ಸಿಹಿ ಸುದ್ದಿ ನೀಡಿದ ಅಶ್ವಿನಿ ಪುನೀತ್.. ನಿಜಕ್ಕೂ ಗ್ರೇಟ್..

0 views

ಕನ್ನಡ ಚಿತ್ರರಂಗ ತನ್ನ ಅಮೂಲ್ಯವಾದ ರತ್ನ ಅಪ್ಪು ಅವರನ್ನು ಕಳೆದುಕೊಂಡ ನೋವಿನಿಂದ ಇನ್ನು ಚೇತರಿಸಿಕೊಳ್ಳಲು ಆಗುತ್ತಿಲ್ಲ. ಇಂದಿಗೂ ಸಹ ಅಪ್ಪು ಅವರ ಸಮಾಧಿಯ ಬಳಿ ಸಾವಿರಕ್ಕೂ ಹೆಚ್ಚು ಜನ ಸೇರಿ ಅವರ ದರ್ಶನ ಪಡೆಯುತ್ತಿದ್ದಾರೆ. ಅಪ್ಪು ಅವರನ್ನು ಮರೆಯಲು ನಮಗೆ ಇಷ್ಟು ಕಷ್ಟವಾದರೆ ಇನ್ನು ಅವರ ಪತ್ನಿ ಅಶ್ವಿನಿ ಅವರ ಸ್ಥಿತಿ ನೆನಪಿಸಿಕೊಂಡರೆ ನಿಜಕ್ಕೂ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ಈ ಎಲ್ಲಾ ನೋವುಗಳಿದ್ದರೂ ಸಹ ಅಶ್ವಿನಿ ಅವರು ಧೈರ್ಯದಿಂದ ಪಿ ಆರ್ ಕೆ ಪ್ರೊಡಕ್ಷನ್ ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಇದೀಗ ಅಶ್ವಿನಿ ಅವರು ಅಪ್ಪು ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ನೀಡಿದ್ದಾರೆ.. ನಿಜಕ್ಕೂ ಇವರ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು ಅಶ್ವಿನಿ ಅವರ ನಡೆಗೆ ಗ್ರೇಟ್ ಎಂದಿದ್ದಾರೆ..

ಪುನೀತ್ ರಾಜ್ ಕುಮಾರ್ ನಿಧನದ ನಂತರ ಅವರ ಎಲ್ಲಾ ಜವಾಬ್ದಾರಿಯನ್ನು ಪತ್ನಿ ಅಶ್ವಿನಿ ನೋಡಿಕೊಳ್ಳುತ್ತಿದ್ದಾರೆ. ಇದೀಗ ಪುನೀತ್ ಅವರ ನಿಧನದ ನಂತರ ಇದೀಗ ಮೊದಲ ಬಾರಿಗೆ ಅವರ ಬ್ಯಾನರ್ ನಲ್ಲಿ ಒಂದು ಹೊಸ ಸಿನಿಮಾ ಸಿದ್ಧವಾಗುತ್ತಿದೆ. ಪಿ ಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ಆಚಾರ್ಯ ಅಂಡ್ ಕೋ ಎಂಬ ಹೊಸ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಸಿನಿಮಾ ಮಹಿಳಾ ಪ್ರಧಾನಿ ಸಿನಿಮಾ ಆಗಿರುವುದು ಈ ಸಿನಿಮಾದ ವಿಶೇಷ. ಈ ಸಿನಿಮಾದಲ್ಲಿ ನಿರ್ಮಾಣ, ನಿರ್ದೇಶನ, ಸ್ಕ್ರೀನ್ ಪ್ಲೇ ಬಹುತೇಕ ಎಲ್ಲಾ ವಿಭಾಗಗಳಲ್ಲಿ ಮಹಿಲೆಯರೆ ಕೆಲಸ ಮಾಡುತ್ತಿರುವುದು ಈ ಸಿನಿಮಾದ ಇನ್ನೊಂದು ಪ್ಲಸ್ ಪಾಯಿಂಟ್.

