ರಾಮಾಚಾರಿ ಧಾರಾವಾಹಿಯ ಚಾರು ತಮ್ಮಚಿಂಟು ನಿಜಕ್ಕೂ ಯಾರು ಗೊತ್ತಾ..

0 views

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ ರಾಮಾಚಾರಿ ಧಾರಾವಾಹಿ ಸಾಕಷ್ಟು ವಿಚಾರಗಳಿಂದ ಗಮನ ಸೆಳೆಯುತ್ತಿದೆ.. ಧಾರಾವಾಹಿಯಲ್ಲಿನ ಬಹಳಷ್ಟು ಪಾತ್ರಗಳು ಜನರ ಮನಸ್ಸಿಗೆ ಬಹಳ ಹತ್ತಿರವಾಗಿದೆ.‌. ಸದಾ ಎಲ್ಲರಿಗೂ ಒಳಿತನ್ನೇ ಬಯಸುವ ರಾಮಾಚಾರಿ ಪಾತ್ರದ ಜೊತೆಗೆ ಸ್ವಲ್ಪ ಖಾರವಾದರೂ ಸಹ ರಾಮಾಚಾರಿ ಒಬ್ಬನ ವಿಚಾರ ಬಿಟ್ಟು ಮಿಕ್ಕೆಲ್ಲಾ ವಿಚಾರಗಳಲ್ಲಿಯೂ ಮಾನವೀಯತೆ ಯಿಂದ ನಡೆದುಕೊಳ್ಳುವ ಚಾರು ಕೂಡ ಜನರಿಗೆ ಬಹಳ ಇಷ್ಟವೆನ್ನಬಹುದು..

ಇನ್ನು ಇವರಿಬ್ಬರ ಪಾತ್ರದ ಜೊತೆಗೆ ಇನ್ನೂ ಕೆಲ ಪಾತ್ರಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದು ಚಾರು ತಂದೆ ಗುರುದತ್ ಅವರು ತಾಯಿ ಭಾವನಾ ಇತ್ತ ರಾಮಾಚಾರಿ ತಂದೆ ಶಂಕರ್ ಅಶ್ವತ್ಥ್ ಅವರು ರಾಮಾಚಾರಿ ತಂಗಿ ಪಾತ್ರಧಾರಿ, ಚಾರುವಿನ ಸಹಾಯಕ ಸರ್ವೇಶ್ ಹೀಗೆ ಸಾಕಷ್ಟು ಪಾತ್ರಗಳು ಜನರಿಗೆ ಇಷ್ಟವಾಗಿದೆ.. ಇದರ ಜೊತೆಗೆ ಬಹುಮುಖ್ಯವಾಗಿ ಇಷ್ಟವಾಗಿರೋದು ಚಾರು ತಮ್ಮ ಚಿಂಟು ಪಾತ್ರ.. ಹೌದು ಜೊತೆಯಲ್ಲಿ ಹುಟ್ಟದ ಹುಡುಗ.. ಎಲ್ಲೋ ದೇವಸ್ಥಾನದ ಬೀದಿಯಲ್ಲಿ ಸಿಕ್ಕ ಮಗುವನ್ನು ತಂದು ಆಶ್ರಯ ಕೊಟ್ಟು ಸ್ವಂತ ತಮ್ಮನಂತೆ ನೋಡಿಕೊಳ್ಳುತ್ತಿರುವ ಚಾರು ನಿಜಕ್ಕೂ ಗ್ರೇಟ್ ಎನ್ನಬಹುದು..

ಇನ್ನು ಈ ಚಿಂಟು‌ ಪಾತ್ರ ಮಾಡಿದ ಹುಡುಗ ತನ್ನ ಮನೋಜ್ಞ ಅಭಿನಯದ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾನೆ.. ಅಷ್ಟಕ್ಕೂ ಈ ಪುಟ್ಟ ಹುಡುಗ ಯಾರು ಎಂದು ತಿಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ..ಹೌದು ಹತ್ತಿಪ್ಪತ್ತು ವರ್ಷಗಳ ಹಿಂದೆ ಬಾಲ ಕಲಾವಿದರಾಗಿ ಬಂದ ಸಾಕಷ್ಟು ಕಲಾವಿದರು ಬೇಗ ಗುರುತಿಸಿಕೊಂಡು ಬಹಳ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದ್ದರು.. ನಮ್ಮ ಮಾಸ್ಟರ್ ಆನಂದ್ ಅವರು.. ಮಾಸ್ಟರ್ ಮಂಜುನಾಥ್ ಅವರು ಮಾಸ್ಟರ್ ಕಿಶನ್ ಅವರು ಹೀಗೆ ಸಾಕಷ್ಟು ಬಾಲ ಕಲಾವಿದರು ನಮ್ಮ ಬಾಲ್ಯದ ದಿನಗಳನ್ನು ಬಹಳ ಚೆಂದವಾಗಿಸಿದ್ದರು..

