ತಂದೆಯ ಅಗಲಿಕೆಯ ಬೆನ್ನಲ್ಲೇ ಅಶ್ವಿನಿ ಪುನೀತ್ ರಿಂದ ಮಹತ್ವದ ನಿರ್ಧಾರ..

0 views

ಪುನೀತ್ ರಾಜ್ ಕುಮಾರ್.. ಕನ್ನಡ ನಾಡಿನ ಮನೆ ಮಗ ಅಪ್ಪುವಿನ ಅಗಲಿಕೆಯ ನೋವನ್ನು ಇನ್ನೂ ಸಹ ಮರೆಯಲಾಗುತ್ತಿಲ್ಲ‌.. ಅವರಿಲ್ಲವೆಂಬ ಸತ್ಯವನ್ನೇ ಇನ್ನೂ ಅನೇಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.. ಇನ್ನು ಅತ್ತ ಇಪ್ಪತ್ತು ವರ್ಷಗಳ ಕಾಲ ಜೊತೆಯಾಗಿದ್ದ ಜೊತೆಯಾಗಿ ಜೀವನ ನಡೆಸಿದ ಅಶ್ವಿನಿ ಅವರ ಪರಿಸ್ಥಿತಿ ಹೇಳತೀರಲಾಗದು.. ಇನ್ನೂ ಅದೇ ನೋವಿನಲ್ಲಿರುವ ಸಂದರ್ಭದಲ್ಲಿ ಇದೀಗ ಅಶ್ವಿನಿ ಅವರು ತನ್ನ ತಂದೆಯನ್ನೂ ಸಹ ಕಳೆದುಕೊಂಡಿದ್ದು ನಿಜಕ್ಕೂ ಅದಾಗಲೇ ನೊಂದು ಹೋದ ಮನಸ್ಸಿನ ಮೇಲೆ ಮತ್ತಷ್ಟು ನೋವು ನೀಡುವಂತಿದೆ.. ಆದರೆ ತಂದೆಯ ಅಗಲಿಕೆಯ ದಿನವೇ ಅಶ್ವಿನಿ ಪುನೀತ್ ಅವರು ಮಹತ್ವದ ನಿರ್ಧಾರವೊಂದನ್ನು ಮಾಡಿದ್ದು ನಿಜಕ್ಕೂ ಅವರ ದೊಡ್ಡಗುಣವನ್ನು ತೋರುವಂತಿದೆ..

ಹೌದು ಅಶ್ವಿನಿ ಅವರ ತಂದೆ ಮೂಲತಃ ಚಿಕ್ಕಮಗಳೂರಿನವರಾಗಿದ್ದು ಬೆಂಗಳೂರಿನಲ್ಲಿ ಬಿಬಿಎಂಪಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.. ಅವರಿಗೆ ಎಪ್ಪತ್ತೆಂಟು ವರ್ಷ ವಯಸ್ಸಾಗಿದೆ‌.. ಮಗಳೆಂದರೆ ಅಪಾರ ಪ್ರೀತಿ ಇದ್ದ ರೇವನಾಥ್ ಅವರು ಮಗಳು ಪುನೀತ್ ಅವರನ್ನು ಪ್ರೀತಿಸುತ್ತಿದ್ದ ವಿಚಾರ ತಿಳಿದು ಮಗಳ ಆಸೆಯಂತೆಯೇ ಪುನೀತ್ ಅವರಿಗೆ ಕೊಟ್ಟ ಮದುವೆ ಮಾಡಿದರು.. ಇತ್ತ ತಮ್ಮ ಕಣ್ಣೆದುರೆ ಅಳಿಯ ದೊಡ್ಡ ಸ್ಟಾರ್ ಆಗಿ ಬೆಳೆದರು.. ಪುನೀತ್ ಅವರನ್ನು ಮಗನಂತೆ ಕಾಣುತ್ತಿದ್ದ ರೇವನಾಥ್ ಅವರು ಪುನೀತ್ ಅವರ ಬಗ್ಗೆ ತಮ್ಮ ಸ್ನೇಹಿತರ ಬಳಿಯೆಲ್ಲಾ ಹೇಳಿಕೊಂಡು ಹೆಮ್ಮೆ ಪಡುತ್ತಿದ್ದ ವ್ಯಕ್ತಿ.. ಮಗಳಿಗೆ ಒಂದೊಳ್ಳೆ ಜೀವನ ಸಿಕ್ಕಿತ್ತೆಂದು ರೇವನಾಥ್ ಅವರು ಬಹಳ ಸಂತೋಷವಾಗಿದ್ದರು..

ಆದರೆ ಇದ್ದಕಿದ್ದ ಹಾಗೆ ಪುನೀತ್ ಅವರ ಅಗಲಿಕೆ ರೇವನಾಥ್ ಅವರನ್ನು ತೀವ್ರ ಒತ್ತಡಕ್ಕೆ ಒಳಗಾಗುವಂತೆ ಮಾಡಿಬಿಟ್ಟಿತು.. ಹೌದು ಮಗಳಿಗೆ ಚಿಕ್ಕ ವಯಸ್ಸಿಗೆ ಈ ರೀತಿಯಾಯಿತೆಂದು ಮಗನಂತೆ ಇದ್ದ ಪುನೀತ್ ರನ್ನು ಕಳೆದುಕೊಂಡು ರೇವನಾಥ್ ಅವರು ಕೊರಗುತ್ತಿದ್ದರಂತೆ.. ಸಾಕಷ್ಟು ಬಾರಿ ಈ ಬಗ್ಗೆಯೇ ಆಲೋಚಿಸಿ ಕಣ್ಣೀರಿಡುತ್ತಿದ್ದ ರೇವನಾಥ್ ಅವರು ಅದ್ಯಾಕೋ ಅಳಿಯನ ಜೊತೆಯೇ ಹೋಗುವ ನಿರ್ಧಾರ ಮಾಡಿಬಿಟ್ಟರು ಎನಿಸುತ್ತದೆ.. ನಿನ್ನೆ ರೇವನಾಥ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು..

