ಬಿಗ್ ಬಾಸ್ ಎಲಿಮಿನೇಷನ್ ನಲ್ಲಿ ಟ್ವಿಸ್ಟ್.. ಮನೆಯಿಂದ ಹೊರ ಬಂದ ಸ್ಪರ್ಧಿಯೇ ಬೇರೆ.. ಕಾರಣವೇನು ಗೊತ್ತಾ..

0 views

ಬಿಗ್ ಬಾಸ್ ಕನ್ನಡ ಸೀಸನ್ ಒಂಭತ್ತು ಎರಡನೇ ವಾರ ಮುಕ್ತಾಯವಾಗಿದ್ದು ಈ ವಾರ ಬಿಗ್ ಬಾಸ್ ಮನೆಯಲ್ಲಿ ಎರಡನೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು ಅದಾಗಲೇ ಮತ್ತೊಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಾಗಿದೆ.. ಹೌದು ಬಿಗ್ ಬಾಸ್ ಸೀಸನ್ ಒಂಭತ್ತು ಈ ಬಾರಿ ಬಂದ ಸ್ಪರ್ಧಿಗಳಲ್ಲಿ ಬಹುತೇಕ ಎಲ್ಲರೂ ಪ್ರೇಕ್ಷಕರಿಗ್ರ್ ಚಿರಪರಿಚಿತರೆ.. ಈ ಹಿಂದೆ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ದೀಪಿಕಾ ದಾಸ್ ಅರುಣ್ ಸಾಗರ್ ಅನುಪಮಾ ಗೌಡ ಪ್ರಶಾಂತ್ ಸಂಬರ್ಗಿ ಇದ್ದರೆ ಒಟಿಟಿ ಇಂದ ರಾಕೇಶ್ ಅಡಿಗ ಸಾನ್ಯಾ ಅಯ್ಯರ್ ಆರ್ಯವರ್ಧನ್ ಗುರೂಜಿ.. ರೂಪೇಶ್ ಶೆಟ್ಟಿ ಇದ್ದರು.. ಇನ್ನು ಅಮೂಲ್ಯ ಗೌಡ ನೇಹಾ ಗೌಡ ದರ್ಶ್ ಚಂದ್ರಪ್ಪ ಮಯೂರಿ ನವಾಜ್ ಹೀಗೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಈ ಬಾರಿ ಒಂದು ಮನರಂಜನೆಯ ಪ್ಯಾಕೇಜ್ ಆಗಿದ್ದು ಎಂದಿನಂತೆ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು..

ಇನ್ನು ಬಿಗ್ ಬಾಸ್ ಸೀಸನ್ ಒಂಭತ್ತರ ಮೊದಲ ವಾರದ ಎಲಿಮಿನೇಷನ್ ನಲ್ಲಿ ಬೈಕ್ ರೈಡರ್ ಐಶ್ವರ್ಯ ಪಿಸ್ಸೆ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದು ಮೊದಲ ವಾರವೇ ಬಿಗ್ ಬಾಸ್ ಜರ್ನಿ ಮುಗಿಸಿ ಮನೆ ಕಡೆಗೆ ಹೊರಟರು. ಇನ್ನು ಎರಡನೇ ವಾರ ಬಿಗ್ ಬಾಸ್ ಮನೆಯಲ್ಲಿ‌ ಸಾಕಷ್ಟು ಬದಕಾವಣೆಗಳು ಆಗಿದ್ದು ವಿನೋದ್ ಗೊಬ್ರಗಾಲ ಕ್ಯಾಪ್ಟನ್ ಆದರೂ ಕೂಡ ಆತನ ಮೇಲೆ ಸಾಕಷ್ಟು ಜನ ಅಸಮಾಧಾನ ಗೊಂಡರು.. ಅತ್ತ ಪ್ರಾಂಕ್ ಮಾಡಿ ಮನರಂಜನೆ ಮಾಡಲು ಮುಂದಾಗುತ್ತಿದ್ದ ರಾಕೇಶ್ ಅಡಿಗ ಎಲ್ಲರ ಬಳಿಯೂ ಬೈಸಿಕೊಂಡರು.. ಇನ್ನು ಇತ್ತ ಅನುಪಮಾ ದಿವ್ಯಾ ಉರುಡುಗ ಅರುಣ್ ಸಾಗರ್ ಎಲ್ಲರೂ ಸೇಫ್ ಜೋನ್ ನಲ್ಲಿದ್ದರು.. ಆರ್ಯವರ್ಧನ್ ಗುರೂಜಿ ಮಾತ್ರ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿತಾಗುತ್ತಲೇ ಇದ್ದರು..

