ಮಗಳ ಎರಡನೇ ವರ್ಷದ ಹುಟ್ಟುಹಬ್ಬ ವಿಶೇಷವಾಗಿ ಆಚರಿಸಿದ ರಾಧಿಕಾ ಯಶ್.. ಫೋಟೋ ಗ್ಯಾಲರಿ ನೋಡಿ..

0 views

ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿ ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಯ ಮೊದಲನೇ ಮಗು ಐರಾಳಿಗೆ ಇಂದು ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.. ಹೌದು 2018 ಡಿಸೆಂಬರ್ ಎರಡರಂದು ರಾಧಿಕಾ ಹಾಗೂ ಯಶ್ ಮಗಳ ಆಗಮನದ ಸಂತೋಷದಲ್ಲಿದ್ದರು.. ನಮ್ಮ ಮನೆಗೆ ಪುಟ್ಟ ಲಕ್ಷ್ಮಿಯ ಆಗಮನವಾಯಿತೆಂದು ಯಶ್ ಅಪ್ಪ ಅಮ್ಮ ಮಾದ್ಯಮದ ಮುಂದೆ ಮಾತನಾಡಿ ಸಂತೋಷ ಹಂಚಿಕೊಂಡಿದ್ದರು.. ಇದೀಗ ನೋಡು ನೀಡುತ್ತಿದ್ದಂತೆ ಅದಾಗಲೇ ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದೆ ಕುಟುಂಬ..

ಹೌದು ಕಳೆದ ವರ್ಷ ಐರಾಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಬೆಂಗಳೂತಿನ ಫನ್ ವರ್ಲ್ಡ್ ನಲ್ಲಿ ಅದ್ಧೂರಿಯಾಗಿ ಆಚರಿಸಿ ಸ್ಯಾಂಡಲ್ವುಡ್ ನ ಬಹುತೇಕ ಎಲ್ಲಾ ಸ್ಟಾರ್ ಗಳಿಗೆ ಸ್ನೇಹಿತರಿಗೆ ಆಹ್ವಾನ ನೀಡಿದ್ದರು.. ಮೊದಲ ವರ್ಷದ ಹುಟ್ಟುಹಬ್ಬದ ನೆನಪು ಐರಾ ದೊಡ್ಡವಳಾದ ಮೇಲೆಯೂ ಸಂತೋಷ ನೀಡುವಂತೆ ಮಾಡಿದ್ದರು.. ನೆನಪಿಸಿಕೊಳ್ಳಬೇಕಾದ ವಿಚಾರ ಎಂದರೆ ಅಂಬರೀಶ್ ಅವರು ಹೋದ ಕೆಲ ದಿನಗಳಲ್ಲಿ ಐರಾ ಹುಟ್ಟಿದ್ದಳು.. ಆದರೆ ಅಂಬರೀಶ್ ಅವರ ಆಶೀರ್ವಾದ ಐರಾಳಿಗೆ ಸಿಕ್ಕಿದ್ದು ಮಾತ್ರ ವಿಶೇಷ.. ಹೌದು ಅಂಬರೀಶ್ ಅವರು ಇದ್ದಾಗಲೇ ಉತ್ತರ ಕರ್ನಾಟಕದಲ್ಲಿನ ದುಬಾರಿ ಬೆಲೆಯ ವಿಶೇಷ ತೊಟ್ಟಿಲನ್ನು ಯಶ್ ಮಗಳಿಗಾಗಿ ಅಂಬರೀಶ್ ಅವರು ಆರ್ಡರ್ ಕೊಟ್ಟು ಮಾಡಿಸಿದ್ದರು.. ಐರಾ ಜನನದ ನಂತರ ಆ ವಿಚಾರ ಎಲ್ಲರಿಗೂ ತಿಳಿಯಿತು.. ಸ್ವರ್ಗದಿಂದಲೇ ಆಶೀರ್ವಾದ ಮಾಡಿದರೆಂದು ಎಲ್ಲರೂ ಸಂತೋಷ ಪಟ್ಟರು..

ಇನ್ನು‌ ಮೊನ್ನೆ‌ ಮೊನ್ನೆಯಷ್ಟೇ ಮಗ ಯಥರ್ವ್ ಯಶ್ ನ ಮೊದಲನೇ ಹುಟ್ಟುಹಬ್ಬವನ್ನೂ ಸಹ ಮಗಳ ಹುಟ್ಟುಹಬ್ಬದ ರೀತಿಯಲ್ಲಿಯೇ ಸ್ಯಾಂಡಲ್ವುಡ್ ಸ್ಟಾರ್ ಗಳ ನಡುವೆ ಮಾಡಬೇಕೆಂಬ ಪ್ಲಾನ್ ನಲ್ಲಿದ್ದರು.. ಆದರೆ ಕೊರೊನಾ ಕಾರಣದಿಂದಾಗಿ ಗೋವಾದಲ್ಲಿ ಸಮುದ್ರದ ನಡುವೆ ಐಶಾರಾಮಿ ಬೋಟ್ ನಲ್ಲಿ‌ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ಸಂಭ್ರಮ ಪಟ್ಟಿದ್ದು ಅಭಿಮಾನಿಗಳಿಗಾಗಿ ವೀಡಿಯೋ ಹಂಚಿಕೊಂಡಿದ್ದರು..

