ಇಷ್ಟು ದಿನ ಅತ್ತಿಗೆ ಮೈದುನ ಆಗಿದ್ದವರು ಈಗ ಗಂಡ ಹೆಂಡತಿ ಆದರು.. ಶಾಕ್ ಆದ ಜನ ಮಾಡಿದ್ದೇನು ಗೊತ್ತಾ.. ಇವರಿಬ್ಬರು ನಿಜಕ್ಕೂ ಯಾರು ಗೊತ್ತಾ..

0 views

ಕೆಲವೊಂದು ಸಂಬಂಧಗಳೇ ಹಾಗೆ ಒಮ್ಮೆ ನಮ್ಮ ಮನಸ್ಸಿನಲ್ಲಿ ಯಾರನ್ನೋ ನೋಡಿ ಏನಾದರು ಅಂದುಕೊಂಡರೆ ಅದನ್ನು ಮನಸ್ಸಿನಿಂದ ತೆಗೆಯೋದು ಬಹಳ ಕಷ್ಟ.. ಅದೇ ರೀತಿ ಜನರು ಇಷ್ಟು ದಿನ ಅತ್ತಿಗೆ ಮೈದುನ ಎಂದುಕೊಂಡಿದ್ದವರು ಇದೀಗ ಗಂಡ ಹೆಂಡತಿ ಎಂಬ ವಿಚಾರ ತಿಳಿದು ಕೊಂಚ ಶಾಕ್ ಆಗಿದ್ದಾರೆನ್ನಬಹುದು‌.. ಹೌದು ಇಲ್ಲೊಂದು ಜೋಡಿ ಇಷ್ಟು ದಿನ ಅತ್ತಿಗೆ ಮೈದುನನಾಗಿ ಕಾಣಿಸಿಕೊಂಡು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸತಿಪತಿಗಳಾಗಿದ್ದಾರೆ..

ಹೌದು ನಿಜ ಜೀವನದಲ್ಲಿ ಮಾತ್ರವಲ್ಲದೇ ತೆರೆ ಮೇಲೆಯೂ ಅಷ್ಟೇ ಯಾರನ್ನಾದರೂ ಯಾವುದಾದರು ಸಂಬಂಧದಲ್ಲಿ ನೋಡಿದರೆ ಮತ್ತೆ ಅದರಿಂದ ಹೊರ ಬಂದು ಅವರನ್ನು ಮತ್ತೊಂದು ಸಂಬಂಧದಲ್ಲಿ ನೋಡುವುದು ಬಹಳ ಕಷ್ಟ.. ಆದರೆ ಈಗಾಗಲೇ ಸಾಕಷ್ಟು ಮಂದಿ ತೆರೆ ಮೇಲೆ ಕಾಣಿಸಿಕೊಂಡದ್ದೇ ಒಂದು ಆದರೆ ನಿಜ ಜೀವನದಲ್ಲಿ ಅವರ ಸಂಬಂಧವೇ ಬೇರೆಯಾಗಿರುತ್ತದೆ.‌

ಹೌದು ಇದೀಗ ಕಿರುತೆರೆಯ ಧಾರಾವಾಹಿ ಯೊಂದರಲ್ಲಿ ತೆರೆ ಮೇಲೆ ಅತ್ತಿಗೆ ಮೈದುನನಾಗಿ ಅಭಿನಯಿಸುತ್ತಿರುವ ಜೋಡಿ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಹೌದು ಈ ರೀತಿಯ ಘಟನೆ ನಡೆಯುತ್ತಿರುವುದು ಹೊಸದೇನು ಅಲ್ಲ.. ಈ ಹಿಂದೆ ಧಾರಾವಾಹಿಯಲ್ಲಿ ಅಣ್ಣ ತಂಗಿ ಯಾಗಿ ಅಭಿನಯಿಸಿದ್ದ ರಾಧಿಕಾ ಪಂಡಿತ್ ಹಾಗೂ ಯಶ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಮ್ ಅತ್ತ ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಅಣ್ಣ ತಂಗಿ ಆಗಿದ್ದವರು ಸಹ ಮದುವೆಯಾದರು.. ಇನ್ನೂ ಬಿಗ್ ಬಾಸ್ ನಲ್ಲಿ ನೀನು ನನ್ನ ತಂಗಿ ರೀತಿ ಎಂದವರೇ ಅದ್ಧೂರಿಯಾಗಿ ಪ್ರೇಮ ವಿವಾಹವಾದರು.. ಆದರೆ ಆ ಜೋಡಿಗಳೆಲ್ಲಾ ಆ ರೀತಿ ಅಭಿನಯಿಸಿ ಕೆಲ ವರ್ಷಗಳ ಬಳಿಕ ಮದುವೆಯಾದರು.. ಜನರ ಮನಸ್ಸಿನಲ್ಲಿ ಆ ಪಾತ್ರಗಳು ಮರೆತು ಹೋಗಿದ್ದವು..

