ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿದ ಪುನೀತ್ ಪತ್ನಿ ಅಶ್ವಿನಿ ಅವರು..

0 views

ಭಗವಂತ ಹುಟ್ಟಿಸುವಾಗಲೇ ಆತನನ್ನು ಮರಳಿ ಕರೆದುಕೊಳ್ಳುವ ದಿನವನ್ನು ತಿಳಿಸಿಬಿಟ್ಟರೆ ಬಹುಶಃ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬಹುದು.. ಆದರೆ ಈ ರೀತಿ ಒಳ್ಳೆಯತನವನ್ನು ತುಂಬಿ ವ್ಯಕ್ತಿಗಳನ್ನು ಭೂಮಿಗೆ ಕಳುಹಿಸಿ ಇದ್ದಕಿದ್ದ ಹಾಗೆ ಕರೆದುಕೊಂಡರೆ ನಾವೇನು ಮಾಡುವುದು ಭಗವಂತ.. ನಿನ್ನನ್ನು ಶಪಿಸುತ್ತಾ ಬೇರೆ ದಾರಿಯೇ ಇಲ್ಲದೇ ಕಣ್ಣೀರಿಡಬೇಕಷ್ಟೇ.. ನಿಜಕ್ಕೂ ಕೆಲವೊಮ್ಮೆ ಸಂಬಂಧವೇ ಇಲ್ಲದ ವ್ಯಕ್ತಿಗಳು ಇಲ್ಲವಾದಾಗಲೂ ತಡೆಯಲಾಗದ ನೋವಾಗುವುದು ಮನಸ್ಸು ಕುಗ್ಗಿ ಹೋಗುವುದು ಎಂಬುದಕ್ಕೆ ಈ ದಿನ ಅಪ್ಪು ಅಗಲಿಕೆಯೇ ಉದಾಹರಣೆ.. ನಿಜಕ್ಕೂ ಅಕ್ಷರಗಳನ್ನು ಟೈಪ್ ಮಾಡಲು ಬೆರಳುಗಳು ನಡುಗುತ್ತಿವೆ.. ಇನ್ನೆಂದೂ ಪುನೀತ್ ಯಾವುದೇ ವೇದಿಕೆ ಮೇಲೆ ಮಾತನಾಡುವುದಿಲ್ಲ.. ಯಾವುದೇ ಸಿನಿಮಾ ಗಳಲ್ಲಿ ಅಭಿನಯಿಸುವುದಿಲ್ಲ.. ಆ ನಗು ಮುಖವ ನೋಡಲು ಸಾಧ್ಯವಿಲ್ಲ..

ಆವರ ಬಗ್ಗೆ ಬರೆಯಬೇಕಾದರೆ ಅವರು ಇನ್ನಿಲ್ಲ ಎಂದು ಬರೆಯಬೇಕು ಎಂಬ ಕಲ್ಪನೆಯೇ ಕುಸಿದು ಬೀಳುವಂತೆ ಮಾಡುತ್ತಿದೆ.. ಹೌದು ಇಂದು ನಾಡಿಗೆ ನಾಡೇ ಕನ್ನಡ ನಾಡಿನ ಅಮೂಲ್ಯ ರತ್ನವನ್ನು ಕಳೆದುಕೊಂಡು ಮನಸ್ಸಿನಲ್ಲಿ ಹೇಳಿಕೊಳ್ಳಲಾಗದ ನೋವನ್ನು ಸಂಕಟವನ್ನು ಅನುಭವಿಸುತ್ತಿದೆ.. ಹೌದು ಪುನೀತ್ ರಾಜ್ ಕುಮಾರ್ ಕೇವಲ ನಲವತ್ತಾರು ವರ್ಷಕ್ಕೆ ಇಹಲೋಕ ತ್ಯಜಿಸಿದ್ದು ದೇವರು ಸಹ ತಪ್ಪು ಮಾಡುವನೆಂಬ ಮಾತು ಸತ್ಯವಾಗಿ ಹೋಯ್ತು.. ಅಂತಹ ಒಳ್ಳೆಯ ಮನುಷ್ಯನನ್ನು ಕಳೆದುಕೊಂಡು ನಾವುಗಳೇ ಇಷ್ಟು ಸಂಕಟ ಪಡುತ್ತಿರುವಾಗ ಪುನೀತ್ ಅವರ ಕುಟುಂಬ ಅದರಲ್ಲೂ ಅವರ ಮಡದಿ ಅಶ್ವಿನಿ ಅವರು ಹಾಗೂ ಆ ಎರಡು ಹೆಣ್ಣು ಮಕ್ಕಳು ಈ ಅಚಾನಕ್ ಘಟನೆಯಿಂದ ಅನುಭವಿಸುತ್ತಿರುವ ನೋವು ಯಾವ ಮಟ್ಟದ್ದು ಎಂದು ಊಹಿಸಲು ಸಹ ಅಸಾಧ್ಯವೆನ್ನಬಹುದು..

