ಕೆಜಿಎಫ್ ಬಾಬು ನಿಜಕ್ಕೂ ಮಗಳ ಜೊತೆ ಆ ಕೆಲಸ ಮಾಡಿದರಾ? ಖುದ್ದು ಮಾದ್ಯಮದ ಮುಂದೆ ಬಂದು ಸತ್ಯ ಬಿಚ್ಚಿಟ್ಟ ಬಾಬು ಮಗಳು.. ನಡೆದಿದ್ದೇ ಬೇರೆ..

0 views

ಕೆಜಿಎಫ್ ಬಾಬು ಕಳೆದ ಕೆಲ ತಿಂಗಳ ಹಿಂದೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದ್ದ ವ್ಯಕ್ತಿ.. ನೋ ಪಾರ್ಕಿಂಗ್ ನಲ್ಲಿದ್ದ ರೋಲ್ಸ್ ರಾಯ್ಸ್ ಕಾರ್ ಅನ್ನು ಪೋಲೀಸರು ಹಿಡಿಯಲಾಗಿ ಆ ಕಾರ್ ಅಮಿತಾಬ್ ಬಚ್ಚನ್ ಅವರ ಹೆಸರಿನಲ್ಲಿರುವುದು ತಿಳಿಯಿತು.. ಆದರೆ ಅದರ ನಿಜವಾದ ಓನರ್ ಕೆಜಿಎಫ್ ಬಾಬು ಆಗಿದ್ದರು.. ಆದರೆ ಕಾರ್ ಕೊಂಡುಕೊಂಡ ನಂತರ ಅದನ್ನಿ ವರ್ಗಾವಣೆ ಮಾಡಿಸಿಕೊಂಡಿರಲಿಲ್ಲ.. ಅದನ್ನು ತಿಳಿಸಿ ಪೊಲೀಸರಿಂದ ಕಾರ್ ಅನ್ನು ಬಿಡಿಸಿಕೊಂಡು ಹೋಗಿದ್ದರು.. ಅಷ್ಟಕ್ಕೆ ಕತೆ ಮುಗಿಯಲಿಲ್ಲ.. ಈ ಕೆಜಿಎಫ್ ಬಾಬು ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿತು.ಮ್ ಅವರೇ ಹೇಳಿಕೊಂಡಿರುವಂತೆ ಸಾವಿರದ ಏಳನೂರು ಕೋಟಿ ರೂಪಾಯಿ ಒಡೆಯನಾಗಿರುವ ಕೆಜಿಎಫ್ ಬಾಬು ಕೆಲ ವರ್ಷಗಳ ಹಿಂದೆ ಊಟಕ್ಕೂ ಸಹ ಕಷ್ಟ ಪಟ್ಟ ಘಟನೆಗಳಿವೆ.. ಆದರೆ ಗುಜರಿ ನಡೆಸುತ್ತಿದ್ದ ಬಾಬು ಅವರಿಗೆ ಚೀಲವೊಂದರಲ್ಲಿ ಚಿನ್ನ ಸಿಗಲಾಗಿ ಅದನ್ನು ಸ್ವಲ್ಪ ಸ್ವಲ್ಪವೇ ಮಾರಿಕೊಂಡು ನಂತರ ಅದರಿಂದ ಬಂದ ಹಣದಲ್ಲಿ ಬ್ಯುಸಿನೆಸ್ ಮಾಡಿ ಇದೀಗ ಸಾವಿರ ಏಳನೂರು ಕೋಟಿ ರೂಪಾಯಿ ಒಡೆಯನಾಗಿದ್ದಾರೆ.. ಇದಿಷ್ಟೂ ಮಾಹಿತಿಯನ್ನು ಖುದ್ದು ಬಾಬು ಅವರೇ ಮಾದ್ಯಮದ ಸಂದರ್ಶನದಲ್ಲಿ ತಿಳಿಸಿದ್ದರು..