ಆದರೆ ಇತ್ತೀಚಿನ ದಿನಗಳಲ್ಲಿ ಬಾಲ ಕಲಾವಿದರುಗಳು ಒಂದೆರೆಡು ಸಿನಿಮಾಗಳಿಗೆ ಮಾತ್ರ ಸೀಮಿತವಾಗಿಬಿಡೋದು ಬೇಸರದ ಸಂಗತಿಯೂ ಹೌದು.. ಅಷ್ಟೇ ಅಲ್ಲದೇ ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರು ಧಾರಾವಾಹಿಗೆ ಬರುವುದು ಹೊಸ ವಿಚಾರವೇನೂ ಅಲ್ಲ.. ಆದರೆ ಇದೀಗ ಬಾಲ ಕಲಾವಿದನಾಗಿ ಸಿನಿಮಾಗಳಲ್ಲಿ‌ ಗುರುತಿಸಿಕೊಂಡವರೂಸಹ ಧಾರಾವಾಹಿಗಳಿಗೆ ಕಿರುತೆರೆ ಶೋಗಳಿಗೆ ಕಾಲಿಡುತ್ತಿದ್ದಾರೆ.. ಕೆಲ ತಿಂಗಳ ಹಿಂದಷ್ಟೇ ಕೆಜಿಎಫ್ ಸಿನಿಮಾದಲ್ಲಿಯಶ್ ಅವರ ಬಾಲ್ಯದಲ್ಲಿ ಜೂನಿಯರ್ ಯಶ್ ಆಗಿ ಅಭಿನಯಿಸಿ ಸ್ಯಾಂಡಲ್ವುಡ್ ನಲ್ಲಿ ಗುರುತಿಸಿಕೊಂಡಿದ್ದ ಬಾಲ ನಟ ಕೂಡ ಕಿರುತೆರೆಗೆ ಕಾಲಿಟ್ಟಿದ್ದು ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿ ಮೋಡಿ ಮಾಡುತ್ತಿದ್ದಾನೆನ್ನಬಹುದು..

ಅದೇ ರೀತಿ ರಾಮಾಚಾರಿ ಧಾರಾವಾಹಿಯ ಈ ಚಿಂಟು ಕೂಡ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸಿದ ಪುಟ್ಟ ಪ್ರತಿಭೆ.. ಹೌದು ಚಿಂಟುವಿನ ನಿಜವಾದ ಹೆಸರು ಆರ್ಯ ವಿನೋದ್.. ಈಗಾಗಲೇ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಆರ್ಯ ವಿನೋದ್ ಕೆಲ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾನೆ.. ಹೊಂದಿಸಿ ಬರೆಯಿರಿ.. ಐವಾನ್.. ಜೀವ್ನಾನೆ ನಾಟಕ ಸ್ವಾಮಿ.. ಕಾಣೆಯಾದವರ ಬಗ್ಗೆ ಪ್ರಕಟಣೆ.. ಮುಖವಾಡ.. ರಫ್.. ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು.. ತಮಿಳಿನ ಬಿಗಿಲ್.. ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಹಾಗೂ ಕಿರಿತೆರೆಯ ಖ್ಯಾತ ಧಾರಾವಾಹಿ ಸತ್ಯ ಧಾರಾವಾಹಿಯಲ್ಲಿಯೂ ಆರ್ಯ ಅಭಿನಯಿಸಿದ್ದು ಬಹಳಷ್ಟು ಕಿರುಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾನೆ..

ಇಇನ್ನು ಇವನ ಪ್ರತಿಭೆ ಕಂಡು ಇದೀಗ ಪ್ರಶಾಂತ್ ನೀಲ್ ಅವರು ಕೆಜಿಎಫ್ 2 ಸಿನಿಮಾದಲ್ಲಿಯೂ ಆರ್ಯನಿಗೆ ಅವಕಾಶ ನೀಡಿದ್ದು ಕೆಜಿಎಫ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ.. ಇನ್ನೂ ಸಧ್ಯ ಸಿನಿಮಾಗಳ ಜೊತೆಗೆ ಕಿರುತೆರೆಗೆ ಕಾಲಿಟ್ಟಿದ್ದು ರಾಮಾಚಾರಿ ಧಾರಾವಾಹಿಯಲ್ಲಿ ಚಿಂಟು ಪಾತ್ರದ ಮೂಲಕ ದೊಡ್ಡ ಮಟ್ಟದ ಯಶಸ್ಸು ಹಾಗೂ ಖ್ಯಾತಿಯನ್ನು ಗಳಿಸಿದ್ದು ಪ್ರೇಕ್ಷಕರ ಮನಸ್ಸಿಗೆ ಬಹಳ ಹತ್ತಿರವಾಗಿದ್ದಾನೆನ್ನಬಹುದು.. ಇನ್ನು ಸಧ್ಯ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಒಳ್ಳೆಯ ಅಭಿನಯದ ಮೂಲಕ ಜನರ ಮನಗೆದ್ದ ಆರ್ಯನ ಮುಂದಿನ ಭವಿಷ್ಯ ಚೆನ್ನಾಗಿರಲಿ.. ಸಿನಿಮಾರಂಗದಲ್ಲಿ ಮತ್ತಷ್ಟು ದೊಡ್ಡ ಹೆಸರು ಮಾಡುವಂತಾಗಲಿ..