ವ್ಯಯಕ್ತಿಕ ವಿಚಾರವಾಗಿ ಅಶ್ವಿನಿ ಅವರಿಂದ ಮತ್ತೊಂದು ನಿರ್ಧಾರ.. ಅನುಮತಿ ನೀಡಿದ ಶಿವಣ್ಣ..

0 views

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಇನ್ನು ಮುಂದಿನ ಸಂಪೂರ್ಣ ಜೀವನ ಪುನೀತ್ ರಾಜ್ ಕುಮಾರ್ ಅವರ ಕನಸುಗಳು ಅವರ ಆಸೆ ಆಕಾಂಕ್ಷೆಗಳನ್ನು ಈಡೇರಿಸುತ್ತಾ ಕಳೆಯುವ ನಿರ್ಧಾರ ಮಾಡಿದಂತೆ ಕಾಣುತ್ತಿದೆ.. ಹೌದು ಪುನೀತ್ ಅವರು ತಮ್ಮ ಜೀವನದ ಬಗ್ಗೆ ತಾವು ಮಾಡಬೇಕಾದ ಕೆಲಸಗಳ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಇ‌ನು ಇತ್ತ ಮಡದಿಗಿಂತ ಹೆಚ್ಚಾಗಿ ಸ್ನೇಹಿತೆಯಂತಿದ್ದ ಪತ್ನಿ ಅಶ್ವಿನಿ ಅವರಿಗೆ ತಮ್ಮೆಲ್ಲಾ ಕನಸುಗಳನ್ನು ಹೇಳಿಕೊಳ್ಳುತ್ತಿದ್ದರು.. ಅದರಂತೆ ಸಾಕಷ್ಟು ಕೆಲಸಗಳನ್ನು ಅವರೇ ನೆರವೇರಿಸಿಯೂ ಇದ್ದರು.. ಆದರೆ ಆ ಪುಟ್ಟ ಬೆಟ್ಟದ ಹೂವಿನ ಕನಸುಗಳು ಬೆಟ್ಟದಷ್ಟೇ ಇದ್ದವು.. ಅದರಲ್ಲಿಯೂ ನಮ್ಮ‌ ನಾಡು ನುಡಿ ಬಗ್ಗೆಯೂ ಅಪಾರ ಕನಸು ಕಂಡಿದ್ದರು.. ಜೊತೆಗೆ ತಮ್ಮ ವ್ಯಯಕ್ತಿಕ ವಿಚಾರಗಳ ಬಗ್ಗೆಯೂ ಕೆಲವೊಂದು ಕನಸು ಕಂಡಿದ್ದರು.. ಆ ಎಲ್ಲಾ ಕನಸುಗಳು ಸಹ ಅಶ್ವಿನಿ ಅವರಿಗೆ ತಿಳಿದಿತ್ತು ಆ ಕಾರಣದಿಂದಲೇ ಅಪ್ಪುವಿನ ವ್ಯಯಕ್ತಿಕ ಕನಸೊಂದನ್ನು ಇದೀಗ ಈಡೇರಿಸಲು ಮಹತ್ವದ ನಿರ್ಧಾರ ಮಾಡಿದ್ದು ಶಿವಣ್ಣ ಅವರ ಬಳಿ ಅನುಮತಿಯನ್ನೂ ಸಹ ಕೇಳಿದ್ದಾರೆ..

