ವಯಸ್ಸಿಗೆ ಬಾರದ ಮಗಳಿಗೆ ರಾತ್ರೋ ರಾತ್ರಿ ಮದುವೆ ಮಾಡಿಸಿದ್ರು.. ಆದರೆ ರಾತ್ರಿ ಕಳೆಯುವುದರೊಳಗೆ ಆಕೆಯ ಸ್ಥಿತಿ ಏನಾಗಿದೆ ನೋಡಿ..

0 views

ದೇಶದೆಲ್ಲೆಡೆ ಕೊರೊನಾ ಎರಡನೇ ಅಲೆ ಹೆಚ್ಚಾಗಿದೆ.. ನಿಯಂತ್ರಣ ಮಾಡಲು ಅತ್ತ ಸರ್ಕಾರ ಲಾಕ್ ಡೌನ್ ಮಾಡಿ ಹರಸಾಹಸ ಪಡುತ್ತಿದೆ.. ಇತ್ತ ಬಡ ಜನರ ಜೀವನ ಬೀದಿಗೆ ಬೀಳುತ್ತಿದ್ದು ತಿನ್ನುವ ಊಟಕ್ಕೂ ಕಷ್ಟ ಪಡುವಂತಾಗಿದೆ.. ಇನ್ನೂ ಇದೆಲ್ಲದರ ನಡುವೆ ಮದುವೆ.. ಗೃಹಪ್ರವೇಶ ಅಂತ ಶುಭಾ ಸಮಾರಂಭಗಳು ಸಹ ನಡೆಯುತ್ತಲೇ ಇವೆ.. ಆದರೆ ಇಲ್ಲೊಂದು ಮನಕಲಕುವ ಘಟನೆ ನಡೆದಿದ್ದು ಇನ್ನೂ ವಯಸ್ಸಿಗೆ ಬಾರದ ಮಗಳ ಮದುವೆಯನ್ನು ರಾತ್ರೋ ರಾತ್ರಿ ಪೋಷಕರು ಮಾಡಿಸಿದ್ದು ಬೆಳಗಾಗುವುದರೊಳಗೆ ಆಕೆಯ ಸ್ಥಿತಿ ಬೇರೆಯೇ ಆಗಿದೆ.. ಹೌದು ಕೊರೊನಾ ಸಮಯದಲ್ಲಿ ಇಂತಹ ಘಟನೆಗಳು ಸಾಕಷ್ಟು ನಡೆಯುತ್ತಿದ್ದು ಇಂತಹ ಕಷ್ಟದ ಸಮಯದಲ್ಲಿಯೂ ಸಹ ಜವಾಬ್ದಾರಿಯಿಂದ ಕೈ ತೊಳೆದುಕೊಳ್ಳುವ ಸಲುವಾಗಿ ಈ ರೀತಿ ಇನ್ನೂ ಸಹ ವಯಸ್ಸಿಗೆ ಬಾರದ ಅನೇಕ ವಿವಾಹ ಗಳು ನಡೆದುಹೋಗಿವೆ.. ಹೌದು ಈ ಘಟನೆ ನಡೆದಿರೋದು ಬೇರೆ ಯಾವುದೋ ದೂರದ ಊರಲಲ್ಲ.. ಬದಲಿಗೆ ನಮ್ಮದೇ ರಾಜ್ಯದ ಬಾಗಲಕೋಟೆಯಲ್ಲಿ..

