ರಾಧಿಕಾ ಯಶ್ ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿ ಇದೀಗ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.. ಹೌದು ಯಶ್ ರಾಧಿಕಾ ಮಗಳು ಐರಾಳ ಮೂರನೇ ವರ್ಷದ ಹುಟ್ಟುಹಬ್ನವನ್ನು ತಮ್ಮ ಮನೆಯಲ್ಲಿಯೇ ಮಿಕ್ಕಿ ಮಿನಿ ಮೌಸ್ ಥೀಮ್ ನಲ್ಲಿ ಅದ್ಧೂರಿಯಾಗಿ ಆಚರಿಸಲಾಗಿದೆ.. ಹೌದು ಕಳೆದ ಮೂರು ವರ್ಷದ ಹಿಂದೆ 2018 ರಲ್ಲಿ ಡಿಸೆಂಬರ್ ಎರಡರಂದು ಯಶ್ ರಾಧಿಕಾ ಕುಟುಂಬಕ್ಕೆ ಪುಟ್ಟ ಕಂದನ ಆಗಮನವಾಯಿತು.. ಮನೆಗೆ ಮಹಾಲಕ್ಷ್ಮಿಯ ಆಗಮನವಾಯಿತು ಎಂದು ಯಶ್ ಹಾಗೂ ರಾಧಿಕಾ ಎರಡೂ ಕುಟುಂಬ ಸಂಭ್ರಮಿಸಿತ್ತು. ಇನ್ನು ಸ್ಟಾರ್ ಜೋಡಿಯಾಗಿರುವುದರಿಂದ ಮಕ್ಕಳ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇತ್ತು..

ಇನ್ನು ಮುದ್ದು ಕಂದನ ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ವುಡ್ ನ ಎಲ್ಲಾ ಸೆಲಿಬ್ರೆಟಿಗಳನ್ನು ಆಹ್ವಾನಿಸಿ ಓಅನ್ ವರ್ಲ್ಡ್ ನಲ್ಲಿ ಸಂಭ್ರಮಿಸಿದ್ದರು.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪುನೀತ್ ರಾಜ್ ಕುಮಾರ್ ಶಿವಣ್ಣ ಗಣೇಶ್ ಸೇರಿದಂತೆ ಸ್ಯಾಂಡಲ್ವುಡ್ ನ ಬಹುತೇಕ ಎಲ್ಲಾ ಕಲಾವಿದರು ಐರಾಳ ಹುಟ್ಟುಹಬ್ಬಕ್ಕೆ ಆಗಮಿಸಿ ಶುಭ ಕೋರಿದ್ದರು..

ಇನ್ನು ಕಳೆದ ವರ್ಷ ಕೊರೊನಾ ಕಾರಣದಿಂದ ಮಗಳ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದ ಯಶ್ ಹಾಗೂ ರಾಧಿಕಾ ಇದೀಗ ಮತ್ತೆ ಮೂರನೇ ಹುಟ್ಟುಹಬ್ಬವನ್ನು ತಮ್ಮ ನೂತನ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ.. ಹೌದು ಕೆಲ ತಿಂಗಳ ಹಿಂದಷ್ಟೇ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಹೊಸ ಮನೆಯ ಗೃಹ ಪ್ರೇವಶ ಮಾಡಿದ್ದರು.. ಕಳೆದ ಮೂರು ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ರಾಧಿಕಾ ಯಶ್ ಅವರ ಕನಸಿನ ಮನೆಗೆ ಕೆಲ ತಿಂಗಖ ಹಿಂದಷ್ಟೇ ಸರಳವಾಗಿ ಹೋಮ ಹಾಗೂ ಗೃಹಪ್ರವೇಶ ಮಾಡಿ ಮಕ್ಕಳೊಟ್ಟಿಗೆ ನೂತನ ಜೀವನ ಆರಂಭಿಸಿದ್ದರು..

ಇನ್ನು ಇದೀಗ ಮಗಳ ಹುಟ್ಟು ಹಬ್ಬ ಆಗಮಿಸಿದ್ದಿ ವಿಶೇಷವಾಗಿ ಮಿಕ್ಕಿಮತ್ತು ಮಿನಿ ಮೌಸ್ ಥೀಮ್ ನಲ್ಲಿ ವಿಶೇಶವಾಗಿ ಆಚರಿಸಿದ್ದಾರೆ.. ಸಂಭ್ರಮದಲ್ಲಿ ಯಶ್ ಅವರ ತಂದೆ ತಾಯಿ ರಾಧಿಕಾ ಪಂಡಿತ್ ಅವರ ತಂದೆ ತಾಯಿ ಹಾಗೂ ಯಶ್ ಅವರ ಸಹೋದರಿ ನಂದಿನಿ ಅವರ ಕುಟುಂಬ ರಾಧಿಕಾ ಪಂಡಿತ್ ಅವರ ಸ್ನೇಹಿತರು ಹಾಗೂ ಯಶ್ ಅವರ ಆಪ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮುದ್ದು ಕಂದನಿಗೆ ಶುಭ ಕೋರಿದರು..

ಇನ್ನು ಮನೆ ತುಂಬೆಲ್ಲಾ ಮಿಕ್ಕಿ ಮೌಸ್ ರೀತಿ ಡಿಸೈನ್ ಮಾಡಲಾಗಿದ್ದು ಐರಾ ತನ್ನ ಪುಟಾಣಿ ಸ್ನೇಹಿತರು ಹಾಗೂ ತಮ್ಮನ ಜೊತೆ ನಲಿದು ಸಂಭ್ರಮಿಸಿದಳು.. ಸಧ್ಯ ಐರಾಳ ಮೂರನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಸಹ ಪುಟಾಣಿಗೆ ಶುಭ ಕೋರಿದ್ದಾರೆ..