ಹೌದು ಕೆಲ ದಿನಗಳ ಹಿಂದಷ್ಟೇ ಅಪ್ಪು ಬಹಳಷ್ಟು ವರ್ಷಗಳಿಂದ ಕಂಡಿದ್ದ ಗಂಧದ ಗುಡಿ ಕನಸನ್ನು ಸಾಕಾರಗೊಳಿಸುವ ಸಲುವಾಗಿ ಗಂಧದಗುಡಿ ಸಿನಿಮಾದ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಿದ್ದರು.. ನಾಡಿನಾದ್ಯಂತ ಅದ್ಭುತ ಪ್ರತಿಕ್ರಿಯೆ ಪಡೆದು ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದು ಈಗಲೂ ಸಹ ಟ್ರೆಂಡಿಂಗ್ ನಲ್ಲಿಯೇ ಇದೆ.. ಇನ್ನು ಮುಣ್ದಿನ ವರ್ಷ ಸಿನಿಮಾ ಬಿಡುಗಡೆಯಾಗಲಿದ್ದು ಆ ಸಿನಿಮಾದಲ್ಲಿ ಪುನೀತ್ ಅವರು ಪುನೀತ್ ಆಗಿಯೇ ಕಾಣಿಸಿಕೊಂಡಿದ್ದು ಜನರು ಅಪ್ಪುವನ್ನು ಮತ್ತೆ ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.. ಇನ್ನು ಅದರ ಜೊತೆ ಸಿನಿಮಾ ಹೊರತುಪಡಿಸಿ ಅಪ್ಪುವಿನ ಮತ್ತೊಂದು ವ್ಯಯಕ್ತಿಕ ಕನಸನ್ನು ಸಹ ಇದೀಗ ನೆರವೇರಿಸಲು ಅಶ್ವಿನಿ ಅವರು ಮುಂದಾಗಿದ್ದಾರೆ.. ಹೌದು ಈ ಹಿಂದೆ ಸಿನಿಮಾ ನಿರ್ಮಾಣದ ಕೆಲಸವನ್ನಾಗಲಿ ಅಥವಾ ಮತ್ಯಾವುದೇ ಕೆಲಸವಾಗಲಿ ಪುನೀತ್ ರಾಜ್ ಕುಮಾರ್ ಅವರು ತಾವಾಗಿಯೇ ನಿರ್ಧಾರ ಕೈಗೊಳ್ಳುತ್ತಿದ್ದರು..

ಆದರೀಗ ಕಾಲ ಬದಲಾಗಿದೆ ಅಶ್ವಿನಿ ಅವರು ತಾವು ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಶಿವಣ್ಣನ ಅನುಮತಿಯನ್ನು ಕೇಳುತ್ತಿದ್ದು ನಿಜಕ್ಕೂ ದೊಡ್ಮನೆಯ ದೊಡ್ಡ ಗುಣ ಏನ್ವ್ಂಬುದನ್ನು ತೋರಿದ್ದಾರೆ.. ಅತ್ತ ಶಿವಣ್ಣ ಹಾಗೂ ರಾಘಣ್ಣ ಅವರೂ ಸಹ ಅಶ್ವಿನಿ ಅವರನ್ನು ನಾದಿನಿಯಂತಲ್ಲ ಬದಲಿಗೆ ಮಗಳ ರೀತಿ‌ ನೋಡುತ್ತಿದ್ದು ಪ್ರತಿಯೊಂದು ಕೆಲಸಕ್ಕೂ ಅಶ್ವಿನಿ ಅವರಿಗೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ.. ಈ ಹಿಂದೆ ಅಪ್ಪು ಅಗಲಿದ ಕೆಲ ದಿನಗಳ ನಂತರ ಆಫೀಸಿಗೆ ತೆರಳುವ ಮುನ್ನವೂ ಸಹ ಅಶ್ವಿನಿ ಅವರು ಶಿವಣ್ಣನ ಅನುಮತಿ ಕೇಳಿದ್ದರು.. ಇತ್ತ ಆ ಕ್ಷಣದಲ್ಲಿ ಈ ಹಿಂದೆ ಅಶ್ವಿನಿ ಅವರಿಗೆ ಏನೂ ಸಹ ತೊಂದರೆಯಾಗದಂತೆ ಎಲ್ಲಾ ಕೆಲಸವನ್ನೂ ಸಹ ಪುನೀತ್ ಅವರೇ ಮಾಡಿಕೊಳ್ಳುತ್ತಿದ್ದದ್ದನ್ನು ನೆನೆದು ಶಿವಣ್ಣ ಹಾಗೂ ಅಶ್ವಿನಿ ಅವರು ಇಬ್ಬರೂ ಸಹ ಕಣ್ಣೀರಿಟ್ಟರು.. ಇತ್ತ ಶಿವಣ್ಣ ಅಶ್ವಿನಿ ಅವರಿಗೆ ಆಫೀಸಿಗೆ ತೆರಳಲು ಅನುಮತಿ ನೀಡಿ ಏನೇ ಇದ್ದರೂ ನಾನಿದ್ದೇನೆ ಎಂದಿದ್ದರು..

