ಪುನೀತ್ ಅಗಲಿ ತಿಂಗಳು ಕಳೆಯುತ್ತಿದ್ದಂತೆ ತಮ್ಮ ಜೀವನದ ಕುರಿತು ಮಹತ್ತರವಾದ ನಿರ್ಧಾರ ತೆಗೆದುಕೊಂಡ ಅಶ್ವಿನಿ ಪುನೀತ್..

0 views

ಪುನೀತ್ ರಾಜ್ ಕುಮಾರ್ ಅವರು ಅಗಲಿ ತಿಂಗಳು ಕಳೆದಿತು.. ಕುಟುಂಬಸ್ಥರು ಅಶ್ವಿನಿ ಅವರು ಶಿವಣ್ಣನ ಕುಟುಂಬ ರಾಘಣ್ಣನ ಕುಟುಂಬ ಎಲ್ಲರೂ ಸಹ ಸಮಾಧಿಯ ಬಳಿ ಆಗಮಿಸಿ ಪುನೀತ್ ರಾಜ್ ಕುಮಾರ್ ಅವರಿಗೆ ಪೂಜೆ ಸಲ್ಲಿಸುವ ಮೂಲಕ ತಿಂಗಳ ಕಾರ್ಯವನ್ನು ಮುಗಿಸಿದರು.. ಅದಾಗಲೇ ಹನ್ನೊಂದು ದಿನದ ಕಾರ್ಯದಲ್ಲಿ‌ ಮಾಡಬೇಕಾದ ಎಲ್ಲಾ ಸಂಪ್ರದಾಯಗಳನ್ನು ಮಾಡಿದ್ದರಿಂದ ಹಾಗೂ ಸಂಬಂಧಿಕರನ್ನು ಆಹ್ವಾನಿಸಿ ಆಗಲೇ ಅನ್ನಸಂತರ್ಪಣೆ ಮಾಡಿದ್ದರಿಂದ ತಿಂಗಳ ಕಾರ್ಯದ ದಿನ ಕುಟುಂಬಸ್ಥರು ಮಾತ್ರ ಆಗಮಿಸಿ ಸರಳವಾಗಿ ತಿಂಗಳ ಕಾರ್ಯ ಮಾಡಿ ಪೂಜೆ ಸಲ್ಲಿಸಿದರು.. ಇನ್ನೂ ನೋವಿನ ನಡುವೆ ಎಲ್ಲರೂ ತಮ್ಮ ತಮ್ಮ ಜೀವನದ ದಿನಚರಿಗಳ ಕಡೆ ಮುಖ ಮಾಡಿದರು.. ಅಪ್ಪು ಅಗಲಿಕೆ ಕುಟುಂಬಕ್ಕೆ ಮಾತ್ರವಲ್ಲದೇ ಸಂಪೂರ್ಣ ನಾಡಿಗೇ ಎಂದೂ ಸಹ ಮರೆಯಲಾಗದ ನೋವಾಗಿದೆ.. ನೋವಿನ ಜೊತೆಗೇ ಜೀವನ ಮಾಡಲೇಬೇಕಾದದ್ದು ವಾಸ್ತವವಾಗಿದೆ..

