ಬಿಗ್ ಬಾಸ್ ಎಲಿಮಿನೇಷನ್ ಸಂಪೂರ್ಣ ಮುಕ್ತಾಯ.. ಮನೆಯಿಂದ ಹೊರ ಬಂದ ಮೂವರು ಪ್ರಬಲ ಸ್ಪರ್ಧಿಗಳು ಇವರೇ ನೋಡಿ..

0 views

ಬಿಗ್ ಬಾಸ್ ಸೀಸನ್ ಎಂಟರ ಫಿನಾಲೆಯ ಚಿತ್ರೀಕರಣ ಕೊನೆ ಹಂತಕ್ಕೆ ಬಂದು ನಿಂತಿದೆ.. ಬಿಗ್ ಬಾಸ್ ಮನೆಯಲ್ಲಿ‌ ಉಳಿದಿದ್ದ ಐದು ಸದಸ್ಯರಲ್ಲಿ ಒಟ್ಟು ಮೂವರು ಅದಾಗಲೇ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.. ಇನ್ನುಳಿದಂತೆ ಟಾಪ್ ಇಬ್ಬರು ಸದಸ್ಯರು ಮಾತ್ರ ಬಿಗ್ ಬಾಸ್ ಮನೆಯಲ್ಲಿ‌ ಉಳಿದಿದ್ದು ಗೆಲುವಿನ ಕಿರೀಟ ಯಾರ ಮುಡಿಗೆ ಎಂಬುದು ಇನ್ನು ಕೆಲವೇ ನಿಮಿಷಗಳಲ್ಲಿ‌ ತಿಳಿಯಲಿದೆ..

ಹೌದು ಬಿಗ್ ಬಾಸ್ ಮನೆಯಿಂದ ಕೊನೆ ಹಂತದಲ್ಲಿ ಫಿನಾಲೆಯ ಕೊನೆ ಹೆಜ್ಜೆಯಲ್ಲಿ ಹೊರ ಬಂದ ಸ್ಪರ್ಧಿಗಳು ಮತ್ಯಾರೂ ಅಲ್ಲ ದಿವ್ಯಾ ಉರುಡುಗ ಪ್ರಶಾಂತ್ ಸಂಬರ್ಗಿ ಹಾಗೂ ವೈಷ್ಣವಿ.. ಹೌದು ಬಿಗ್ ಬಾಸ್ ಸೀಸನ್ ಎಂಟರ ಕೊನೆ ಕ್ಷಣದಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ದಿವ್ಯಾ ಉರುಡುಗ ಮನೆಯಿಂದ ಹೊರ ಬಂದರೆ ಇತ್ತ ಗೆಲುವಿನ ಭರವಸೆ ಮೂಡಿಸಿದ್ದ ವೈಷ್ಣವಿ ಕೂಡ ಇದೀಗ ಟಾಪ್ ಮೂರನೇ ಸ್ಪರ್ಧಿಯಾಗಿ ಹೊರ ನಡೆದಿದ್ದಾರೆ..

ಹೌದು ಟಾಒ ಐದನೇ ಸ್ಥಾನದಲ್ಲಿ ಪ್ರಶಾಂತ್ ಸಂಬರ್ಗಿ ಎಲಿಮಿನೇಟ್ ಆದರೆ ಟಾಪ್ ನಾಲ್ಕನೇ ಸ್ಥಾನದಲ್ಲಿ ದಿವ್ಯಾ ಉರುಡುಗ ಹಾಗೂ ಟಾಪ್ ಮೂರನೇ ಸ್ಥಾನದಲ್ಲಿ ವೈಷ್ಣವಿ ಎಲಿಮಿನೇಟ್ ಆಗಿ ಹೊರ ಬಂದರು.. ಇನ್ನುಳಿದಂತೆ ಮಂಜು ಪಾವಗಡ ಹಾಗೂ ಅರವಿಂದ್ ಕೆಪಿ ಟಾಪ್ ಮೊದಲ ಸ್ಥಾನಕ್ಕೆ ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಪಟ್ಟಕ್ಕಾಗಿ ಎದುರು ನೋಡುತ್ತಿದ್ದು ಸುದೀಪ್ ಅವರ ಎಡ ಬಲದಲ್ಲಿ ನಿಲ್ಲಲಿದ್ದಾರೆ..

ಇನ್ನೂ ಫಿನಾಲೆ ಸಂಚಿಕೆಯ ಚಿತ್ರೀಕರಣ ಶುರುವಾದ ಬಳಿಕ ಎಲಿಮಿನೇಷನ್ ಪ್ರಕ್ರಿಯೆ ಆರಂಭ ಮಾಡಿದ್ದು ಮೊದಲಿಗೆ ಪ್ರಶಾಂತ್ ಸಂಬರ್ಗಿ ಅವರನ್ನು ಎಲಿಮಿನೇಟ್ ಮಾಡಲಾಯಿತು.. ಬಳಿಕ ದಿವ್ಯಾ ಉರುಡುಗ ಸಹ ಮನೆಯಿಂದ ಹೊರ ನಡೆದರು.. ಆದರೆ ಆ ಬಳಿಕ ವೈಷ್ಣವಿ ಅವರು ಟಾಪ್ ಎರಡರಲ್ಲಿ ಒಬ್ಬರಾಗಿರುತ್ತಾರೆ ಎಂದು ಅಂದಾಜಿಸಲಾಗಿತ್ತು.. ಆದರೆ ವೈಷ್ಣವಿ ಟಾಪ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು..

ಇತ್ತ ಮಂಜು ಪಾವಗಡ ಹಾಗೂ ಅರವಿಂದ್ ಇಬ್ಬರ ನಡುವೆಯೂ ಪ್ರಬಲ ಸ್ಪರ್ಧೆ ಏರ್ಪಟ್ಟಿದ್ದು ಇನ್ನು ಕೆಲ ಕ್ಷಣಗಳಲ್ಲಿ ವಿನ್ನರ್ ಘೋಷಣೆಯಾಗಲಿದೆ.. ಅತ್ತ ಅರವಿಂದ್ ಗೆದ್ದರೆ ಇದೇ ಮೊದಲ ಬಾರಿಗೆ ಕಲಾವಿದರನ್ನು ಹೊರತು ಪಡಿಸಿ ಸ್ಪೋರ್ಟ್ಸ್ ಪರ್ಸನ್ ಒಬ್ಬರು ಬಿಗ್ ಬಾಸ್ ಗೆದ್ದ ದಾಖಲೆ ಬರೆಯಲಿದ್ದಾರೆ.. ಇನ್ನು ಇತ್ತ ಮಂಜು ಪಾವಗಡ ಗೆದ್ದರೆ ತಾವು ಇರುವವರೆಗೂ ಗೆದ್ದ ಹಣದಿಂದ ತನ್ನ ತಂದೆ ತಾಯೊಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಮಾತನಾಡಿದ್ದು ಗೆಲುವಿನ ಕಿರೀಟ ಯಾರ ಮುಡಿಗೋ ಕಾದು ನೋಡಬೇಕಿದೆ..