ಲಸಿಕೆ ಹಾಕಿಸಿಕೊಳ್ಳಿ‌ ಎಂದು ಮನವಿ ಮಾಡಿದ್ದಕ್ಕೆ ಇಡೀ ಹಳ್ಳಿ ಜನರು ಎಂತಹ ಕೆಲಸ ಮಾಡಿದ್ದಾರೆ ನೋಡಿ.. ಬೆಚ್ಚಿಬಿದ್ದ ಅಧಿಕಾರಿಗಳು..

0 views

ದೇಶದಲ್ಲಿ ಮಾತ್ರವಲ್ಲ ಇಡೀ ಪ್ರಪಂಚದಲ್ಲಿ ಕೊರೊನಾ ಹೋಗಲಾಡಿಸಲು ಇರುವುದೊಂದೆ ದಾರಿ ಅದು ಲಸಿಕೆ ಹಾಕಿಸಿಕೊಳ್ಳುವುದು..‌ ಇದೇ ಕಾರಣಕ್ಕೆ ಎಗ್ಗಿಲ್ಲದೇ ಲಸಿಕೆ ಹಾಕುವ ಅಭಿಯಾನಗಳು ನಡೆಯುತ್ತಲೇ ಇವೆ.. ಇನ್ನು ನಮ್ಮ ರಾಜ್ಯದಲ್ಲಿ ಲಸಿಕೆ ಸರಿಯಾದ ಸಮಯದಲ್ಲಿ ಸಿಗದ ಕಾರಣಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತ ಪಡಿಸಿದ್ದೂ ಉಂಟು.. ಆದರೆ ಇಲ್ಲೊಂದು ಹಳ್ಳಿಯ ಜನ ಮಾತ್ರ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದ್ದಕ್ಕೆ ಅವರುಗಳು ಮಾಡಿರುವ ಕೆಲಸವೇ ಬೇರೆ.. ಹಳ್ಳಿಗರು ಮಾಡಿದ ಕೆಲಸ ನೋಡಿ ಆರೋಗ್ಯಾಧಿಕಾರಿಗಳೇ ಬೆಚ್ವಿಬಿದ್ದಿದ್ದಾರೆ.. ಹೌದು ನಿಜಕ್ಕೂ ಇನ್ನೂ ಸಹ ಎಲ್ಲಾ ಜನರಿಗೆ ಲಸಿಕೆ ಬಗ್ಗೆ ಅರಿವು ಮೂಡಿಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತಿದೆ.‌ ಅಷ್ಟಕ್ಕೂ ಆ ಹಳ್ಳಿ ಜನರು ಮಾಡಿದ್ದೇನು ಗೊತ್ತಾ.. ಇಲ್ಲಿದೆ ನೋಡಿ..

ಈ ಘಟನೆ ನಡೆದಿರೋದು ಬೇರೆಲ್ಲೂ ಅಲ್ಲ ನಮ್ಮದೇ ದೇಶದ ಉತ್ತರ ಪ್ರದೇಶದ ಬಾರಬಂಕಿ ಜಿಲ್ಲೆಯ ಸಿಸೌಡ ಎಂಬ ಗ್ರಾಮದಲ್ಲಿ.. ಹೌದು ಒಂದು ಕಡೆ ಕೊರೊನಾ ಎರಡನೇ ಅಲೆ ಗ್ರಾಮಗಳನ್ನು ಆವರಿಸಿಕೊಂಡು ಮನೆಯಲ್ಲಿ ಒಬ್ಬರಂತೆ ಕೊರೊನಾ ಸೋಂಕಿತರು ಕಂಡುಬರುತ್ತಿದ್ದಾರೆ.. ನಮ್ಮ ರಾಜ್ಯದ ಮೈಸೂರಿನ ಅನೇಕ ಹಳ್ಳಿಗಳನ್ನು ಸಂಪೂರ್ಣವಾಗಿ ಸೀಲ್‌ ಡೌನ್‌ ಮಾಡಲಾಗಿದ್ದು ಕಳೆದ ಹದಿನೈದು ದಿನಗಳಲ್ಲಿ ಒಂದೇ ಗ್ರಾಮ ಪಂಚಾಯಿತಿಯಲ್ಲಿ ಸಾಲು ಸಾಲಾಗಿ ಎಂಟು ಜನರು ಕೊರೊನಾದಿಂದ ಜೀವ ಕಳೆದುಕೊಂಡಿದ್ದಾರೆ.. ಇನ್ನು ಇಂತಹ ಸಮಯದಲ್ಲಿ ಗ್ರಾಮದ ಜನರುಗಳಿಗೆ ಲಸಿಕೆ ನೀಡೇಕೆಂಬ ಪ್ರಯತ್ನ ದೇಶದೆಲ್ಲೆಡೆ ನಡೆಯುತ್ತಿದೆ..