ಆದರೆ ಈ ಜೋಡಿ ಸದ್ಯ ಈಗ ಪ್ರಸಾರ ವಾಗುತ್ತಿರುವ ಧಾರಾವಾಹಿಯಲ್ಲಿ ಅತ್ತಿಗೆ ಮೈದುನ ನಾಗಿ ಅಭಿನಯಿಸುತ್ತಿದ್ದಾರೆ.. ಗುಮ್ ಹೈ ಕಿಸಿ ಕಿ ಪ್ಯಾರ್ ಮೇ ಧಾರಾವಾಹಿಯಲ್ಲಿ ಅತ್ತಿಗೆ ಮೈದುನ ನಾಗಿರುವ ಐಶ್ವರ್ಯಾ ಶರ್ಮಾ ಹಾಗೂ ನೀಲ್ ಭಟ್ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ದೊಡ್ಡ ಸುದ್ದಿಯೂ ಆಗಿದೆ. ಹೌದು ಧಾರಾವಾಹಿ ಪ್ರಸಾರ ನಿಲ್ಲಿಸಿದ ಕೆಲ ವರ್ಷಗಳ ನಂತರ ಮದುವೆಯಾಗುತ್ತಿದ್ದರೆ ಅಷ್ಟೇನು ಪ್ರೇಕ್ಷಕರ ಮೇಲೆ ಪರಿಣಾಮ ಬೀರುತ್ತಿರಲಿಲ್ಲ.. ಆದರೆ ಅಲ್ಲಿ ಅತ್ತಿಗೆ ಮೈದುನನ ಬಾಂಧವ್ಯದಲ್ಲಿ ನೋಡಿ ಈಗ ನಿಶ್ಚಿತಾರ್ಥ ಮಾಡಿಕೊಂಡು ಆಪ್ತವಾಗಿ ಕಾಣಿಸಿಕೊಳ್ಳುವ ಫೋಟೋಗಳನ್ನು ನೋಡಲಾಗುತ್ತಿಲ್ಲ ಎಂದು ಜನರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ..

ಸಧ್ಯ ಐಶ್ವರ್ಯಾ ಶರ್ಮಾ ಹಾಗೂ ನೀಲ್ ಭಟ್ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸಧ್ಯದಲ್ಲಿಯೇ ಮದುವೆಯನ್ನೂ ಸಹ ಆಗಲಿದ್ದಾರೆ‌‌.. ಇವರ ಈ ನಡೆಯಿಂದ ಬೇಸರ ಪಟ್ಟುಕೊಂಡ ಧಾರಾವಾಹಿಯ ಪ್ರೇಕ್ಷಕರು ಈ ಧಾರಾವಾಹಿಯನ್ನು ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ.. ಹೌದು ವಾಹಿನಿಗೂ ಸಹ ಕರೆ ಮಾಡಿ ಈ ಧಾರಾವಾಹಿ ನಿಲ್ಲಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.. ಅದು ಅಭಿನಯವೇ ಆದರೂ ಅದು ತೆರೆ ಮೇಲೆ ಮಾತ್ರ ಕಾಣಿಸಿಕೊಂಡರೂ ಸಹ ಪ್ರೇಕ್ಷಕರು ಧಾರಾವಾಹಿಗಳನ್ನು ತಮ್ಮ ತಮ್ಮ ಮನೆಗಳ ಕತೆ ಎಂದುಕೊಂಡು ನೋಡುವುದರಿಂದ ಅವರ ಮನಸ್ದಿನ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ.. ಇವರಿಬ್ಬರು ಧಾರಾವಾಹಿಯಿಂದ ಹೊರ ನಡೆದರೇ ಒಳ್ಳೆಯದು ಎನ್ನುತ್ತಿದ್ದಾರೆ ನೆಟ್ಟಿಗರು..