ಥೂ ಇವರೇನ್ ಗುರು.. ಮನೆಲಿರೋಕೋಸ್ಕರ ಇಂತಹ ಅಸಹ್ಯದ ಕೆಲಸನಾ ಮಾಡೋದು..?

0 views

ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಶೋ ಪ್ರಾರಂಭವಾದಾಗ ಒಂದಿಷ್ಟು ಹೊಸತನ ಎನಿಸಿದ್ದರೂ ಸಹ ಬರುಬರುತ್ತಾ ಅದ್ಯಾಕೋ ಇಷ್ಟೇ ಇವರ ಗುಣ.. ಪ್ರತಿದಿನ ಬರಿ ಇದೇ.. ಎನ್ನುವ ಮಾತುಗಳು ಪ್ರೇಕ್ಷಕರ ಬಾಯಿಂದ ಕೇಳಿ ಬರುತ್ತಿದೆ. ಅದರಲ್ಲಿಯೂ ಎರಡು ವಾರಗಳಿಂದ ಕಿಚ್ಚ ಸುದೀಪ್ ಅವರು ವಾರಾಂತ್ಯದ ಕಾರ್ಯಕ್ರಮಕ್ಕೆ ಆಗಮಿಸದೇ ಇರುವುದು ಬಿಗ್ ಬಾಸ್ ಶೋ ಮತ್ತಷ್ಟು ಬೋರ್ ಹೊಡೆಸುತ್ತಿದೆ ಎನ್ನಬಹುದು.ಮ್ ಆದರೆ ಇದೆಲ್ಲದರ ನಡುವೆ ಮನೆಯಲ್ಲಿ ಉಳಿದುಕೊಳ್ಳುವ ಸಲುವಾಗಿ ಸದಸ್ಯರು ಬಳಸುತ್ತಿರುವ ಸಣ್ಣತನದ ಟ್ರಿಕ್ಸ್ ನಿಜಕ್ಕೂ ಅಸಹ್ಯವನ್ನುಂಟು‌ ಮಾಡುತ್ತಿದೆ.. ಹೌದು ಅದಾಗಲೇ ಕಳೆದ ಎಣ್ಟನೇ ವಾರದ ಎಲಿಮಿನೇಷನ್ ನಲ್ಲಿ ರಾಜೀವ್ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರ ಹೋಗಿದ್ದು ಮನೆಯ ಸದಸ್ಯರಿಗೆ ನಿಜಕ್ಕೂ ಶಾಕ್ ಆಗಿದೆ..

ರಾಜೀವ್ ಒಬ್ಬ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು.. ಅವರೇ ಮನೆಯಿಂದ ಹೊರ ಹೋಗಿರುವಾಗ ನಮ್ಮಗಳ‌ಕತೆ ಏನು ಎಂದು ತಿಳಿದ ಮನೆಯ ಇತರ ಕೆಲ ಸದಸ್ಯರು ಬಹಳ ಸಣ್ಣತನದ ಟ್ರಿಕ್ಸ್ ಗಳನ್ನು ಬಳಸುತ್ತಿದ್ದಾರೆ.. ಹೌದು ರಾಜೀವ್ ಮನರಂಜನೆಗಿಂತ ಹೆಚ್ಚಾಗಿ ಟಾಸ್ಕ್ ಗಳಲ್ಲಿ ಬಹಳ ಪ್ರಬಲರಾಗಿದ್ದರು‌.. ಅವರನ್ನು ಫಿಸಿಕಲ್ ಟಾಸ್ಕ್ ಗಳಲ್ಲಿ ಸೋಲಿಸುವುದು ಬಹಳ ಕಷ್ಟವೇ ಆಗಿತ್ತು.. ಆದರೆ ಫಿಸಿಕಲ್ ಟಾಸ್ಕ್ ನಲ್ಲಿ ಅಷ್ಟು ಪ್ರಬಲರಾಗಿದ್ದ ರಾಜೀವ್ ಮನೆಯಿಂದ ಹೊರ ಹೋಗುತ್ತಿದ್ದಂತೆ ಉಳಿದವರಿಗೆ ಒಂದು ವಿಚಾರವಂತೂ ಸ್ಪಷ್ಟವಾಗಿದೆ.. ಟಾಸ್ಕ್ ಗಳಲ್ಲಿ ಸ್ಟ್ರಾಂಗ್ ಆಗಿದ್ದರೆ ಪ್ರಯೋಜನವಿಲ್ಲ.. ಮನೆಯಲ್ಲಿ ಬೇರೆ ಬೇರೆ ರೀತಿಯಾಗಿ ತೊಡಗಿಕೊಳ್ಳಬೇಕಷ್ಟೇ.‌. ಅದರಲ್ಲೂ ಹೆಣ್ಣು ಮಕ್ಕಳ ಜೊತೆ ಲವ್ವು ಅದು ಇದು ಅಂತ ಚೆನ್ನಾಗಿ ಸಮಯ ಕಳೆದರೆ ಬಿಗ್ ಬಾಸಿನಲ್ಲಿ‌ ಇನ್ನಷ್ಟು ದಿನ ಉಳಿಯುವುದು ಖಚಿತ ಎಂದು ಮನವರಿಕೆ ಮಾಡಿಕೊಂಡಿರುವ ಮನೆಯ ಕೆಲ ಸ್ಪರ್ಧಿಗಳು ಇದೀಗ ಹೆಣ್ ಹೈಕಳ ಹಿಂದೆ ಬಿದ್ದಿದ್ದಾರೆ.. ಹೆಣ್ ಮಕ್ಕಳೂ ಸಹ ಏನು ಕಡಿಮೆ ಇಲ್ಲ.. ಅವರಿಗೂ ಸಹ ಇದು ಅರ್ಥವಾಗಿದ್ದು ಅವರುಗಳು ಆಹ ಹೆಚ್ಚು ಲವ್ವು ಮದುವೆ ಅದು ಇದು ಅಂತ ಸಮಯ ಕಳೆಯುತ್ತಿದ್ದಾರೆ..

