ಹುಟ್ಟಿದ ದಿನವೇ ಮೇಘನಾರ ಮಗು ಮಾಡಿದ ಕೆಲಸಕ್ಕೆ ಆಶ್ಚರ್ಯಗೊಂಡ ಚಿರು ಕುಟುಂಬ..

0 views

ಚಿರು ಸರ್ಜಾ ಕುಟುಂಬದಲ್ಲಿ ಇದೀಗ ಬೆಳಕು ಮೂಡಿದೆ.. ಚಿರು ಅಗಲಿಕೆಯಿಂದ ಮೋಡ ಕವಿದಿದ್ದ ಸೂರ್ಯನೀಗ ಮಗುವಿನ ಮೂಲಕ ಪ್ರಕಟಗೊಂಡಿದ್ದಾನೆ.. ಪ್ರಕಾಶಮಾನವಾಗಿ ಬೆಳಕು ಸೂಸುವ ಮೂಲಕ ಆ ಎರಡೂ ಕುಟುಂಬದ ನೋವುಗಳನ್ನು ದೂರ ಮಾಡಿತೆನ್ನಬಹುದು.. ಹೌದು ಮೊನ್ನೆ ಅಕ್ಟೋಬರ್ 22 ರಂದು ಸರ್ಜಾ ಕುಟುಂಬಕ್ಕೆ ಹಾಗೂ ಸುಂದರ್ ರಾಜ್ ಅವರ ಕುಟುಂಬಕ್ಕೆ ವಿಶೇಷದಲ್ಲಿ ವಿಶೇಷ ದಿನವಾಗಿದೆ.. ಅದರಲ್ಲೂ ಹುಟ್ಟುದ ದಿನವೇ ಮಗು ಮಾಡಿದ ಕೆಲಸಕ್ಕೆ ಕುಟುಂಬ ಮಾತ್ರವಲ್ಲ ಅಭಿಮಾನಿಗಳು ಸಹ ಆಶ್ಚರ್ಯಗೊಂಡಿದ್ದಾರೆ..

ಹೌದು ಕಳೆದ ನಾಲ್ಕು ತಿಂಗಳಿನಿಂದ ಮೇಘನಾ ರಾಜ್ ಅವರು ಕಾಯುತ್ತಿದ್ದ ಸಮಯ ಮೊನ್ನೆ ಬಂದಿತು.. ಎಲ್ಲರೂ ಸಹ ಅಕ್ಟೋಬರ್ 17 ಚಿರು ಹುಟ್ಟಿದ ಹಬ್ಬದ ದಿನವೇ ಮಗುವಿನ ಜನನವಾಗಬಹುದೆಂದುಕೊಂಡಿದ್ದರು.. ಆದರೆ ಚಿರು ಹಾಗೂ ಮೇಘನಾರ ಅಪಾರ ಪ್ರೀತಿಗೆ ಸಾಕ್ಷಿಯಾಗಿ 22 ರಂದು ಮಗುವಿನ ಜನನವಾಗಿರುವುದು ಮತ್ತಷ್ಟು ವಿಶೇಷವಾಗಿದೆ.. ಹೌದು 2017 ಅಕ್ಟೋಬರ್ 22 ರಂದು ಚಿರು ಹಾಗೂ ಮೇಘನಾರ ನಿಶ್ಚಿತಾರ್ಥ ನೆರವೇರಿತ್ತು.. ಇಂದು ಮೂರು ವರ್ಷಕ್ಕೆ ಸರಿಯಾಗಿ ಅದೇ ಮಗುವಿನ ಜನನವಾಗಿದ್ದು ಇದಕ್ಕಿಂತ ವಿಶೇಷ ದಿನ ಮತ್ತೊಂದು ಇರಲು ಸಾಧ್ಯವಿಲ ಎಂದಿದ್ದಾರೆ ಕುಟುಂಬದವರು..

ಹೌದು ಇನ್ನು ಮಗುವಿನ ಜನನದ ಬಳಿಕ ಮಾತನಾಡಿದ ಧೃವ ಸರ್ಜಾ ಅಣ್ಣ ಮತ್ತೆ ಹುಟ್ಟಿ ಬಂದಿದ್ದಾನೆ.. ಆ ಸಂತೋಷ ಹೇಳಿಕೊಳ್ಳಲು ಸಾಧ್ಯವೇ ಇಲ್ಲ.. ಮಗುವನ್ನು ಎತ್ತಿಕೊಂಡಾಗ ಆದ ಸಂತೋಷಕ್ಕೆ ಆ ಕ್ಷಣದಲ್ಲಿ ನನಗೆ ಹೇಗೆ ಅನ್ನಿಸಿತು ಅಂತ ತಿಳಿಯಲೇ ಇಲ್ಲವೆಂದರು.. ಅತ್ತ ಸುಂದರ್ ರಾಜ್ ಅವರು ಮಾತನಾಡಿ ಕಳೆದ ನಾಲ್ಕು ತಿಂಗಳಿನಿಂದ ನಾನು ಏನು ನೋವು ಅನುಭಬಿಸಿದ್ದೆನೆಂದು ನನ್ನ ಹೆಂಡತಿಗೆ ಮಾತ್ರವೇ ಗೊತ್ತು.. ಅವಳು ಏನು ನೋವು ಪಟ್ಟಳೆಂದು ನನಗೆ ಮಾತ್ರವೇ ಗೊತ್ತು.. ನಾವಿಬ್ಬರು ಕೊರಗಿ ಹೋದ ಸಮಯದಲ್ಲಿ ನನ್ನ ಮಗಳೇ ನಮಗೆ ಧೈರ್ಯ ಕೊಟ್ಟಳು.. ಈಗಲೂ ಮೇಘನಾಳನ್ನು ನೋಡಿದರೆ ಕಣ್ಣೀರು ನಿಲ್ಲೋದಿಲ್ಲ ನನಗೆ.. ಆದರೆ ಇಂದು ನಮ್ಮ ನೋವೆಲ್ಲಾ ದೂರ ಆಗಿದೆ.. ನನ್ನ ಪ್ರೀತಿಯ ಅಳಿಯ ಮತ್ತೆ ಹುಟ್ಟಿ ಬಂದಿದ್ದಾನೆ.. ಹೆಣ್ಣಾಗಿದ್ದರೆ ಕಿತ್ತೂರು ರಾಣಿ ಚೆನ್ನಮ್ಮ ಎಂದು ಕೊಳ್ಳುತ್ತಿದ್ದೆ.. ಗಂಡು ಮಗುವಾಗಿದೆ ಸಂಗೊಳ್ಳಿ ರಾಯಣ್ಣ ಎಂದುಕೊಳ್ಳುವೆ ಎಂದು ಒಬ್ಬ ತಂದೆಗೆ ಮಗಳ ಈ ಸನ್ನಿವೇಶ ನೋಡಿದಾಗ ಆಗುವ ನೋವಿನ ಬಗ್ಗೆ ಹೇಳಿಕೊಂಡು ಮಗುವಿನ ಸಂತೋಷವನ್ನು ಹಂಚಿಕೊಂಡರು..

ಚಿರು ಸರ್ಜಾರ ಪುಣ್ಯ ಕಾರ್ಯ ಮಾಡುವ ಸಂದರ್ಭದಲ್ಲಿ ಕುಟುಂಬ ಮನೆ ಮಗನಿಗಾಗಿ ಒಂದು ಪತ್ರ ಎಂದು ಬರೆದು ಆ ಪತ್ರದ ತುಂಬೆಲ್ಲಾ ನಿನ್ನ ಮಗನಾಗಿ ಮರಳಿ ಹುಟ್ಟಿ ಬಂದುಬಿಡು ಎಂದು ಬಹಳಷ್ಟು ಮನವಿ ಮಾಡಿಕೊಂಡಿದ್ದರು..

