ಆರ್ಯ ಅನುವಿನ ಪ್ರಣಯದ ಸಂಚಿಕೆ ಶುರುವಾದ ಎರಡೇ ದಿನಕ್ಕೆ ಏನಾಗಿ ಹೋಯ್ತು ನೋಡಿ..

0 views

ಜೊತೆಜೊತೆಯಲಿ ಬಹುಶಃ ಕನ್ನಡ ಕಿರುತೆರೆಯಲ್ಲಿ ಶುರುವಾದ ಮೊದಲ ವಾರವೇ ಅತಿ ದೊಡ್ಡ ಮಟ್ಟದ ಯಶಸ್ಸು ಕೊಟ್ಟು ಅಷ್ಟೇ ನಿರೀಕ್ಷೆಯನ್ನು ಹಾಗೂ ಕ್ರೇಜ್ ಅನ್ನು ಹುಟ್ಟು ಹಾಕಿದ ಧಾರಾವಾಹಿ ಎಂದರೆ ಅದು ಜೊತೆಜೊತೆಯಲಿ ಎಂದರೆ ತಪ್ಪಾಗಲಾರದು.. ಶುರುವಾದ ಸಾಕಷ್ಟು ತಿಂಗಳುಗಳ ಕಾಲ ಅದೇ ರೀತಿ ಕಿರುತೆರೆಯಲ್ಲಿ ಸೆನ್ಸೇಷನ್ ಆಗಿ ಗುರುತಿಸಿಕೊಂಡಿದ್ದ ಧಾರಾವಾಹಿ ಕ್ರಮೇಣ ಹೊಸ ಧಾರಾವಾಹಿಗಳ ಬಂದ ನಂತರ ಕೊಂಚ ತೆರೆ ಮರೆಗೆ ಸರಿದರೂ ಸಹ ಟಾಪ್ ಮೂರು ಧಾರಾವಾಹಿಗಳಲ್ಲಿ ಒಂದಾಗಿ ಕಳೆದ ಎರಡು ವರ್ಷಗಳಿಂದಲೂ ಒಳ್ಳೆಯ ರೇಟಿಂಗ್ ಪಡೆದುಕೊಳ್ಳುತ್ತಿದೆ.. ಇನ್ನು ಈ ಧಾರಾವಾಹಿಯ ಮೂಲಕ ಅನಿರುದ್ಧ್ ಅವರ ಹೊಸ ಕಲಾ ಜರ್ನಿ ಶುರುವಾಯಿತೆನ್ನಬಹುದು.. ಸಿನಿಮಾ ರಂಗದಲ್ಲಿ ನಿರೀಕ್ಷೆ ಮಾಡಿದಷ್ಟು ಯಶಸ್ಸು ಕಾಣದಾಗ ಕಿರುತೆರೆಗೆ ಕಾಲಿಟ್ಟು ಅತೊ ದೊಡ್ಡ ಯಶಸ್ಸು ಪಡೆದು ಕಿರುತೆರೆಯ ಸೆನ್ಸೇಷನಲ್ ಸ್ಟಾರ್ ಎನಿಸಿಕೊಂಡರು.. ಇತ್ತ ಹೊಸ ಪರಿಚಯ ಅನು ಪಾತ್ರಧಾರಿ ಮೇಘಾ ಶೆಟ್ಟಿ ಅವರನ್ನೂ ಸಹ ಜನ ಒಪ್ಪಿಕೊಂಡು ಮನೆಮಾತಾಗಿಸಿದರು‌.

ಇನ್ನು ಸಧ್ಯ ಆರ್ಯವರ್ಧನ್ ಧಾರಾವಾಹಿಯಲ್ಲಿ ಬ್ಯುಸಿ ಆದರೆ.. ಅತ್ತ ಅನು ಧಾರಾವಾಹಿಗಳ ಜೊತೆಗೆ ಸಾಕಷ್ಟು ಜಾಹೀರಾತುಗಳು ಮತ್ತು ಸಿನಿಮಾಗಳಲ್ಲಿಯೂ ಬ್ಯುಸಿ ಆಗಿದ್ದಾರೆ.. ಒಟ್ಟಿನಲ್ಲಿ ಧಾರಾವಾಹಿಗಳು ಕಲಾವಿದರ ಬದುಕು ಕಟ್ಟಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ಸತ್ಯ.. ಇನ್ನು ಇತ್ತ ಧಾರಾವಾಹಿಯ ವಿಚಾರಕ್ಕೆ ಬಂದರೆ ಧಾರಾವಾಹಿ ಶುರುವಾದ ಎರಡು ವರ್ಷಕ್ಕೆ ಆರ್ಯವರ್ಧನ್ ಅನುವಿನ ಮದುವೆಯೇನೋ ಆಯಿತು.. ಪ್ರೇಕ್ಷಕರು ಬಹಳ ದಿನಗಳಿಂದ ಕಾಯುತ್ತಿದ್ದ ಆರ್ಯವರ್ಧನ್ ಅನು ಮದುವೆ ಭರ್ಜರಿಯಾಗಿಯೇ ಚಿತ್ರೀಕರಣ ಮಾಡಿ ಪ್ರಸಾರ ಮಾಡಿದರು.. ಮದುವೆಯ ನಂತರ ಧಾರಾವಾಹಿಯ ಕತೆಯಲ್ಲಿ ಸಾಕಷ್ಟು ತಿರುವುಗಳನ್ನು ನೀಡಿರುವ ನಿರ್ದೇಶಕರು ಕಥಾನಾಯಕ ಆರ್ಯವರ್ಧನ್ ನ ಮೇಲೆಯೇ ಅನುಮಾನಗಳು ಮೂಡುವಂತೆಯೂ ಸಂದರ್ಭಗಳನ್ನು ಸೃಷ್ಟಿ ಮಾಡಿದ್ದು ಉಂಟು..

