ದಾಂಪತ್ಯವೆಂಬುದು ಎರಡು ಮನಸ್ಸುಗಳ ನಡುವಿನ ಬಣ್ಣಿಸಲಾಗದ ಬಾಂಧವ್ಯ.. ಗಂಡನಾಗಲಿ.. ಹೆಂಡತಿಯಾಗಲಿ.. ಪರಸ್ಪರ ಪ್ರೀತಿ.. ಹೊಂದಾಣಿಕೆ.. ಕಾಳಜಿ ಇದ್ದರೆ ಮಾತ್ರವೇ ಆ ಬಾಂಧವ್ಯ ಗಟ್ಟಿಯಾಗಿ ಉಳಿಯುವುದು.. ಆದರೆ ಕೆಲವೊಮ್ಮೆ ಮೂರನೆಯವರ ಮಾತಿಗೆ ಮಣೆ ಹಾಕಿದಾಗ ಸಂಸಾರ ಹಾಳಾಗುವುದಂತೂ ಖಚಿತ.. ಬಹುತೇಕ ಶೇಕಡ ತೊಂಬತ್ತರಷ್ಟು ಕೇಸ್ ಗಳು ಮೂರನೆಯವರು ಮೂಗು ತೂರಿಸಿದ ವಿಚಾರಕ್ಕೆ ದಾಂಪತ್ಯದಲ್ಲಿ ವಿರಸ ಮೂಡಿರುತ್ತದೆ..
ಅದೇ ರೀತಿ ಕಳೆದ ವಾರವಷ್ಟೇ ಸ್ಯಾಂಡಲ್ವುಡ್ ನ ಖ್ಯಾತ ಕವಿ ಕೆ.ಕಲ್ಯಾಣ್ ಅವರ ದಾಂಪತ್ಯದಲ್ಲಿ ವಿರಸ ಮೂಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.. ಹೌದು ಕೆ.ಕಲ್ಯಾಣ್ ಅವರ ಪತ್ನಿ ಕಲ್ಯಾಣ್ ಅವರ ವಿರುದ್ಧ ದೂರು ಸಲ್ಲಿಸಿದ್ದರು.. ಅದಕ್ಕಿಂತ ಮುನ್ನವೇ ಪತ್ನಿ ಹಾಗೂ ಅತ್ತೆ ಮಾವನನ್ನು ಶಿವಾನಂದ ವಾಲಿ ಎಂಬಾತ ಕರೆದುಕೊಂಡು ಹೋಗಿದ್ದಾನೆ ಎಂದು ಕಲ್ಯಾಣ್ ಅವರು ಸಹ ಬೆಳಗಾವಿಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು..
ಕಲ್ಯಾಣ್ ಅವರ ಪತ್ನಿ ಕೊಟ್ಟ ದೂರು ಸುದ್ದಿಯಾಗುತ್ತಿದ್ದಂತೆ ಖುದ್ದು ಕಲ್ಯಾಣ್ ಅವರು ಪತ್ರಿಕಾಗೋಷ್ಠಿ ಕರೆದು ನಾನು ನನ್ನ ಪತ್ನಿ ಮಾತನಾಡಿದರೆ ಎಲ್ಲವೂ ಸರಿ ಹೋಗುತ್ತದೆ.. ಅವಳು ಕೆಲವರ ಪ್ರಚೋದನೆಯಿಂದ ಈ ಕೆಲಸ ಮಾಡಿದ್ದಾಳೆ.. ಇಲ್ಲವಾದರೆ ಅವಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿರಲಿಲ್ಲ. ನಾನು ಅವಳು ಮಾತನಾಡಿದರೆ ಸಾಕು ಸರಿ ಹೋಗುತ್ತೇವೆ ಎಂದಿದ್ದರು..
