ಹುಟ್ಟುಹಬ್ಬದ ದಿನ ಅಶ್ವಿನಿ ಅವರಿಗೆ ರಾಘಣ್ಣ ಭಾವನಾತ್ಮಕವಾಗಿ ಹಾರೈಸಿ ಹೇಳಿದ ಮಾತು ನೋಡಿ.. ಇದು ದೊಡ್ಡತನ ಅಂದರೆ..

0 views

ಪುನೀತ್ ರಾಜ್ ಕುಮಾರ್.. ಬಹುಶಃ ನಮ್ಮ ಕುಟುಂಬದಲ್ಲದವರ.. ನಾವು ಒಮ್ಮೆಯೂ ಮಾತೇ ಆಡಿಸದವರ.. ನಮ್ಮ ತಂದೆಯಲ್ಲದ ತಾಯಿಯಲ್ಲದ ಬಂಧು ಬಳಗವಲ್ಲದ ಸಹೋದರನಲ್ಲದ ಒಂದು ಜೀವದ ಅಗಲಿಕೆಗೆ ಕೋಟ್ಯಾಂತರ ಮಂದಿ ಇಷ್ಟೆಲ್ಲಾ ಸಂಕಟ ಪಟ್ಟಿದ್ದೇವೆ ಎಂದರೆ ಅದು ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಗೆ ಮಾತ್ರವೇ ಅನಿಸುತ್ತದೆ.. ಹೌದು ಇದ್ದಾಗ ಏನನ್ನೂ ತೋರದೇ ಹೋದ ನಂತರ ನಾಡೇ ಹೊತ್ತು ಮೆರೆಸೋ ಅಷ್ಟು ದಾನ ಧರ್ಮಗಳು ಮತ್ತೊಬ್ಬರಿಗೆ ನೆರವಾಗಿರುವುದು ಅದೆಷ್ಟೋ ಜನರ ಜೀವ ಉಳಿಸಿರುವುದು ನಿಜಕ್ಕೂ ಮೈ ರೋಮಾಂಚನವಾಗುತ್ತದೆ.. ಹಾಗೆಯೇ ಮನಸ್ಸಿನಲ್ಲಿ ಹೇಳಿಕೊಳ್ಳಲಾಗದ ಸಂಕಟ ತರುತ್ತದೆ.. ಇನ್ನು ಪುನೀತ್ ಅವರ ಮಡದಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಈಗಿನ ಸಂದರ್ಭ ನಿಜಕ್ಕೂ ಯಾವ ಶತ್ರುವಿಗೂ ಬೇಡವೆನ್ನುವಂತಾಗಿದೆ..

ಸಮಾಜವನ್ನೇ ಅಷ್ಟು ಪ್ರೀತಿಸಿದ ಅಪ್ಪು ತಮ್ಮ ಮಡದಿ ಮಕ್ಕಳು ಕುಟುಂಬವನ್ನು ಎಷ್ಟು ಪ್ರೀತಿಸುತ್ತಿದ್ದರು ಎಷ್ಟು ಗೌರವಿಸುತ್ತಿದ್ದರು ಎಂಬುದು ಅಶ್ವಿನಿ ಅವರಿಗೇ ಗೊತ್ತು.. ಸಾಕಷ್ಟು ಕಾರ್ಯಕ್ರಮಗಳಲ್ಲಿ ಅಶ್ವಿನಿ ಅವರ ಬಗ್ಗೆ ಹೆಮ್ಮೆಯಿಂದ ಗೌರವದಿಂದ ಪ್ರೀತಿಯಿಂದ ಅಪ್ಪು ಮಾತನಾಡಿದ್ದುಂಟು.. ಏನೇ ಆದರೂ‌ ಕುಟುಂಬಕ್ಕೆ ಮೊದಲು ಪ್ರಾಮುಖ್ಯತೆ ಕೊಡಿ ಎನ್ನುತ್ತಿದ್ದ ವ್ಯಕ್ತಿ ಅಪ್ಪು.. ಆದರೆ ಅಂತಹ ವ್ಯಕ್ತಿಯ ಅಗಲಿಕೆ ನಿಜಕ್ಕೂ ಆ ಕುಟುಂಬಕ್ಕೆ ಎಷ್ಟು ಕಾಡುವುದೆಂದು ಭಗವಂತನೇ ಬಲ್ಲ..