ಇದೆಲ್ಲಾ ಅನುಮಾನಗಳನ್ನು ಅನು ಮುಂದಿನ ದಿನಗಳಲ್ಲಿ ಬಗೆಹರಿಸಬಹಿದಾಗಿದ್ದು ಸತ್ಯಾಂಶಗಳು ಅನು ಮೂಲಕ ತಿಳಿಯಬಹುದೇನೋ.. ಆದರೆ ಸಧ್ಯ ಇದೀಗ ಮೂರ್ನಾಲ್ಕು ದಿನಗಳಿಂದ ಆರ್ಯ ಹಾಗೂ ಅನುವಿನ ಪ್ರಣಯದ ಸಂಚಿಕೆಗಳು ಪ್ರಸಾರವಾಗುತ್ತಿದೆ.. ಆದರೆ ಪ್ರಸಾರವಾದ ಕೆಲ ದಿನಗಳಲ್ಲಿ ಬಂದ ಪ್ರತಿಕ್ರಿಯೆಯೇ ಬೇರೆಯಾಗಿದೆ.. ಹೌದು ಧಾರಾವಾಹಿ ಶುರುವಾದಾಗಿನಿಂದಲೂ ಈ ಜೋಡಿಯನ್ನು ಬಹಳಷ್ಟು ಜನರು ಮೆಚ್ಚಿಕೊಂಡಿದ್ದರೂ ಸಹ ಅನು ಆರ್ಯ ನಡುವಿನ ವಯಸ್ಸಿನ ಅಂತರ ಧಾರಾವಾಹಿ ನೋಡುವ ಜನರನ್ನು ದಾರಿ ತಪ್ಪಿಸಬಹುದೇನೋ ಎನ್ನುವ ಮಾತುಗಳು ಸಹ ಕೇಳಿ ಬಂದಿದ್ದವು‌‌. ಆದರೆ ಅದಾಗಲೇ ಬಹುಪಾಲು ಜನರು ಧಾರಾವಾಹಿಯನ್ನು ಒಪ್ಪಿಯಾಗಿತ್ತು.. ಇನ್ನು ಕತೆಯೂ ಸಿನಿಮಾ ಶೈಲಿಯಲ್ಲಿ ಮುಂದುವರೆದಿತ್ತು..

ಇನ್ನು ಇದೀಗ ಆರ್ಯವರ್ಧನ್ ಹಾಗೂ ಅನುವಿನ ಮದುವೆಯಾದ ಬಳಿಕ ಎಂದಿನಂತೆ ಎಲ್ಲಾ ಧಾರಾವಾಹಿಗಳಂತೆ ಒಂದಷ್ಟು ಪ್ರಣಯದ ಸಂದರ್ಭಗಳು ಸೃಷ್ಟಿಯಾಗಿ ಆ ದೃಶ್ಯಗಳು ಪ್ರಸಾರವಾಗಬಹುದೆಂದುಕೊಳ್ಳಲಾಗಿತ್ತು..ಆದರೆ ಬಹುಶಃ ಧಾರಾವಾಹಿ ತಂಡದವರಿಗೂ ಇದು ಸ್ವಲ್ಪ ಹಿಂಜರಿಕೆ ತಂದಿರಬಹುದು ಅಥವಾ ಇಲ್ಲದಿರಬಹುದು‌. ಆದರೆ ಮದುವೆಯ ನಂತರ ಯಾವುದೇ ಅಂತಹ ದೃಶ್ಯ ತೋರಲಿಲ್ಲ.. ಆದರೀಗ ಧಾರಾವಾಹಿಯಲ್ಲಿ ಯಾಣ ಜಾಗಕ್ಕೆ ಪ್ರವಾಸ ಹೋಗಿರುವ ಆರ್ಯ ಅನುವಿನ ನಡುವಿನ ಅಂತಹ ಕೆಲ ದೃಶ್ಯಗಳನ್ನು ತೋರಲಾಗುತ್ತಿದೆ.. ಆದರೆ ಈ ದೃಶ್ಯಗಳನ್ನು ಅದ್ಯಾಕೋ ಜೊತೆಜೊತೆಯಲಿ ಧಾರಾವಾಹಿಯನ್ನು ಸಂಪೂರ್ಣವಾಗಿ ಎಲ್ಲಾ ಪ್ರೇಕ್ಷಕರು ಒಪ್ಪಿಕೊಳ್ಳಲಾಗಲಿಲ್ಲ ಎನ್ನುವಂತೆ ಕಾಣುತ್ತಿದೆ..