ಇದೀಗ ಅಶ್ವಿನಿ ಅವರು ಮತ್ತೊಂದು ನಿರ್ಧಾರ ಮಾಡಿದ್ದು ಅದಕ್ಕೂ ಸಹ ಇದೀಗ ಶಿವಣ್ಣ ಸಮ್ಮತಿ ನೀಡಿದ್ದಾರೆ.. ಹೌದು ಪುನೀತ್ ಅವರು ಅಗಲುವ ಮೂರು ತಿಂಗಳ ಹಿಂದೆ ಗಾಜನೂರಿಗೆ ತೆರಳಿದ್ದರು.. ಅಲ್ಲಿನ ಹೊಸ ಮನೆಯಲ್ಲಿರುವ ಪುನೀತ್ ಅವರ ಅತ್ತೆ(ರಾಜ್ ಕುಮಾರ್ ಅವರ ಸಹೋದರಿ) ನಾಗಮ್ಮನವರ ಯೋಗ ಕ್ಷೇಮ ವಿಚಾರಿಸಿಕೊಂಡು ನಂತರ ಹಳೆ ಮನೆಗೆ ತೆರಳಿದ್ದರು.. ರಾಜ್ ಕುಮಾರ್ ಅವರು ಹುಟ್ಟಿ ಬೆಳೆದ ಮನೆ ಅದಾಗಿದ್ದು ಪುನೀತ್ ಅವರು ಆಡಿ ಬೆಳೆದಿದ್ದರು.. ಆ ಮನೆಗೆ ತೆರಳಿದಾಗ ಮನೆ ಸಂಪೂರ್ಣ ಶಿಥಿಲವಾಗಿರುವುದನ್ನು ಗಮನಿಸಿದರು.. ಅಷ್ಟೇ ಅಲ್ಲದೇ ಅಲ್ಲಿನ ಕೆಲಸಗಳನ್ನು ನೋಡಿಕೊಳ್ಳುತ್ತಿರುವವರು ಮುಂದಿನ ಮಳೆಗೆ ಮನೆ ಕುಸಿಯಬಹುದೆಂದು ತಿಳಿಸಿದ್ದರು.. ಆಗ ಛೇ ಇಲ್ಲ ಇಲ್ಲ ಮಳೆಗೂ ಮುಂಚೆನೇ ಮನೆ ರೆಡಿ ಮಾಡಿಸೋಣ ಎಂದಿದ್ದರು..

ಮುಂಚೆ ಇದ್ದ ರೀತಿಯಲ್ಲಿಯೇ ಹೊಸದಾಗಿ ಕಟ್ಟಿಸೋಣ ಎಂದಿದ್ದರಂತೆ.. ಆತರ ಎಲ್ಲಾ ಮನೆ ಆಗೋದನ್ನ ನೋಡೋಕ್ ಆಗತ್ತಾ.. ಇನ್ನು ನಾಲ್ಕು ತಿಂಗಳು ಬಿಟ್ಟು ಬರ್ತೀ‌ನಿ.. ಎಲ್ಲಾ ರೆಡಿ ಮಾಡ್ಸೋಣ ಎಂದಿದ್ದರಂತೆ.. ಆದರೆ ವಿಧಿಯ ಆಟದ ಮುಂದೆ ಕನ್ನಡಿಗರು ಕಣ್ಣೀರಿಡುವಂತಾಯಿತು.. ಇನ್ನು ಅಪ್ಪು ಅಗಲಿದ ಬಳಿಕ ನೋವಿನಲ್ಲಿಯೇ ಇದ್ದ ಅಶ್ವಿನಿ ಅವರು ಆ ವಿಚಾರದ ಬಗ್ಗೆ ಗಮನ ನೀಡಲು ಸಾಧ್ಯವಾಗಿರಲಿಲ್ಲ.. ಆದರೆ ಕಳೆದ ಕೆಲ ವಾರಗಳು ಮಳೆಯಾದಾಗ ಅಪ್ಪು ಅವರು ಗಾಜನೂರಿನ ಮನೆಯ ಬಗ್ಗೆ ಹೇಳಿದ್ದ ಮಾತುಗಳು ನೆನಪಾಗಿ ಇದೀಗ‌ ಮಳೆ ಕಡಿಮೆಯಾದ ಕಾರಣ ಮನೆಯನ್ನು ಅಪ್ಪು ಕನಸಿ‌ನಂತೆ ನವೀಕರಿಸುವ ನಿರ್ಧಾರ ಮಾಡಿದ್ದು ಈ ಬಗ್ಗೆ ಶಿವಣ್ಣ ಅವರ ಬಳಿ‌ ಮಾತನಾಡಿದರು..

