ಮಧ್ಯ ರಾತ್ರಿಯಲಿ ಅಪ್ಪು ಸಮಾಧಿ ಬಳಿ ಬರುತ್ತಿರುವ ಅಶ್ವಿನಿ ಪುನೀತ್.. ಕಾರಣವೇನು ಗೊತ್ತಾ.. ನಿಜಕ್ಕೂ ಮನಕಲಕುತ್ತದೆ..

0 views

ಕನ್ನಡ ನಾಡಿನ ಮನೆ ಮಗ ಪುನೀತ್ ರಾಜ್ ಕುಮಾರ್ ಅಗಲಿ ನೋಡುನೋಡುತ್ತಿದ್ದಂತೆ ನಾಲ್ಕು ತಿಂಗಳು ಕಳೆದೇ ಹೋಯಿತು.. ಸಮಯ ಯಾರ ಕೈಲೂ ಇಲ್ಲ.. ಸಮಯದ ಮುಂದೆ ನಮ್ಮ ನಿರ್ಧಾರವೇನೂ ನಡೆಯುವುದಿಲ್ಲವೆಂಬುದು ಅಕ್ಷರಶಃ ಸತ್ಯವಾಗಿ ಹೋಯ್ತು.. ಆದರೆ ನಾಲ್ಕು ತಿಂಗಳು ಕಳೆದರೂ ಇನ್ನೂ ಸಹ ಅಪ್ಪು ಇಲ್ಲದ ಸತ್ಯವನ್ನು ಒಪ್ಪಿಕೊಳ್ಳಲಾಗದು.. ಟಿವಿಗಳಲ್ಲಿ ಮೊಬೈಲ್ ಗಳಲ್ಲಿ ಅಪ್ಪುವಿನ ವೀಡಿಯೋಗಳನ್ನು ನೋಡಿದರೆ ಅವರ ಮಾತುಗಳನ್ನು ನೋಡಿದರೆ ನಿಜಕ್ಕೂ ಹೇಳಲಾಗದ ಸಂಕಟ ಬರುತ್ತದೆ.. ಹೌದು ಇನ್ನು ಮುಂದೆ ಅಪ್ಪು ಕಿರುತೆರೆಯ‌ ಯಾವ ಕಾರ್ಯಕ್ರಮದಲ್ಲಿಯೂ ಬರೋದಿಲ್ಲ.. ಯಾವ ಸಿನಿಮಾದಲ್ಲಿಯೂ ಅಭಿನಯಿಸುವುದಿಲ್ಲ ಎನ್ನುವ ಆ ಕಹಿ ಸತ್ಯ ಒಪ್ಪಿಕೊಳ್ಳಲಾಗದು..

ಇನ್ನು ಸಂಬಂಧವೇ ಇಲ್ಲದ ನಮಗೆ ಇಂತಹ ಸಂಕಟವಾಗುತ್ತಿರುವಾಗ ನಲವತ್ತೇಳು ವರ್ಷ ಜೊತೆಯಲ್ಲಿ ಬೆಳೆದ ಅಣ್ಣಂದಿರು ಅಕ್ಕಂದಿರಿಗೆ.. ಇಪ್ಪತ್ತೆರೆಡು ವರ್ಷ ಜೊತೆಯಾಗಿ ಸಂಸಾರ ಮಾಡಿದ ಮಡದಿ ಅಶ್ವಿನಿ ಅವರಿಗೆ.. ಅಷ್ಟೊಂದು ಪ್ರೀತಿ ಮಾಡುತ್ತಿದ್ದ ಅಪ್ಪನನ್ನು ಕಳೆದುಕೊಂಡ ಆ ಮಕ್ಕಳಿಗೆ ಯಾವ ರೀತಿಯ ನೋವಾಗುತ್ತಿರಬಹುದು ನಿಜಕ್ಕೂ ಊಹಿಸಲು ಸಹ ಅಸಾಧ್ಯ.. ಮನುಷ್ಯ ಒಂದಲ್ಲಾ ಒಂದು ದಿನ ಹೋಗಲೇ ಬೇಕು ನಿಜ.. ಆದರೆ ಕರೆದುಕೊಳ್ಳುವುದಕ್ಕೂ ಇಷ್ಟು ಆತುರ ಪಟ್ಟನಾ ಭಗವಂತ ಎನಿಸುತ್ತದೆ.. ಇದ್ದಷ್ಟು ದಿನ ಕೇವಲ ನಟನಾಗಿ ಮಾತ್ರ ಜನರ ಮುಂದೆ ಗುರುತಿಸಿಕೊಂಡಿದ್ದ ಅಪ್ಪು ಇಲ್ಲವಾದ ಬಳಿಕ ತಾವಿದ್ದಾಗ ದೇವರು ಮಾಡುತ್ತಿದ್ದ ಕಾರ್ಯವನ್ನು ಮಾಡುತ್ತಿದ್ದರೆಂಬ ಸತ್ಯ ಅರಿವಾಯಿತು.. ಹೌದು ಅವರು ಮಾಡಿದ ದಾನ ಧರ್ಮಗಳಿಂದ ಅದೆಷ್ಟು ಜೀವ ಉಳಿದವೋ..

