ನಿನ್ನ ಆ ಭಾಗ ಸೂಪರ್ ಎಂದವನಿಗೆ ಈ ಹುಡುಗಿ ಕೊಟ್ಟ ದಿಟ್ಟ ಉತ್ತರ ನೋಡಿ‌.. ನಿಜಕ್ಕೂ ಹ್ಯಾಟ್ಸ್ ಆಫ್ ಈಕೆಗೆ..

0 views

ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳು ಫೋಟೋ ಗಳನ್ನು ಹಾಕಿಕೊಂಡರೆ ಅದನ್ನು ಕೆಲ ಕ್ರಿಮಿಗಳು ದುರುಪಯೋಗ ಪಡಿಸಿಕೊಳ್ಳುವುದು ಹೊಸದೇನಲ್ಲ.. ಅದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಹೆಣ್ಣು ಮಕ್ಕಳು ಪೋಟೋ ಹಾಕಲು ಹಿಂಜರಿಯುವುದೂ ಉಂಟು.. ಇನ್ನೂ ಸಿನಿಮಾ ನಟಿಯರು ಇನ್ನಿತರ ಸೆಲಿಬ್ರೆಟಿಗಳು ಫೋಟೋಗಳನ್ನು ಅಪ್ಲೋಡ್ ಮಾಡಿದರೆ ಮುಗೀತು.. ಬಹಳಷ್ಟು ಮಂದಿ ಮೆಚ್ಚುಗೆಯ ಮಾತುಗಳನ್ನಾಡಿದರೆ ಮತ್ತೆ ಕೆಲ ಸಣ್ಣ ಮನಸ್ಸಿನವರು ಅದಕ್ಕೆ ಚಿತ್ರವಿಚಿತ್ರವಾದ ಕಮೆಂಟ್ ಗಳನ್ನು ಹಾಕಿ ಅದರಲ್ಲೇನೋ ಸಂತೋಷ ಪಡುವ ಕೆಟ್ಟ ಮನಸ್ಸುಗಳು ಸಹ ಇವೆ..

ಇನ್ನು ಅಂತಹ ಕಮೆಂಟ್ ಗಳನ್ನು ಕೆಲವರು ಡಿಲಿಟ್ ಮಾಡಿದರೆ.. ಮತ್ತೆ ಕೆಲವರು ಅಂತವರಿಗೆ ಬೈದು ಸುಮ್ಮನಾಗ್ತಾರೆ.‌ ಅಥವಾ ಮತ್ತೆ ಕೆಲವರು ಅಂತಹ ಕಮೆಂಟ್ ಗಳಿಂದ ನೊಂದುಕೊಳ್ತಾರೆ.. ಅಥವಾ ಮತ್ತೊಂದಷ್ಟು ಮಂದಿ ಅಂತವರನ್ನು ಬ್ಲಾಕ್‌ ಮಾಡಿ ಮುಂದೆ ಸಾಗ್ತಾರೆ.. ಸಿನಿಮಾ ನಟಿಯರಿಗೆ ಇದಂದು ರೀತಿ ಕಾಮನ್‌ ಆಗ ಬಿಟ್ಟಿದೆ. ಮೊನ್ನೆ ಮೊನ್ನೆ ಯಷ್ಟೆ ನಟಿಯೊಬ್ಬರ ಖಾಸಗಿ ವೀಡಿಯೋವನ್ನು ಸಾಮಜಿಕ ಜಾಲತಾಣದಲ್ಲಿ ಯಾರೋ ಅಪ್ಲೋಡ ಆಡಿದ್ದು ಅದರಿಂದ ಮನನೊಂದ ನಟಿ ಮೂರು ದಿನಗಳ ಕಾಲ ಮನೆಯಿಂದ ಹೊರ ಬರಲುಸಾಧ್ಯವೇ ಆಗಿಲ್ಲ ಎಂದು ನೊಂದು ಕೊಂಡಿದ್ದರು.. ಇನ್ನು ಕೆಲ ಹೆಣ್ಣು ಮಕ್ಕಳು ತಮ್ಮ ಫೋಟೋಗಳಿಗೆ ಯಾರಾದರೂ ಕೆಟ್ಟದಾಗಿ ಕಮೆಂಟ್‌ ಮಾಡಿದರೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಸರಿಯಾಗಿ ಜಾಡಿಸುತ್ತಾರೆ..