ಇನ್ನು ಇದ್ದಾಗ ಮಡದಿಯನ್ನು ತೋರಿಕೆಗಾಗಿ ಮಾತ್ರವಲ್ಲ ಮನಸಾರೆ ರಾಣಿಯಂತೆಯೇ ನೋಡಿಕೊಂಡಿದ್ದವರು ಪುನೀತ್.. ಅಶ್ವಿನಿ ಅವರ ಹುಟ್ಟುಹಬ್ಬ ಅಥವಾ ಮದುವೆ ದಿನ ಯಾವುದೇ ಆಗಲಿ ವಿಶೇಷವಾಗಿ ಮಡದಿಯ ಜೊತೆಯೇ ಇದ್ದು ಆಚರಣೆ ಮಾಡುತ್ತಿದ್ದರು.. ಅಶ್ವಿನಿ ಅವರು ಹಾಗೂ ಪುನೀತ್ ಅವರ ಫೋಟೋಗಳಲ್ಲಿ ಬಹುತೇಕ ಫೋಟೋಗಳು ಅಶ್ವಿನಿ ಅವರ ಹುಟ್ಟುಹಬ್ಬದ ಆಚರಣೆಯ ಫೋಟೋಗಳೇ ಸಿಗುತ್ತದೆ..

ಅದೇ ರೀತಿ ನಿನ್ನೆ ಮಾರ್ಚ್ ಹದಿನಾಲ್ಕರಂದು ಅಶ್ವಿನಿ ಅವರ ಹುಟ್ಟುಹಬ್ಬ.. ಆದರೆ ಆಚರಿಸಲು ಅಪ್ಪುವಿಲ್ಲ.. ನೆನಪಿಸಿಕೊಂಡರೆ ಒಂದು ರೀತಿ ಸಂಕಟ ಎನಿಸುತ್ತದೆ.. ಇನ್ನು ಮೊನ್ನೆ ಭಾನುವಾರ ನಡೆದ ಜೇಮ್ಸ್ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಅಶ್ವಿನಿ ಅವರು ಅಪ್ಪುವನ್ನು ತೆರೆ ಮೇಲೆ ನೋಡುತ್ತಿದ್ದಂತೆ ಕಣ್ಣೀರು ಹಾಗೆಯೇ ಸುರಿಯ ತೊಡಗಿದವು.. ಕ್ಯಾಮರಾ ಕಣ್ಣುಗಳಿಗೆ ತಮ್ಮ ದುಃಖವನ್ನು ತೋರಿಕೊಳ್ಳಲು ಇಷ್ಟ ಪಡದ ಅಶ್ವಿನಿ ಅವರು ಹಾಗೆಯೇ ತಲೆ ಬಗ್ಗಿಸಿ ಕಣ್ಣೀರ ಸುರಿಸಿ‌ ದುಃಖ ತಡೆದುಕೊಳ್ಳಲು ಪ್ರಯತ್ನ ಪಡುತ್ತಿದ್ದದ್ದು ನಿಜಕ್ಕೂ ಮನಕಲಕುವಂತಿತ್ತು.. ಅದೇ ವೇದಿಕೆಯಲ್ಲಿ ರಾಘಣ್ಣ ಶಿವಣ್ಣ ಕೂಡ ಭಾವುಕರಾಗಿ ಕಣ್ಣೀರಿಟ್ಟಿದ್ದರು.. ಅದಕ್ಕೂ ಮೀರಿ ರಾಘಣ್ಣ ತಾನೂ ಕೂಡ ಪುನೀತ್ ಬಳಿಯೇ ಹೋಗಿ ಬಿಡುವ ಮಾತುಗಳನ್ನು ಆಡಿದ್ದು ನೆರೆದಿದ್ದವರನ್ನು ಗದ್ಗದಿತರನ್ನಾಗಿಸಿತು..