ಅದರಲ್ಲೊಬ್ಬರು ಶಮಂತ್.. ಶಮಂತ್ ಅದ್ಯಾಕೋ ನಿನ್ನೆಯಿಂದ ಕುಡಿದವರ ರೀತಿ ನಟಿಸುತ್ತಾ ಹೆಣ್ಣು ಮಕ್ಕಳ ಹಿಂದಿಂದೆಯೇ ಸುತ್ತುತ್ತಾ ನಿಂತಿದ್ದು ನಿಜಕ್ಕೂ ಅಸಹ್ಯವಾಗಿತ್ತು.. ವೈಷ್ಣವಿಯನ್ನು ಚಿನ್ನಾ.. ಚಿನ್ನಾ.. ಎಂದು ಕರೆಯುತ್ತಾ ಹಿಂದಿಂದೆ ಹೋಗುತ್ತಿದ್ದದ್ದು.. ಪ್ರಿಯಾಂಕರನ್ನು ರನ್ನ ರನ್ನ .. ನಿನ್ನ್ ನನ್ನ್ ರನ್ನ ಅಂತ ಕರೆಯುತ್ತಾ ಹಿಂದೆ ಹೋಗಿದ್ದು.. ಇನ್ನು ದಿವ್ಯಾ ಉರುಡುಗ ಬಳಿ ಬಂದು ನಿಮಗಾದರೆ ಒಬ್ಬರಿಗೊಬ್ಬರು ಇದ್ದೀರಾ ನನಗೆ ಯಾರು ಇಲ್ಲ.. ಅದಕ್ಕೆ ಹೀಗೆ ಆಗ್ತಾ ಇದೆ ಎಂದಿದ್ದು.. ಅದಕ್ಕೆ ದಿವ್ಯಾ ಉರುಡುಗ ಶಮಂತ್ ನ ಕೆನ್ನೆ ಸವರಿ ಸಮಾಧಾನ ಮಾಡಿದ್ದು ನಿಜಕ್ಕೂ ನೋಡುಗರಲ್ಲಿ ಮುಜುಗರ ಕಿರಿಕಿರಿ ಅಸಹ್ಯ ಎಲ್ಲವನ್ನೂ ಒಮ್ಮೆಲೆ ಮೂಡುವಂತೆ ಮಾಡಿತ್ತು..

