ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ತ್ರಿನಯನಿ ಧಾರಾವಾಹಿಯ ನಟಿ ಆಶಿಕಾ ಪಡುಕೋಣೆ.. ಹುಡುಗ ಯಾರು ಗೊತ್ತಾ..

0 views

ಕಳೆದ ವರ್ಷದಿಂದ ಸಾಕಷ್ಟು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಾಲು ಸಾಲಿ ಸಂಭ್ರಮದ ಸುದ್ದಿ ಗಳನ್ನು ನೀಡುತ್ತಿದ್ದು ಇದೀಗ ತ್ರಿನಯನಿ ಧಾರಾವಾಹಿಯ ನಟಿ ಆಶಿಕಾ ಪಡುಕೋಣೆ ಸಹ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಉಡುಪಿಯಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನೆರವೇರಲಿದೆ..ಹೌದು ಕನ್ನಡದ ಅನೇಕ ಕಲಾವಿದರು ಬೇರೆ ಬೇರೆ ಭಾಷೆಗಳಲ್ಲೊ ಅದರಲ್ಲೂ ಕಿರುತೆರೆಯ ಸಾಕಷ್ಟು ಧಾರಾವಾಹಿಗಳಲ್ಲಿ ಅವಕಾಶ ಪಡೆದು ಸಿಕ್ಕಾಪಟ್ಟೆ ಫೇಮಸ್ ಆಗುತ್ತಿರುವುದು ಒಳ್ಳೆಯ ವಿಚಾರ.. ಅದೇ ರೀತಿ ಕನ್ನಡದವರೇ ತುಂಬಿರುವ ತ್ರಿನಯನಿ ಧಾರಾವಾಹಿ ತೆಲುಗಿನ ನಂಬರ್ ಒನ್ ಧಾರಾವಾಹಿಯಾಗಿದ್ದು ವಿಶಾಲ್ ಪಾತ್ರಧಾರಿ ಕನ್ನಡದ ನಟ ಚಂದು ಗೌಡ ಹಾಗೂ ನಯನಿ ಪಾತ್ರಧಾರಿ ನಟಿ ಆಶಿಕಾ ಪಡುಕೋಣೆ ಇದೀಗ ತೆಲುಗು ಮಾತ್ರವಲ್ಲ ಕನ್ನಡದ ಕಿರುತೆರೆಯಲ್ಲಿಯೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.. ಹೌದು ಕಳೆದ ವರ್ಷ ಕೊರೊನ ಬಂದಾಗ ಕಿರುತೆರೆಯ ಧಾರಾವಾಹಿಗಳು ಚಿತ್ರೀಕರಣ ನಿಲ್ಲಿಸಬೇಕಾದ ಸಂದರ್ಭ ಬಂತು..

ಆ ಸಮಯದಲ್ಲಿ ಕನ್ನಡಕ್ಕೆ ಡಬ್ಬಿಂಗ್ ಧಾರಾವಾಹಿಗಳು ಕಾಲಿಟ್ಟಿದ್ದು ಅನೇಕ ಒಳ್ಳೆಯ ಕತೆ ಇರುವ ಧಾರಾವಾಹಿಗಳು ಜನರ ಮನಗೆಲ್ಲುವಲ್ಲಿ ಯಶಸ್ವಿಯೂ ಆದವು.. ಅದರಲ್ಲೂ ಮಹಾಭಾರತ, ರಾಧಾ ಕೃಷ್ಣ.. ಮಹಾನಾಯಕ ಹೀಗೆ ಸಾಕಷ್ಟು ಧಾರಾವಾಹಿಗಳು ಡಬ್ಬಿಂಗ್ ಧಾರಾವಾಹಿಯಾದರೂ ಅತಿ ಹೆಚ್ಚು ರೇಟಿಂಗ್ ಪಡೆದು ದಾಖಲೆ ಬರೆದವು.. ಮಧ್ಯ ಸ್ವಲ್ಪ ದಿನ ಡಬ್ಬಿಂಗ್ ಧಾರಾವಾಹಿಗಳು ಪ್ರಸಾರ ನಿಲ್ಲಿಸಿದ್ದರೂ ಇದೀಗ ಮತ್ತೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ತೆಲುಗಿನ ಡಬ್ಬಿಂಗ್ ಧಾರಾವಾಹಿಗಳು ರೇಟಿಂಗ್ ವಿಚಾರದಲ್ಲಿ ದೊಡ್ಡ ಯಶಸ್ಸನ್ನೇ ಪಡೆದಿದ್ದು ಕನ್ನಡದ ಟಾಪ್ ಹದಿನೈದು ಧಾರಾವಾಹಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.. ಅಂತಹ ಧಾರಾವಾಹಿಗಳಲ್ಲಿ ಒಂದು ತ್ರಿನಯನಿ..

