ಸಾವಿರ‌ ಕೋಟಿ ಇದೆ ಎಂದಿದ್ದ ಕೆಜಿಎಫ್ ಬಾಬು ಕತೆ ಇಂದು ಏನಾಗಿದೆ ನೋಡಿ.. ಇಷ್ಟೇ ಜೀವನ..

0 views

ಕಳೆದ ಕೆಲ ವಾರಗಳಿಂದ ಕೆಜಿಎಫ್ ಬಾಬು ಸಾಕಷ್ಟು ಸುದ್ದಿಯಲ್ಲಿದ್ದರು‌.. ಹೌದು ಕಳೆದ ವರ್ಷ ಅಮಿತಾಬ್ ಬಚ್ಚನ್ ಅವರ ರೋಲ್ಸ್ ರಾಯ್ಸ್ ಕಾರನ್ನು ಖರೀದಿ ಮಾಡಿ ಅದನ್ನು ವರ್ಗಾವಣೆ ಮಾಡಿಕೊಳ್ಳದೇ ಬೆಂಗಳೂರಿನ ಟ್ರಾಫಿಕ್ ಪೋಲೀಸರ ಬಳಿ ಸಿಕ್ಕಿಕೊಂಡಾಗ ಬೆಳಕಿಗೆ ಬಂದಿದ್ದ ಕೆಜಿಎಫ್ ಬಾಬು ಸಧ್ಯ ಕೆಲ ವಾರಗಳಿಂದ ಸಾಕಷ್ಟು ವಿಚಾರಗಳಿಗೆ ಸುದ್ದಿಯಾದರು.. ಹೌದು ರಾಜ್ಯದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಗಳೂರು ನಗರ ಭಾಗದ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು ಯಶಸ್ವಿಯಾಗಿದ್ದ ಕೆಜಿಎಫ್ ಬಾಬು ತಮ್ಮ ಬಳಿ ಸಾವಿರದ ಏಳುನೂರು ಕೋಟಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು.. ರಾಜ್ಯದ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂದೂ ಸಹ ಸುದ್ದಿಯಾಗಿತ್ತು.. ಆದರೀಗ ಚುನಾವಣೆ ನಡೆದು ಫಲಿತಾಂಶವೂ ಸಹ ಹೊರ ಬಂದಿದೆ..

ಹೌದು ಬೆಂಗಳೂರು ನಗರ ಭಾಗದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆಜಿಎಫ್ ಬಾಬು ಇದೀಗ ಹೀನಾಯ ಸೋಲು ಕಾಣುವಂತಾಗಿದೆ.. ಹೌದು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಗೋಪಿನಾಥ್ ರೆಡ್ಡಿ ಅವರು ಜಯಗಳಿಸಿದ್ದಾರೆ.. ಆದರೆ ಇತ್ತ ತಾನು ಸೋತ ತಕ್ಷಣ ಕೆಜಿಎಫ್ ಬಾಬು ಮಾಡಿದ ಕೆಲಸವೇ ಬೇರೆ.. ಹೌದು ಕೆಜಿಎಫ್ ಬಾಬು ಬರಿಗೈಯಲ್ಲಿ ಬಂದು ಗುಜರಿ ಅಂಗಡಿ ಇಟ್ಟು ಅಲ್ಲಿ ಸಿಕ್ಕ ಬಂಗಾರವನ್ನು ಮಾರಿ ಉದ್ಯಮವನ್ನು ಶುರು ಮಾಡಿ ಸಧ್ಯ ಅವರೇ ಹೇಳಿಕೊಂಡಂತೆ ಹತ್ತಿರತ್ತಿರ ಎರಡು ಸಾವಿರ ಕೋಟಿ ರೂಪಾಯಿಯ ಒಡೆಯನಾಗಿರುವವರು.. ಇಂತಹ ಬಾಬು ಕಳೆದ ವರ್ಷ ಕಾರ್ ವಿಚಾರಕ್ಕೆ ಫೇಮಸ್ ಆದ ಬಳಿಕ ಜನರ ಬಳಿ ಗುರುತಿಸಿಕೊಳ್ಳಲು ಮುಂದಾದರು.. ಈ ವರ್ಷ ಎಂ ಎಲ್ ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ಸಹ ಯಶಸ್ವಿಯಾದರು..

