಕೂಡ ನಾನು ಸಹ ಹೇಳ್ತೀನಿ ಹೋಗ್ ಮಲ್ಕೋ ಅಂತ.. ಆದರೆ ಅವಳೇ ಬಿಡೋದಿಲ್ಲ ಎಂದಿದ್ದಾರೆ.. ಈ ಮಾತಿನಿಂದ ಮುನಿಸಿಕೊಂಡ ದಿವ್ಯಾ ಹೌದ ನಾನೇನಾ ಬರೋದು ನೀವೇನು ಬರೋದಿಲ್ವಾ ಎಂದು ಮುನಿಸಿಕೊಂಡು ಮನೆಯೊಳಗೆ ತೆರಳಿದ ದಿವ್ಯಾಳನ್ನು ಕರೆದು ಮತ್ತೊಮ್ಮೆ ಆಲಿಂಗಿಸಿ ಸಮಾಧಾನ ಮಾಡುತ್ತಾರೆ ಅರವಿಂದ್.. ಆದರೆ ಇತ್ತ ಹೊರಗೆ ಮಾತ್ರ ಅರವಿಂದ್ ದಿವ್ಯಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು ಇಬ್ಬರೂ ಸದಾ ಅಂಟಿಕೊಂಡೇ ಒರೋದನ್ನು ನೋಡಿ ಅಲ್ಲಾ ಕಮಿಟ್ ಆದೆವು ಎಂಬ ಕಾರಣಕ್ಕೆ ಸದಾ ಅಂಟಿಕೊಂಡೇ ಇರಬೇಕು ಅನ್ನೋ ನಿಯಮ ಏನಾದ್ರು ಇದೆಯಾ ಎಂದು ಟ್ರೋಲ್ ಆದರೆ.. ಅತ್ತ ಅರವಿಂದ್ ದಿವ್ಯಾ ಅಭಿಮಾನಿಗಳಿಗೆ ಮಾತ್ರ ಫುಲ್ ಮೀಲ್ಸ್ ಆದಂತೆ ಕಾಣುತ್ತಿದೆ.. ಒಟ್ಟಿನಲ್ಲಿ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಅರವಿಂದ್ ದಿವ್ಯಾ ಮದುವೆಯಾಗೋದು ಖಚಿತವಾಗಿದ್ದು ಮತ್ತೊಂದು ಬಿಗ್ ಬಾಸ್ ಜೋಡಿ ಎನಿಸಿಕೊಳ್ಳೋದು ಕನ್ಫರ್ಮ್ ಎನ್ನಬಹುದು‌‌..