ಇನ್ನು ನಿನ್ನೆ ಅಶ್ವಿನಿ ಅವರ ಹುಟ್ಟುಹಬ್ಬ.. ಪುನೀತ್ ಹಾಗೂ ಅಶ್ವಿನಿ ಅವರ ಹುಟ್ಟುಹಬ್ಬಕ್ಕೆ ಕೇವಲ ಮೂರು ದಿನಗಳ ಅಂತರವಷ್ಟೇ.. ಪ್ರತಿ ವರ್ಷವೂ ಅದ್ಧೂರಿಯಾಗಿ ಆಚರಣೆ ನಡೆದು ಸಂಭ್ರಮ ಮನೆ ಮಾಡಿದ್ದರೆ ಈ ವರ್ಷ ನೋವಷ್ಟೇ ಎನ್ನುವಂತಾಗಿತ್ತು.. ಆದರೆ ಇತ್ತ ರಾಘಣ್ಣ ಮಾತ್ರ ಅಸ್ವಿನಿ ಅವರಿಗೆ ಬಹಳ ಭಾವುಕರಾಗಿ ಹಾರೈಸಿದ್ದಾರೆ.. ಹೌದು ಎಲ್ಲರಿಗೂ ತಿಳಿದಂತೆ ರಾಘಣ್ಣ ಬಹಳ ಭಾವುಕ ಜೀವಿ.. ಅಪ್ಪು ಅಗಲಿದಾಗ ದುಃಖವನ್ನೆಲ್ಲಾ ತಡೆದುಕೊಂಡು ಅಂತ್ಯ ಸಂಸ್ಕಾರ ಮಾಡಿದ್ದ ರಾಘಣ್ಣ ತಿಂಗಳ ನಂತರ ಕಾರ್ಯಕ್ರಮವೊಂದರಲ್ಲಿ ದುಃಖ ತಡೆಯಲಾಗದೇ ಜೋರಾಗಿಯೇ ಅತ್ತು ಬಿಟ್ಟಿದ್ದರು.. ಸಾಕಷ್ಟು ಬಾರಿ ಅಪ್ಪು ಬಗ್ಗೆ ಮಾತನಾಡಿ ಕಣ್ಣೀರಾಕಿದ್ದರು.. ಇದೀಗ ಅಶ್ವಿನಿ ಪುನೀತ್ ಅವರಿಗೆ ಭಾವನಾತ್ಮಕವಾಗಿ ಹಾರೈಸಿದ್ದಾರೆ..

ಹೌದು ಅಪ್ಪು ಜೊತೆಗೆ ನಿಂತ ಅಶ್ವಿನಿ ಪುನೀತ್ ಅವರ ಫೋಟೋ ಹಂಚಿಕೊಂಡಿರುವ ರಾಘವೇಂದ್ರ ರಾಜ್ ಕುಮಾರ್ ಅವರು “ಹುಟ್ಟುಹಬ್ಬದ ಶುಭಾಶಯಗಳು ಅಶ್ವಿನಿ.. ದೇವರ ಆಶೀರ್ವಾದ ಸದಾ ಅಶ್ವಿನಿ‌ ಮೇಲಿರಲಿ.. ದೇವರು ಅಶ್ವಿನಿಗೆ ಆರೋಗ್ಯ ಹಾಗೂ ದೀರ್ಘಾಯುಷ್ಯ ನೀಡಿ ಆಶೀರ್ವದಿಸುವಂತಾಗಲಿ” ಎಂದು ಹಾರೈಸಿದ್ದಾರೆ.. ಹೌದು ಬದುಕಿ ಬಾಳಬೇಕಾದ ಪುನೀತ್ ರಾಜ್ ಕುಮರ ಅವರು ಕೇವಕ ನಲವತ್ತಾರನೇ ವಯಸ್ಸಿಗೆ ಅಕಾಲಿಕವಾಗಿ ಇಹಲೊಕ ತ್ಯಜಿಸಿದ್ದು ಇತ್ತ ಒಬ್ಬಂಟಿಯಾದ ಅಶ್ವಿನಿ ಅವರಿಗೆ ಇಡೀ ಕುಟುಂಬವೇ ಬೆಂಬಲವಾಗಿ ನಿಂತಿದ್ದು ನಿಜಕ್ಕೂ ಮೆಚ್ಚುವ ವಿಚಾರ.. ಇತ್ತ ಅಶ್ವಿನಿ ಅವರೂ ಸಹ ಪ್ರತಿಯೊಂದು ಮುಖ್ಯವಾದ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಈಗ ಶಿವಣ್ಣನ ಅನುಮತಿ ಪಡೆದು ಮುಂದುವರೆಯುತ್ತಿರುವುದು ಅಶ್ವಿನಿ ಅವರ ಅದರಲ್ಲೂ ದೊಡ್ಮನೆ ಸೊಸೆಯ ದೊಡ್ಡಗುಣವನ್ನು ತೋರುತ್ತದೆ.‌ ಅಶ್ವಿನಿ ಅವರು ಮಕ್ಕಳ ಜೊತೆ ಸದಾ ಕಾಲ ಸಂತೋಷವಾಗಿರುವಂತಾಗಲಿ‌‌..