ಹೌದು ಬೆಳಿಗ್ಗೆ ಜೊತೆಗೇ ಇದ್ದ ಗಂಡ ಕೆಲವೇ ಘಂಟೆಗಳಲ್ಲಿ ಇಲ್ಲವೆಂದು ಆ ಮಡದಿಯ ಜೀವ ಹೇಗೆ ತಾನೆ ಅರಗಿಸಿಕೊಳ್ಳುವುದು.. ಜನರೇ ಇಷ್ಟೊಂದು ಮೆಚ್ಚಿಕೊಂಡ ಅಪ್ಪುವನ್ನು ಅವರ ಪತ್ನಿ ಇನ್ನೆಷ್ಟು ಪ್ರೀತಿಸುತ್ತಿದ್ದಿರಬಹುದು.. ಇಷ್ಟು ಸಣ್ಣ ವಯಸ್ಸಿಗೆ ಪ್ರೀತಿಸುವ ಜೀವವನ್ನು ಕಳೆದುಕೊಂಡ ಅವರ ಮನಸ್ಸು ಹೇಗಾಗಿರಬಹುದು.. ಬಹುಶಃ ಊಹಿಸಲು ಸಹ ಅಸಾಧ್ಯ.. ಆದರೂ ಸಹ ಇಂತಹ ನೋವಿನ ಸಮಯದಲ್ಲಿಯೂ ಸಹ ಪುನೀತ್ ಅವರ ಪತ್ನಿ ಅಶ್ವಿನಿ ಅವರು ತೆಗೆದುಕೊಂಡಿರುವ ನಿರ್ಧಾರ ಮಾತ್ರ ಆಶ್ಚರ್ಯವನ್ನುಂಟು ಮಾಡುತ್ತಿದೆ.. ಹೌದು ಕೊನೆಯ ಕ್ಷಣದಲ್ಲಿ ಅಶ್ವಿನಿ ಪುನೀತ್ ಅವರು ಮುಖ್ಯವಾದ ನಿರ್ಧಾರವೊಂದನ್ನು ಬದಲಿಸಿದ್ದಾರೆ.. ಹೌದು ಪುನೀತ್ ಅವರು ನಟ ಮಾತ್ರವಲ್ಲ.. ರಾಜ್ ಕುಮಾರ್ ಅವರಂತೆಯೇ ನಾಡಿಗೆ ಯುವ ಜನತೆಗೆ ಮಾದರಿಯಾಗಿ ಬದುಕಿದವರು.. ನಟನಾಗಿ ಮಾತ್ರವಲ್ಲದೇ ವ್ಯಕ್ತಿಯಾಗಿ ತಮ್ಮ ವ್ಯಕ್ತಿತ್ವದ ಮೂಲಕ ಸ್ಪೂರ್ತಿಯಾಗಿದ್ದವರು. ಅಂತಹ ನಟನಿಗೆ ಗೌರವ ಸಲ್ಲಿಸಬೇಕಾದದ್ದು ಸರ್ಕಾರದ ಕರ್ತವ್ಯವೂ ಹೌದಾಗಿತ್ತು..