ಆದರೆ ಆ ನಂತರ ಸಾಲು ಸಾಲು ಸವಾಲುಗಳು ಎದುರಾದವು.. ಹೌದು ಕೆಜಿಎಫ್ ಬಾಬು ಅವರ ವ್ಯಯಕ್ತಿಕ ವಿಚಾರ ಹೊರಗೆ ಬಂದು ತಮ್ಮ ಮಗಳ ಜೊತೆಯೇ ಬೇರೆ ರೀತಿ ನಡೆದುಕೊಂಡಿದ್ದಾರೆ ಎಂದು ದೂರು ದಾಖಲಾಗಿತ್ತು ಎನ್ನುವವಿಚಾರ ಹೊರ ಬಂತು.. ಆನಂತರ ಮಗಳು ಹೆಂಡತಿಯರನ್ನು ಕೂರಿಸಿಕೊಂಡು ಸುದ್ಧಿಗೋಷ್ಟಿ ಮಾಡಿ ಅದೆಲ್ಲವೂ ಸುಳ್ಳು.. ಯಾರದ್ದೋ ಒತ್ತಾಯದಿಂದ ಆ ರೀತಿ ದೂರು ನೀಡಿದ್ದು ನಿಜ.. ಆದರೆ ನಾವೆಲ್ಲರೂ ಈಗ ಚೆನ್ನಾಗಿದ್ದೇವೆ ಎಂದಿದ್ದರು.. ಅಷ್ಟೇ ಅಲ್ಲದೇ ಮಗಳ ವಿಚಾರಕ್ಕೆ ಕಣ್ಣೀರು ಸಹ ಹಾಕಿದರು.. ಅತ್ತ ಮಗಳು ಸಹ ಕ್ಷಮಿಸಿಬಿಡಿ ಎಂದು ಕಣ್ಣೀರಿಟ್ಟಿದ್ದರು.. ಅಷ್ಟೇ ಅಲ್ಲದೇ ನನಗೆ ಹತ್ತು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಇದೆ..

ನನಗೆ ಇದೆಲ್ಲಾ ಬೇಕಿತ್ತಾ.. ನನ್ನ ಬಗ್ಗೆ ಈತರ ಎಲ್ಲಾ ಮಾತಾಡ್ತಾರೆ ಎಂದು ತಿಳಿದರೆ ನಾನಿ ಚುನಾವಣೆಗೆ ನಿಲ್ತಾ ಇರ್ಲಿಲ್ಲ ಎಂದಿದ್ದರು.. ಇನ್ನು ಇದೆಲ್ಲದರ ನಡುವೆಯೂ ಕೆಜಿಎಫ್ ಬಾಬು ಅವರು ಚುನಾವಣಾ ಪ್ರಚಾರವನ್ನು ಭರ್ಜರಿಯಾಗಿಯೇ ಮಾಡಿದ್ದರು.. ತಾವು ಎಂ ಎಲ್ ಸಿ ಯಾದರೆ ಸಾಕಷ್ಟು ಉಡುಗೊರೆ ನೀಡುವ ವಿಚಾರವನ್ನೂ ಸಹ ತಿಳಿಸಿದ್ದರು.. ಪ್ರತಿಯೊಬ್ಬ ಪಂಚಾಯತ್ ಸದಸ್ಯನಿಗೆ ಸ್ಕೂಟರ್ ಸಹ ಕೊಡಿಸುವುದಾಗಿ ಹೇಳಿದ್ದರು.. ಆದರೆ ಅದ್ಯಾಕೋ‌ ಮತದಾರರು ಬಾಬು ಅವರಿಗೆ ಮನಸೋಲಲಿಲ್ಲ.. ಎಷ್ಟೇ ಹಣವಿದ್ದರೂಸಹ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ.. ಹಣದಿಂದ ಚುನಾವಣೆ ಗೆಲ್ಲಬಹುದು ಎನ್ನುವ ಮಾತು ಇಂದು ಸುಳ್ಳಾಯಿತು..

ಅಷ್ಟೇ ಅಲ್ಲದೇ ಇಂದಿನ ದಿನದವರೆಗೂ ತಾವೇ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಹೊಂದಿದ್ದ ಕೆಜಿಎಫ್ ಬಾಬು ಬೆಳಿಗ್ಗೆ ಮತ ಏಣಿಕಾ ಕೇಂದ್ರಕ್ಕೆ ಐಶಾರಾಮಿ ಕಾರೊಂದರಲ್ಲಿ ಬಂದರು.. ಆದರೆ ಆರಂಭದ ಹಂತದಿಂದದಲೂ ಹಿನ್ನೆಡೆ ಅನುಭವಿಸಿದ ಬಾಬು ಕೊನೆ ಕ್ಷಣದವರೆಗೂ ಕಾದರು.. ಆದರೆ ಯಾವಾಗ ತಮ್ಮ ಸೋಲು ಖಚಿತವೆಂದು ಕಂಡಿತೋ ಆಗಲೇ ಮತ ಏಣಿಕಾ ಕೇಂದ್ರದಿಂದ ಹೊರ ಬಂದ ಬಾಬು ಅವರು ತಮ್ಮ ಕಾರ್ ನಲ್ಲಿ ಹೋಗದೇ ಆಟೋ ಹತ್ತಿ ಹೊರಟುಬಿಟ್ಟರು.. ಮಾದ್ಯಮದವರು ಮಾತನಾಡಿಸಲು ಮುಂದಾದರೂ ಸಹ ಆಟೋದವರಿಗೆ ಮುಂದೆ ಹೋಗಲು ತಿಳಿಸಿದದು.. ಇಷ್ಟೇ ಜೀವನ ಹಣ ಇದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದು ಸತ್ಯವಲ್ಲ ಎಂಬುದು ಈ ಮೂಲಕ ಸಾಭೀತಾಯಿತಷ್ಟೇ..