ಅದೇ ಕಾರಣಕ್ಕೆ ಎಲ್ಲರೂ ಸಧ್ಯ ಇದೀಗ ತಮ್ಮ ತಮ್ಮ ಕೆಲಸಗಳ ಕಡೆ ಗಮನ ನೀಡಿದ್ದು ಶಿವಣ್ಣ ಅದಾಗಕೇ ಭಜರಂಗಿ ಚಿತ್ರದ ಪ್ರಚಾರಕ್ಕಾಗಿ ಸಿನಿಮಾ ಥಿಯೇಟರ್ ಗೆ ಭೇಟಿ ಕೊಟ್ಟು ಸಿನಿಮಾ ಕೆಲಸಗಳನ್ನು ಶುರು ಮಾಡಿದ್ದರು.. ಇನ್ನು ಇತ್ತ ಅಶ್ವಿನಿ ಅವರು ಹದಿನೈದು ದಿನಗಳ ಹಿಂದೆಯೇ ಅಪ್ಪುವನ್ನು ನಂಬಿಕೊಂಡಿದ್ದ ಪಿಆರ್ ಕೆ ಪ್ರೊಡಕ್ಷನ್ಸ್ ಕಂಪನಿಯ ಸಿಬ್ಬಂಧಿಯ ಜೀವನ ಹಾಳಾಗಬಾರದೆಂದು ಸಿನಿಮಾಗಳ ಕೆಲಸವನ್ನು ಶುರು ಮಾಡಿದ್ದರು‌‌.. ಅಶ್ವಿನಿ ಅವರ ನಡೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದು ಅವರಿಗೆ ಬೆಂಬಲ ಸೂಚಿಸಿದ್ದರು.. ಆದರೆ ಇದೀಗ ತಿಂಗಳ ಬಳಿಕ ಅಶ್ವಿನಿ ಅವರು ತಮ್ಮ ಜೀವನದ ಕುರಿತ ನಿರ್ಧಾರ ತೆಗೆದುಕೊಂಡಿದ್ದಾರೆ.. ಹೌದು ಪುನೀತ್ ಅವರ ತಿಂಗಳ ಕಾರ್ಯದ ದಿನವೂ ಸಮಾಧಿ ಬಳಿ ಬಂದು ದುಃಖ ತಡೆಯಲಾಗದೇ ಎಲ್ಲರ ಮುಂದೆ ಕಣ್ಣೀರಿಡದೇ ಸಮಾಧಿಯಿಂದ ಪಕ್ಕಕ್ಕೆ ತೆರಳಿ ಕಣ್ಣೀರಿಟ್ಟಿದ್ದರು..

ಪುನೀತ್ ಅವರು ಹೇಗೆ ತಮ್ಮಿಂದ ಯಾರಿಗೂ ನೋವಾಗಬಾರದೆಂದು ಬಯಸುತ್ತಿದ್ದರೋ ಅಶ್ವಿನಿ ಅವರೂ ಸಹ ಅದೇ ರೀತಿ ಇರುವುದು ನಿಜಕ್ಕೂ ಅವರ ದೊಡ್ಡಗುಣವೆನ್ನಬಹುದು.. ಆದರೆ ಅಪ್ಪು ಅಗಲಿದ ಬಳಿಕ ಅಶ್ವಿನಿ ಅವರು ತೆಗೆದುಕೊಳ್ಳುತ್ತಿರುವ ಪ್ರತಿಯೊಂದು ನಿರ್ಧಾರವೂ ಸಹ ಅವರ ಪ್ರಬುದ್ಧತೆಯನ್ನು ತೋರುತ್ತದೆ.. ಆದರೀಗ ಜೀವನದ ಮಹತ್ತರವಾದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.. ಹೌದು ಅಪ್ಪು ಅಗಲಿಕೆಯ ನೋವು ನಮ್ಮೆಲ್ಲರಿಗು ಎಷ್ಟಿದೆಯೋ ಅದರ ನೂರರಷ್ಟು ಅಶ್ವಿನಿ ಅವರಿಗೆ ಇದೆ ಎಂಬುದು ವಾಸ್ತವ.. ಆದರೆ ಪುನೀತ್ ಅವರು ಅಗಲಿದ ದಿನದಿಂದಲೂ ತನ್ನ ದುಃಖವನ್ನೆಲ್ಲಾ ತಡೆದುಕೊಂಡು ಎಲ್ಲಿಯೂ ಯಾರ ಮುಂದೆಯೂ ತನ್ನ ದುಃಖವನ್ನು ಹೊರಹಾಕದೇ ತಲೆ ಬಗ್ಗಿಸಿ ಕಣ್ಣೀರಿಡುತ್ತಿದ್ದ ಆ ಹೆಣ್ಣು ಮಗಳು ಪಡುತ್ತಿದ್ದ ಸಂಕಟ ನೋಡಲಸಾಧ್ಯವಾಗಿತ್ತು‌.