ಅದೇ ರೀತಿ ಇಲ್ಲೊಬ್ಬ ಯುವತಿ ತನ್ನ ಫೋಟೋಗೆ ಕೆಟ್ಟದಾಗಿ ಕಮೆಂಟ್ ಮಾಡಿದಾತನಿಗೆ ಸರಿಯಾಗಿಯೇ ಉತ್ತರ ನೀಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.. ಹೌದು ಆಕೆಯ ದಿಟ್ಟತನ ನಿಜಕ್ಕೂ ಮೆಚ್ಚುವಂತದ್ದು.. ಹೌದು ಸಿನಿಮಾ ಹಾಗೂ ಮಾಡೆಲಿಂಗ್ ನಲ್ಲಿ ಗುರುತಿಸಿಕೊಂಡಿರುವ ಯುವತಿಯೊಬ್ಬಳು ತನ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುತ್ತಾಳೆ.. ಆಕೆಯ ಫೋಟೋಗೆ ಕೀಳು ಮನಸ್ಸಿನ ಹುಡುಗನೊಬ್ಬ ಆಕೆಯಸ್ತ ನಗಳಬಗ್ಗೆ ಮಾತನಾಡಿ ಇದೀಗ ಸಿಕ್ಕಾಪಟ್ಟೆ ಖ್ಯಾತಿಗಳಿಸಿ ಸಾಮಾಜಿಕ ಜಾಲತಾಣದಲಿ ಎಲ್ಲರ ಕೈಯಲ್ಲಿ ಸರಿಯಾಗಿ ಮಂಗಳಾರತಿ ಮಾಡಿಸಿಕೊಳ್ಳುತ್ತಿದ್ದಾನೆ.. ಹೌದು ಆಕೆಯ ಹೆಸರು ಅಶ್ವಥಿ ಶ್ರೀಕಾಂತ್.. ಟಿವಿ ಸಿನಿಮಾ ಹಾಗೂ ಮಾಡೆಲಿಂಗ್ ನಲ್ಲಿ ಗುರುತಿಸಿಕೊಂಡು ಕಲಾ ಜಗತ್ತಿನಲ್ಲಿ ಬೆಳೆಯುತ್ತಿರುವ ಹುಡುಗಿ.. ಆಕೆ ತನ್ನದೊಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಳು..

ಆ ಫೋಟೋಗೆ ಕೀಳು ಮನಸ್ಸಿನ ಯುವಕನೊಬ್ಬ ಸೂಪರ್ ಸ್ತ ನವೆಂದುಕಮೆಂಟ್ ಮಾಡಿದ್ದನು.‌ ಆ ಯುವಕನ ಕಮೆಂಟ್ ಗೆ ದಿಟ್ಟವಾಗಿಯೇ ಅಶ್ವಥಿ ಉತ್ತರ ನೀಡಿದ್ದಾಳೆ.. ಹೌದು “ಸೂಪರ್ ಆಗಿರಲೇ ಬೇಕು ಅಲ್ವಾ.. ಒಂದು ಮಗುವಿಗೆ ಎರಡು ವರ್ಷ ಹಾಲು ಕೊಡುವುದಕ್ಕೆ ಇರಬೇಕಿರುವುದು.. ಜೀವವನ್ನೇ ಹಿಂಡಿ ನಿಮಗೆ ಹಾಲುಣಿಸುವುದರಿಂದಲೇ ನಿಮ್ಮ ಅಮ್ಮನನ್ನು ಸೇರಿಸಿ ಎಲ್ಲಾ ಹೆಣ್ಣು ಮಕ್ಕಳಸ್ತ ನಸೂಪರ್ ಆಗಿಯೇ ಇರುವುದು” ಎಂದು ಪ್ರತಿಕ್ರಿಯೆ ನೀಡಿದ್ದು.. ಅಶ್ವಥಿ ಅವರ ಈ ದಿಟ್ಟವಾದ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು ಆ ಯುವಕನನ್ನು ಮತ್ತಷ್ಟು ಜನ ಜಾಡಿಸಿದ್ದಾರೆ..

ಮನುಷ್ಯ ಬದಲಾಗಬೇಕಿಲ್ಲ.. ಆತನ ಮನಸ್ಥಿತಿಗಳು ಬದಲಾಗಬೇಕು.. ಎಲ್ಲರೂ ಪರ್ಫೆಕ್ಟ್ ಅಲ್ಲದಿರಬಹುದು.. ಆದರೆ ಈ ರೀತಿ ಗೊತ್ತಿದ್ದೂ ಗೊತ್ತಿದ್ದೂ ಹೆಣ್ಣಿನ ಬಗ್ಗೆ ನಾಲಿಗೆ ಹರಿಬಿಟ್ಟಾಗ ಆತ ಬಹುಶಃ ತನ್ನ ತಾಯಿಯೂ ಹೆಣ್ಣು.. ಆಕೆಗೂ ಆ ಮಾತುಗಳು ಅನ್ವಯಿಸುತ್ತವೆ ಎಂಬುದನ್ನು ಮರೆತುಬಿಡುತ್ತಾನೆ.. ಸಂಗಾತಿಯನ್ನು ಹೊರತುಪಡಿಸಿ ಮಿಕ್ಕೆಲ್ಲಾ ಸ್ತ್ರೀಯರನ್ನು ಸೋದರಿ ಸಮಾನರಂತೆ ಕಂಡಾಗ ಮಾತ್ರವೇ ಮನಸ್ಸು ಸ್ವಚ್ಛವಾಗೋದು.. ಇನ್ನಾದರೂ ಅಂತಹ ಗಂಡ್ ಹೈಕಳ ಮನಸ್ಸು ಬದಲಾಗಲಿ..