ಅದೇ ಕಾರಣಕ್ಕೆ ಪುನೀತ್ ರಾಜ್ ಕುಮಾರ್ ಅವರ ಅಂತಿಮ ಸಂಸ್ಕಾರ ನಡೆಸಲು ಕಂಠೀರವ ಸ್ಟುಡಿಯೋದಲ್ಲಿ ಅವಕಾಶವನ್ನು ಮಾಡಿಕೊಡಲಾಗಿತ್ತು.. ಈ ಬಗ್ಗೆ ಖುದ್ದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರೂ ಸಹ ತಿಳಿಸಿದ್ದರು.. ಕುಟುಂಬದವರಿಗೆ ಒಪ್ಪಿಗೆ ಇದ್ದರೆ ಕಂಠೀರವ ಸ್ಟುಡಿಯೋದಲ್ಲಿ ರಾಜ್ ಕುಮಾರ್ ಅವರ ಪಕ್ಕದಲ್ಲಿಯೇ ಅಂತಿಮ ಸಂಸ್ಕಾರ ಮಾಡಬಹುದು ಎಂದು ತಿಳಿಸಿದ್ದರು.. ಆದರೆ ಅಶ್ವಿನಿ ಅವರು ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.. ಹೌದು ಇಂತಹ ಸಮಯದಲ್ಲಿಯೂ ದೊಡ್ಮನೆಯ ಸೊಸೆಯಾಗಿ ತೆಗೆದುಕೊಂಡ ನಿರ್ಧಾರ ಅವರ ದೊಡ್ಡತನವನ್ನು ತೋರುತ್ತಿದೆ.. ಹೌದು ಕಂಠೀರವ ಸ್ಟುಡಿಯೋದಲ್ಲಿ ಅವಕಾಶ ಮಾಡಿಕೊಟ್ಟದಕ್ಕೆ ಧನ್ಯವಾದಗಳು..

ಆದರೆ ಪುನೀತ್ ಅವರ ಅಂತಿಮ ಸಂಸ್ಕಾರವನ್ನು ಅವರ ತೋಟದಲ್ಲಿಯೇ ನೆರವೇರಿಸಲು ನಿರ್ಧರಿಸಿದ್ದಾರೆ.. ಹೌದು ಮುಂದೆ ಪುನೀತ್ ಅವರಿಗೆ ಅಂತಿಮ ಸಂಸ್ಕಾರಕ್ಕೆ ಜಾಗ ಕೊಟ್ಟದ್ದಕ್ಕೆ ಒಂದು ಮಾತು ಬರಬಾರದೆಂದು ನಿರ್ಧರಿಸಿ ತಮ್ಮ ತೋಟದಲ್ಲಿಯೇ ಅಂತಿಮ ಸಂಸ್ಕಾರ ನೆರವೇರಿಸಲು ನಿರ್ಧಾರ ಮಾಡಿದ್ದಾರೆ.. ಹೌದು ರಾಮನಗರದಲ್ಲಿನ ಶೇಷಗಿರಿಹಳ್ಳಿ ಎಂಬ ಗ್ರಾಮದಲ್ಲಿ ಪುನೀತ್ ಅವರ ಫಾರ್ಮ್ ಹೌಸ್ ಇದೆ.. ಅದೇ ಫಾರ್ಮ್ ಹೌಸ್ ನಲ್ಲಿ ಪುನೀತ್ ಅವರ ಅಂತಿಮ ಸಂಸ್ಕಾರ ಮಾಡಲು ಕುಟುಂಬ ನಿರ್ಧಾರ ಮಾಡಿದ್ದು ಅದಾಗಲೇ ರಾಮನಗರದ ಎಸ್ ಪಿ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳು ಫಾರ್ಮ್ ಹೌಸ್ ಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.. ಹೌದು ಪುನೀತ್ ಅವರ ದೊಡ್ಡ ಮಗಳು ಅಮೇರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದರು.. ಸಧ್ಯ ಅಪ್ಪನ ವಿಚಾರ ತಿಳಿದು ಅದಾಗಲೇ ಅಲ್ಲಿಂದ ಹೊರಟಿದ್ದಾರೆ ಎಂದು ತಿಳಿದುಬಂದಿದೆ..