ಹೌದು ಬಾಗಲಕೋಟೆ ಜಿಲ್ಲೆಯ ಹನಗುಂದ ತಾಲೂಕಿನ ಹಳ್ಳಿವೊಂದರಲ್ಲಿ ಕುಟುಂಬವೊಂದು ಇನ್ನೂ ಸಹ ವಯಸ್ಸಿಗೆ ಬಾರದ ಮಗಳಿಗೆ ಮದುವೆ ಮಾಡಲು ಮುಂದಾಗಿದ್ದಾರೆ.. ಅಂದುಕೊಂಡಂತೆ ಎಳೆ ಹುಡುಗಿಗೆ ಮದುವೆಯ ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದಾರೆ.. ಆದರೆ ಯಾರೋ ಚಿಕ್ಕ ಹುಡುಗಿಗೆ ಮದುವೆ ಮಡೆಯುತ್ತಿರುವ ವಿಚಾರವನ್ನು‌ ಪೊಲೀಸರಿಗೆ ತಿಳಿಸಿದ್ದಾರೆ.. ತಕ್ಷಣ ಗ್ರಾಮಕ್ಕೆ ಆಗಮಿಸಿದ ಪೊಲೀಸರು ಆ ಹುಡುಗಿಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಆದರೆ ಚಾಲಾಕಿಗಳು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ವಾಪಸ್ ಕಳುಹಿಸಿಬಿಟ್ಟಿದ್ದಾರೆ.. ಹೌದು ನಮ್ಮ ಮನೆಯಲ್ಲಿ‌ ಕೊರೊನಾದಿಂದ ಜೀವ ಕಳೆದುಕೊಂಡಿದ್ದಾರೆ.. ನಾವ್ಯಾಕೆ ಮದುವೆ ಮಾಡೋಣ.. ನಾವು ಈಗಾಗಲೇ ನೋವಲ್ಲಿ ಇದ್ದೀವಿ.. ನೀವು ಸಹ ನೋವು ಕೊಡಬೇಡಿ ಎಂದಿದ್ದಾರೆ.. ಕುಟುಂಬದವರ ಮಾತನ್ನು ನಂಬಿದ ಪೊಲೀಸರು ವಾಪಸ್ ಬಂದಿದ್ದಾರೆ..

ಆದರೆ ಪೊಲೀಸರು ಮರಳುತ್ತಿದ್ದಂತೆ ಬೆಳಿಗ್ಗೆಯ ವರೆಗೂ ಕಾಯದೆ ರಾತ್ರೋ ರಾತ್ರಿಯೇ ಹದಿನೆಂಟು ತುಂಬದ ಆ ಹೆಣ್ಣು ಮಗಳಿಗೆ ಮದುವೆ ಮಾಡಿಸಿಯೇ ಬಿಟ್ಟಿದ್ದಾರೆ.. ಹೌದು ರಾತ್ರಿ ಸಮಯದಲ್ಲಿಯೇ ಮದುವೆ ಮಾಡಿಸಿ ಗಂಡು ಹೆಣ್ಣನ್ನು ಬೇರೆಯವರ ಮನೆಯಲ್ಲಿ ಇರಿಸಿ ಶಾಸ್ತ್ರಗಳನ್ನು ನೆರವೇರಿಸಿದ್ದಾರೆ.. ಆದರೆ ವಿಚಾರ ಪೊಲೀಸರಿಗೆ ತಲುಪಿದ್ದು ಮತ್ತೆ ಸ್ಥಳಕ್ಕೆ ಆಗಮಿಸಿದ್ದಾರೆ.. ಆದರೆ ಆಗಲೂ ಸಹ ಪೋಷಕರು ಪೊಲೀಸರ ಜೊತೆ ವಾದವನ್ನೇ ಮಾಡಿದ್ದು ಮದುವೆ ಮಾಡಿಲ್ಲ ಎಂದೇ ಹೇಳಿದ್ದಾರೆ.. ನೋಡೋ ಅಷ್ಟು ನೋಡಿ ಸಾಕಾದ ಪೊಲೀಸರು ಇದನ್ನು ಇಲ್ಲಿಗೆ ಬಿಟ್ಟರೆ ಸರಿ ಬರೋದಿಲ್ಲವೆಂದು ತಕ್ಷಣ ಲೊಕೆಶನ್ ಮೂಲಕ ಹುಡುಗಿಯನ್ನು ಆಕೆ ಇರುವ ಜಾಗದಲ್ಲಿಯೇ ಪತ್ತೆ ಮಾಡಲಾಯಿತು..