ಬಹುಶಃ ಇಷ್ಟು ವರ್ಷಗಳಲ್ಲಿ ಪುನೀತ್ ಅವರು ಒಮ್ಮೆಯೂ ಅಶ್ವಿನಿ ಅವರ ಕಣ್ಣಲ್ಲಿ ಕಣ್ಣೀರು ಹಾಕಿಸಿರಲಿಕ್ಕಿಲ್ಲ.. ಅಷ್ಟು ಪ್ರೀತಿ ಕೊಟ್ಟು ಇಷ್ಟು ಬೇಗ ಹೊರಟದ್ದು ಭಗವಂತನ ಕ್ಷಮಿಸಲಾಗದ ತಪ್ಪು.. ಇನ್ನು ಅಶ್ವಿನಿ ಅವರು ಪುನೀತ್ ಅವರ ಅಂತ್ಯ ಸಂಸ್ಕಾರವಾದ ದಿನದಿಂದ ಗಟ್ಟಿ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾ ಬಂದರು.. ನೋವು ಎಷ್ಟೇ ಇದ್ದರೂ ಅಪ್ಪು ಇಲ್ಲ ಎಣ್ಬ ವಿಚಾರ ವಾಸ್ತವ.. ಅದನ್ನರಿತು ಪುನೀತ್ ಅವರ ಮೂರನೇ ದಿನದ ಕಾರ್ಯದ ದಿನ ಎರಡನೇ ಮಗಳು ಪರೀಕ್ಷೆ ಬರೆಯುವಂತೆ ನೋಡಿಕೊಂಡರು.. ವಾರದ ಬಳಿಕ ಮೊದಲನೇ ಮಗಳನ್ನು ವಿಧ್ಯಾಭ್ಯಾಸಕ್ಕಾಗಿ ಮರಳಿ ವಿದೇಶಕ್ಕೆ ಕಳುಹಿಸಿಕೊಟ್ಟರು..

ಇತ್ತ ಹನ್ನೊಂದು ದಿನದ ಕಾರ್ಯ ಮುಗಿಸಿ ಅಪ್ಪು ಬಹಳ ಆಸೆ ಪಟ್ಟಂತೆ ದೊಡ್ಮನೆಯ ಅಭಿಮಾನಿ ದೇವರುಗಳಿಗೆ ಐವತ್ತು ಸಾವಿರ ಜನರಿಗೆ ಊಟ ಹಾಕಿಸಿದರು.. ಇತ್ತ ಅವರ ಕುರಿತು ಯಾವುದೇ ಇಲ್ಲಸಲ್ಲದ ಸುದ್ದಿಗಳು ಹಬ್ಬಬಾರದೆಂದು ಪುನೀತ್ ಅವರ ಫೋಟೋ ಜೊತೆಗೆ ಸಾಮಾಜಿಕ ಜಾಲತಾಣಗಳಿಗೆ ಎಂಟ್ರಿ ನೀಡಿದರು.. ದೊಡ್ಡ ಸ್ಟಾರ್ ಪತ್ನಿಯಾಗಿದ್ದರೂ ಸಹ ಇಷ್ಟು ದಿನ ಸಾಮಾಜಿಕ ಜಾಲತಾಣದಲ್ಲಿ ಖಾತೆ ಇಲ್ಲದ್ದು ನಿಜಕ್ಕೂ ಆಡಂಬರದ ಬದುಕಿಂದ ಅಶ್ವಿನಿ ಅವರು ಎಷ್ಟು ದೂರವಿದ್ದರೆಂಬುದು ತಿಳಿಯುತ್ತದೆ.. ಆದರೆ ಈಗ ಅನಿವಾರ್ಯತೆ ಇಂದ ಸಾಮಾಜಿಕ ಜಾಲತಾಣಕ್ಕೆ ಬಂದರು.. ನಂತರ ಪಿ ಆರ್ ಕೆ ಪ್ರೊಡಕ್ಷನ್ಸ್ ಹಾಗೂ ಆಡಿಯೋ ಸಂಸ್ಥೆ ತನ್ನ ಕೆಲಸವನ್ನು ಪುನರಾರಂಭಿಸುವ ನಿರ್ಧಾರ ತೆಗೆದುಕೊಂಡರು..