ಆದರೀಗ ವಿಚಾರ ಬೇರೆ ಇದೆ.. ಹೌದು ಬೆಂಗಳೂರಿನಿಂದ ಎಂಎಲ್ ಸಿ ಅಭ್ಯರ್ಥಿಯಾಗಿ ಸಧ್ಯ ಕಾಂಗ್ರೆಸ್ ಪಕ್ಷದಿಂದ ಬಾಬು ಸ್ಪರ್ಧಿಸುತ್ತಿದ್ದು ನಾಮಪತ್ರ ಸಲ್ಲಿಸಿದ್ದರು.. ಆದರೆ ಮೊನ್ನೆ ಸಚಿವರಾದ ಎಸ್ ಟಿ ಸೋಮಶೇಖರ್ ಅವರು ಭಾಷಣ ಮಾಡುವ ಸಂದರ್ಭದಲ್ಲಿ ಬಾಬು ಬಗ್ಗೆ ಮಾತನಾಡಿ ಒಬ್ಬ ಕಾಂಗ್ರೆಸ್ ಅಭ್ಯರ್ಥಿ ಸಾವಿರದ ಏಳನೂರು ಕೋಟಿ ರೂಪಾಯಿ ಹಣ ಇದೆ ಎಂದು ಡಿಕ್ಲೇರ್ ಮಾಡಿಕೊಂಡಿದ್ದಾರೆ‌. ನಾನು ಅವನ ಇತಿಹಾಸ ತಿಳಿಯಲು ಒಬ್ಬರು ಡಿಸಿಪಿ ಗೆ ಫೋನ್ ಮಾಡಿದೆ.. ಆಗ ನನಗೆ ಸತ್ಯ ಗೊತ್ತಾಯ್ತು.. ಸಾರ್ ಅವರು ಸಾವಿರದ ಏಳನೂರು ಅಂತ ಹೇಳ್ತಿದ್ದಾರೆ.. ಆದರೆ ಅದರ ಎರಡರಷ್ಟಿದೆ.. ಅವನ ಮೇಲೆ ನಲವತ್ತು ಕೇಸ್ ಗಳಿವೆ.. ಸ್ವಂತ ಹೆಂಡತಿಯೇ ದೂರು ನೀಡಿದ್ದಾರೆ.. ಸ್ವಂತ ಮಗಳ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆಂದು ದೂರಿದೆ.. ನಾನೇ ಕೆಲ ತಿಂಗಳು ಗಡಿಪಾರು ಮಾಡಿದ್ದೆ ಎಂದರು.. ಎಂದು ಸೋಮಶೇಖರ್ ಅವರು ಭಾಷಣದ ವೇಳೆ ಹೇಳಿದ್ದರು..

ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಬಾಬು ಇದೆಲ್ಲವೂ ಸುಳ್ಳು.. ನನ್ನ ಹೆಂಡತಿಗೆ ಏನೇನೋ ಹೇಳಿ ನನ್ನ ಮೇಲೆ ದೂರು ಕೊಡಿಸಿದ್ದರು.. ಆದರೆ ಆನಂತರ ಅವಳೇ ದೂರನ್ನು ವಾಪಸ್ ಕೂಡ ಪಡೆದುಕೊಂಡಿದ್ದಳು.. ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದಿದ್ದರು.. ಆದರೀಗ ಖುದ್ದು ಬಾಬು ಅವರ ಮಗಳೇ ಮಾದ್ಯಮದ ಮುಂದೆ ಬಂದಿದ್ದಾರೆ.. ಹೌದು ನಿನ್ನೆಯಷ್ಟೇ ಮಗಳ ಜೊತೆ ಬೇರೆ ರೀತಿ ನಡೆದುಕೊಂಡಿದ್ದಾರೆ ಎಂದಿದ್ದಕ್ಕೆ ಇಂದು ಮಾದ್ಯಮದ ಮುಂದೆ ಮಗಳ ಜೊತೆ ಬಾಬು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ.. ಹೌದು ಬಾಬು ಅವರಿಗೆ ಇಬ್ಬರು ಹೆಂಡತಿಯರು ಹಾಗೂ ಐದು ಜನ ಮಕ್ಕಳು.. ಇದೀಗ ಇಬ್ಬತು ಹೆಂಡತಿಯರು ಹಾಗೂ ಮಗಳ ಜೊತೆ ಮಾದ್ಯಮದ ಮುಂದೆ ಬಂದ ಬಾಬು ಇರೋ ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ಹೌದು ಈಕೆ ನನ್ಮ ಮೊದಲ ಪತ್ನಿ.. ಇವಳು ನನ್ನ ಪ್ರಾಣ.. ನನ್ನ ಎಲ್ಲಾ ಕಷ್ಟದಲ್ಲಿ ಇದ್ದವಳು ಇವಳೇ.. ಆದರೆ ಹಣ ಎಲ್ಲಾ ಬಂದಮೇಲೆ ನನ್ನ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬಳನ್ನು ನಾನು ಪ್ರೀತಿಸಿ ಮದುವೆಯಾದೆ.. ಇವಳು ನನ್ನ ಎರಡನೇ ಹೆಂಡತಿ.. ಆದರೆ ಎರಡು ವರ್ಷ ನಾನು ನನ್ನ ಮೊದಲನೇ ಹೆಂಡತಿಗೆ ಎರಡನೇ ಹೆಂಡತಿ ವಿಚಾರವನ್ನು ಹೇಳಿರಲಿಲ್ಲ..

