ಮಹತ್ವದ ಘೋಷಣೆ ಮಾಡಿದ ಅಶ್ವಿನಿ ಪುನೀತ್.. ಇದು ನಿಜಕ್ಕೂ ನಮಗೆ ಬೇಕಾಗಿರೋದು.. ಹ್ಯಾಟ್ಸ್ ಆಫ್ ಅಶ್ವಿನಿ ಅವರಿಗೆ..

0 views

ಅಶ್ವಿನಿ ಪುನೀತ್ ನಿಜಕ್ಕೂ ಪ್ರಬುದ್ಧತೆ ಎಂದರೆ ಏನು ಅಂತ ತಿಳಿಬೇಕು ಎಂದರೆ ಈ ಹೆಣ್ಣು‌ಮಗಳು ಕಳೆದ ಇಪ್ಪತ್ತೈದು ದಿನಗಳಿಂದ ನಡೆದುಕೊಂಡ ರೀತಿ‌ ನೋಡಿದ್ರೆ ಸಾಕು.. ಅರ್ಥವಾಗುತ್ತದೆ.. ದೊಡ್ಡತನ ದೊಡ್ಡಗುಣ ಅನ್ನೋದು ಪುನೀತ್ ಅವರಿಗೆ ಮಾತ್ರವಲ್ಲ ಅಶ್ವಿನಿ ಅವರಿಗೂ ಸಹ ಅಷ್ಟೇ ಇದೆ.. ಬಹುಶಃ ಇಬ್ಬರೂ ಸಹ ಇಷ್ಟೊಂದು ಒಳ್ಳೆಯ ಗುಣ ಹೊಂದಿದ್ದಕ್ಕೋ ಏನೋ ಭಗವಂತ ಇಷ್ಟು ಬೇಗ ದೂರ ಮಾಡಿಬಿಟ್ಟ.. ಆದರೆ ಇದೀಗ ವಾಸ್ತವವನ್ನು ಅರಿತು ನೋವಿನ ಜೊತೆಗೆ ಮುನ್ನಡೆದ ಅಶ್ವಿನಿ ಅವರು ಇಂದು ಬಹುದೊಡ್ಡ ಘೋಷಣೆಯೊಂದನ್ನು‌ ಮಾಡಿದ್ದಾರೆ.. ಹೌದು ಈ ಹೆಣ್ಣು ಮಗಳ ಬೆಂಬಲಕ್ಕೆ ನಿಲ್ಲಬೇಕಾದದ್ದು ನಮ್ಮೆಲ್ಲರ ಕರ್ತವ್ಯವೂ ಹೌದು..

ಪುನೀತ್ ರಾಜ್ ಕುನಾರ್ ಅವರ ಬಹುದೊಡ್ಡ ಕನಸೊಂದನ್ನು ಇದೀಗ ಅಶ್ವಿನಿ ಅವರು ನಮಸು ಮಾಡಲು ಮುಂದಾಗಿದ್ದು ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.. ಹೌದು ಅಪ್ಪು ಅವರು ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಕಂಡಿದ್ದರು.. ಅದರಲ್ಲಿಯೂ ನಮ್ಮ ನಾಡಿನ ಬಗ್ಗೆ ನಮ್ಮ ಸಿನಿಮಾರಂಗದ ಬಗ್ಗೆ ಏನೋ ಒಂದು ಮಾಡಬೇಕು ಅನ್ನುವ ಕನಸಿತ್ತು.. ಅದಕ್ಕಾಗಿಯೇ ಪಿ ಆರ್ ಕೆ ಪ್ರೊಡಕ್ಷನ್ಸ್ ತೆರೆದು ಹೊಸ ಹೊಸ ಕತೆ ಅದರಲ್ಲಿಯೂ ವಿಭಿನ್ನ ಕತಾ ಹಂದರವುಳ್ಳ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟು ಬೆಳೆಸುತ್ತಿದ್ದರು.. ಪುನೀತ್ ಅವರು ಇನ್ನೂ ಅನೇಕ ಕೆಲಸ ಮಾಡುವುದು ಬಾಕಿ ಇತ್ತು ಆದರೆ ವಿಧಿಯಾಕೋ ಕರುಣೆ ತೋರಲಿಲ್ಲ.. ವಿಧಿಯ ತಪ್ಪು ಲೆಕ್ಕಾಚಾರದಲ್ಲಿ ಅಪ್ಪು ನಮ್ಮನ್ನಗಲಿ ಹೋಗಬೇಕಾಯಿತು..

