ನಾಲ್ಕನೇ ವಾರದ ಎಲಿಮಿನೇಷನ್ ಮುಕ್ತಾಯ.. ಮನೆಯಿಂದ ಹೊರಬಂದವರು ಇವರೇ ನೋಡಿ..

0 views

ಬಿಗ್ ಬಾಸ್ ಕನ್ನಡ ಸೀಸನ್ ಎಂಟರಲ್ಲಿ ನಾಲ್ಕನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯ ಗೊಂಡಿದ್ದು ಮನೆಯಿಂದ ಅದಾಗಲೇ ಒಬ್ಬ ಸದಸ್ಯರು ಹೊರ ಬಂದಾಗಿದೆ.. ಬಿಗ್ ಬಾಸ್ ಸೀಸನ್ ಎಂಟು ಹಲವಾರು ವಿಶೇಷತೆಗಳಿಂದ ಕೂಡಿದ್ದು ಮೊದಲಿನ ಒಂದೆರೆಡು ಸೀಸನ್ ಗಳಿಗಿಂತ ಈ ಸೀಸನ್ ಸ್ಪರ್ಧಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿಯೂ ಜನರಿಗೆ ಮೆಚ್ಚುಗೆಯಾಗಿತ್ತು..

ಇನ್ನು ಹದಿನೇಳು ಜನ ಸದಸ್ಯರ ಬಿಗ್ ಬಾಸ್ ಮನೆ ವಾಸ ಶುರುವಾಗಿ ಅದಾಗಲೇ ಒಂದು ತಿಂಗಳು ಕಳೆದಿದ್ದು ಒಟ್ಟು ನಾಲ್ವರು ಸದಸ್ಯರು ಮನೆಯಿಂದ ಹೊರ ನಡೆದಾಗಿದೆ.. ಹೌದು ಮೊದಲ ವಾರವೇ ಟಿಕ್ ಟಾಕ್ ಸ್ಟಾರ್ ಧಮುಶ್ರೀ ಒಂದೇ ವಾರಕ್ಕೆ ತಮ್ಮ ಬಿಗ್ ಬಾಸ್ ಮನೆಯ ಜರ್ನಿ ಮುಗಿಸಿ ಹೊರ ನಡೆದಿದ್ದರೆ.. ನಂತರ ಎರಡನೇ ವಾರದಲ್ಲಿ ನಟಿ ನಿರ್ಮಾಪಕಿ ನಿರ್ಮಲಾ ಚೆನ್ನಪ್ಪ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದರು.. ಇನ್ನು ಮೂರನೇ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಬ್ರಹ್ಮಗಂಟು ನಟಿ ಗೀತಾ ಭಾರತಿ ಭಟ್ ಬಿಗ್ ಬಾಸ್ ಜರ್ನಿ ಮುಗಿಸಿದ್ದರು.. ಇನ್ನು ನಾಲ್ಕನೇ ವಾರದಲ್ಲಿ ಕ್ಯಾಪ್ಟನ್ ಅರವಿಂದ್ ಅನ್ನು ಹೊರತುಪಡಿಸಿ ಮನೆಯ ಮಿಕ್ಕೆಲ್ಲಾ ಹದಿಮೂರು ಸದಸ್ಯರು ಸಹ ಎಲಿಮಿನೇಷನ್ ಗೆ ನೇರವಾಗಿ ನಾಮಿನೇಟ್ ಆಗಿದ್ದು ಜನರ ಬೆಂಬಲ ಯಾರಿಗೆ ಹೆಚ್ಚಿದೆ ಎಂಬುದರ ಪರೀಕ್ಷೆಯೂ ನಡೆಯಿತು.. ಅದರಂತೆ ಮನೆಯ ಹನ್ನೆರೆಡು ಮಂದಿ ಸೇಫ್ ಆದರೆ ಒಬ್ಬರು ಮಾತ್ರ ಕಡಿಮೆ ಓಟ್ ಪಡೆದು ಮನೆಯಿಂದ ನಿರ್ಗಮಿಸಿದ್ದಾರೆ..

ನಾಲ್ಕನೇ ವಾರ ಮನೆಯಿಂದ ಹೊರ ನಡೆದ ಸ್ಪರ್ಧಿ ಮತ್ಯಾರೂ ಅಲ್ಲ ಅಜ್ಜಮ್ಮ ಖ್ಯಾತಿಯ ನಟಿ ಚಂದ್ರಕಲಾ.. ಹೌದು ಪುಟ್ಟ ಗೌರಿ ಮದುವೆ ಧಾರಾವಾಹಿ ನಟಿ ಅಜ್ಜಮ್ಮ ಚಂದ್ರಕಲಾ ಅವರು ನಾಲ್ಕು ವಾರಗಳ ಬಿಗ್ ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರ ನಡೆದಿದ್ದಾರೆ.. ಇಂದು ಭಾನುವಾರದ ಕಿಚ್ಚನ ಕಾರ್ಯಕ್ರಮದಲ್ಲಿ ಚಂದ್ರಕಲಾ ಅವರು ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದು ತಮ್ಮ ನಾಲ್ಕು ವಾರದ ಬಿಗ್ ಬಾಸ್ ಮನೆಯ ಅನುಭವವನ್ನು ಹಂಚಿಕೊಳ್ಳಲಿದ್ದಾರೆ..

ಇನ್ನು ಇತ್ತ ಅತಿ ಹೆಚ್ಚು ವೋಟ್ ಪಡೆದು ಮಂಜು ಪಾವಗಡ ಮೊದಲು ಸೇಫ್ ಆದರೆ ನಂತರ ದಿವ್ಯಾ ಉರುಡುಗ ಸೇಫ್ ಆದರು.. ನಂತರದಲ್ಲಿ ರಘು, ಶುಭಾ ಪೂಂಜಾ, ರಾಜೀವ್, ನಿಧಿ ಸುಬ್ಬಯ್ಯ.. ವೈಶ್ಣವಿ.. ದಿವ್ಯಾ ಸುರೇಶ್ ಸೇಫ್ ಆದರು.. ಇನ್ನು ಬಹಳ ಹತ್ತಿರದ ಅಂತರದಲ್ಲಿ ನಟ ಶಂಕರ್ ಅಶ್ವತ್ಥ್ ಅವರು ವಿಶ್ವನಾಥ್ ಅವರು.. ಶಮಂತ್, ಪ್ರಶಾಂತ್ ಸಂಬರ್ಗಿ ಸೇಫ್ ಆದರೆ ಇತ್ತ ಚಂದ್ರಕಲಾ ಅವರು ಕೊನೆಯದಾಗಿ ಎಲಿಮಿನೇಟ್ ಆದರು..