ಆಚಾರ್ಯ ಅಂಡ್ ಕೋ ಸಿನಿಮಾವನ್ನು ಸಿಂಧು ಶ್ರೀನಿವಾಸ್ ಮೂರ್ತಿ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಸಿಂಧು ಶ್ರೀನಿವಾಸ್ ಮೂರ್ತಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾವಾಗಿದ್ದು, ಇದಕ್ಕೂ ಮುಂಚೆ ಅವರು ತೆಲುಗು ಮತ್ತು ಕನ್ನಡದ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿಂಧು ಶ್ರೀನಿವಾಸ್ ಮೂರ್ತಿ ಅವರು ಮೂಲತಃ ರಂಗಭೂಮಿ ಕಲಾವಿದೆ. ಪುನೀತ್ ರಾಜ್ ಕುಮಾರ್ ನಿರ್ಮಾಣದ ಡೇನಿಷ ಸೇಟ್ ಅಭಿನಯದ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಸಿಂಧು ಅವರು ಒಂದು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು. ಅಲ್ಲದೆ ಸಿಂಧು ಅವರು ತೆಲುಗಿನ ಸಿನಿಮಾ ಬಂಡಿ ಎಂಬ ಚಿತ್ರದಲ್ಲಿಯೂ ಸಹ ಬಣ್ಣ ಹಚ್ಚಿದ್ದಾರೆ.

ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ನಟಿಸುವಾಗ ನನಗೆ ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಅವರ ಪರಿಚಯವಾಯಿತು. ಈ ಸಿನಿಮಾದಲ್ಲಿ ನಟಿಸುವಾಗ ನಾನು ಪುನೀತ್ ಅವರಿಗೆ ನನ್ನಗೆ ನಿರ್ದೇಶನದಲ್ಲಿರುವ ಆಸೆಯನ್ನು ಹೇಳಿದೆ. ಹಾಗೂ ಆಚಾರ್ಯ ಅಂಡ್ ಕೋ ಸಿನಿಮಾದ ಕಥೆಯನ್ನು ಹೇಳಿ ಈ ಬಗ್ಗೆ ಒಂದು 6 ನಿಮಿಷದ ಕಿರುಚಿತ್ರ ಮಾಡಿ ಅವರಿಗೆ ತೋರಿಸಿದೆ. ಆ 6 ನಿಮಿಷದ ಕಿರುಚಿತ್ರ ನೋಡಿ ಅಪ್ಪು ಅವರು ನನಗೆ ಒಂದು ಅವಕಾಶ ನೀಡಲು ಮನಸ್ಸು ಮಾಡಿದರು. ಸಿನಿಮಾರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದು ತುಂಬಾ ಕಡಿಮೆ ಆದರೆ ನನಗೆ ಅಪ್ಪು ಅವರು ಈ ಅವಕಾಶ ನೀಡಿರುವುದು ನಿಜಕ್ಕೂ ನನ್ನ ಅದೃಷ್ಟ ಎಂದಿದ್ದಾರೆ ನಿರ್ದೇಶಕಿ ಸಿಂಧು.

ಈ ಸಿನಿಮಾ 60 ರ ದಶಕದ ಬೆಂಗಳೂರಿನ ಒಂದು ಮಧ್ಯಮ ಕುಟುಂಬದ ಕಥೆಯಾಗಿದೆ. ಈ ಸಿನಿಮಾಗಾಗಿ ಮೈಸೂರಿನಲ್ಲಿ 60 ರ ದಶಕದ ಮರುಸೃಷ್ಟಿ ಮಾಡಿದ್ದೆವು. ಮೈಸೂರಿನಲ್ಲಿ 40 ದಿನಗಳ ಶೂಟಿಂಗ್ ಪೂರ್ಣಗೊಳಿಸಿದ್ದೇವೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಎಲ್ಲಾ ಮುಗಿದಿದೆ. ಇನ್ನು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಶುರು ಮಾಡಿದ್ದೇವೆ. ಶೀಘ್ರದಲ್ಲೇ ಅಭಿಮಾನಿಗಳ ಮುಂದೆ ಟ್ರೇಲರ್ ಹಾಗೂ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪರಿಚಯ ಮಾಡಿಕೊಡುತ್ತೇವೆ. ಈ ಸಿನಿಮಾದಲ್ಲಿ ಸುಧಾ ಬೆಳವಾಡಿ ಅವರ ಜೊತೆಗೆ ಸಿಂಧು ಶ್ರೀನಿವಾಸ್ ಅವರು ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನದ ಜೊತೆಗೆ ಈ ಸಿನಿಮಾದಲ್ಲಿ ನಟನೆಯನ್ನು ಸಹ ಮಾಡಿದ್ದಾರೆ ಸಿಂಧು. ಈ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುವ ನನಗಿದೆ ಎಂದಿದ್ದಾರೆ ನಿರ್ದೇಶಕಿ ಸಿಂಧು ಶ್ರೀನಿವಾಸ್. ಈ ಸಿನಿಮಾ ತೆರೆ ಮೇಲೆ ಹೇಗೆ ಮೋಡಿ ಮಾಡಲಿದೆ ಎಂದು ಕಾದು ನೋಡಬೇಕಿದೆ….