ಆದರೆ ಆರೋಗ್ಯಾಧಿಗಾರಿಗಳು ಬರಾಬಂಕಿ ಜಿಲ್ಲೆಯ ಸಿಸೌಡ ಗ್ರಾಮಕ್ಕೆ ಆಗಮಿಸಿ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದ ಕೂಡಲೇ ಸಂಪೂರ್ಣ ಹಳ್ಳಿಯ ಜನರು ಮನೆಯಿಂದ ನದಿ ಕಡೆಗೆ ಓಡಿ ಹೋಗಿ ನದಿಗೆ ಹಾರಿದ್ದಾರೆ.. ಹೌದು ವಿಚಿತ್ರವಾದರೂ ಎನಿಸಿದರೂ ಇದು ಸತ್ಯ ಘಟನೆ.. ಮುಂದೆ ನಡೆದಿದ್ದೇ ಬೇರೆ.. ಹೌದು ಸಾವಿರದ ಐನೂರು ಮಂದಿ ಇರುವ ಈ ಸಿಸೌಡ ಗ್ರಾಮಕ್ಕೆ ಆಗಮಿಸಿದ ಆರೋಗ್ಯ ಅಧಿಕಾರಿಗಳು ಮತ್ತು ಅವರ ತಂಡ ಗ್ರಾಮಸ್ಥರಿಗೆ ಲಸಿಕೆ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.. ಇದಕ್ಕೆ ಒಪ್ಪದಿದ್ದಾಗ ಆರೋಗ್ಯಾಧಿಕಾರಿಗಳು ಲಸಿಕೆ ಬಗ್ಗೆ ಅರಿವು ಮೂಡಿಸಿ ಮನವಿ ಮಾಡಿದ್ದಾರೆ.. ಅದಕ್ಕೂ ಒಪ್ಪದ ಜನರ ಹತ್ತಿರಕ್ಕೆ ಆರೋಗ್ಯಾಧಿಕಾರಿಗಳು ತೆರಳುತ್ತಿದ್ದಂತೆ ಹಳ್ಳಿಯ ಇನ್ನೂರಕ್ಕೂ ಅಧಿಕ ಮಂದಿ ಮನೆಯಿಂದ ಓಡಿ ಹೋಗಿ ನದಿ ಬಳಿ ತೆರಳಿದ್ದಾರೆ..

ಅಧಿಕಾರಿಗಳು ಅವರನ್ನು ಹಿಂಬಾಲಿಸಿ ನದಿ ಬಳಿಗೆ ತೆರಳಿದ್ದಾರೆ ಹೇಳುವಷ್ಟೂ ಸಮಾಧಾನವಾಗಿ ಮನವಿ ಮಾಡುತ್ತಲೇ ಇದ್ದರು.. ಆದರೆ ನೋಡು ನೋಡುತ್ತಿದ್ದಂತೆ ಇಪ್ಪತ್ತಕ್ಕೂ ಹೆಚ್ಚು ಜನ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿ ಹಿಂದೆ ಮುಂದೆ ಯೋಚಿಸದೇ ನದಿಗೆ ಹಾರಿದ್ದಾರೆ.. ಗ್ರಾಮಸ್ಥರ ಆ ನಡವಳಿಕೆ ನೋಡಿ ಆರೋಗ್ಯಾಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.. ತಕ್ಷಣವೇ ಎಚ್ಚೆತ್ತು ಇನ್ನು ನಾವೂ ಇಲ್ಲೆ ಇದ್ದರೆ ಅವರು ನೀರಿನಿಂದ ಹೊರ ಬರದೆ ಮುಳುಗಿ ಬಿಡಬಹುದೆಂದು ಆ ಜಾಗದಿಂದ ತೆರಳಿದ್ದಾರೆ.. ಆರೋಗ್ಯಾಧಿಕಾರಿಗಳು ತೆರಳುವ ವರೆಗೂ ನೀರಿನಲ್ಲಿಯೇ ಇದ್ದ ಗ್ರಾಮಸ್ಥರು ಅವರುಗಳು ತೆರಳಿದ ನಂತರವಷ್ಟೇ ಹೊರಗೆ ಬಂದಿದ್ದಾರೆ..

ಇನ್ನು ಸಾವಿರದ ಐನೂರು ಮಂದಿ ಇರುವ ಗ್ರಾಮದಲ್ಲಿ ಈವರೆಗೆ ಕೇವಲ ಹದಿನಾಲ್ಕು ಮಂದಿ ಮಾತ್ರವೇ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.. ಹೌದು ಕೆಲವೊಮ್ಮೆ ಅರಿವಿನ ಕೊರತೆಯಿಂದ ಏನೆಲ್ಲಾ ಆಗಬಹುದು ಎಂಬುದಕ್ಕೆ ಈ ಗ್ರಾಮದ ಜನರೇ ಉದಾಹರಣೆ.. ಈ ತಕ್ಷಣ ಗ್ರಾಮದ ಜನರಿಗೆ ಲಸಿಕೆಯ ಅರಿವು ಮೂಡಿಸಿ ನಂತರ ಮನವೊಲಿಸಲಾಗುವುದು ಎಂದು ಜಿಲ್ಲೆಯ ಆರೋಗ್ಯಾಧಿಕಾರಿ ನಡೆದ ಘಟನೆ ಬಗ್ಗೆ ತಿಳಿಸಿ ಸ್ಪಷ್ಟನೆ ನೀಡಿದ್ದಾರೆ‌‌..