ಕೊನೆಗೆ ಟಾಸ್ಕ್ ಗಳಲ್ಲಿ ಚೆನ್ನಾಗಿ ಆಡಿದ ಆರ್ಯವರ್ಧನ್ ಗುರೂಜಿ ಈ ವಾರದ ಬೆಸ್ಟ್ ಆಟಗಾರ ಎನಿಸಿಕೊಂಡದ್ದಷ್ಟೇ ಅಲ್ಲದೇ ಮುಂದಿನ ವಾರದ ಕ್ಯಾಪ್ಟನ್ ಕೂಡ ಆದರು.. ಇನ್ನು ರಾಕೇಶ್ ಅಡಿಗ ಮಾಡಿದ ಪ್ರಾಂಕ್‌ ನಿಂದ ಒಂದಷ್ಟು ಮಂದಿಗೆ ನೋವಾದ ಕಾರಣ ಈ ವಾರ ರಾಕೇಶ್ ಅಡಿಗ ಅವರನ್ನೇ ಕಳಪೆ ಎಂದು ತೀರ್ಮಾನಿಸಿ ಕಂಬಿಯ ಹಿಂದೆ ಕಳುಹಿಸಿದ್ದೂ ಆಯ್ತು..

ಇನ್ನೂ ಈ ವಾರದ ಎಲಿಮಿನೇಷನ್ ವಿಚಾರಕ್ಕೆ ಬರುವುದಾದರೆ ಈ ವಾರ ಬರೋಬ್ಬರಿ ಒಂಭತ್ತು ಜನ ಸ್ಪರ್ಧಿಗಳು ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು.. ಹೌದು ದೀಪಿಕಾ ದಾಸ್ ಮಯೂರಿ ಆರ್ಯವರ್ಧನ್ ಗುರೂಜಿ ಪ್ರಶಾಂತ್ ಸಂಬರ್ಗಿ ರೂಪೇಶ್ ರಾಜಣ್ಣ ನೇಹಾ ಗೌಡ ನವಾಜ್ ದರ್ಶ್ ಚಂದ್ರಪ್ಪ ಅಮೂಲ್ಯ ಗೌಡ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದರೆ ರೂಪೇಶ್ ಶೆಟ್ಟಿ ಸಾನ್ಯಾ ಅಯ್ಯರ್ ಅರುಣ್ ಸಾಗರ್ ಸೇರಿದಂತೆ ಇನ್ನುಳಿದ ಸ್ಪರ್ಧಿಗಳು ಸೇಫ್ ಆಗಿದ್ದರು‌..