ಅದೆಷ್ಟು ಮಕ್ಕಳು ವಿದ್ಯಾಭ್ಯಾಸ ಪಡೆದವೋ.. ಅದೆಷ್ಟು ಜನ ತಮ್ಮ ಕಷ್ಟದಿಂದ ಹೊರ ಬಂದರೋ ಲೆಕ್ಕವಿಲ್ಲ.. ನಿಜಕ್ಕೂ ಆ ಪುಣ್ಯಾತ್ಮನ ಅಷ್ಟು ಒಳ್ಳೆಯತನ ನೋಡಿಯೇ ಭಗವಂತ ಇಷ್ಟು ಬೇಗ ಅವರನ್ನು ಕರೆಸಿಕೊಂಡನೋ ಏನೋ ತಿಳಿಯದು.. ಇನ್ನು ಪುನೀತ್ ಅವರು ಹೋದ ಬಳಿಕ ಒಮ್ಮೆಯೂ ಮಾದ್ಯಮದ ಮುಂದೆ ಮಾತನಾಡದ ಅಶ್ವಿನಿ ಅವರು ನೋವನ್ನೆಲ್ಲಾ ಒಡಲಲ್ಲಿಯೇ ಇಟ್ಟುಕೊಂಡು ಪುನೀತ್ ಅವರ ಕನಸುಗಳನ್ನು ನನಸು ಮಾಡುವತ್ತ ಕೆಲಸ ಆರಂಭಿಸಿದರು.. ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ತಯಾರಾದ ಸಿನಿಮಾಗಳ ಕೆಲಸವನ್ನು ಪೂರ್ತಿ ಮಾಡಿ ಅದಾಗಲೇ ಎರಡು ಸಿನಿಮಾಗಳನ್ನು ಬಿಡುಗಡೆ ಮಾಡಿದರು..

ಇತ್ತ ಅಪ್ಪು ಕನಸಿನ ಗಂಧದಗುಡಿಯ ಟೀಸರ್ ಬಿಡುಗಡೆ ಮಾಡಿ ಈ ವರ್ಷ ಸಿನಿಮಾವನ್ನು ಥಿಯೇಟರ್ ನಲ್ಲಿಯೇ ಬಿಡುಗಡೆ ಮಾಡುವುದಾಗಿ ತಿಳಿಸಿದರು.. ಹೀಗೆ ನೋವಿನ ನಡುವೆಯೇ ಮಕ್ಕಳು ಹಾಗೂ ಇತ್ತ ಪುನೀತ್ ಅವರನ್ನೇ ನಂಬಿಕೊಂಡಿದ್ದ ಸಾಕಷ್ಟು ಜನರ ಜವಾಬ್ದಾರಿಯನ್ನು ನಿಭಾಯಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಇನ್ನು ಇತ್ತ ಕೆಲವೇ ದಿನಗಳಲ್ಲಿ ಪುನೀತ್ ಅವರ ಹುಟ್ಟಿದ ದಿನ ಆಗಮಿಸುತ್ತಿದ್ದು ಸಂಭ್ರಮದಿಂದ ಆಚರಣೆ ಮಾಡಬೇಕಾದ ದಿನ ಸವಿನೆನಪಿನ ದಿನವನ್ನಾಗಿ ನೆನಪಿಸಿಕೊಳ್ಳಬೇಕಿರುವುದು ನಿಜಕ್ಕೂ ಬೇಸರವನ್ನುಂಟು‌ ಮಾಡುತ್ತದೆ.. ಒಂದು ಕಡೆ ಅಪ್ಪುವಿನ ಕೊನೆ ಸಿನಿಮಾ ಜೇಮ್ಸ್ ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಮತ್ತೊಂದು ಕಡೆ ಪುನೀತ್ ಅವರ ಹುಟ್ಟಿದ ದಿನ.. ಆದರೆ ಅಭಿಮಾನಿಗಳು ಮಾತ್ರ ಪುನೀತ್ ಅವರ ಹುಟ್ಟಿದ ದಿನವನ್ನು ಎಂದಿನಂತೆ ಹಬ್ಬದ ದಿನವನ್ನಾಗಿಯೇ ಆಚರಿಸಲು ನಿರ್ಧಾರ ಮಾಡಿದ್ದಾರೆ..

