ಹೊಟೆಲ್‌ ನಲ್ಲಿ‌ ಜನವಿಲ್ಲ ಎಂದು ನಿನ್ನೆ ಕಣ್ಣೀರಿಟ್ಟಿದ್ದ ವೃದ್ಧ ದಂಪತಿ.. ಇಂದು ಏನಾಯಿತು ಗೊತ್ತಾ?

0 views

ನಿನೆ ಸಾಮಾಜಿಕ ಜಾಲತಾಣದಲ್ಲಿ ವೃದ್ಧ ದಂಪತಿಯ ವೀಡಿಯೋ ವೊಂದು ವೈರಲ್ ಆಗಿದ್ದು ಮನಕಲಕುವಂತಿತ್ತು.. ಆ ವೃದ್ಧ ದಂಪತಿ ಜೀವನ ನಿರ್ವಹಣೆಗೆಂದು ಪುಟ್ಟ ಹೊಟೆಲ್ ಒಂದನ್ನು ನಡೆಸುತ್ತಿದ್ದರು.. ಆದರೆ ಜನರೇ ಇಲ್ಲದೇ ಬಿಕೋ ಎನ್ನುತ್ತಿದ್ದು ಗ್ರಾಹಕರಿಲ್ಲ.. ಯಾರಾದರು ಬಂದು ವ್ಯಾಪಾರ ಮಾಡಿದರಷ್ಟೇ ನಾವು ಊಟ ಮಾಡಲು ಸಾಧ್ಯ ಎಂದು ಕಣ್ಣೀರಿಟ್ಟಿದ್ದರು. ಇದನ್ನು ಯಾರೋ ಒಬ್ಬ ಪುಣ್ಯಾತ್ಮ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.. ನಂತರ ಬಾಬಾಕಡಾಬಾ ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಇದು ವೈರಲ್ ಆಯಿತು.. ಕೊನೆಗೆ ನಡೆದದ್ದು ಮಾತ್ರ ಮ್ಯಾಜಿಕ್..

ಹೌದು ಸಾಮಾಜಿಕ ಜಾಲತಾಣವನ್ನು‌ ಒಳ್ಳೆಯದಕ್ಕೂ ಬಳಸಿಕೊಳ್ಳಬಹುದು.. ಕೆಟ್ಟದಕ್ಕೂ ಸಹ.. ಆದರೆ ಇಲ್ಲಿ ಮಾತ್ರ ಸಾಮಾಜಿಕ ಜಾಲತಾಣದಿಂದಾಗಿ ಒಂದು ವೃದ್ಧ ದಂಪತಿಯ ಜೀವನವೇ ಪರಿವರ್ತನೆಯಾಗಿದೆ.. ಹೌದು ನಿನ್ನೆಯಷ್ಟೇ ಕಣ್ಣೀರಿಟ್ಟಿದ್ದ ದಂಪತಿ‌ಯ ಮುಖದಲ್ಲಿ ಇಂದು ಆತ್ಮ ತೃಪ್ತಿಯಿಂದ ನಗು ಮೂಡಿದೆ.. ನಿನ್ನೆ ಖಾಲಿ ಇದ್ದ ಹೋಟೆಲ್‌ ಇಂದು ಜನಸಾಗರವೇ ತುಂಬಿದೆ..

ನಿನ್ಮೆ ವೀಡಿಯೋ ನೋಡಿದ ಬಹಳಷ್ಟು ಜನರು ಬಾಬಾ ಕ ಡಾಬದಲ್ಲಿ ಹತ್ತಿರ ಇರುವವರು ಹೋಗಿ ಊಟ ಮಾಡಿ ಎಂದು ಅಡ್ರೆಸ್ ಸಮೇತ ಶೇರ್ ಮಾಡಿಕೊಂಡಿದ್ದರು.. ಇದೀಗ ತಾತನ ಹೊಟೆಲ್ ಯಾವ ರೆಸ್ಟ್ರೋರೆಂಟ್ ನಲ್ಲಿಯೂ ಇಲ್ಲದಷ್ಟು‌ ಜನರು ತುಂಬಿದ್ದು ಅಲ್ಲಿ ಊಟ ಮಾಡುವ ಮೂಲಕ ತಾತನ ಜೀವನಕ್ಕೆ ದಾರಿಯಾಗಿದ್ದಾರೆ..

ಇಂದು ಜನರನ್ನು ನೋಡಿದ ತಾತ ಮಾತನಾಡಿ.. ನನಗೆ ಸಹಾಯ ಮಾಡಿದ ನೀವುಗಳು ಎಲ್ಲಿಯೇ ಇರಿ ಹೇಗೆ ಇರಿ ದೇವರು ನಿಮ್ಮನ್ನು ಸದಾಕಾಲ ಸಂತೋಷವಾಗಿ ಇಟ್ಟಿರಲಿ ಎಂದು ಹಾರೈಸಿದ್ದಾರೆ.. ಇದೇ ರೀತಿ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಿರಿ.. ಇವತ್ತು ದೇಶವೇ ನನ್ನ ಜೊತೆ ಇದೆಯೇನೋ ಎನ್ನುವಷ್ಟು ಸಂತೋಷವಾಗುತ್ತಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ..

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದ ಪವರ್ ಈ ರೀತಿ‌ ಒಳ್ಳೆಯ ಕಾರ್ಯಗಳಿಗೆ ಬಳಕೆಯಾದರೆ ಅದಕ್ಕೆ ನಿಜವಾದ ಅರ್ಥ ಸಿಗುತ್ತದೆ.. ಇಂದು ಆ ವೃದ್ಧ ದಂಪತಿಗಳ ಅನ್ನಕ್ಕೆ ನೆರವಾದ ಪ್ರತಿಯೊಬ್ಬರಿಗೂ ಧನ್ಯವಾದಗಳು.. ಇದೇ ರೀತಿ ಸಾಮಾಜಿಕ ಜಾಲತಾಣವನ್ನು ಬೇಡದ್ದಕ್ಕೆ ಬಳಸದೇ ಕಷ್ಟದಲ್ಲಿರುವವರಿಗೆ ನೆರವಾಗಲು ಹಾಗೂ ಒಳ್ಳೆಯ ಕಾರ್ಯಗಳಿಗೆ ಬಳಸೋಣ..