ಆದರೆ ಕಾಲ ಮಿಂಚಿ ಹೋಗಿತ್ತು ರೇವನಾಥ್ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದು ಬಿಟ್ಟರು.. ಇತ್ತ ತನ್ನನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದ ಪತಿಯನ್ನು ಕಳೆದುಕೊಂಡ ನಾಲ್ಕೇ ತಿಂಗಳಲ್ಲಿ ಇತ್ತ ತನಗೆ ಬೆನ್ನೆಲುಬಾಗಿದ್ದ ತಂದೆಯನ್ನೂ ಸಹ ಅಶ್ವಿನಿ ಅವರು ಕಳೆದುಕೊಂಡದ್ದು ನಿಜಕ್ಕೂ ಸಂಕಟವನ್ನುಂಟು ಮಾಡುತ್ತದೆ.. ಮಗಳು ಸುಖದಿಂದ ಬಾಳಿದ್ದನ್ನು ನೋಡಿದ ಆ ತಂದೆಗೆ ಮಗಳು ಈ ರೀತಿ ನೋವಿನ ಜೊತೆಯೇ ಜೀವನ ನಡೆಸುವುದ ನೋಡಲಾಗದಾಯಿತು ಎನಿಸುತ್ತದೆ.. ಹೊರಟು ಬಿಟ್ಟರು‌‌‌.. ಇತ್ತ ಅಪ್ಪನ ಅಗಲಿಕೆಯ ನೋವಿನಲ್ಲಿಯೂ ಅಶ್ವಿನಿ ಅವರು ಮಹತ್ವದ ನಿರ್ಧಾರ ಮಾಡಿದ್ದಾರೆ..

ಹೌದು ಪುನೀತ್ ಅವರ ಕಣ್ಣುಗಳನ್ನು ದಾನ ಮಾಡಿದಂತೆಯೇ ತನ್ನ ತಂದೆಯ ಕಣ್ಣುಗಳನ್ನು ಸಹ ದಾನ ಮಾಡಲು ನಿರ್ಧರಿಸಿ ನಿನ್ನೆಯೇ ರೇವನಾಥ್ ಅವರ ಕಣ್ಣುಗಳನ್ನು ದಾನ ಮಾಡಲಾಗಿದ್ದು ಇಂದು ಅಥವಾ ನಾಳೆ ಅವಶ್ಯಕತೆ ಇರುವ ಮತ್ತಿಬ್ಬರಿಗೆ ಬೆಳಕು ನೀಡಲಾಗುವುದು‌‌.. ಅಂದು ಅಳಿಯನ ಕಣ್ಣುಗಳಿಂದ ನಾಲ್ಕು ಜನರಿಗೆ ಕಣ್ಣು ಕೊಟ್ಟು ಜೀವನವನ್ನು ಬೆಳಕಾಗಿಸಲಾಗಿತ್ತು.. ಇಂದು ತನ್ನ ತಂದೆಯ ಕಣ್ಣುಗಳನ್ನು ನೀಡುವ ನಿರ್ಧಾರ ಮಾಡುವ ಮೂಲಕ ಮತ್ತಿಬ್ಬರಿಗೆ ಬೆಳಕಾದರು..

ಸಾಮಾನ್ಯವಾಗಿ ನೋವಿಬಲ್ಲಿ ಇರುವಾಗ ಅದರಲ್ಲಿಯೂ ತಮ್ಮ ಜೀವನದ ಭಾಗವಾಗಿದ್ದ ವ್ಯಕ್ತಿಗಳನ್ನು ಕಳೆದುಕೊಂಡಾಗ ನಮ್ಮ ನೋವುಗಳೇ ನಮಗೆ ಹೆಚ್ಚಾಗಿ ಕಾಣುತ್ತದೆ.. ಬೇರೆ ಯಾವುದರ ಬಗ್ಗೆಯೂ ಆಲೊಚಿಸಲು ಸಹ ಮನಸ್ಸು ಮಾಡುವುದಿಲ್ಲ.. ಆದರೆ ಅಶ್ವಿನಿ ಅವರು ಇಂತಹ ನೋವಿನ ಸಮಯದಲ್ಲಿಯೂ ಅವರುಗಳಿಂದ ಮತ್ತೊಬ್ಬರ ಜೀವನಕ್ಕೆ ಬೆಳಕಗಾಲಿ ಎಂದು ಆಲೋಚಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.. ಇನ್ನು ಮುಂದಾದರೆ ಆ ಹೆಣ್ಣು ಮಗಳಿಗೆ ಯಾವುದೇ ನೋವು ಬಾರದಿರಲಿ.. ಈ ನೊವುಗಳನ್ನು ತಡೆದು ಮಕ್ಕಳಿಗಾಗಿ ಗಟ್ಟಿಯಾಗಿ ನಿಲ್ಲುವ ಶಕ್ತಿ ಅಶ್ವಿನಿ ಅವರಿಗೆ ನೀಡಲಿ.. ಕಷ್ಟಗಳು ಇಲ್ಲಿಗೆ ಮುಕ್ತಾಯವಾಗುವಂತಾಗಲಿ..