ಆದರೆ ಮುಂದೆ ನಡೆದಿರೋದೆ ಬೇರೆ.. ಹೌದು ಹುಡುಗಿಯನ್ನು ಸಂರಕ್ಷಣೆ ಮಾಡಿ ಇಳಕಲ್ ನ ಸಾಂತ್ವಾನ ಕೇಂದ್ರದಲ್ಲಿ ಇರಿಸಿ ಮೊದಲು ವೈದ್ಯಕೀಯ ತಪಾಸಣೆ ನಡೆಸಿದರು.. ಆದರೆ ಅಲ್ಲಿಯೇ ಪೊಲೀಸರಿಗೆ ಶಾಕ್ ಕಾದಿತ್ತು.. ಹೌದು ನಿನ್ನೆ ರಾತ್ರಿಯಷ್ಟೇ ಮದುವೆಯಾಗಿದ್ದ ಪುಟ್ಟ ಹುಡುಗಿಗೆ ಕೊರೊನಾ ಪಾಸಿಟಿವ್ ಆಗಿದ್ದು ಸಧ್ಯ ಇದೀಗ ಆಕೆಯನ್ನು ಕೋವಿಡ್ ಸೆಂಟರ್ ನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.. ನೆಮ್ಮದಿಯಾಗಿ ಆಡಿಕೊಂಡು ಮನೆಯಲ್ಲಿ ಸುರಕ್ಷಿತವಾಗಿರಬೇಕಾದ ಹೆಣ್ಣು ಮಗಳಿಗೆ ಮದುವೆ ಎಂಬ ಜವಾಬ್ದಾರಿ ತೊಳೆದುಕೊಳ್ಳಲು ಇಂತಹ ಸಮಯದಲ್ಲಿ‌ ಮದುವೆ ಮಾಡಿದ್ರು..

ಇದೀಗ ಆಕೆಗೆ ಕೊರೊನಾ ಪಾಸಿಟಿವ್ ಆಗಿದ್ದು ಅಕಸ್ಮಾತ್ ಆಕೆಗೆ ಹೆಚ್ಚು ಕಡಿಮೆಯಾದರೆ ಯಾರು ಹೊಣೆ? ಮದುವೆ ಸಂಭ್ರಮದಲ್ಲಿದ್ದ ಹೆತ್ತವರು ಮುಂದೆ ಜೀವನ ಪೂರ್ತಿ ಕೊರಗೋದಂತೂ ಖಚಿತ.. ಯಾಕ್ರಯ್ಯಾ ಈ ಬಾಳು.. ಇನ್ನೊಂದಷ್ಟು ವರ್ಷ ತಡೆದುಕೊಂಡು ಆಕೆಗೆ ಮದುವೆ ಮಾಡಿದ್ರೆ ಏನ್ ಆಗಿರೋದು.. ಹೆತ್ತ ಮಕ್ಕಳಿಗೆ ಮೂರ್ ಹೊತ್ತು ಊಟ ಹಾಕೋದು ಕಷ್ಟವಾ.. ಈಗ ಅದರಲ್ಲೂ ಇಂತಹ ಕೊರೊನಾ ಸಮಯದಲ್ಲಿ ಆಕೆಯ ಜೀವನದ ಜೊತೆ ಮಾತ್ರವಲ್ಲ ಜೀವದ ಜೊತೆಯೂ ಆಟವಾಡಿ ಬಿಟ್ಟಿರಿ.. ಮನೆಯಲ್ಲಿ ಸುರಕ್ಷಿತವಾಗಿ ಇರಬೇಕಾದ ಮಗಳು ಇದೀಗ ಕೊರೊನಾ ಕೇಂದ್ರದಲ್ಲಿ ಇರುವಂತಾಗಿದೆ.. ದೇವರ ದಯೆಯಿಂದ ಆದಷ್ಟು ಬೇಗ ಆ ಹೆಣ್ಣು ಮಗಳು ಕೊರೊನಾ ಗೆದ್ದು ಬರಲಿ.. ಮುಂದಿನ ತನ್ನ ಜೀವನವನ್ನು ತನ್ನಿಷ್ಟದಂತೆ ರೂಪಿಸಿಕೊಳ್ಳುವಂತಾಗಲಿ..