ಒಂದೇ ದಿನ ಎರಡು ವೈಲ್ಡ್ ಕಾರ್ಡ್ ಎಂಟ್ರಿ.. ಬಿಗ್ ಬಾಸ್ ಮನೆಗೆ ಬ್ಯೂಟಿಗಳ ಆಗಮನ.. ಕಕ್ಕಾಬಿಕ್ಕಿಯಾದ ಉಳಿದ ಮಹಿಳಾ ಸದಸ್ಯರು..

0 views

ಬಿಗ್ ಬಾಸ್ ಮನೆಯ ಗಂಡ್ ಹೈಕ್ಲಿಗೆ ಇಂದು ಭರ್ಜರಿ ಸರ್ಪ್ರೈಸ್.. ಹೌದು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಕಳೆದ ವಾರ ಒಂದು ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದು ಚಂದ್ರಚೂಡರನ್ನು ಯಾಕಾದರು ಮನೆಯೊಳಕ್ಕೆ ಕಳುಹಿಸಿದರೋ ಎನ್ನುವಂತಾಗಿತ್ತು ಉಳಿದ ಸ್ಪರ್ಧಿಗಳ ಕತೆ.. ಆದರೆ ಇದೀಗ ಮನೆಯೊಳಕ್ಕೆ ಎರೆಡೆರೆಡು ಮಹಿಳಾ ಸ್ಪರ್ಧಿಗಳ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.. ಹೌದು ಇಂದು ಒಂದೇ ದಿನ ಎರಡು ಸ್ಪರ್ಧಿಗಳು ಬಿಗ್ ಬಾಸ್ ಮನೆಯ ಗೃಹ ಪ್ರವೇಶ ಮಾಡಿದ್ದು ಮತ್ತಷ್ಟು ರಂಗೇರಿಸಿದ್ದಾರೆ.. ಆದರೆ ಇದರಲ್ಲಿ ಸಣ್ಣದೊಂದು ಆತಂಕ ಸಹ ಮನೆಯವರಿಗೆ ಎದುರಾಗಿದೆ..

ಹೌದು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಒಟ್ಟು ಹದಿನೇಳು ಸ್ಪರ್ಧಿಗಳು ಮನೆಯೊಳಕ್ಕೆ ಬಂದಿದ್ದರು.. ಈ ಬಾರಿ ಯಾವ ವಾರವೂ ನೋ ಎಲಿಮಿನೇಷನ್ ವಾರ ಇರದ ಕಾರಣ ಅದಾಗಲೇ ಐದು ಸ್ಪರ್ಧಿಗಳು ಮನೆಯಿಂದ ಹೊರ ಹೋಗಾಯ್ತು.. ಇನ್ನು ಕಳೆದ ವಾರ ಐದನೇ ವಾರದಲ್ಲಿ ಚಕ್ರವರ್ತಿ ಚಂದ್ರಚೂಡ ಅವರು ವೈಲ್ಡ್ ಕಾರ್ಡ್ ಮೂಲಕ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದು ಮನೆಯಲ್ಲಿ ಸದ್ದು ಗದ್ದಲ ಹೆಚ್ಚಾಗಿದೆ ಎನ್ನಬಹುದು‌‌.. ಮಾವ ಅಳಿಯನಂತಿದ್ದ ಪ್ರಶಾಂತ್ ಮಂಜು ‌ನಡುವೆ ಮನಸ್ತಾಪ ಉಂಟಾಗಿ ಬೇರೆ ಬೇರೆ ತೀರವಾಗಿ ಹೋದರು..

ಇನ್ನು ಕಳೆದ ವಾರದ ಕತೆಯಲ್ಲಿ ಮನೆಯ ಎಲ್ಲಾ ಸ್ಪರ್ಧಿಗಳು ಸಹ ಚಂದ್ರಚೂಡ ಅವರನ್ನು ವೈಲ್ಡ್ ಕಾರ್ಡ್ ಮೂಲಕ ಕಳುಹಿಸಬಾರದು ಎಂದೇ ಹೇಳಿದ್ದರು.. ಇನ್ನು ಮಂಜು ಮಾತ್ರ ಯಾರಾದರು ಮಹಿಳಾ ಸ್ಪರ್ಧಿಗಳನ್ನು‌ ಕಳುಹಿಸ್ತಿರೇನೋ ಎಂದಿದ್ದರು..

ಇದೀಗ ಅದೇ ಮಾತು ಸತ್ಯವಾಗಿದೆ.. ಬಿಗ್ ಬಾಸ್ ಮನೆಗೆ ಇಂದು ಮಹಿಳಾ ಸ್ಪರ್ಧಿಗಳ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.. ಅದರಲ್ಲೂ ಎರೆಡೆರೆಡು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.. ಕೂಗೋ ಕೋಳಿಗೆ ಹಾಡು ಮೂಲಕ ಒಬ್ಬ ಸ್ಪರ್ಧಿ ಮುಖ್ಯ ದ್ವಾರದ ಮೂಲಕ ಮನೆಯೊಳಕ್ಕೆ ಬಂದರೆ.. ಇನ್ನೊಬ್ಬ ಸ್ಪರ್ಧಿ ಆಗಮನಕ್ಕೂ ಮುನ್ನ ಮಂಜು ಪಾವಗಡ ಅವರನ್ನು ಕನ್ಫೆಷನ್ ರೂಮಿಗೆ ಕರೆಯಲಾಗಿತ್ತು.. ಆನಂತರ ಕನ್ಫೆಷನ್ ರೂಮಿನಿಂದ ಮತ್ತೊಬ್ಬ ಮಹಿಳಾ ಸ್ಪರ್ಧಿ ಆಗಮನವಾಗಿದ್ದು ಮಂಜುವನ್ನು ಮನೆಯೊಳಕ್ಕೆ ಕಳುಹಿಸಲಾಗಿಲ್ಲ..

ಅತ್ತ ಮಂಜು ವಾಪಸ್ ಬಾರದ್ದನ್ನು‌ ನೋಡಿ ಉಳಿದ ಸ್ಪರ್ಧಿಗಳು ಆತಂಕಕ್ಕೀಡಾಗಿದ್ದಾರೆ.. ಇನ್ನು ಇತ್ತ ಎರೆಡೆರೆಡು ಸುಂದರ ಮಹಿಳಾ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಆಗಮನವಾಗಿದ್ದನ್ನು ನೋಡಿ ಇನ್ನುಳಿದ ಮಹಿಳಾ ಸ್ಪರ್ಧಿಗಳ ಮುಖದಲ್ಲಿ ಕೊಂಚ ಬೇಸರ ಕಂಡಿದ್ದಂತೂ ಸತ್ಯ.. ಆದರೆ ಆ ಮಹಿಳಾ ಸ್ಪರ್ಧಿಗಳು ಯಾರು ಎಂಬುದನ್ನು ತಿಳಿಯಲು ಇಂದಿನ ಸಂಚಿಕೆಯವರೆಗೂ ಕಾದು ನೋಡಬೇಕಿದೆ..