ಆದರೆ ಒಂದು ದಿನ ನಶೀದ್ ಎಂಬ ವ್ಯಕ್ತಿ ನನ್ನ ಸ್ನೇಹಿತನೇ ಆಗಬೇಕು. ಅವನಿಗೂ ನನಗೂ ಪ್ರಾಪರ್ಟಿ ಒಂದರ ವಿಚಾರದಲ್ಲಿ ತಕರಾರಿತ್ತು.. ಆ ಕೋಪಕ್ಕೆ ಅವನು ಬಂದು ನನ್ನ ಮೊದಲ ಹೆಂಡತಿಗೆ ನನಗೆ ಎರಡನೇ ಮದುವೆ ಆಗಿರುವ ವಿಚಾರವನ್ನು ಹೇಳಿದ್ದಾನೆ.. ಆನಂತರ ಆಸ್ತಿ ಎಲ್ಲವನ್ನೂ ಆಕೆಗೆ ಕೊಟ್ಟುಬಿಡುತ್ತಾನೆ.. ನಿಮ್ಮ ಮಕ್ಕಳಿಗೆ ಏನೂ ಸಿಗಲ್ಲ ಎಂದು ನನ್ನ ಹೆಂಡತಿಗೆ ಇಲ್ಲಸಲ್ಲದನ್ನು ತುಂಬಿದ್ದಾನೆ.. ಆಗ ಯಾರ್ ತಾನೇ ತನ್ನ ಗಂಡ ಮತ್ತೊಬ್ಬ ಹುಡುಗಿಯನ್ನು ಮದುವೆ ಆಗಿದ್ದಾನೆ ಅಂದ್ರೆ ಬಿಡ್ತಾರೆ.. ಅದೇ ರೀತಿ ಇವಳು ಸಹ ದೂರು ಕೊಟ್ಟಿದ್ದಳು.. ಆದರೆ ನನಗೆ ಮಾತನಾಡೋಕೆ ಇವಳು ಸಿಗಲಿಲ್ಲ.. ನನ್ನ ಹೆಂಡತಿ ಮತ್ತು ಮಗಳನ್ನು ನಶೀದ್ ದಿನಕ್ಕೊಂದು ಜಾಗದಲ್ಲಿ ಇಡುತ್ತಿದ್ದ.. ಆರು ತಿಂಗಳ ನಂತರ ಕೋರ್ಟ್ ನಲ್ಲಿ ನನ್ನ ಹೆಂಡತಿ ಸಾವಿರ ಕೋಟಿ ರೂಪಾಯಿ ಕೊಡುವಂತೆ ಕೇಸ್ ಹಾಕಿದ್ದಳು.. ಆಗ ಅಲ್ಲಿ ನನಗೆ ಎದುರು ನನ್ನ ಹೆಂಡತಿ ಸಿಕ್ಕಿದ್ಳು.. ಆಗ ನಾನು ಮಾತನಾಡಿದೆ.. ನೀನ್ ನನ್ನ್ ಪ್ರಾಣ.. ನನಗೆ ಏನೂ ಇಲ್ಲದಾಗ ನೀನು ಜೊತೆ ಇದ್ದೆ.. ಈಗ ಇಷ್ಟೆಲ್ಲಾ ಹಣ ಸಂಪಾದನೆ ಮಾಡಿದ್ಮೇಲೆ ಹೊರಟು ಹೋಗ್ತೀಯಾ.. ಸರಿ ನಿನಗೆ ಸಾವಿರ ಕೋಟಿ ಬೇಕಾ..

ಅಅಯ್ಯೋ ಇರೋದೆಲ್ಲಾ ನಿನ್ನದೇ.. ನಿನ್ನ ಮಕ್ಕಳದ್ದೇ..‌ಎಲ್ಲರೂ ಚೆನ್ನಾಗಿರಿ.. ನಾನು ಎರಡನೇ ಹೆಂಡತಿಯ ಜೊತೆ ಮನೆ ಬಿಟ್ಟು ಹೋಗಿ ಬಿಡ್ತೀನಿ ಎಂದೆ.. ಆಗ ಅವಳು ಅಲ್ಲಿಯೇ ಬಂದು ನನ್ನನ್ನ ತಬ್ಬಿಕೊಂಡು ನನ್ನದು ತಪ್ಪಾಯ್ತು ರೀ ಅಂತ ಕೇಳಿಕೊಂಡಳು.. ಆಗ ನಾವು ಮನೆಗೆ ಬಂದು ನಂತರ ಆ ಕೇಸ್ ಅನ್ನು ವಾಪಸ್ ಪಡೆದುಕೊಂಡಾಯ್ತು.. ಅದುವಲ್ಲಿಗೆ ಮುಗಿದು ಸಹ ಹೋಯ್ತು.. ಎಂದರು.. ಅಷ್ಟೇ ಅಲ್ಲದೇ ಮಗಳ ವಿಚಾರವನ್ನು ಮಾತನಾಡಲು ಶುರು ಮಾಡುತ್ತಲೇ ಜೋರಾಗಿ ಅಳಲು ಶುರು ಮಾಡಿದ ಬಾಬು ಅಳುತ್ತಲೇ ಆ ಸಮಯದಲ್ಲಿಯೇ ನಿನ್ನ ಅಪ್ಪ ಅಮ್ಮ ಒಂದಾಗಲ್ಲ ಅಂತ ನನ್ನ ಮಗಳ ತಲೆಕೆಡಿಸಿ ಅವಳ ಕೈಯಲ್ಲಿ ಒತ್ತಾಯ ಮಾಡಿ ನನ್ನ ಬಗ್ಗೆ ಆ ರೀತಿ ಕೆಟ್ಟ ಹೇಳಿಕೆ ಕೊಡಿಸಿದರು.. ಎಂದು ಗೋಳಿಟ್ಟರು.. ಇತ್ತ ಮಗಳು ಸಹ ಕಣ್ಣೀರಿಟ್ಟು ಅಪ್ಪನನ್ನು ತಬ್ಬಿಕೊಂಡು ಕ್ಷಮೆ ಕೇಳಿದಳು.. ಬಾಬು ಅಳು ತಡೆಯಲಾಗದೇ ಅಲ್ಲಿಂದ ಎದ್ದು ಹೋದರು..