ಹೌದು ಪುನೀತ್ ಇದ್ದಾಗ ರಾಜ ಕುಮಾರನಂತೆ ಬಾಳಿದವರು.. ಅವರು ಇಲ್ಲವಾದ ನಂತರವೂ ಅವರೆಂದೂ ರಾಜ ಕುಮಾರನೇ.. ಅದೇ ಕಾರಣಕ್ಕಾಗಿ ಅವರು ಹುಟ್ಟಿದ ದಿನವನ್ನು ಅದ್ಧೂರಿಯಾಗಿಯೇ ಆಚರಿಸಲು ನಿರ್ಧಾರ ಮಾಡಲಾಗಿದೆ.. ಮಾರ್ಚ್ ಹದಿನಾರರ ಮಧ್ಯ ರಾತ್ರಿ ಹನ್ನೊಂದು ಐವತ್ತೊಂಭತ್ತಕ್ಕೆ ಆಚರಣೆ ಆರಂಭವಾಗಲಿದ್ದು ಅಪಾರ ಅಭಿಮಾನಿಗಳು ಸೇರಲಿದ್ದಾರೆ.. ಆದರೆ ಇಷ್ಟೂ ದಿನ ಅಪ್ಪು ಮನೆಯ ಮುಂದೆ ಆಚರಣೆ ನಡೆಯುತಿತ್ತು.. ಆದರೆ ಈ ವರ್ಷ ಅಪ್ಪುವಿನ ಸಮಾಧಿ ಬಳಿಯಲ್ಲಿ ಅಭಿಮಾನಿಗಳು ಆಚರಣೆ ಮಾಡಲಿದ್ದಾರೆ.. ಹೌದು ಕಂಠೀರವ ಸ್ಟುಡಿಯೀದಲ್ಲಿ ಈ ವರ್ಷದ ಅಪ್ಪುವಿನ ಹುಟ್ಟುಹಬ್ಬ ಆಚರಣೆ ನಡೆಯಲ್ಲಿದ್ದು ಮಧ್ಯರಾತ್ರಿ ಬೃಹತ್ ಕೇಕ್ ಕಟ್ ಮಾಡುವ ಮೂಲಕ ಆಚರಣೆ ಮಾಡಲಾಗುತ್ತಿದೆ.. ಹಾಗೂ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯೂ ಸಹ ಇರಲಿದ್ದು ಅಪ್ಪುವಿನ ಸ್ಮರಣೆಯ ಭಾವುಕ‌ ಕ್ಷಣಗಳಿಗೆ ಸಾಕ್ಷಿಯಾಗಲಿದೆ..

ಇದಕ್ಕೂ ಮಿಗಿಲಾಗಿ ದೊಡ್ಮನೆ ಕುಟುಂಬವೂ ಸಹ ಅಭಿಮಾನಿಗಳ ಜೊತೆ ಆ ದಿನ ಅಪ್ಪುವಿಬ ಸಮಾಧಿ ಬಳಿಗೆ ಆಗಮಿಸಲಿದ್ದಾರೆ.. ಹೌದು ಪುನೀತ್ ಅವರ ಕುಟುಂಬ ಆ ದಿನ ಅಪ್ಪುವಿನ ಹುಟ್ಟುಹಬ್ಬದ ಸ್ಮರಣೆಯ ಸಲುವಾಗಿ ಕಂಠೀರವ ಸ್ಟುಡಿಯೋದ ಸಮಾಧಿ ಬಳಿ ಆಗಮಿಸಲಿದ್ದಾರೆ.. ಶಿವಣ್ಣ ಗೀತಕ್ಕ ರಾಘಣ್ಣ ವಿನಯ್ ರಾಜ್ ಕುಮಾರ್ ಯುವ ರಾಜ್ ಕುಮಾರ್ ಹಾಗೂ ಅಶ್ವಿನಿ ಪುನೀತ್ ಅವರೂ ಸಹ ಮಕ್ಕಳೊಂದಿಗೆ ಹದಿನಾರರ ಮಧ್ಯರಾತ್ರಿ ಸಮಾಧಿ ಬಳಿ ಆಗಮಿಸಲಿದ್ದಾರೆ.. ನಿಜಕ್ಕೂ ಸಂಭ್ರಮವಿಲ್ಲದ ಸಂಕಟ.. ಭ್ರಮೆ ಎನಿಸಿದರೂ ಸಹ ಮನದೊಳಗೆ ಒಂದು ಆಸೆ ಮೂಡುತ್ತಿದೆ.. ಅಪ್ಪು ಸರ್ ಈಗಲೂ ಇಷ್ಟೂ ತಿಂಗಳೂ ಕನಸಾಗಿ.. ನಾವು ಬರೆದಿದ್ದೆಲ್ಲಾ ಸುಳ್ಳಾಗಿ.. ನಮಗೆ ತಲೆ ಸರಿ ಇಲ್ಲವೆಂದರೂ ಪರವಾಗಿಲ್ಲ ಏನಾದರೂ ಚಮತ್ಕಾರವಾದರೂ ಆಗಿ ಮರಳಿ ಬಂದುಬಿಡಿ ಸರ್.. ದಯವಿಟ್ಟು ಬಂದುಬಿಡಿ..