ಬಹುಶಃ ಎಲ್ಲರ ಪ್ರಾರ್ಥನೆ ಚಿರುಗೆ ತಲುಪಿರಬಹುದು.. ತಮ್ಮ ಮಗುವಾಗಿ ತಾವೇ ಹುಟ್ಟಿ ಬಂದಿದ್ದಾರೆ.. ಅದರಲ್ಲೂ ಮಗು ಸಂಪೂರ್ಣವಾಗಿ ಚಿರುವಿನ ಹೋಲಿಕೆಯನ್ನು ಹೊತ್ತು ಬಂದಿರುವುದು ಮೇಘನಾರಿಗೆ ಸಂತೋಷವನ್ನುಂಟು ಮಾಡಿದೆ.. ಅಷ್ಟೇ ಅಲ್ಲದೇ ಹುಟ್ಟುದ ದಿನವೇ ಧೃವ ಸರ್ಜಾ ಅವರು ಮಗುವನ್ನು ಎತ್ತಿಕೊಂಡ ಸಮಯದಲ್ಲಿ ಧೃವರನ್ನೇ ನಗುತ್ತಾ ದಿಟ್ಟಿಸಿ ನೋಡುತ್ತಿದ್ದ ಆ ನೋಟ ಕ್ಯಾಮರಾಗಳಲ್ಲಿ ಸೆರೆಗೊಂಡಿದ್ದು ನಿಜಕ್ಕೂ ತಮ್ಮನನ್ನು ನೋಡಿದಂತೆಯೇ ಭಾಸವಾಯಿತೆಂದು ಹತ್ತಿರದವರು ಹಂಚಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಹುಟ್ಟಿದ ಮಗು ಸಾಮಾನ್ಯವಾಗಿ ಮೊದಲ ಕೆಲ ದಿನಗಳು ಹೆಚ್ವು ನಿದ್ರಿಸುತ್ತವೆ..

ಆದರೆ ಮೇಘನಾರ ಈ ಕಂದ ಮಾತ್ರ ತನ್ನ ಕುಟುಂಬದವರು ಎಲ್ಲರೂ ಬಂದ ಸಮಯದಲ್ಲಿ ನಗುತ್ತಲೇ ಎಲ್ಲರತ್ತ ಪಿಳಿಪಿಳಿ ಎಂದು ಕಣ್ಣು ಬಿಟ್ಟು ನೀಡುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕಂದನ ಸಾಕಷ್ಟು ಫೋಟೋಗಳು ವೈರಲ್ ಆಗಿವೆ.. ಇನ್ನು ಚಿರು ಮಾವ ಅರ್ಜುನ್ ಸರ್ಜಾರಿಗೆ ವೀಡಿಯೋ ಕಾಲ್ ನಲ್ಲಿ ಮಗುವನ್ನು ತೋರಿಸುವ ಸಮಯದಲ್ಲಿ ಆಗಲೇ ಮುತ್ತು ನೀಡುವಂತೆ ಮುಖ ಮಾಡಿಕೊಂಡಿದ್ದು.. ಚಿರುವಿನಂತೆ ಹೆಚ್ಚು ಅಳದೇ ಸದಾ ನಗುನಗುತ್ತಲೇ ಇರುವುದ ಕಂಡು ಕುಟುಂಬಕ್ಕೆ ಚಿರುವೇ ಜೊತೆಯಲ್ಲಿ ಇರುವಂತೆ ಭಾಸವಾಗುತ್ತಿದೆ.. ಅಭಿಮಾನಿಗಳು ಪುಟ್ಟ ಚಿರುವಿನ ನಗುವಿಗೆ.. ನೋಟಕ್ಕೆ.. ಫಿದಾ ಆಗಿದ್ದು ಆ ಕಂದ ನೂರ್ಕಾಲ ಸುಖವಾಗಿ ಬಾಳಲೆಂದು ಶುಭ ಹಾರೈಸಿದ್ದಾರೆ..