ಪ್ರತಿಯೊಂದು ಹೆಜ್ಜೆಯಲ್ಲಿಯೂ ದಿಟ್ಟತನ ತೋರಿ ಪುನೀತ್ ಅವರ ಆಸೆಯನ್ನು ನೆರವೇರಿಸಿಕೊಂಡು ಬಂದರು.. ಹೌದು ಈಗಲೂ ಅಷ್ಟೇ ಅಶ್ವಿನಿ ಅವರು ತೆಗೆದುಕೊಂಡ ನಿರ್ಧಾರ ಬಹುಶಃ ತಮ್ಮ ಜೀವನವನ್ನು ಇನ್ನು ಮುಂದೆ ಪುನೀತ್ ಅವರ ಕನಸುಗಳನ್ನು ನನಸು ಮಾಡಲು ಮುಡಿಪಿಟ್ಟಂತೆ ಕಾಣುತ್ತಿದೆ.. ಹೌದು ಬಹಳಷ್ಟು ವರ್ಷಗಳ ಹಿಂದಿನಿಂದಲೂ ಪುನೀತ್ ಅವರು ಕನಸು ಕಾಣುತ್ತಿದ್ದ ಆಸೆಯೊಂದನ್ನು ಸಧ್ಯದಲ್ಲಿಯೇ ಅಶ್ವಿನಿ ಅವರು ನೆರವೇರಿಸುತ್ತಿದ್ದಾರೆ.. ಹೌದು ಪುನೀತ್ ಅವರು ಕಳೆದ ನವೆಂಬರ್ ಒಂದರಂದು ತಮ್ಮ ಕನಸಿನ ಕೂಸಾದ ಕರ್ನಾಟಕದ ಕುರಿತ ಆಲ್ಬಂ ಒಂದರ ವೀಡಿಯೋವನ್ನು ಬಿಡುಗಡೆ ಮಾಡಬೇಕಿತ್ತು.. ಆದರೆ ವಿಧಿಯ ಮುಂದೆ ಸೋತುಬಿಟ್ಟರು.. ಆದರೆ ಅಶ್ವಿನಿ ಅವರು ಕೆಲ ದಿನಗಳ ಹಿಂದೆ ಪುನೀತ್ ಅವರ ಈ ಕನಸನ್ನು ನನಸು ಮಾಡುವುದಾಗಿ ಹೇಳಿದ್ದರು.. ಅಶ್ವಿನಿ ಅವರ ಮಾತು ಕೇವಲ ಮಾತಾಗಿರದೇ ಅದಾಗಲೇ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.

ಹೌದು ಪುನೀತ್ ಅವರ ಕನಸಿನ ಕೂಸಾದ ಆ ವೀಡಿಯೋದ ಟೈಟಲ್ ಟೀಸರ್ ಅನ್ನು ಇದೇ ಡಿಸೆಂಬರ್ ಆರರಂದು ಬಿಡುಗಡೆ ಮಾಡುತ್ತಿದ್ದಾರೆ.. ಹೌದು ಈ ಬಗ್ಗೆ ಖುದ್ದು ಅಶ್ವಿನಿ ಅವರೇ ತಿಳಿಸಿದ್ದು “ಅಪ್ಪು ಅವರ ಅಮೋಘವಾದ ಕನಸಿನ ಪಯಣ ಹಿಂದೆಂದೂ ಕಾಣದ ರೋಮಾಂಚಕ ಅನುಭವದ ಟೈಟಲ್ ಟೀಸರ್ ಇದೇ ಡಿಸೆಂಬರ್ ಆರಕ್ಕೆ ಬಿಡುಗಡೆಯಾಗಲಿದೆ” ಎಂದು ಬರೆದು ಪೋಸ್ಟ್ ಮಾಡಿದ್ದು ಕೆಲವೇ ನಿಮಿಷಗಳಲ್ಲಿ ಸಾವಿರಗಟ್ಟಲೇ ಮೆಚ್ಚುಗೆ ವ್ಯಕ್ತವಾಗಿದ್ದು ಅಪ್ಪು ಕನಸನ್ನು ಈಡೇರಿಸುವ ಅಶ್ವಿನಿ ಅವರ ನಿರ್ಧಾರಕ್ಕೆ ಇಡೀ ಕರುನಾಡು ಬೆಂಬಲ ವ್ಯಕ್ತಪಡಿಸುತ್ತಿದೆ.. ಈ ಕನಸನ್ನು ನನಸು ಮಾಡಲು ಅಪೊಉ ಕಳೆದ ಹತ್ತು ವರ್ಷಗಳಿಂದಲೂ ಪ್ರಯತ್ನ ಪಡುತ್ತಿದ್ದರು ಎನ್ನಲಾಗಿದೆ.. ಆದರೆ ಕೊನೆ ಘಳಿಗೆಯಲ್ಲಿ ಕನಸು ಕನಸಾಗಿಯೇ ಉಳಿದು ಬಿಟ್ಟಿತು.. ಆದರೆ ಈಗ ಪತಿಯ ಕನಸಿಗೆ ಜೀವ ತುಂಬಿ ತೆರೆ ಮೇಲೆ ತರುತ್ತಿರುವ ಅಶ್ವಿನಿ ಅವರ ದಿಟ್ಟತನಕ್ಕೆ ಹ್ಯಾಟ್ಸ್ ಆಫ್..