ಅದೇನೇ ಜಗಳಗಳು ಇರಲಿ.. ಅಥವಾ ಅದೇನೇ ಮನಸ್ತಾಪಗಳಿರಲಿ.. ಅಕಸ್ಮಾತ್ ಬಾಬು ಅವರ ಮೇಲೆ ಅಂದು ಮಾಡಿದ್ದ ಆ ಆರೋಪ ನಿಜಕ್ಕೂ ಸುಳ್ಳಾಗಿದ್ದರೆ ಆ ತಂದೆಯ ಮನಸ್ಸಿಗೆ ಖಂಡಿತ ನೋವಾಗಿರುತ್ತದೆ.. ಮಗಳ ಜೊತೆಯೇ ಆ ಕೆಲಸ ಮಾಡಿದನೆಂದು ಆರೋಪವನ್ನು ಕೇಳುವುದು ನಿಜಕ್ಕೂ ಬೇಸರದ ವಿಚಾರವೇ.. ಇನ್ನು ಅದೇ ಸಮಯದಲ್ಲಿ ನನಗೆ ಹತ್ತು ತಲೆಮಾರು ಕೂತು ತಿನ್ನುವಷ್ಟು ಭಗವಂತ ಆಸ್ತಿ ಕೊಟ್ಟಿದ್ದಾನೆ.. ಈ ರೀತಿ ಎಲ್ಲಾ ಆಗುತ್ತದೆ ಅಂತ ಗೊತ್ತಾಗಿದ್ರೆ ನಾನು ಖಂಡಿತ ಈ ರಾಜಕೀಯಕ್ಕೆ ಬರ್ತಿರ್ಲಿಲ್ಲ.. ನನಗೆ ಯಾಕೆ ಬೇಕಿತ್ತು ಇದೆಲ್ಲಾ ಎಂದರು.. ಒಟ್ಟಿನಲ್ಲಿ‌ ರಾಜಕೀಯ ಅನ್ನೋದು ಏನೇನೆಲ್ಲಾ ಕಲಿಸುತ್ತದೆ ಎಂಬುದಕ್ಕೆ ಸುಮ್ಮನೆ ನೆಮ್ಮದಿಯಾಗಿ ಐಶಾರಾಮಿ ಕಾರ್ ಗಳಲ್ಲಿ ಓಡಾಡಿಕೊಂಡು ಆಗಾಗ ಸುದ್ದಿಯಾಗುತ್ತಿದ್ದ ಬಾಬು ಇಂದು ನೋವು ಪಡುವಂತಾಗಿದ್ದೆ ಉದಾಹರಣೆ.‌. ಇನ್ಮು ಇತ್ತ ಮಗಳು ಮಾತನಾಡಿ ನಿಮಗೂ ಕುಟುಂಬ ಇದೆ.. ಈ ಹಿಂದೆ ಮಾಡಿರೋ ಆ ಆರೋಪಗಳ ಬಗ್ಗೆ ಸತ್ಯ ನಿಮಗೆಲ್ಲಾ ಗೊತ್ತಿಲ್ಲ.. ದಯವಿಟ್ಟು ಯಾರೂ ವಿಚಾರ ಗೊತ್ತಿಲ್ಲದೇ ಏನೇನೋ ಹೇಳಬೇಡಿ.. ನಮಗೂ ಕುಟುಂಬ ಇದೆ ಎಂದು ಕೈ ಮುಗಿದರು..