ಮದುವೆಗೆ ಮುನ್ನವೇ ಆತನ ಜೊತೆ ಆ ಕೆಲಸ ಮಾಡಿದಳು.. ಆದರೆ ಈಗ ಆಕೆಯ ಸ್ಥಿತಿ ಏನಾಗಿದೆ ನೋಡಿ‌.. ದಯವಿಟ್ಟು ಯಾರೂ ಇಂತಹ ಕೆಲಸ ಮಾತ್ರ ಮಾಡಬೇಡಿ..

0 views

ವಯಸ್ಸಿನಲ್ಲಿ ಪ್ರೀತಿ ಆಗೋದು ಸಹಜ.. ಕೆಲವೊಮ್ಮೆ ವಯಸ್ಸಿನಲ್ಲಿ ಆಗುವ ಆಕರ್ಷಣೆಗಳನ್ನೇ ಪ್ರೀತಿ ಎಂದುಕೊಂಡು ಸಾಕಷ್ಟು ಜನರು ಜೀವನವನ್ನೇ ಹಾಳು ಮಾಡಿಕೊಂಡ ಸಾಕಷ್ಟು ಘಟನೆಗಳು ಪ್ರತಿದಿನ ನಡೆಯುತ್ತಲೇ ಇದ್ದು ಸುದ್ದಿಗಳಲ್ಲಿ‌ ನೋಡುತ್ತಲೇ ಇರುತ್ತೇವೆ.. ಆದರೂ ಸಹ ಕೆಲವರು ಬುದ್ಧಿ ಮಾತ್ರ ಕಲಿಯೋದಿಲ್ಲ.. ಪ್ರೀತಿ ಎಂದಾಕ್ಷಣ ಮದುವೆಗೂ ಮುನ್ನವೇ ಸೇರೋದು ನಂತರ ಈ ರೀತಿಯ ಸ್ಥಿತಿಗಳನ್ನು ತಂದುಕೊಳ್ಳೋದು.. ಹೌದು ಇಲ್ಲೊಂದು ಅಂತಹುದೇ ಘಟನೆ ನಡೆದಿದ್ದು ನಿಜಕ್ಕೂ ಸಮಾಜಕ್ಕೊಂದು ಪಾಠವೆಂದರೂ ತಪ್ಪಾಗಲಾರದು..

ಹೌದು ಈಕೆ ದಾಸರಹಳ್ಳಿಯ ನಿವಾಸಿ.. ಆತನ ಹೆಸರು ಅರುಣ್.. ಆಕೆ ಖಾಸಗಿ ಕೆಲಸ ಮಾಡಿಕೊಂಡಿದ್ದಾಳೆ.. ಆಕೆಗೆ ಅರುಣ ಕಳೆದ ಹತ್ತು ತಿಂಗಳ ಹಿಂದೆ ಪರಿಚಯವಾದ ಐದು ತಿಂಗಳ ಹಿಂದೆ ಪ್ರೀತಿಸ್ತೀನಿ ಎಂದ.. ಅದನ್ನು ನಂಬಿದ ಯುವತಿ ಇಬ್ಬರೂ ಒಂದೇ ಮನೆಯಲ್ಲಿ ವಾಸ ಮಾಡಲು ಶುರು ಮಾಡಿದ್ರು.. ಮದುವೆ ಆಗ್ತೀನಿ ಎಂದ ಈಕೆ ಹೆಣ್ಣಿಗೆ ಬಹುಮುಖ್ಯವಾದದ್ದನ್ನೇ ಕೊಟ್ಟು ತನ್ನ ಹೆಣ್ತನವನ್ನು ಆತನಿಗೆ ಒಪ್ಪಿಸಿದಳು.. ಕೊನೆಗೆ ಈಕೆ ಗರ್ಭಿಣಿಯಾದಳು.. ಆತ ನಾನು ಮದುವೆಯಾಗೋದಿಲ್ಲ ಎಂದ.. ಇಷ್ಟೇ ಈಗ ಆ ಹುಡುಗಿ ಆ ಹುಡುಗನಿಗಾಗಿ ಬೀದಿಯಲ್ಲಿ ನಿಲ್ಲುವಂತಾಗಿದೆ.. ಅಷ್ಟೇ ಅಲ್ಲದೇ ಆಕೆಯಿಂದ ನಾಲ್ಕು ಲಕ್ಷ ರೂಪಾಯಿಯನ್ನೂ ಸಹ ಪಡೆದುಕೊಂಡಿದ್ದಾನೆ..