ಇನ್ನು ಅಪ್ಪು ಹೋಗುವ ಮೂರು ದಿನದ ಮುನ್ನವಷ್ಟೇ ಇದೇ ನವೆಂಬರ್ ಒಂದನೇ ತಾರೀಕು ದೊಡ್ಡದೊಂದು ಕನಸನ್ನು ಅನಾವರಣ ಮಾಡುವ ಬಗ್ಗೆ ತಿಳಿಸಿದ್ದರು.. ಈ ಬಗ್ಗೆ ಖುದ್ದು ಅವರೇ ಪೋಸ್ಟ್ ಮಾಡಿದಂತೆ “ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ.” ಎಂದು ಪೋಸ್ಟ್ ಮಾಡಿ ತಿಳಿಸಿದ್ದರು.. ಆದರೆ ಅವರಿಗೇ ತಿಳಿಯಲಿಲ್ಲ ಅವರು ಹೋಗುವ ಸಮಯವನ್ನು ದೇವರು ತಂದುಬಿಟ್ಟಿದ್ದನೆಂದು.. ನಮಗೆಲ್ಲಾ ನೋವಿನ ಸಮಯ ಬಂದುಬಿಟ್ಟಿತು.. ಅಪ್ಪು ಅವರ ಕನಸು ಕನಸಾಗಿಯೇ ಉಳಿದಿತ್ತು..

ಆದರೀಗ ಅಶ್ವಿನಿ ಅವರು ಅಪ್ಪು ಇದ್ದಾಗ ಏನೇನು ಕೆಲಸ ಮಾಡುತ್ತಿದ್ದರೋ ಆ ಎಲ್ಲಾ ಕೆಲಸಗಳನ್ನು ಮುಂದುವರೆಸೋ‌ ನಿರ್ಧಾರ ಮಾಡಿ ಕೆಲವೇ ದಿನದ ಹಿಂದೆ ಪಿ ಆರ್ ಕೆ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗುತ್ತಿದ್ದ ಸಿನಿಮಾ ಕೆಲಸಗಳನ್ನು ಪುನರಾರಂಭ ಮಾಡಿದ್ದರು.. ಇದೀಗ ಅಪ್ಪು ಹೋಗುವ ಎರಡು ದಿನ ಮುನ್ನ ಹೇಳಿದ್ದ ಆ ದೊಡ್ಡ ಕನಸನ್ನು ಇದೀಗ ಅಶ್ವಿನಿ ಅವರು ನಮಸು ಮಾಡುತ್ತಿದ್ದಾರೆ.. ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿರುವ ಅಶ್ವಿನಿ ಅವರು “ಅಪ್ಪು ಅವರ ಕನಸೊಂದು ನವೆಂಬರ್ ಒಂದು ೨೦೨೧ ರಂದು ಬೆಳಕು ಕಾಣಬೇಕಿತ್ತು.. ಆದರೆ ಆ ಕನಸಿಗಿದು ಅಲ್ಪ ವಿರಾಮವಷ್ಟೇ.. ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು.. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ.. ಎಂದು ಬರೆದು ಪೋಸ್ಟ್ ಮಾಡಿದ್ದು.. ಅಶ್ವಿನಿ ಪುನೀತ್ ಅವರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..

ಇನ್ನು ನಮ್ಮಗಳ ಕೆಲಸವೊಂದೇ.. ಅಪ್ಪು ಅವರು ನಮ್ಮ ನಾಡಿನ ಬಗ್ಗೆ ಕಂಡಿದ್ದ ಕನಸನ್ನು ನನಸು ಮಾಡಲು ಮುಂದಾಗಿರುವ ಅಶ್ವಿನಿ ಅವರಿಗೆ ನಮ್ಮಗಳ ಬೆಂಬಲ ತಿಳಿಸುವುದು.. ಹೌದು ಅಶ್ವಿನಿ ಅವರ ಎಲ್ಲಾ ಕೆಲಸಗಳಿಗೆ ಪ್ರೋತ್ಸಾಹ ನೀಡಿ ಜೊತೆಯಾಗಿ ನಿಲ್ಲೋಣ.. ಮೇಲೆಲ್ಲೋ ನಿಂತು ತನ್ನ ಕನಸುಗಳು ನನಸಾಗಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುವುದನ್ನು ನೋಡಿ ಅಪ್ಪು ಸಂತೋಷಪಡುವಂತಾಗಲಿ.. ಶುಭವಾಗಲಿ ಅಶ್ವಿನಿ ಮೇಡಂ.. ನಿಮ್ಮ ಜೊತೆ ಕರುನಾಡಿದೆ.. ಕೆಳಗಿನ ವIಡಿಯೋ ನೋಡಿ..