ಬಿಗ್‌ ಬಾಸ್‌ ಗೆ ಬಂದಿರುವ ಈ ಪವಿ ಪೂವಮ್ಮ ಮತ್ತು ಅವಿನಾಶ್‌ ಶೆಟ್ಟಿ ನಿಜಕ್ಕೂ ಯಾರು ಗೊತ್ತಾ?

0 views

ಬಿಗ್ ಬಾಸ್ ಸೀಸನ್ ಹತ್ತರಲ್ಲಿ ನಿನ್ನೆಯಷ್ಟೇ ಎರಡೆರೆಡು ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದು ಮನೆಯೊಳಗೆ ಬಂದ ಅವಿನಾಶ್ ಶೆಟ್ಟಿ ಹಾಗೂ ಪವಿ ಪೂವಪ್ಪ ಬಗ್ಗೆ ಪ್ರೇಕ್ಷಕರಿಗೆ ಒಂದಷ್ಟು ಕುತೂಹಲ ಇದ್ದೇ ಇದೆ.. ಹೌದು ಬಿಗ್ ಬಾಸ್ ಮನೆಗೆ ಐವತ್ತನೇ ದಿನ ಅತ್ತ ನೀತು ಎಲಿಮಿನೇಟ್ ಆಗಿ ಹೊರ ಹೋದರೆ ಇತ್ತ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ಗ್ರ್ಯಾಂಡ್ ಆಗಿ ಎಂಟ್ರಿ ನೀಡಿದ್ದಾರೆ. ಬಿಗ್ ಬಾಸ್ ಮನೆಗೆ ಬಂದ ಕೂಡಲೇ ಆನೆಗೆ ಮಾವುತ ಬೇಕು ಅಂತ ಬಂದಿದ್ದೇನೆ ಎಂದು ವಿನಯ್ ಗೆ ಟಕ್ಕರ್ ಕೊಟ್ಟಿದ್ದು ಅತ್ತ ಪವಿ ಪೂವಪ್ಪ ಕೂಡ ಮನೆಯಲ್ಲಿ ಯಾರ್ಯಾರು ಹೇಗೇಗೆ ಬೆನ್ನ ಹಿಂದೆ ಮಾತನಾಡಿಕೊಳ್ತಾರೆ ಎಂಬುದನ್ನ ಹೇಳುವ ಮೂಲಕ ಅದಾಗಲೇ ಆಟವನ್ನು ಶುರು ಮಾಡಿದ್ದಾರೆನ್ನಬಹುದು.. ಇನ್ನು ಬಂದ ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆದ ಇಬ್ಬರು ಸದಸ್ಯರನ್ನು ಉಳಿಸುವ ಅಧಿಕಾರ ನೀಡಿದ್ದು ಪವಿ ತುಕಾಲಿ ಅವರನ್ನು ಉಳಿಸಿದರೆ ಅತ್ತ ಅವಿನಾಶ್ ಸಿರಿ ಅವರನ್ನು ನಾಮಿನೇಷನ್ ನಿಂದ ಸೇವ್ ಮಾಡಿದರು.. ಇತ್ತ ಬಿಗ್ ಬಾಸ್ ಮನೆಯ ಹಳೆಯ ಸದಸ್ಯರಿಗೆ ಹೊಸಬರಿಂದ ಕೊಂಚ ಕಿರಿಕಿರಿ ಆಗಿದ್ದುಂಟು.. ವಿನಯ್ ಕೂಡ ಟಕ್ಕರ್ ನೀಡುವ ರೀತಿ ಮಾತನಾಡಿದ್ದು ತಮಗೊಬ್ಬ ಪ್ರಬಲ ಸ್ಪರ್ಧಿ ಬಂದಿರುವ ಹಿಂಜರಿಕೆ ಮುಖದಲ್ಲಿ ನೋಡಬಹುದಾಗಿತ್ತು.. ವಿನಯ್ ಮಾತ್ರವಲ್ಲ ಮನೆಯ ಎಲ್ಲಾ ಸದ್ಸ್ಯರಿಗೂ ಕೊಂಚ ಇರಿಸು ಮುರಿಸು ಆಗಿದ್ದುಂಟು.. ಕಾರಣ ಈ ಇಬ್ಬರೂ ವೈಲ್ಡ್ ಕಾರ್ಡ್ ಎಂಟ್ರಿಗಳು ಅದಾಗಲೇ ಟಿವಿಯಲ್ಲಿ ಐವತ್ತು ದಿನಗಳ ಕಾರ್ಯಕ್ರಮವನ್ನು ನೋಡಿದ್ದು ಯಾರ್ಯಾರು ಹೇಗೇಗೆ ಎಂಬುದು ಅರ್ಥವಾಗಿದೆ.ಮ್ ಜೊತೆಗೆ ಹೊರಗೆ ಜನರು ಯಾರನ್ನು ಸಪೋರ್ಟ್ ಮಾಡ್ತಾ ಇದ್ದಾರೆ ಯಾರನ್ನು ಟ್ರೋಲ್ ಮಾಡುತ್ತಿದ್ದಾರೆ ಎಂಬ ಎಲ್ಲಾ ವಿಚಾರಗಳು ತಿಳಿದಿದ್ದು ಸರಿಯಾದ ಆಟ ಆಡಿದರೆ ಬಿಗ್ ಬಾಸ್ ಗೆಲ್ಲದಿದ್ದರೂ ಕೊನೆವರೆಗೂ ಉಳಿಯಬಹುದಾಗಿದೆ.. ಇನ್ನು ವೈಲ್ಡ್ ಕಾರ್ಡ್ ಮೂಲಕ ಬಂದ ಈ ಇಬ್ಬರು ನಿಜಕ್ಕೂ ಯಾರು.. ಎಂಬ ವಿಚಾರಕ್ಕೆ ಬರುವುದಾದರೆ.‌ ಕೆಳಗಿನ ವೀಡಿಯೋ ನೋಡಿ..

ಮೊದಲನೆಯದಾಗಿ ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ಆಸ್ತಿಕ್ ಅವಿನಾಶ್ ಶೆಟ್ಟಿ ಅವರ ವಿಚಾರಕ್ಕೆ ಬರುವುದಾದರೆ ಅವಿನಾಶ್ ಶೆಟ್ಟಿ ಸ್ಯಾಂಡಲ್ವುಡ್ ನಲ್ಲಿ ನಟನಾಗಿ ಕಾಣಿಸಿಕೊಂಡಿದ್ದು ಶ್ರೀಮಂತ ಸಿನಿಮಾದಲ್ಲಿ ಹಾಗೂ ಧನಂಜಯ್ ಅವರ ಜೊತೆಯೂ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.. ಅಷ್ಟೇ ಅಲ್ಲದೇ ತುಳು ಚಿತ್ರರಂಗದಲ್ಲಿ ನಾಯಕನಟನಾಗಿ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದು ಅಲ್ಲಿನ ಭಾಗದಲ್ಲಿ ಸ್ಟಾರ್ ನಟ ಎಂದರೂ ತಪ್ಪಾಗಲಾರದು.. ನಟನಾಗಿ ಮಾತ್ರವಲ್ಲದೇ ಡ್ಯಾನ್ಸರ್ ಆಗಿಯೂ ಅವಿನಾಶ್ ಶೆಟ್ಟಿ ಫೇಮಸ್ ಎನ್ನಬಹುದು.. ಇನ್ನು ನಟನೆ ಡ್ಯಾನ್ಸ್ ಜೊತೆಗೆ ಮಾಡೆಲ್ ಆಗಿಯೂ ಅವಿನಾಶ್ ಗುರುತಿಸಿಕೊಂಡು ಕೆಲ ಜಾಹಿರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಇವರೊಬ್ಬ ಕ್ರೀಡಾಪಟುವಾಗಿದ್ದು ಕ್ರಿಕೆಟರ್ ಆಗಿ ಕ್ಲಬ್ ಗಳಿಗೆ ಆಡುವುದೂ ಉಂಟು.. ಅವಿನಾಶ್ ಶೆಟ್ಟಿ ಮುಯೈ ಥಾಯ್ ಫೈಟರ್ ಕೂಡ ಹೌದು.. ಫಾರಿನ್ ಬಾಕ್ಸರ್ ಆಗಿಯೂ ಹೆಸರು ಮಾಡಿದ್ದಾರೆ.. ಒಟ್ಟಿನಲ್ಲಿ ಸಕಲ ಕಲಾ ವಲ್ಲಭ ಎನ್ನುವಂತೆ ಕಾಣುತ್ತಿರುವ ಅವಿನಾಶ್ ಶೆಟ್ಟಿ ಬಿಗ್ ಬಾಸ್ ಮನೆಯೊಳಗೆ ಯಾವ ರೀತಿ ಆಟ ಆಡುವರು ಕಾದು ನೋಡಬೇಕಿದೆ..

ಇನ್ನು ಪವಿ ಪೂವಪ್ಪ ಅವರ ವಿಚಾರಕ್ಕೆ ಬರುವುದಾದರೆ ಪವಿ ಪೂವಪ್ಪ ಅವರು ಮೂಲತಃ ಕೊಡಗಿನವರಾಗಿದ್ದು ಮಾಡೆಲ್ ಆಗಿದ್ದಾರೆ.. ಸಾಕಷ್ಟು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಕಳೆದ ಹತ್ತು ವರ್ಷಗಳಿಂದಲೂ ಮಾಡೆಲ್ ಆಗಿರುವ ಪವಿ ಪೂವಪ್ಪ ಸದಾ ಕೊಂಚ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುವರು‌‌.. ಇನ್ನು ಮೂಲಗಳ ಪ್ರಕಾರ 1500ಕ್ಕೂ ಹೆಚ್ಚು ಶೋಗಳನ್ನು ಮಾಡೆಲ್ ಆಗಿ ಪವಿ ಪೂವಪ್ಪ ಅವರು ಮಾಡಿದ್ದಾರೆ ಎನ್ನಲಾಗಿದೆ.. ಪಾನಿಕುಟ್ಟೀರ ಪವಿತ್ರ ಪೂವಪ್ಪ ಎನ್ನುವುದು ಪವಿ ಅವರ ನಿಜವಾದ ಹೆಸರಾಗಿದ್ದು ಪವಿ ಪೂವಮ್ಮ ಎನ್ನುವ ಹೆಸರಿನ ಮೂಲಕ ಗುರುತಿಸಿಕೊಂಡಿದ್ದಾರೆ.. ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಎಂಬ ಬಿರುದನ್ನು ಸಹ ಪವಿ ಪೂವಪ್ಪ ಪಡೆದುಕೊಂಡಿದ್ದಾರೆ.. ಆದರೆ ವಿಶೇಷ ಎಂದರೆ ಮಾಡೆಲ್ ಆಗಿದ್ದರೂ ಸಹ ಕಳೆದ ನಾಲ್ಕು ವರ್ಷಗಳ ಹಿಂದೆ ನಾನು ಡಯೆಟ್ ಹಾಗೂ ವರ್ಕೌಟ್ ಮಾಡುವುದಿಲ್ಲ ಎಂದು ಪವಿ ತಿಳಿಸಿದ್ದರು.. ಇನ್ನು ಪವಿ ಪೂವಪ್ಪ ಅವರು ಬಿಗ್ ಬಾಸ್ ಗೆ ಬಂದ ಕೂಡಲೇ ಮೈಕಲ್ ಅವರ ಜೊತೆ ಮಾತನಾಡಿ ಇಶಾನಿ ಅವರನ್ನ ಮಿಸ್ ಮಾಡಿಕೊಳ್ಳುತ್ತೀದ್ದೀರಾ.‌. ಮಿಸ್ ಮಾಡಿಕೊಳ್ಳಬೇಡಿ ನಾನು ಬಂದಿದ್ದೇನೆ ಎಲ್ಲವನ್ನೂ ಹೊಸದಾಗಿ ಶುರು ಮಾಡೋಣ ಎಂದಿದ್ದರು.. ಆದರೆ ನಿಜ ಹೇಳಬೇಕೆಂದರೆ ಮನೆಯಿಂದ ಹೊರಗೆ ಪವಿ ಪೂವಪ್ಪ ಅವರಿಗೆ ಅದಾಗಲೇ ಬಾಯ್ ಫ್ರೆಂಡ್ ಇದ್ದು ಡಿ ಜೆ ಮ್ಯಾಡಿ ಅವರ ಜೊತೆ ಪ್ರೀತಿಯಲ್ಲಿದ್ದಾರೆ.‌ ಕೆಲ ವರ್ಷಗಳಿಂದ ಡಿಜೆ ಮ್ಯಾಡಿ ಹಾಗೂ ಪವಿ ಪೂವಪ್ಪ ಪ್ರೀತಿ ಮಾಡುತ್ತಿದ್ದಾರೆ.‌. ಪವಿ ಪೂವಪ್ಪ ಅತಿ ಹೆಚ್ಚು ಬಿಕಿನಿ ಶೂಟ್ ಗಳಲ್ಲಿ ಕಾಣಿಸಿಕೊಳ್ಳುವರು.‌. ಸ್ವಿಮ್ ಸೂಟ್ ನನಗೆ ಬಹಳ ಕಂಫರ್ಟ್ ಎಂದೂ ಸಹ ಹೇಳಿಕೊಂಡಿದ್ದಾರೆ.. ಜಾಹೀರಾತುಗಳು ಹಾಗೂ ಬೆಂಗಳೂರು ಚೆನ್ನೈ ಕೇರಳ ಹೈದರಾಬಾದ್ ಇನ್ನು ಹಲವಾರು ಕಡೆ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಇನ್ನು ಕನ್ನಡತಿ ನಟಿ ವರೂ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಸಾರಾ ಅಣ್ಣಯ್ಯ ಹಾಗೂ ಈಗ ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿ ಪವಿ ಪೂವಪ್ಪ ಸ್ನೇಹಿತರು.. ಕೆಳಗಿನ ವೀಡಿಯೋ ನೋಡಿ..

ಇನ್ನು ಅವಿನಾಶ್ ಶೆಟ್ಟಿ ವಿನಯ್ ನನ್ನು ನೋಡಿ ಇಲ್ಲಿರುವ ಆನೆಗಳಿಗೆ ಮಾವುತನಾಗಲು ಬಂದಿದ್ದೇನೆ ಎಂದಿದ್ದಕ್ಕೆ ವಿನಯ್ ಅವಿನಾಶ್ ಇಲ್ಲದ ಸಮಯದಲ್ಲಿ ಕಾರ್ತಿಕ್ ಹಾಗೂ ಮೈಕಲ್ ಅವರ ಮುಂದೆ ಆನೆಯನ್ನು ಪಳಗಿಸಬೇಕೆಂದರೆ ಎರಡು ಅಡಿ ದೂರ ನಿಂತು ಪಳಗಿಸಬೇಕು.. ಇಲ್ಲವಾದರೆ ತುಳಿಯತ್ತೆ ಎಂದು ಟಕ್ಕರ್ ನೀಡಿದ್ದಾರೆ.‌. ಅಷ್ಟೇ ಅಲ್ಲದೇ ಬಂದ ದಿನವೇ ಅವಿನಾಶ್ ಹಾಗೂ ಪವಿ ಪೂವಪ್ಪ ಅವರಿಗೆ ಬಾತ್ ರೂಂ ತೊಳೆಯುವ ಕೆಲಸ ನೀಡಿದ್ದು ಮೊದಲು ಆ ಕೆಲಸ ಮಾಡಿ ನಂತರ ಹಂತ ಹಂತವಾಗಿ ಬಂದು ಮಾವುತನ ಸ್ಥಾನಕ್ಕೆ ಬರಲಿ ಎಂದು ಮೈಕಲ್ ಕೂಡ ನಗುವಿನ ಮೂಲಕವೇ ಟಕ್ಕರ್ ನೀಡಿದರು ಎನ್ನಬಹುದು..

ಒಟ್ಟಿನಲ್ಲಿ ಬಿಗ್ ಬಾಸ್ ಸೀಸನ್ ಹತ್ತು ಐವತ್ತು ದಿನ ಪೂರೈಸುತ್ತಿದ್ದಂತೆ ವೈಲ್ಡ್ ಕಾರ್ಡ್ ಎಂಟ್ರಿಗಳಾಗಿ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದು ಇರೋ ಸ್ಪರ್ಧಿಗಳಿಗೆ ಟಕ್ಕರ್ ಕೊಟ್ಟು ಕೊನೆವರೆಗೂ ಉಳಿದುಕೊಳ್ಳುವರಾ ಅಥವಾ ಮಧ್ಯದಲ್ಲಿಯೇ ಮನೆಯಿಂದ ಹೊರ ಹೋಗುವರಾ ಕಾದು ನೋಡಬೇಕಿದೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.