ಇನ್ನು ಯುವತಿ ತನಗೂ ಸಹ ಆತನೊಂದಿಗೆ ಸಂಪರ್ಕ ಹೊಂದಲು ಒಪ್ಪಿಗೆಯಿತ್ತು ಎಂಬುದನ್ನು ತಿಳಿಸೊ ಸವಿವರವಾಗಿ ದೂರು ನೀಡಿದ್ದಾಳೆ… ನಾನು ಮೇಲೆ ತಿಳಿಸಿರುವ ವಿಳಾಸದಲ್ಲಿ ವಾಸವಾಗಿದ್ದೇನೆ.. ಹಾಗೂ ಖಾಸಗಿ ಕೆಲಸ ಮಾಡಿಕೊಂಡಿರುತ್ತೇನೆ.. ನನಗೆ ಅರುಣ್ ಎಂಬ ಹುಡುಗನು ಸುಮಾರು 10 ತಿಂಗಳಿನಿಂದ ಪರಿಚಯವಾಗಿದ್ದು.. ಅರುಣ ನನ್ನನ್ನು ಪ್ರೀತಿಸುವುದಾಗಿ 5ತಿಂಗಳ ಹಿಂದೆ ತಿಳಿಸಿದ್ದನು.. ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೆವು.. ನಂತರ ನಾನು ಮತ್ತು ಅರುಣನು ಒಂದೇ ಮನೆಯಲ್ಲಿ ವಾಸವಿದ್ದೆವು.. ಅರುಣ ನನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದನು.. ನನ್ನೊಂದಿಗೆ ಸಂಪರ್ಕ ಹೊಂದಿದ್ದು ಅದಕ್ಕೆ ನನಗೂ ಒಪ್ಪಿಗೆಯಿತ್ತು.. ಆದರೆ ನಾವಿಬ್ಬರು ಒಟ್ಟಿಗೆ ಸೇರಿದ್ದರ ಫಲವಾಗಿ ನಾನು ಈಗ ಗರ್ಭಿಣಿಯಾಗಿದ್ದೇನೆ..

ಈ ವಿಷಯವನ್ನು ಆರುಣನಿಗೆ ತಿಳಿಸಿದಾಗ ಆತನು ಮಗುವನ್ನು ತೆಗೆಸಿಬಿಡು ಎಂದಿದ್ದಾನೆ.. ಅಷ್ಟೇ ಅಲ್ಲದೇ ನಾನು ನಿನ್ನನ್ನು ಪ್ರೀತಿಸುತ್ತಿಲ್ಲ.. ಮದುವೆಯೂ ಸಹ ಆಗುವುದಿಲ್ಲ.. ನೀನು ಏನು ಬೇಕಾದರೂ ಮಾಡಿಕೊ ಎಂದು ಹೇಳಿದ್ದಾನೆ.. ಜೊತೆಗೆ ತನ್ನ ಮನೆಯಲ್ಲಿ ಏನೋ ಸಮಸ್ಯೆ ಇದೆ ಎಂದು ಹೇಳಿ ನನ್ನ ಬಳಿ 4 ಲಕ್ಷ ರೂಪಾಯಿ ಹಣವನ್ನು ಸಹ ಪಡೆದುಕೊಂಡಿದ್ದಾನೆ.. ಈಗ ಆ ಹಣವನ್ನು ಕೇಳಿದರೆ ನೀನು ನನಗೆ ಯಾವುದೇ ಹಣವನ್ನು ಕೊಟ್ಟಿಲ್ಲ ಎನ್ನುತ್ತಿದ್ದಾನೆ.. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಯುವತಿ ತಿಳಿಸಿದ್ದಾಳೆ. ದಯವಿಟ್ಟು ಯಾರೇ ಆಗಲಿ ಜೀವನದ ತಿಳುವಳಿಕೆ ಬರುವ ಮುನ್ನ ಯಾರೂ ಆಕರ್ಷಣೆಗಳನ್ನ ಪ್ರೀತಿ ಎಂದುಕೊಂಡು ಜೀವನ ಹಾಳು ಮಾಡಿಕೊಳ್ಳಬೇಡಿ.. ಈಗ ಹೊಟ್ಟೆಯಲ್ಲಿ ಮಗು ಇದೆ.. ಆತ ಮದುಚೆಯಾಗೋದಿಲ್ಲ ಎನ್ನುತ್ತಿದ್ದಾನೆ.. ಆಕೆಯ ಮುಂದಿನ ಜೀವನ.. ನಿಜಕ್ಕೂ ನಾವುಗಳು ಹೇಳಿದಷ್ಟು ಸುಲಭವಲ್ಲ..