ಇನ್ನು ಇಂದು ನಾಳೆ ಹಾಗೂ ಭಾನುವಾರ ಬೆಳಗ್ಗೆ ವರೆಗೂ ಕಂಠೀರವ ಸ್ಟೇಡಿಯಂ ನಲ್ಲಿ ಪುನೀತ್ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಸಾರ್ವಜನಿಕರು ಅಭಿಮಾನಿಗಳು ಅಂತಿಮ ದರ್ಶನ ಪಡೆಯಬಹುದು.. ಭಾನುವಾರ ಮಧ್ಯಾಹ್ನದ ನಂತರ ರಾಮಗರದ ಶೇಷಗಿರಿಹಳ್ಳಿಯ ಫಾರ್ಮ್ ಹೌಸ್ ನಲ್ಲಿ ಪುನೀತ್ ಅವರ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ತಿಳಿದು ಬಂದಿದೆ.. ಮೊನ್ನೆಯಷ್ಟೇ ಭಜರಂಗಿ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಯಶ್ ಹಾಗೂ ಶಿವಣ್ಣನ ಜೊತೆ ಅಪ್ಪು ಡ್ಯಾನ್ಸ್ ಎಂದು ಬರೆದ ಇದೇ ಕೈಗಳು ಇಂದು ಅಪ್ಪುವಿನ ಅಂತ್ಯ ಸಂಸ್ಕಾರ ಎಂದು ಬರೆಯಬೇಕಿದ್ದು ನಿಜಕ್ಕೂ ಬೇಗ ಹೋದ ನಿಮ್ಮದು ದುರ್ಧೈವವಲ್ಲ.. ನಿಮ್ಮಂತ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡ ನಮ್ಮದು ದುರಾದೃಷ್ಟ.. ದಯವಿಟ್ಟು ಮತ್ತೆ ಬಂದುಬಿಡಿ ಅಪ್ಪು ಸರ್.. ದಯವಿಟ್ಟು..‌ ದಯವಿಟ್ಟು ಬಂದುಬಿಡಿ.. “Updated : ಇದೀಗ ಬಂದ ಮಾಹಿತಿಯ ಪ್ರಕಾರ “ನೆಮ್ಮದಿಗಾಗಿ ಸದಾ ಅಪ್ಪು ವಾರಕ್ಕೊಮ್ಮೆಯಾದರೂ ತನ್ನ ಅಪ್ಪ ಅಮ್ಮನ ಬಳಿ ಹೋಗುತ್ತಿದ್ದರು.. ಅಲ್ಲಿಯೇ ಸಾಕಷ್ಟು ಸಮಯ ಕಳೆದು ಬರುತ್ತಿದ್ದರು.. ಅಪ್ಪ ಅಮ್ಮನ ಬಳಿ ಹೋದರೆ ನನಗೇ ಏನೋ ಒಂದು ರೀತಿ ನೆಮ್ಮದಿ ಸಿಗುತ್ತದೆ ಎನ್ನುತ್ತಿದ್ದರು.. ಆ ಕಾರಣಕ್ಕಾಗಿ ಇದೀಗ ಅಪ್ಪು ಅವರೂ ತನ್ನ ಅಪ್ಪ ಅಮ್ಮನ ಜೊತೆಯೇ ನೆಮ್ಮದಿಯಾಗಿ ನಿದ್ರಿಸಲೆಂದು ಅದೇ ಜಾಗದಲ್ಲಿ ಅಂದರೆ ಕಂಠೀರವ ಸ್ಟುಡಿಯೋದಲ್ಲಿಯೇ ಅಂತಿಮ ಸಂಸ್ಕಾರಕ್ಕೆ ನಿರ್ಧಾರ ಮಾಡಲಾಗಿದ್ದು.. ಈ ಬಗ್ಗೆ ಬೆಂಗಳೂರಿನ ಕಮಿಷನರ್ ಅಧಿಕೃತವಾಗಿ ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ತಿಳಿಸಿದ್ದಾರೆ..”