ಅದಕ್ಕೆ ಅನುಮತಿಸಿದ ಶಿವಣ್ಣ ಅಪ್ಪು ಹೇಗೆ ಅಂದುಕೊಂಡಿದ್ದನೋ ಅದೇ ರೀತಿ ನವಿಕರಿಸೋಣ ವೆಂದು ಗಾಜನೂರಿನಲ್ಲಿ ಮನೆ ನೋಡಿಕೊಳ್ಳುತ್ತಿರುವವರಿಗೆ ಕರೆ ಮಾಡಿ ವಿಚಾರ ತಿಳಿಸಿ ಸಧ್ಯ ಇದೀಗ ಮನೆಯ ನವೀಕರಣದ ಕೆಲಸ ಪ್ರಾರಂಭವಾಗಿದೆ.. ಹೌದು ಆ ಮನೆ ರಾಜಣ್ಣನವರು ಹುಟ್ಟಿ ಬೆಳೆದ ಮನೆಯಾಗಿದ್ದರಿಂದ ಆ ಮನೆಯ ಮೇಲೆ ಬಹಳಷ್ಟು ಭಾವನಾತ್ಮಕವಾದ ಸಂಬಂಧವಿತ್ತು.. ಶಿವಣ್ಣ ರಾಘಣ್ಣ ಪುನೀತ್ ಅವರು ಯಾರೇ ಊರಿಗೆ ಹೋದರೂ ಹಳೆ ಮನೆಯ ಜಗುಲಿ ಕಟ್ಟೆಯ ಮೇಲೆ ಸಾಕಷ್ಟು ಸಮಯ ಕಳೆದೇ ಬರುತ್ತಿದ್ದರು.. ಊರಿನ ಹಳೆ ಮನೆ ಆಲದ ಮರ.. ದೇವಸ್ಥಾನ ಎಲ್ಲವೂ ಸಹ ಅಪ್ಪುವಿಗೆ ನೆಮ್ಮದಿ ನೀಡುವ ಜಾಗಗಳಾಗಿದ್ದವು.. ಅದೆಲ್ಲವೂ ಹಾಗೆಯೇ ಇದೆ..

ಆದರೆ ಅಲ್ಲಿ ಸಮಯ ಕಳೆಯುತ್ತಿದ್ದ ಅಪ್ಪುವೇ ಇಲ್ಲವಾದರು.. ಸಮಯದ ಮುಂದೆ ನಮ್ಮದೇನೂ ನಡೆಯೋದಿಲ್ಲ ಎಂಬುದು ಸತ್ಯ.. ಇನ್ನು ಇತ್ತ ಪುನೀತ್ ಅವರ ಕನಸುಗಳನ್ನು ನೆರವೇರಿಸುವ ಮೂಲಕ ಅಪ್ಪುವನ್ನು ತಮ್ಮೊಳಗೆ ಜೀವಂತವಾಗಿರಿಸಿಕೊಳ್ಳುತ್ತಿರುವ ಅಶ್ವಿನಿ ಅವರಿಗೆ ಆ ದೇವರು ಮತ್ತಷ್ಟು ಧೈರ್ಯ ನೀಡಲಿ.. ಇನ್ನಷ್ಟು ಗಟ್ಟಿಯಾಗಿಸಲಿ.. ನಲವತ್ತೈದು ದಿನಗಳು ಕಳೆದವು ಈಗಲೂ ಸಹ ಸಾಧ್ಯವಾಗದು ಎಂದು ತಿಳಿದಿದ್ದರೂ ಸಹ ನಮ್ಮ ಕೋರಿಕೆ ಬೇಡಿಕೆ ಆಸೆ ಎಲ್ಲವೂ ಒಂದೇ.. ಅಂತರಾಳದಿಂದ ಬೇಡಿಕೊಳ್ಳುತ್ತಿದ್ದೇವೆ ಮರಳಿ ಬಂದುಬಿಡಿ ಅಪ್ಪು ಸರ್.. ದಯವಿಟ್ಟು ಬಂದುಬಿಡಿ.. ಹೇಗಾದರೂ ಮರಳಿ ಬಿಡಿ.. ಕೈ ಮುಗಿವೆವು.. ಬಂದುಬಿಡಿ..