ಅದೊಂದು ದಿನ ವಯಸ್ಸಿನ ಆಸೆಗಳಿಗೆ ಕಡಿವಾಣ ಹಾಕದೇ ದುಡುಕುವ ಮುನ್ನ ಸ್ವಲ್ಪ ಯೋಚಿಸಿದ್ದರೂ ಇಂದು ಇಂತಹ ಸ್ಥಿತಿ ಬರುತ್ತಿರಲಿಲ್ಲ.. ಯಾರೇ ಆಗಲಿ ಆತ ಎಷ್ಟೇ ಆತ್ಮೀಯನಾಗಲಿ.. ಅಥವಾ ಮದುವೆ ನಿಶ್ಚಯವೇ ಆಗಿರಲಿ.. ಮದುವೆಗೆ ಮುನ್ನ ದಯವಿಟ್ಟು ಯಾರೂ ಸಹ ತಪ್ಪು ಮಾಡಬೇಡಿ.. ಪ್ರೀತಿ ಅಥವಾ ಮದುವೆ ಎಂಬ ಸಂಬಂಧಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಇದೆ.. ನಿಮ್ಮಗಳ ಆಸೆಗಳನ್ನು ತೀರಿಸಿಕೊಳ್ಳಲು ಪ್ರೀತಿ ಎಂಬ ಹೆಸರು ಕೊಡಬೇಡಿ.. ನಿಮ್ಮನ್ನು ನಿಜವಾಗಿಯೂ ಪ್ರೀತಿಸುವವರು ಹೆಣ್ಣಾಗಲಿ ಗಂಡಾಗಲಿ‌ ಮದುವೆಗೆ ಮುನ್ನ ಇಂತಹ ಆಸೆಗಳನ್ನು ಪಡುವುದೂ ಸಹ ಇಲ್ಲ.. ಜೀವನ ಮುಖ್ಯ.. ಅರೆಕ್ಷಣದ ಆಸೆಗಾಗಿ ಜೀವನವನ್ನೇ ಹಾಳು ಮಾಡಿಕೊಳ್ಳಬೇಡಿ.. ಈಗ ಅವರ ಅಪ್ಪ ಅಮ್ಮ ಮಗಳ ಜೀವನ ಈ ರೀತಿ ಆಯಿತೆಂದು ಜೀವನ ಪೂರ್ತಿ ಕೊರಗಬೇಕು.. ಮದುವೆಯೇ ಇಲ್ಲದೇ ಹೊಟ್ಟೆಯಲ್ಲಿ ಮಗು ಇದೆ ಎಂದು ನೋವು ಪಡಬೇಕು.. ಅವರೇನು ತಪ್ಪು ಮಾಡಿದ್ದರು.. ಸ್ವಲ್ಪ ಆಲೋಚಿಸಿ..