ಇನ್ನು ಇದೀಗ ಮಗಳು ಐರಾಳ ಎರಡನೇ ವರ್ಷದ ಹುಟ್ಟುಹಬ್ಬವನ್ನು ಸಹ ಕೊರೊನಾ ಕಾರಣದಿಂದಾಗಿ ಸರಳವಾಗಿ ಕುಟುಂಬಸ್ಥರ ನಡುವೆ ಆಚರಣೆ ಮಾಡುತ್ತಿದ್ದು ಅದೆಲ್ಲದಕ್ಕಿಂತ ಹೆಚ್ಚಾಗಿ ಮಗಳಿಗೆ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಪಂಡಿತ್ ಶುಭ ಹಾರೈಸಿದ್ದಾರೆ.. ಇನ್ನು ಯಶ್ ಅವರು ಕೊರೊನಾ ಇರುವ ಕಾರಣ ಯಾರೂ ಸಹ ಮನೆಯ ಬಳಿ ಬರಬೇಡಿ.. ಎಲ್ಲಿರುವಿರೋ ಅಲ್ಲಿಂದಲೇ ಹಾರೈಸಿ ಎಂದಿದ್ದಾರೆ.. ಈ ಮೊದಲು ಸಹ ಯಶ್ ಅವರು ತಮ್ಮ ಮಕ್ಕಳಿಗೆ ಜನರು ಗೌರವ ಕೊಡುವುದನ್ನು ಬೇಡ ಎಂದಿದ್ದರು.. ಅವರು ಮುಂದೆ ಏನಾದರು ಸಾಧನೆ ಮಾಡಿದ್ರೆ ಮಾತ್ರ ಆಗ ಅವರಿಗೆ ಗೌರವ ಕೊಡಿ.. ಅದನ್ನ ಬಿಟ್ಟು ಒಬ್ಬ ನಟನ ಮಗ.. ನಟಿಯ ಮಗಳು ಅಂತೆಲ್ಲಾ ಯಾರಿಗೂ ಗೌರವ ಕೊಡಬೇಡಿ.. ಅಷ್ಟು ಪ್ರಾಮುಖ್ಯತೆಯನ್ನೂ ಸಹ ಕೊಡಬೇಡಿ.. ನಿಮ್ಮೆಲ್ಲರ ಪ್ರೀತಿ ಮಾತ್ರ ಇರಲಿ.. ಎಂದು ನಿಜಕ್ಕೂ ದೊಡ್ಡ ಮಾತುಗಳನ್ನು ಆಡಿದ್ದರು..

ಇನ್ನು ರಾಧಿಕಾ ಪಂಡಿತ್ ಅವರು ಮಗಳ ಎರಡನೇ ವರ್ಷದ ಹುಟ್ಟುಹಬ್ಬಕ್ಕಾಗಿ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ.. ಹೌದು ಮಗಳ ಪ್ರತಿಯೊಂದು ಹಂತದ ಫೋಟೋಗಳನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್ “ನಮ್ಮ ಜೀವನದಲ್ಲಿ ನೀನು ಸಂತೋಷ ತಂದಿರುವೆ.. ಹುಟ್ಟು ಹಬ್ಬದ ಶುಭಾಶಯಗಳು ಪುಟ್ಟ ರಾಜಕುಮಾರಿ” ದಯವಿಟ್ಟು ಬೇಗ ಬೆಳೆದು ದೊಡ್ಡವಳಾಗಬೇಡ.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಅತ್ತ ಅಭಿಮಾನಿಗಳು ಪುಟಾಣಿ ಐರಾಳಿಗೆ ಕಮೆಂಟ್ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಶುಭ ಹಾರೈಸಿದ್ದಾರೆ.. ಯಶ್ ಅಭಿಮಾನಿಗಳ ಪೇಜ್ ಗಳ ತುಂಬೆಲ್ಲಾ ಐರಾಳ ಫೋಟೋಗಳೇ ಮಿಂಚುತ್ತಿದ್ದು ಪುಟ್ಟ ಕಂದನಿಗೆ ಎಲ್ಲರೂ ಶುಭ ಕೋರಿದ್ದಾರೆ..