ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಮುಕ್ತಾಯ.. ಬಿಗ್ ಬಾಸ್ ಮನೆಗೆ ಕಾಲಿಟ್ಟ ಎಲ್ಲಾ ಸ್ಪರ್ಧಿಗಳ ಪಟ್ಟಿ ಇಲ್ಲಿದೆ ನೋಡಿ..

0 views

ಬಿಗ್ ಬಾಸ್ ಸೀಸನ್ ಹತ್ತರ ಗ್ರ್ಯಾಂಡ್ ಓಪನಿಂಗ್ ಚಿತ್ರೀಕರಣ ಮುಕ್ತಾಯ ಗೊಂಡಿದ್ದು ಹದಿನೆಂಟು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿದೆ.. ಹೌದು ಬಿಗ್ ಬಾಸ್ ಸೀಸನ್ ಹತ್ತರ ಮೊದಲ ದಿನದ ಜರ್ನಿ ಅದಾಗಲೇ ಆರಂಭವಾಗಿದ್ದು ಮೊದಲ ದಿನದ ಎಲ್ಲರೂ ತಮ್ಮ ವಾಸವನ್ನು ನಗು ನಗುತ್ತಲೇ ಕೊಂಚ ಅಳುಕಿನ ಜೊತೆ ಶುರು ಮಾಡಿದ್ದಾರೆ.. ಇನ್ನು ಸ್ಪರ್ಧಿಗಳ ವಿಚಾರಕ್ಕೆ ಬರುವುದಾದರೆ ಈ ಬಾರಿಯೂ ಕಿರುತೆರೆ ಕೋಟಾದಲ್ಲಿ ಕೆಲ ಕಲಾವಿದರು.. ಸಾಮಾಜಿಕ ಜಾಲತಾಣದಿಂದ ಕೆಲವರು ಹಾಗೆಯೇ ಕಾಂಟ್ರೋವರ್ಸಿ ಮಾಡಿಕೊಂಡಿರುವ ಕಿಲಾಡಿಗಳು ಹಾಗೆಯೇ ಸಿನಿಮಾ ನಟಿ ಕೂಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾಗಿದೆ..

ಹೌದು ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಗಲ್ಯಾಗಿ ಕಿರುತೆರೆ ನಟಿ ಪುಟ್ಟ ಗೌರಿ ಮದುವೆ ನಟಿ ಹಿಮಾ ಪಾತ್ರದಾರಿ ನಮ್ರತಾ ಗೌಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.. ಇನ್ನು ಬೇರೆ ವಾಹಿನಿಯ ಕಲಾವಿದರಿಗೂ ಬಿಗ್ ಬಾಸ್ ಮನೆಗೆ ಅವಕಾಶ ನೀಡೋದು ಎಲ್ಲರಿಗೂ ತಿಳಿದೇ ಇದೆ.. ಅದೇ ರೀತಿಯಾಗಿ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋ ಮೂಲಕ ಖ್ಯಾತಿ ಪಡೆದಿರುವ ನಟ ಸಂತೋಷ್.. ಕಿರುತೆರೆ ನಟಿ ಭಾಗ್ಯಶ್ರೀ.. ಸ್ನೇಹಿತ್ ಗೌಡ.. ತನಿಶಾ ಗೌಡ.. ನೀತು ವನಜಾಕ್ಷಿ.. ಕೂಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ..

ಇನ್ನು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಹಾದೇವ ಧಾರಾವಾಹಿಯ ಮೂಲಕ ಮನೆ ಮಾತಾಗಿದ್ದ ಸಧ್ಯ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಬದ್ರಿನಾಥ್ ಚಿನ್ನಿ ಪಾತ್ರಕ್ಕೆ ಎಂಟ್ರಿ ಕೊಟ್ಟಿದ್ದ ನಟ ವಿನಯ್ ಗೌಡ ಕೂಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.. ಇನ್ನು ಚಾರ್ಲಿ ಸಿನಿಮ್ದ ನಟಿ ಸಂಗೀತ ಶೃಂಗೇರಿ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದು ಸಿನಿಮಾ ತಾರೆಯರ ಕೋಟಾದಡಿಯಲ್ಲಿ ಆಗಮಿಸಿದ್ದಾರೆ.. ಇದರ ಜೊತೆಗೆ ಖ್ಯಾತ ಉರಗ ತಜ್ಞ ಮೈಸೂರಿನ ಸ್ನೇಕ್ ಶ್ಯಾಮ್ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದು ಮುಲಾಜಿಲ್ಲದೇ ಮಾತನಾಡುವ ಸ್ನೇಕ್ ಶ್ಯಾಮ್ ರಿಂದ ಒಂದಷ್ಟು ಮನರಂಜನೆ ದೊರಕುವುದು ಖಚಿತ ಎನ್ನಬಹುದು.. ಇವರೆಲ್ಲರ ಜೊತೆಗೆ ಕಾರ್ತಿಕ್ ಮಹೇಶ್ ಆಗಮಿಸಿದ್ದಾರೆ..

ಅಷ್ಟೇ ಅಲ್ಲದೇ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಕೂಡ ಬಿಗ್ ಬಾಸ್ ಮನೆಗೆ ಆಗಮಿಸಿದ್ದು ಟ್ರೋಲ್ ಮೂಲಕ ಖ್ಯಾತಿ ಪಡೆದಿದ್ದ ರಕ್ಷಕ್ ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಇರುವರೋ ಕಾದು ನೋಡಬೇಕಿದೆ.. ಇದಲ್ಲದಕಿಂತ ಮುಖ್ಯವಾಗಿ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದು ಈ ಮೂಲಕ ಅವರ ಮೇಲಿರುವ ಅಸಮಾಧಾನಗಳು ಜನರ ಮನಸ್ಸಿನಿಂದ ದೂರಾಗಬಹುದಾ ಕಾದು ನೋಡಬೇಕಿದೆ.. ಇನ್ನು ಪ್ರತಿ ಸೀಸನ್ ನಲ್ಲಿಯೂ ಸುದ್ದಿ ವಾಹಿನಿಯಿಂದ ಒಬ್ಬರನ್ನು ಕರೆಸುತ್ತಿದ್ದು ಈ ಬಾರಿಯೂ ಖ್ಯಾತ ಜರ್ನಲಿಸ್ಟ್ ಗೌರಿಶ್ ಅಕ್ಕಿ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ..

ಒಟ್ಟಿನಲ್ಲಿ ಈ ಬಾರಿ ಬಿಗ್ ಬಸ್ ಸೀಸನ್ ಹತ್ತರ ಸ್ಪರ್ಧಿಗಳ ಆಯ್ಕೆ ಬಿಗ್ ಬಾಸ್ ಮನೆಯೊಳಗೆ ಮನರಂಜನೆ ನೀಡೋದು ಪಕ್ಕಾ ಎನ್ನುವಂತೆ ಕಂಡಿದೆ.. ಸೀಸನ್ ಹತ್ತು ನೂರು ದಿನಗಳ ಸಂಭ್ರಮ ಆರಂಭವಾಗಿದ್ದು ನಾಳೆಯಿಂಡ ಪ್ರತಿ ರಾತ್ರಿ ಒಂಭತ್ತು ಮೂವತ್ತಕ್ಕೆ ಪ್ರತಿದಿನದ ಸಂಚಿಕೆಗಳು ಪ್ರಸಾರವಾಗಲಿದೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.