ಹೌದು ಮುಖ್ಯ ಪಾತ್ರಗಳಲ್ಲಿ ಕನ್ನಡದ ಕಲಾವಿದರೇ ಇರುವ ತ್ರಿನಯನಿ ಧಾರಾವಾಹಿ ತೆಲುಗಿನಂತೆ ಕನ್ನಡದಲ್ಲಿಯೂ ಯಶಸ್ಸು ಪಡೆಯಿತು.. ಇನ್ನು ತ್ರಿನಯನಿ ಧಾರಾವಾಹಿಯ ಮೂಲಕ ಚಂದು ಗೌಡ ಹಾಗೂ ಆಶಿಕಾ ಕನ್ನಡ ಕಿರುತೆರೆಯಲ್ಲಿಯೂ ಗುರುತಿಸಿಕೊಂಡರು.. ಈ ಹಿಂದೆ ಗೃಹ ಲಕ್ಷ್ಮೀ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಚಂದು ಗೌಡ ಇದೀಗ ತ್ರಿನಯನಿ ಧಾರಾವಾಹಿ ಮೂಲಕ ಮತ್ತಷ್ಟು ಯಶಸ್ಸು ಪಡೆಯುವಂತಾಯಿತು.. ಇನ್ನು ಇತ್ತ ನಟಿ ಆಶಿಕಾ ಪಡುಕೋಣೆ ಅವರೂ ಸಹ ಕನ್ನಡದವರೇ ಆಗಿದ್ದು ಇದೀಗ ಕನ್ನಡದ ಹುಡುಗನ ಜೊತೆಯೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಆಶಿಕಾ ಪಡುಕೋಣೆ ಮದುವೆಯಾಗುತ್ತಿರುವ ಹುಡುಗನ ಹೆಸರು ಚೇತನ್ ಶೆಟ್ಟಿ.. ಆಶಿಕಾ ಹಾಗೂ ಚೇತನ್ ಶೆಟ್ಟಿ ಅವರ ಮದುವೆ ಸಮಾರಂಭ ಇದೇ ಅಕ್ಟೋಬರ್ ಹದಿನೆಂಟರಂದು ಉಡುಪಿಯಲ್ಲಿ ನಡೆಯಲಿದೆ.. ಕೊರೊನಾ ಕಾರಣದಿಂದಾಗಿ ಆಪ್ತರು ಹಾಗೂ ಸ್ನೇಹಿತರು ಮತ್ತು ಸಂಬಂಧಿಕರ ನಡುವೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲುಡಲಿದ್ದಾರೆ.. ಇನ್ನು ಈ ಚೇತನ್ ಶೆಟ್ಟಿ ಅವರ ವಿಚಾರಕ್ಕೆ ಬಂದರೆ ಚೇತನ್ ಶೆಟ್ಟಿ ಬೆಂಗಳೂರಿನವರೇ ಆಗಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.. ಇದು ಕುಟುಂಬದವರೇ ನೋಡಿ ನಿಶ್ಚಯ ಮಾಡಿದ ಮದುವೆಯಾಗಿದೆ.. ಮದುವೆ ಬಗ್ಗೆ ಆಸಕ್ತಿ ಇರದ ಆಶಿಕಾಗೆ ಅವರ ತಾಯಿಯೇ ಹುಡುಗನನ್ನು ನೋಡಿ ಚೇತನ್ ಶೆಟ್ಟಿ ಅವರ ಫೋನ್ ನಂಬರ್ ಅನ್ನು ಆಶಿಕಾಗೆ ನೀಡಿದರಂತೆ.. ನಂತರ ಇಬ್ಬರು ಮಾತನಾಡುತ್ತಾ ಆತ್ಮೀಯತೆ ಹೆಚ್ಚಾಗಿದ್ದು ಕಳೆದ ನವೆಂಬರ್ ತಿಂಗಳಿನಲ್ಲಿಯೇ ನಿಶ್ಚಿತಾರ್ಥ ನೆರವೇರಿದೆ.. ಸಧ್ಯ ಆಶಿಕಾ ಅಕ್ಕ ಅಮೇರಿಕಾದಲ್ಲಿದ್ದು ಮುಂದಿನ ತಿಂಗಳು ಭಾರತಕ್ಕೆ ಬರುತ್ತಿದ್ದಂತೆ ಈ ಇಬ್ಬರ ಕಲ್ಯಾಣ ನೆರವೇರಲಿದೆ..

ಇನ್ನು ತಾವು ಮದುವೆಯಾಗುವ ಹುಡುಗನ ಬಗ್ಗೆ ಮನಬಿಚ್ಚಿ ಮಾತನಾಡಿರುವ ಆಶಿಕಾ “ಚೇತನ್ ಬಹಳ ಮೃದು ಸ್ವಭಾವದ ವ್ಯಕ್ತಿ.. ನನ್ನ ರೀತಿ ಇರುವ ಹುಡುಗಿಯನ್ನೇ ಮದುವೆಯಾಗಬೇಕು ಅಂತ ಚೇತನ್ ಇಷ್ಟ ಪಟ್ಟಿದ್ದರಂತೆ… ಅವರಿಗೆ ಬಹಳ ತಾಳ್ಮೆ ಇದೆ.ಮ್ ಆ ಎಲ್ಲಾ ಗುಣಗಳು ನನಗೆ ಇಷ್ಟವಾದವು.. ಮದುವೆಯ ನಂತರವೂ ನಾನು ಅಭಿನಯಿಸಬೇಕು ಎನ್ನುವ ಆಸೆ ಇದೆ.. ಇದಕ್ಕೆಲ್ಲಾ ಚೇತನ್ ಬಹಳ ಪ್ರೋತ್ಸಾಹ ನೀಡುತ್ತಿದ್ದಾರೆ.. ಅವರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಮದುವೆಯಾಗುವ ಹುಡುಗನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.. ಇನ್ನೂ ಸಧ್ಯ ತಮಿಳು ಹಾಗೂ ತೆಲುಗಿನ ಐದು ಧಾರಾವಾಹಿಗಳಲ್ಲಿ ಅಭಿನಯಿಸಿ ಹೆಸರು ಮಾಡಿರುವ ಆಶಿಕಾ ಪಡುಕೋಣೆ ಸಧ್ಯ ಚೇತನ್ ಶೆಟ್ಟಿ ಜೊತೆಗೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದು ಸ್ನೇಹಿತರು ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ..