ಮದುವೆಯಾದ ಎಂಟೇ ದಿನಕ್ಕೆ ಅಣ್ಣನ ಜೊತೆ ತವರು ಮನೆಗೆಂದು ಹೋದವಳು ಮಾಡಿದ ಕೆಲಸವೇ ಬೇರೆ.. ಸತ್ಯ ತಿಳಿದು ಬೆಚ್ಚಿಬಿದ್ದ ಗಂಡ..

0 views

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗಬೇಕು ಅನ್ನೋ ಮಾತಿತ್ತು.. ಆದರೆ ಈ ಕಾಲದಲ್ಲಿ ಕೆಲ ದಳ್ಳಾಳಿಗಳು ನಿಜಕ್ಕೂ ಹಣಕ್ಕಾಗಿ ಹಸುವಿನ ವ್ಯಾಪಾರ ಮಾಡಿದಂತೆ ಪೂರ್ವಾಪರ ಏನೇ ಇದ್ದರೂ ಯಾವುದೋ ಒಂದು ಗಂಡಿಗೆ ಹೆಣ್ಣನ್ನು.. ಯಾವುದೋ ಒಂದು ಹೆಣ್ಣಿಗೆ ಗಂಡೊಂದನ್ನು ಗಂಟು ಹಾಕಿಸಿ ತನ್ನ ಕಮಿಷನ್ ಪಡೆದು ಮರಳಿ ಬಿಡುತ್ತಾನೆ.. ಆದರೆ ಮದುವೆಯಾದ ನಂತರವಷ್ಟೇ ಅವರುಗಳ ನಿಜ ಬಣ್ಣ ಬಯಲಾಗಿ ಚೆನ್ನಾಗಿರಬೇಕಾದ ಜೀವನ ಹಾಳಾಗುವುದು.. ಹೌದು ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು ಮದುವೆಯಾಗಿ ಗಂಡನ ಮನೆಗೆ ಹೋದವಳು ಎಂಟೇ ದಿನಕ್ಕೆ ಅಣ್ಣನ ಜೊತೆ ತವರು ಮನೆಗೆ ಬಂದಳು.. ಆದರೆ ಬಂದ ನಂತರ ಆಕೆ ಮಾಡಿದ ಕೆಲಸ ಮಾತ್ರ ಗಂಡನನ್ನು ಬೆಚ್ಚಿ ಬೀಳಿಸಿದೆ.. ಸಧ್ಯ ಇದೀಗ ಹೆಂಡತಿಯನ್ನು ಸಾಕ್ಷಿ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ.. ಹೌದು ಅಷ್ಟಕ್ಕೂ ಈ ಹೊಸ ಜೋಡಿ ಬಾಳಲ್ಲಿ ನಡೆದದ್ದದ್ದೇನು ನೋಡಿ..

ಆತನ ಹೆಸರು ಅಶೋಕ್.. ವೈಜಾಪುರದ ಬಿಲೋನಿ ಗ್ರಾಮದ ನಿವಾಸಿ.. ಆತ ಮದುವೆಯಾಗಬೇಕೆಂದು ಹಲವು ತಿಂಗಳುಗಳಿಂದ ಹುಡುಗಿಯನ್ನು ಹುಡುಕುತಿದ್ದ.. ಇಂತಹ ಸಮಯದಲ್ಲಿ ಸತೀಶ್ ಬಾಬಾಸಾಹೇಬ್ ಶಿಂಧೆ ಎಂಬ ವ್ಯಕ್ತಿಯನ್ನು ಭೇಟಿ ಮಾಡಿದ ಅಶೋಕ್.. ಸತೀಶ್ ಮದುವೆ ಮಾಡಿಸುವ ದಳ್ಳಾಳಿಯಾಗಿದ್ದು ಅಶೋಕ್ ಗಾಗಿ ಔರಂಗಬಾದ್ ನಲ್ಲಿ ದೀಪಾಲಿ ಎಂಬ ಹುಡುಗಿಯನ್ನು ತೋರಿಸಿದ್ದರು.. ಇತ್ತ ಅಶೋಕ್ ಗೂ ಹುಡುಗಿ ಒಪ್ಪಿಗೆಯಾಗಿತ್ತು.. ಅತ್ತ ದೀಪಾಲಿ ಮನೆಯವ್ರಿಗೂ ಅಶೋಕ್ ಒಪ್ಪಿಗೆಯಾಗಿದ್ದ.. ಇನ್ನು ಕೊರೊನಾ ಇರುವ ಕಾರಣದಿಂದ ಇವರಿಬ್ಬರ ಮದುವೆ ಮೇ ಐದನೇ ತಾರೀಕಿನಂದು ವೈಜಾಪುರದ ಅಶೋಕ್ ನ ಮನೆಯಲ್ಲಿಯೇ ನೆರವೇರಿತ್ತು..

ಗಂಡ ಹೆಂಡತಿ ಇಬ್ಬರೂ ಅನ್ಯೂನ್ಯವಾಗಿಯೇ ಸಂಸಾರ ನಡೆಸುತ್ತಿದ್ದರು.. ಎಂಟು ದಿನಗಳ ಕಾಲ ಚೆನ್ನಾಗಿದ್ದ ಸಂಸಾರ ನಂತರ ಅಶೋಕ್ ಊಹಿಸಿರದ ತಿರುವೊಂದನ್ನು ಪಡೆದುಕೊಂಡಿತ್ತು.. ಹೌದು ದೀಪಾಲಿಯನ್ನು ಆತನ ಅಣ್ಣ ಬಂದು ಸಂಪ್ರದಾಯದಂತೆ ಎಂಟು ದಿನವಾದ ಬಳಿಕ ನಮ್ಮ ಮನೆಗೆ ಕರೆದುಕೊಂಡು ಹೋಗಬೇಕು ಎಣ್ದು ಬಂದನು.. ಸರಿ ಎಂದು ದೀಪಾಲಿಯನ್ನು ಸಂತೋಷದಿಂದಲೇ ಅಶೋಕ್ ತವರುಮನೆಗೆ ಕಳುಹಿಸಿಕೊಟ್ಟನು.. ನಾಲ್ಕೇ ದಿನಕ್ಕೆ ವಾಪಸ್ ಕಳುಹಿಸುವುದಾಗಿ ದೀಪಾಲಿಯ ಸಹೋದರ ಹೇಳಿ ಕರೆದುಕೊಂಡು ಹೋದನು.. ಇತ್ತ ಹೊಸ ಮದುವೆ ಗಂಡು ಅಶೋಕ್ ಹೆಂಡತಿ ಇಲ್ಲದೆ ನಾಲ್ಕು ದಿನ ಕಳೆದ ಬಳಿಕ ಹೆಂಡತಿಗೆ ಫೋನ್ ಮಾಡಿದನು.. ಆದರೆ ಹೆಂಡತಿ ಬರಲೇ ಇಲ್ಲ.. ಹತ್ತು ದಿನವಾಯಿತು.. ಬರಲೇ ಇಲ್ಲ..

ಹದಿನೈದು ದಿನವಾಯಿತು ಬರಲೇ ಇಲ್ಲ.. ದಿನಕ್ಕೊಂದು ನೆಪ ಹೇಳುತ್ತಾ ದೀಪಾಲಿ ತವರು ಮನೆಯಲ್ಲಿಯೇ ಉಳಿದಿದ್ದಳು.. ಆದರೆ ಅದಾಗಲೇ ಅಶೋಕ್ ಗೆ ಹೆಂಡತಿಯ ಮೇಲೆ ಅನುಮಾನ ಬಂದಾಗಿತ್ತು.. ಆದ ಕಾರಣ ತನಗೆ ಮದುವೆ ಮಾಡಿಸಿದ ಸತೀಶ್ ಶಿಂಧೆಯ ಸಹಾಯ ಪಡೆದು ದೀಪಾಲಿ ಮನೆಯಲ್ಲಿ ಏನು ನಡೆಯುತ್ತಿದೆ ಎಂಬ ವಿಚಾರವನ್ನು‌ ಕಲೆ ಹಾಕಿದ್ದನು.. ಆಗಲೇ ಅಶೋಕ್ ಗೆ ತಿಳಿದಿದ್ದು.. ದುಡ್ಡಿಗಾಗಿ ದೀಪಾಲಿ ಕುಟುಂಬದ ಜೊತೆ ಸೇರಿಕೊಂಡು ಮತ್ತೊಂದು ಮದುವೆಗೆ ತಯಾರಾಗಿದ್ದಾಳೆಂದು.. ತಾಳ್ಮೆ ಕಳೆದುಕೊಳ್ಲಾದ ಅಶೋಕ್ ತಕ್ಷಣ ತನ್ನ ಸಂಬಂಧಿಕರೊಂದಿಗೆ ದೀಪಾಲಿಯ ಮತ್ತೊಂದು ಮದುವೆ ನಡೆಯಬೇಕಿದ್ದ ಜಾಗಕ್ಕೆ ತೆರಳಿ ಅಲ್ಲಿಯೇ ದೀಪಾಲಿ‌ ಕಡೆಯವರು ಹಣ ಪಡೆಯುತ್ತಿರುವ ಸಮಯದಲ್ಲಿ ಫೋಟೋ ಹಾಗೂ ವೀಡಿಯೋ ಮಾಡಿಕೊಂಡು ಸಾಕ್ಷಿ ಸಮೇತ ದೀಪಾಲಿ ಮನೆಯವರನ್ನು ಹಿಡಿದಿದ್ದಾನೆ..

ಅಷ್ಟೇ ಅಲ್ಲದೇ ತನ್ನ ಜೊತೆ ಎಂಟು ದಿನ ಸಂಸಾರ ಮಾಡಿ ಇದೀಗ ಮತ್ತೊಬ್ಬನ ಜೊತೆ ಸಂಸಾರ ಮಾಡಲು ತಯಾರಾಗಿದ್ದ ಮದುವೆ ಹೆಣ್ಣು ದೀಪಾಲಿಯನ್ನು ಸಹ ಅದೇ ಜಾಗದಲ್ಲಿ ಹಿಡಿದು ಹಾಕಿದ್ದು ಎಲ್ಲರನ್ನೂ ಪೊಲೀಸರಿಗೆ ಒಪ್ಪಿಸಿದ್ದಾನೆ.. ಹಣದ ಆಸೆ ಇದ್ದರೆ ಭಿಕ್ಷೆ ಎತ್ತಿ ಬದುಕಬೇಕು.. ಅದನ್ನು ಬಿಟ್ಟು ಈ ರೀತಿ ಹೆಣ್ಣನ್ನು ಮುಂದಿಟ್ಟುಕೊಂಡು ಸಾಲು ಸಾಲಾಗಿ ಮದುವೆ ಮಾಡಿಸಿ ಹಣ ಸಂಪಾದನೆ ಮಾಡುವ ದರ್ದು ಏನಿದೆಯೋ ತಿಳಿಯದು.. ಮನೆಯವರ ಮಾತಿಗೆ ಸಮ್ಮತಿಸಿ ಕಂಡ ಕಂಡವರನ್ನೆಲ್ಲಾ ಕಟ್ಟಿಕೊಳ್ಳಲು ಮುಂದಾದ ದೀಪಾಲಿಗೆ ಇದೀಗ ಗಂಡನಿಂದ ಸರಿಯಾಗಿ ಛೀಮಾರಿಯಾಯಿತೆನ್ನಬಹುದು‌‌. ಸುಂದರವಾಗಿರಬೇಕಾದ ಜೀವನ ಕೊಚ್ಚೆ ಮೇಲೆ ಕಲ್ಲಾಕುವಂತೆ ಇದೀಗ ಪೊಲೀಸ್ ಠಾಣೆಯಲ್ಲಿ ಕಂಬಿಗಳನ್ನು ಲೆಕ್ಕ ಹಾಕುವಂತಾಗಿದೆ..