ಹೌದು ಇಂತಹ ದೃಶ್ಯಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದೆ.. ಒಂದಷ್ಟು ಜನರು ಆರ್ಯ ಅನುವಿನ ನಡುವಿನ ಇಂತಹ ದೃಶ್ಯಗಳನ್ನು ಇಷ್ಟ ಪಟ್ಟು ಸಂತೋಷಪಟ್ಟರೆ.. ಮತ್ತೆ ಕೆಲವರು ಇಂತಹ ದೃಶ್ಯಗಳು ಮುಜುಗರ ತರುತ್ತಿವೆ ಎಂದೂ ಸಹ ಹೇಳಿದ್ದಾರೆ.. ಇನ್ನೂ ಕೆಲವರು ಅಪ್ಪ ಮಗಳ ವಯಸ್ಸಿನವರನ್ನು ನೋಡಿದಂತಾಗುತ್ತಿದೆ ಎಂದು ಕಮೆಂಟ್ ಮಾಡಿದ್ದೂ ಉಂಟು.. ಮತ್ತಷ್ಟು ಮಂದಿ ಅನುನೇ ರಾಜ ನಂದಿನಿ ಎಂದು ತಿಳಿದ ಬಳಿಕ ಇಂತಹ ದೃಶ್ಯಗಳು ಇದ್ದರೆ ಒಳ್ಳೆಯದು ಎಂದು ಸಲಹೆ ನೀಡಿದ್ದೂ ಇದೆ.. ಒಟ್ಟಿನಲ್ಲಿ ಧಾರಾವಾಹಿಯಲ್ಲಿ ಯಾವುದೇ ರೀತಿಯ ಕತೆ ಎಣೆದರೂ ಸಹ ಜನರಿಗೆ ಒಮ್ಮೆ ಆ ಧಾರಾವಾಹಿ ಇಷ್ಟವಾದರೆ ಅದು ನಮ್ಮ ಸುತ್ತಮುತ್ತಲೇ ನಡೆಯುತ್ತಿದೆ ಎನಿಸಿ ಬಿಡುತ್ತದೆ..

ಜೊತೆಗೆ ಆ ಧಾರಾವಾಹಿಯನ್ನಿ ಸಮಾಜ ನೋಡುವ ದೃಷ್ಟಿಯಿಂದಲೇ ಜನರು ನೋಡುವುದು ಬಹುಶಃ ಧಾರಾವಾಹಿಯ ಸಕ್ಸಸ್ ಎಂದರೂ ತಪ್ಪಾಗಲಾರದು.. ಇನ್ನು ಮೊದಲಿನಿಂದಲೂ ಜನರ ಅಭಿಪ್ರಾಯಗಳಿಗೆ ಸಾಕಷ್ಟು ಬೆಲೆ ಕೊಟ್ಟು ಕತೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದು ಪರಿಕಲ್ಪನೆ ಮಾಡಿ ನಿರ್ದೇಶನ ಮಾಡುತ್ತಿರುವ ಆರೂರು ಜಗದೀಶ್ ಅವರು ಜನರ ಕಮೆಂಟ್ ಗಳನ್ನು ಗಮನಿಸಿ ಧಾರಾವಾಹಿಯಲ್ಲಿ ಬದಲಾವಣೆ ತಂದರೂ ಆಶ್ವರ್ಯ ಪಡಬೇಕಿಲ್ಲ.. ಒಟ್ಟಿನಲ್ಲಿ ಶುರುವಿನಿಂದಲೂ ಕುತೂಹಲದ ಜೊತೆಗೆ ಸಾಗುತ್ತಾ ಬರುತ್ತಿರುವ ಜೊತೆಜೊತೆಯಲಿ ಧಾರಾವಾಹಿ ಎರಡು ವರ್ಷ ಪೂರ್ಣಗೊಳಿಸಿದರೂ ಸಹ ಜನರ ಮನಸ್ಸಿನಲ್ಲಿ ನಿರೀಕ್ಷೆ ಹುಟ್ಟುಹಾಕುವುದನ್ನು ಕಡಿಮೆ ಮಾಡಿಲ್ಲವೆಂಬುತಂತೂ ಸತ್ಯ..