ಯಶ್ ರಾಧಿಕಾ ಹೊಸ ಮನೆಯಲ್ಲಿ ಅದ್ಧೂರಿ ರಕ್ಷಾಬಂಧನ ಆಚರಣೆ.. ತಂಗಿಗೆ ಯಶ್‌ ಕೊಟ್ಟ ವಿಶೇಷ ಉಡುಗೊರೆ ಏನು ಗೊತ್ತಾ?

0 views

ಇಂದು ರಕ್ಷಾಬಂಧನ.. ನಾಡಿನಾದ್ಯಂತ ಅಣ್ಣ ತಂಗಿಯರು.. ಅಕ್ಕ ತಮ್ಮಂದಿರು.. ಒಡಹುಟ್ಟಿದವರು.. ಒಡ ಹುಟ್ಟದೇ ಇದ್ದರೂ ಸಹೋದರರ ಬಾಂಧವ್ಯ ತೋರುವ ಪವಿತ್ರವಾದ ಸಂಬಂಧದ ಸಂಕೇತವಾದ ರಕ್ಷಾಬಂಧನವನ್ನು ಎಲ್ಲರೂ ಸಂಭ್ರಮದಿಂದ ಆಚರಣೆ ಮಾಡಿದರು.. ಇನ್ನು ರಾಜಕಾರಣಿಗಳು ಸ್ಯಾಂಡಲ್ವುಡ್ ನ ಸೆಲಿಬ್ರೆಟಿಗಳ ಮನೆಯಲ್ಲಿಯೂ ಸಹ ಅದ್ಧೂರಿಯಾಗಿ ರಕ್ಷಾಬಂಧನ ಆಚರಣೆಯಾಗಿದೆ.. ಒಂದು ಕಡೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಂದ ಹಿಡಿದು ಅನೇಕ ರಾಜಕೀಯ ನಾಯಕರುಗಳಿಗೆ ಪಕ್ಷದ ಮಹಿಳಾ ಕಾರ್ಯಕರ್ತರುಗಳು ರಾಕಿ ಕಟ್ಟಿ ರಕ್ಷಾಬಂಧನ ಆಚರಣೆ ಮಾಡಿದರು.. ಇನ್ನು ಇತ್ತ ಸ್ಯಾಂಡಲ್ವುಡ್ ಕಲಾವಿದರ ಮನೆಯಲ್ಲಿಯೂ ಸ್ಟಾರ್ ಗಳು ತಮ್ಮ ತಮ್ಮ ಸಹೋದರಿಯರಿಯರಿಂದ ರಾಕಿ‌ ಕಟ್ಟಿಸಿಕೊಂಡು ಉಡುಗೊರೆ ಕೊಟ್ಟು ಅರ್ಥಪೂರ್ಣವಾಗಿ ರಕ್ಷಾಬಂಧನ ಆಚರಣೆ ಮಾಡಿದ್ದಾರೆ.‌.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮಹಿಳಾ ಅಭಿಮಾನಿಗಳ ಬಳಿ ರಾಕಿ‌ ಕಟ್ಟಿಸಿಕೊಂಡು ಆಚರಿಸಿದರೆ ಇತ್ತ ರಾಕಿಂಗ್ ಸ್ಟಾರ್ ಯಶ್ ಅವರ ಮನೆಯಲ್ಲಿ ರಕ್ಷಾಬಂಧನ ಸಿಕ್ಕಾಪಟ್ಟೆ ಸ್ಪೆಷಲ್ ಎನ್ನಬಹುದು. ಒಂದು ಕಡೆ ಐರಾ ಯಥರ್ವ್‌ ರಾಕಿ ಕಟ್ಟಿ ಆಚರಣೆ ಮಾಡಿದರೆ.. ಇತ್ತ ಪ್ರತಿ ವರ್ಷದಂತೆ ಈ ವರ್ಷವೂ ಯಶ್‌ ಅವರ ತಂಗಿ ನಂದಿನಿ ಅವರು ಯಶ್‌ ಅವರ ಮನೆಗೆ ಆಗಮಿಸಿ ರಾಕಿ ಕಟ್ಟಿ ಹಬ್ಬ ಆಚರಣೆ ಮಾಡಿದ್ದಾರೆ.. ಕಳೆದ ವರ್ಷ ಎರಡನೇ ಮಗುವಿಗೆ ಜನ್ಮ ನೀಡಿದ್ದ ನಂದಿನಿ ಅವರು ಹಾಸನದ ತೋಟದ ಮನೆಯಲ್ಲಿದ್ದರು.. ಬೆಳ್ಳಂಬೆಳಿಗ್ಗೆ ಯಶ್‌ ಅವರು ಹಾಸನಕ್ಕೆ ತೆರಳಿ ತಂಗಿಯ ಬಳಿ ರಾಕಿ ಕಟ್ಟಿಸಿಕೊಂಡಿದ್ದರು.. ಇನ್ನು ಈ ವರ್ಷ ನಂದಿನಿ ಅವರು ಯಶ್‌ ಅವರ ಹೊಸ ಮನೆಗೆ ಆಗಮಿಸಿ ಹಬ್ಬ ಆಚರಣೆ ಮಾಡಿದ್ದಾರೆ.. ಈ ಫೋಟೋಗಳನ್ನು ರಾಧಿಕಾ ಪಂಡಿತ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ..