ಅಷ್ಟಕ್ಕೂ ನಡೆದ ವಿಚಾರವೇನೆಂದರೆ.. ಕಲ್ಯಾಣ್ ಅವರ ಪೋಷಕರು ತೀರಿಕೊಂಡ ಬಳಿಕ ಪತ್ನಿಯ ಅಪ್ಪ ಅಮ್ಮನನ್ನು ಕಲ್ಯಾಣ್ ಅವರ ಮನೆಗೆ ತಂದು ಇರಿಸಿಕೊಳ್ಳಲಾಗಿತ್ತು.. ಆನಂತರ ಗಂಗಾ ಕುಲಕರ್ಣಿ ಎಂಬುವವಳು ಮನೆಕೆಲಸಕ್ಕೆ ಸೇರಿಕೊಳ್ಳುತ್ತಾಳೆ.. ಆಕೆ ಅಶ್ವಿನಿ ಅವರ ಅಪ್ಪ ಅಮ್ಮನಿಗೆ ಶಿವಾನಂದ ವಾಲಿ ಎಂಬಾತನನ್ನು ಪರಿಚಯ ಮಾಡುತ್ತಾಳೆ.. ಆತ ಅಶ್ವಿನಿ ಅವರ ತಂದೆ ತಾಯಿಯ ಮನವೊಲಿಸಿ ನಲವತ್ತು ಲಕ್ಷ ಹಣ ಹಾಗೂ ಒಂದು ಪ್ರಾಪರ್ಟಿಯನ್ನೂ ಸಹ ತನ್ನ ಹೆಸರಿಗೆ ಬರೆಸಿಕೊಂಡಿರುತ್ತಾನೆ..
ಈ ವಿಚಾರ ತಿಳಿದು ಕಲ್ಯಾಣ್ ಬೆಳಗಾವಿ ಪೊಲೀಸರಲ್ಲಿ ದೂರು ಸಲ್ಲಿಸಿದ್ದರು.. ಅತ್ತ ದಾಂಪತ್ಯದಲ್ಲಿ ಮಾತುಕತೆ ನಡೆದು ಅಶ್ವಿನಿ ಅವರು ಪ್ರಚೋದನೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ..
ಇದೀಗ ಇಬ್ಬರನ್ನು ಸಮಾಲೋಚನೆಗೆ ವ್ಯವಸ್ಥೆ ಮಾಡಲಾಗಿತ್ತು. ಕಲ್ಯಾಣ್ ಹಾಗೂ ಪತ್ನಿ ಅಶ್ವಿನಿ ಇಬ್ಬರೂ ಸಹ ಕೂತು ಮಾತನಾಡಿದ್ದು ಪ್ರಕರಣ ಸುಖಾಂತ್ಯ ಕಂಡಿದೆ.. ಹೌದು ಕಲ್ಯಾಣ್ ಅವರ ಬಾಳಿನಲ್ಲಿ ಇದೀಗ ವಿರಸ ದೂರವಾಗಿ ಮತ್ತೊಮ್ಮೆ ಪ್ರೇಮದ ಅನುರಾಗ ಮೂಡಿದೆ.. ಅಶ್ವಿನಿ ಅವರು ವಿಚ್ಛೇದನದ ಅರ್ಜಿಯನ್ನು ವಾಪಸ್ ಪಡೆಯುತ್ತಿದ್ದಾರೆ ಎನ್ನಲಾಗಿದೆ..
ಸಂಬಂಧವಲ್ಲದ ಜನರಿಂದ ಈ ಮಟ್ಟಕ್ಕೆ ಸಂಸಾರ ಹಾಳಾಗುತ್ತದೆ ಎಂಬುದು ಇದು ಹೊಸದೇನಲ್ಲ.. ಈ ರೀತಿ ಬಹಳಷ್ಟು ಪ್ರಕರಣಗಳು ನಡೆದಿವೆ.. ಎಲ್ಲರೂ ಎಚ್ಚರಿಕೆಯಿಂದ ಇರಬೇಕಷ್ಟೇ.. ಮನೆ ಹಾಳು ಮಾಡುವವರ ಮೂರನೆಯವರ ಮಾತನ್ನು ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಡಬೇಕಷ್ಟೇ.. ಇನ್ನು ಅತ್ತ ಪೊಲೀಸರು ಶಿವಾನಂದ ವಾಲಿಯನ್ನು ಬಂಧಿಸಿದ್ದು ಆತ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ..