ಮಗನಿಗೆ ವಿಶೇಷ ಹೆಸರಿಟ್ಟ ನಿಖಿಲ್ ರೇವತಿ ದಂಪತಿ.. ಆದರೆ ಮಗನ ಹೆಸರಿನ ಜೊತೆಗೆ ಯಾರ ಹೆಸರನ್ನು ಸೇರಿಸಿದ್ದಾರೆ ನೋಡಿ..

0 views

ಇಂದು ದೊಡ್ಡ ಗೌಡರ ಮನೆಯಲ್ಲಿ ಸಂಭ್ರಮದ ದಿನ.. ಮರಿ ಮೊಮ್ಮಗನ ನಾಮಕರಣದ ದಿನ.. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಅವರ ಪತ್ನಿ‌ ಇಂದು ತಮ್ಮ ಮರಿ ಮೊಮ್ಮಗನಿಗೆ ನಾಮಕರಣ‌ಮಾಡಿ ಶುಭ ಹಾರೈಸಿದ್ದಾರೆ.. ಹೌದು ಅದರಲ್ಲೂ ಮಗನಿಗೆ ವಿಶೇಷ ಹೆಸರನ್ನು ಇಟ್ಟು ಕಾರ್ಯಕ್ರಮ ನೆರವೇರಿಸಿದ್ದು ನಿಖಿಲ್ ಹಾಗೂ ರೇವತಿ ಎರಡೂ ಕುಟುಂಬದಲ್ಲಿಯೂ ಸಂತೋಷ ಮನೆ ಮಾಡಿದೆ.. ಹೌದು ಸ್ಯಾಂಡಲ್ವುಡ್ ನ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾ ಹಾಗೂ ರಾಜಕೀಯದಲ್ಲಿ ಸಕ್ರೀಯರಾಗಿ ತೊಡಗಿಕೊಂಡಿದ್ದು ಇಂದು ಮಗನ ನಾಮಕರಣ ಸಂಭ್ರಮದಲ್ಲಿದ್ದಾರೆ.. . ಹೌದು ನಿಖಿಲ್ ರೇವತಿ ದಂಪತಿ ಇಂದು ಮಗನಿಗೆ ನಾಮಕರಣ ಮಾಡಿದ್ದು ವಿಶೇಷ ಹೆಸರನ್ನಿಟ್ಟು ಸಂಭ್ರಮ ಪಟ್ಟಿದ್ದಾರೆ.. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿದ ನಾಮಕರಣ ಸಂಭ್ರಮದಲ್ಲಿ ದೇವೇಗೌಡರ ಸಂಪೂರ್ಣ ಕುಟುಂಬ ಹಾಗೂ ಸ್ನೇಹಿತರು ಸಂಬಂಧಿಕರು ಎಲ್ಲರೂ ಸಹ ಆಗಮಿಸಿ ಪುಟ್ಟ ಕಂದನಿಗೆ ಶುಭ ಹಾರೈಸಿದ್ದಾರೆ..

ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಶಾಸ್ತ್ರೋಕ್ತವಾಗಿ ನಾಮಕರಣ ಸಮಾರಂಭ ನೆರವೇರಿದೆ.. ಪ್ರಪೌತ್ರ ಜನನ ಶಾಂತಿ.. ನಾಮಕರಣ.. ಕನಕಾಭಿಷೇಕ.. ಹಾಗೂ ಇನ್ನಿತರ ಪೂಜೆಗಳನ್ನು ಆಯೋಜಿಸಲಾಗಿದೆ.. ಮಗುವಿಗೆ ಒಂಭತ್ತು ತಿಂಗಳು ತುಂಬಿರುವ ಕಾರಣ ಈಗ ಮಗನಿಗೆ ನಾಮಕರಣ ಮಾಡುತ್ತಿದ್ದು ಇದೇ ದಿನ ಮಗುವಿನ ಮುಖವನ್ನೂ ಸಹ ಮಾದ್ಯಮಗಳಿಗೆ ತೋರಿದ್ದಾರೆ..

ಹೌದು ಕಳೆದ ಎರಡು ವರ್ಷದ ಹಿಂದೆ ಕೊರೊನಾ ಸಮಯದಲ್ಲಿ 2020 ರ ಏಪ್ರಿಲ್ ಹದಿನೇಳರಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಹಾಗೂ ರೇವತಿ ದಂಪತಿಗೆ ಕಳೆದ ವರ್ಷ ಗಂಡು ಮಗುವಿನ ಜನನವಾಗಿತ್ತು.. ಇನ್ನು ತಮ್ಮ ಮಗ ಸರಳವಾಗಿ ನಾವು ಹೇಗೆ ಬೆಳೆದೆವೋ ಅದೇ ರೀತಿ ಬೆಳೆಯಬೇಕು.. ಅವನನ್ನು ವಿಶೇಷವಾಗಿ ತೋರಿಸಬೇಡಿ ಎಂದು ಇದುವರೆಗೂ ಮಗುವಿನ ಮುಖವನ್ನು ಸಾರ್ವಜನಿಕವಾಗಿ ತೀರಿಸಿರಲಿಲ್ಲ.. ಆದರೆ ಇಂದು ನಾಮಕರಣದ ಸಮಾರಂಭದಲ್ಲಿ ಮಗುವಿನ ಮುಖ ತೋರಲಾಗಿದೆ..

ಹೌದು ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಆಹ್ವಾನವಿಲ್ಲದಿದ್ದರೂ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮಕ್ಕೆ ಅದ್ಧೂರಿ ತಯಾರಿಯನ್ನೇ ಮಾಡಲಾಗಿತ್ತು.. ಪುಟ್ಟ ಕಂದನ ನಾಮಕರಣಕ್ಕಾಗಿ ಬೆಳ್ಳಿಯ ತೊಟ್ಟಿಲನ್ನು ಸಿಂಗಾರ ಮಾಡಿ ಮಗುವಿಗೆ ನಾಮಕರಣದ ಜೊತೆಗೆ ಇನ್ನೂ ಅನೇಕ ಶಾಸ್ತ್ರಗಳನ್ನು ನೆರವೇರಿಸಿ ಸಂಪ್ರದಾಯ ಬದ್ಧವಾಗಿ ನಾಮಕರಣ ಸಮಾರಂಭವನ್ನು ನೆರವೇರಿಸಲಾಯಿತು..

ದೇವೇಗೌಡರ ದಂಪತಿಗಳು ಬಂದ ನಂತರವೇ ಕಾರ್ಯಕ್ರಮ ಶುರು ಮಾಡಿದ್ದು ಮಗುವಿಗೆ ವಿಶೇಷ ಹೆಸರನ್ನು ಆಯ್ಕೆ ಮಾಡಿದ್ದಾರೆ.. ಹೌದು ನಿಖಿಲ್ ಹಾಗೂ ರೇವತಿ ಅವರ ಪುತ್ರನಿಗೆ ಆವ್ಯನ್ ದೇವ್ ಎಂಬ ಹೆಸರಿಡಲಾಗಿದೆ.. ಹೌದು ದೇವೇಗೌಡರ ಹೆಸರನ್ನು ಚಿಕ್ಕದಾಗಿ ದೇವ್ ಎಂದು ಸೇರಿಸಲಾಗಿದ್ದು ಆವ್ಯಾನ್ ದೇವ್ ಎಂದು ನಾಮಕರಣ ಮಾಡಲಾಗಿದೆ.. ಇನ್ನು ಇತ್ತ ರೇವತಿ‌ಕುಟುಣ್ಬದವರು ನಿಖಿಲ್ ಕುಮಾರ ಸ್ವಾಮಿ ಅವರ ಕುಟುಂಬಸ್ಥರು ಹಾಗೂ ಆತ್ಮೀಯರು ನಾಮಕರಣದ ಸಮಾರಂಭಕ್ಕೆ ಆಗಮಿಸಿ ಪುಟಾಣಿ ಕಂದನಿಗೆ ಆಶೀರ್ವದಿಸಿದ್ದಾರೆ.

ಇತ್ತ ಮಗುವಿನ ನಾಮಕರಣದ ಸಂಭ್ರಮದಲ್ಲಿ ಇರುವ ನಿಖಿಲ್ ಅವರು ಮಾದ್ಯಮದ ಮುಂದೆ ಸಂತೋಷ ಹಂಚಿಕೊಂಡಿದ್ದು ಒಂಭತ್ತು ತಿಂಗಳ ಬಳಿಕ ಈ ಕಾರ್ಯಕ್ರಮ ನಡೆಯಬೇಕಿದ್ದ ಕಾರಣ ಈಗ ಮಾಡಿದ್ದೇವೆ.. ಎಲ್ಲರ ಆಶೀರ್ವಾದ ಇರಲಿ ಎಂದಿದ್ದಾರೆ.. ಇನ್ನು ಇತ್ತ ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ರೇವತಿ ಪುತ್ರನ ಫೋಟೋಗಳು ಹಾಗೂ ನಾಮಕರಣದ ವೀಡಿಯೋ ವೈರಲ್ ಆಗಿದ್ದು ಅಭಿಮಾನಿಗಳು ಶುಭ ಕೋರಿದ್ದಾರೆ..