ಇನ್ನು ದಿವ್ಯಾ ಹಾಗೂ ಅರವಿಂದ್ ಅವರ ಬಗ್ಗೆ ಕೇಳಲೇ ಬೇಕಿಲ್ಲ.. ಸದಾ ಫೆವಿಕಾಲ್ ಹಾಕಿದವರಂತೆ ಅಂಟಿಕೊಂಡೆ ಬದುಕುತ್ತಿದ್ದಾರೆ.. ದಿವ್ಯಾ ಅಂತು ಬಹಳ ಸೀರಿಯಸ್ ಆಗಿ ಅರವಿಂದ್ ನನ್ನು ಲವ್ ಮಾಡುತ್ತಿದ್ದು ಜನರಿಗೆ ಎದ್ದು ಕಾಣುತ್ತಿದೆ.. ಜನರಿಗೆ ಮಾತ್ರವಲ್ಲ ಅವರ ಅಪ್ಪ ಅಮ್ಮನಿಗೂ ಕಾಣುತ್ತಿದೆ ಎಂಬುದು ಆಕೆಗೆ ಕೊಂಚ ಮನವರಿಕೆಯಾದರೆ ಒಳ್ಳೆಯದು.. ಇನ್ನು ಮಂಜು ಪಾವಗಡ ಅದ್ಯಾಕೋ ದಿವ್ಯಾ ಸುರೇಶ್ ರಿಂದ ಕೊಂಚ ದೂರ ಉಳಿದಂತೆ ಕಂಡರೂ ಮುಂಚೆಗೆ ಹೋಲಿಕೆ ಮಾಡಿದರೆ ಈಗ ಸ್ವಲ್ಪ ಕಡಿಮೆ ಮಾಡಿಕೊಂಡಿದ್ದಾರೆ.. ಇನ್ನು ಶುಭಾ ಪೂಂಜಾ ಹಾಗೂ ನಿಧಿ ಸುಬ್ಬಯ್ಯ ಒಂದು ರೀತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನಬೇಕಷ್ಟೇ.. ಮನೆಯಲ್ಲಿ ಇರ್ತಾರೆ.. ಅವರಿವರ ಬಗ್ಗೆ ಮಾತನಾಡುತ್ತಾ ಸಮಯ ಕಳೆಯುತ್ತಾರೆ.. ಇವರು ಈ ರೀತಿ ಸಮಯ ಕಳೆಯಲು ವಾರಕ್ಕೊಂದಷ್ಟು ಸಾವಿರಗಳ ಸಂಭಾವನೆ ಬೇರೆ.. ಅಲ್ರಯ್ಯಾ ಅದು ಬಿಗ್ ಬಾಸ್ ವೇದಿಕೆ.. ಲವ್ ಮಾಡೋ ವೇದಿಕೆ ಅಲ್ಲ.. ಅಲ್ಲಿ ಅವಕಾಶ ಸಿಕ್ಕಿರುವಾಗ ನಿಮ್ಮಲ್ಲಿರುವ ಟ್ಯಾಲೆಂಟ್ ಬಳಸಿಕೊಂಡು ಹೊಸ ಹೊಸ ರೀತಿಯಲ್ಲಿ ಜನರನ್ನು ಮನರಂಜನೆ ಮಾಡೋಕೆ ಪ್ರಯತ್ನ ಮಾಡಿ..

ಕಳೆದ ಸೀಸನ್ ಗಳಲ್ಲಿ ಚಂದನ್ ಶೆಟ್ಟಿ ಬಿಗ್ ಬಾಸ್ ಮನೆ ಬಳಸಿಕೊಂಡು ಅದೆಷ್ಟೋ ಹಾಡುಗಳನ್ನು ಕ್ಷಣ ಮಾತ್ರದಲ್ಲಿ ಕಂಪೋಸ್ ಮಾಡಿ ಜನರ ಮನ ಗೆದ್ದಿದ್ದರು.. ಅದು ಕೇವಲ ಅವರ ಟ್ಯಾಲೆಂಟ್ ನಿಂದ.. ಇನ್ನು ಕಿಶನ್ ಹೆಣ್ಣು ಮಕ್ಕಳ ಜೊತೆ ಕೊಂಚ ಆತ್ಮೀಯವಾಗಿದ್ದರೂ ಸಹ ತನ್ನ ಪ್ರತಿಭೆಯನ್ನು ತೋರುವುದ ಮರೆಯಲಿಲ್ಲ.. ಅವಕಾಶ ಸಿಕ್ಕಾಗಲೆಲ್ಲಾ ಅದ್ಭುತವಾಗಿ ಡ್ಯಾನ್ಸ್ ಮಾಡಿ ತೋರುತ್ತಿದ್ದರು.. ಹೀಗೆ ಬಹಳಷ್ಟು ಮಂದಿ ತಮ್ಮ ಪ್ರತಿಭೆಗಳನ್ನು ತೋರಿ ಹೊರ ಬಂದ ಬಳಿಕ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.. ಆದರೆ ಈ ಸೀಸನ್ ನ ಸ್ಪರ್ಧಿಗಳು ಹೆಚ್ಚು ವಾರಗಳು ಉಳಿದು ಅಲ್ಲಿ ಬರುವ ಸಂಭಾವನೆಯೇ ಸಾಕೆಂದು ನಿರ್ಧರಿಸಿ ಮನೆಯಲ್ಲಿ ಹೆಚ್ಚು ದಿನ ಉಳಿಯಲು ಕೇವಲ ಲವ್ವು ಅದು ಇದು ಅಂತ ಹೆಣ್ ಮಕ್ಕಳ ಜೊತೆ ಕಾಲ ಕಳೆಯುತ್ತಿರುವುದ ಕಂಡು ಪ್ರೇಕ್ಷಕ ಪ್ರಭುಗಳ ಕಣ್ಣು ಪಾವನವಾಯಿತು ಎನ್ನಬೇಕಷ್ಟೇ‌..