ಹೌದು ಕೆಲ ದಿನಗಳ ಹಿಂದಷ್ಟೇ ಹೊಸ ಮನೆಗೆ ಪ್ರವೇಶ ಮಾಡಿರುವ ರಾಧಿಕಾ ಹಾಗೂ ಯಶ್ ಅವರ ಮನೆಯಲ್ಲಿ ಪುಟಾಣಿಗಳಾದ ಐರಾ ಹಾಗೂ ಯಥರ್ವ್ ಮೊದಲ ರಕ್ಷಾಬಂಧನವನ್ನು ಆಚರಣೆ ಮಾಡಿದ್ದಾರೆ.. ಹೌದು ಕಳೆದ ಎರಡು ವರ್ಷಗಳಿಂದ ನಿರ್ಮಾಣಗೊಳ್ಳುತ್ತಿದ್ದ ರಾಧಿಕಾ ಹಾಗೂ ಯಶ್ ಅವರ ಅವರ ಕನಸಿನ ಮನೆಗೆ ಕೆಲ ದಿನಗಳ ಹಿಂದಷ್ಟೇ ಸರಳವಾಗಿ ಗೃಹಪ್ರವೇಶ ಮಾಡಿದ್ದರು.. ಹೊಸ ಮನೆಯ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿದ್ದ ರಾಧಿಕಾ ಪಂಡಿತ್ ಅವರು ಹೊಸ ಮನೆಯಲ್ಲಿ ನೂತನ ಜೀವನ ಶುರು ಮಾಡಿದ್ದು ಎಲ್ಲಾ ಹಬ್ಬಗಳನ್ನು ಆಚರಣೆ ಮಾಡಿ ಅಭಿಮಾನಿಗಳೊಟ್ಟಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ..

ಹೌದು ಹೊಸ ಮನೆಯಲ್ಲಿ‌ ಮೊನ್ನೆಯಷ್ಟೇ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು.. ಇದೀಗ ಮಕ್ಕಳು ರಕ್ಷಾಬಂಧನ ಆಚರಿಸಿರುವ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಮುದ್ದು ಐರಾ ತನ್ನ ಪ್ರೀತಿಯ ತಮ್ಮ ಯಥರ್ವ್ ಗೆ ರಾಕಿ‌ ಕಟ್ಟಿ ಆರತಿ‌ ಮಾಡಿ ಸಿಹಿ ತಿನ್ನಿಸಿದರೆ.. ಇತ್ತ ಯಥರ್ವ್ ತನ್ನ ಅಕ್ಕನಿಗೆ ಸಿಹಿ ಮುತ್ತುಗಳ ಉಡುಗೊರೆ ಕೊಟ್ಟಿದ್ದು ಮುದ್ದಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ..

ಇದರ ಜೊತೆಗೆ ಯಶ್ ಅವರ ತಂಗಿ ಸಹ ಮನೆಗೆ ಆಗಮಿಸಿ ಯಶ್ ಅವರಿಗೆ ರಾಕಿ‌ ಕಟ್ಟಿದ್ದು ಯಶ್‌ ಅವರು ತಮ್ಮ ತಂಗಿ ನಂದಿನಿ ಅವರಿಗೆ ರಕ್ಷಾಬಂಧನದ ನೆನಪಿಗೆ ಬಂಗಾರವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದ ಮಾಡಿದ್ದಾರೆ.. ಇನ್ನು ಈ ಎಲ್ಲಾ ಫೋಟೋಗಳನ್ನು ರಾಧಿಕಾ ಪಂಡಿತ್ ಅವರು ಹಂಚಿಕೊಂಡು ಜೊತೆಗೆ ತಮ್ಮ ಸಹೋದರನೊಟ್ಟಿಗಿನ ಫೋಟೋ ಜೊತೆಗೆ “ವಿಶೇಷವಾದ ಬಂಧನ.. ಪ್ರೀತಿಯ ಪವಿತ್ರವಾದ ರೂಪ.. ರಕ್ಷಬಂಧನದ ಶುಭಾಶಯಗಳು.. ಎಂದು ಬರೆದು ಎಲ್ಲಾ ಸಹೋದರ ಸಹೋದರಿಯರಿಗೂ ರಾಕಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.. ಸಧ್ಯ ಪುಟಾಣಿ ಮಕ್ಕಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..