ಇನ್ನು ನಿನ್ನೆ ವೀಕೆಂಡ್ ಕಾರ್ಯಕ್ರಮಕ್ಕೆ ಆಗಮಿಸಿದ ಕಿಚ್ಚ ಸುದೀಪ್ ಅವರಿಂದ ಈ ಸೀಸನ್ ನ ಎರಡನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಒಬ್ಬ ಸ್ಪರ್ಧಿ ಮನೆಯಿಂದ ಹೊರ ಬಂದಾಗಿದೆ.. ಹೌದು ಆ ಸ್ಪರ್ಧಿ ಮತ್ಯಾರೂ ಅಲ್ಲ ಅದು ನವಾಜ್.. ಹೌದು ಕಳೆದ ಕೆಲ ತಿಂಗಳುಗಳಿಂದ ಸಿನಿಮಾಗಳನ್ನು ನೋಡಿ ತನ್ನದೇ ಶೈಲಿಯಲ್ಲಿ ಕೊಂಚ ಅತಿರೇಕವಾಗಿ ಸಿನಿಮಾದ ರೀವ್ಯೂವ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಾ ಫೇಮಸ್ ಆದ ನವಾಜ್ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಪಡೆದುಕೊಂಡಿದ್ದನು.. ಆದರೆ ಬಿಗ್ ಬಾಸ್ ಮನೆಯಲ್ಲಿ ಆತನಿಂದ ಯಾವುದೇ ರೀತಿಯ ಮನರಂಜನೆಯ ಕಂಟೆಂಟ್ ಹೊರ ಬರಲಿಲ್ಲ.. ಸದಾ ಕಾಲ ಅರುಣ್ ಸಾಗರ್ ಗೆ ಬಕೆಟ್ ಹಿಡಿದುಕೊಂಡೆ ಸಾಗುತ್ತಿದ್ದ ಎನ್ನುವ ಮಾತಿದೆ..

ಇದೇ ಕಾರಣಕ್ಕೆ ಇನ್ನುಳಿದ ಸ್ಪರ್ಧಿಗಳು ಇವನಿಗಿಂತ ಉತ್ತಮರೆಂದು ಭಾವಿಸಿ ಈ ವಾರ ನವಾಜ್ ನನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಲಾಗಿದೆ.. ಆದರೆ ಈ ವಾರ ಬಿಗ್ ಬಾಸ್ ಮನೆಯಿಂದ ಮಯೂರಿ ಹೊರ ಹೋಗುವ ಎಲ್ಲಾ ಲಕ್ಷಣಗಳಿದ್ದವು.. ಅವರೇ ಹೋಗಲಿದ್ದಾರೆ ಎನ್ನಿವ ಮಾತು ಕೇಳಿ ಬಂದಿತ್ತು.. ಆದರೆ ಇತ್ತ ನವಾಜ್ ನಿಂದ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಪ್ರಯೋಜನವಿಲ್ಲ ಎಂಬ ಕಾರಣಕ್ಕೆ ಅವರನ್ನು ಹೊರ ಕಳುಹಿಸಲಾಗಿದೆ.. ಇನ್ನು ಕಳೆದ ವಾರ ವಿಜಯದಶಮಿಯ ದಿನ ನವಾಜ್ ಗೆ ಹೊಸ ಬಟ್ಟೆಯನ್ನು ಕಳುಹಿಸಲಾಗಿತ್ತು.. ಅದನ್ನು ನೋಡಿದ ನವಾಜ್ ನನ್ನ ಬಳಿ ಇದ್ದದ್ದೇ ಎರಡೇ ಜೊತೆ ಬಟ್ಟೆ ಅದನ್ನೇ ಯಾವಾಗಲೂ ಹಾಕಿಕೊಳ್ತಿದ್ದೆ.. ಅದನ್ನು ಬಿಟ್ಟು ಬೇರೆ ಬಟ್ಟೆ ಇರಲಿಲ್ಲ.. ಎಲ್ಲರೂ ಸಹ ನನ್ನನ್ನು ಕೇಳೋರು ನಿನ್ನ ಬಳಿ ಬೇರೆ ಬಟ್ಟೆ ಇಲ್ವಾ ಅಂತ ನಗೋರು..

ಆಗ ನನಗೆ ಇದೇ ಚೆನ್ನಾಗಿ ಕಾಣತ್ತೆ ಇದೇ ಮಸ್ತ್ ಆಗಿದೆ ಇದು ನನಗೆ ಇಷ್ಟ ಅದಕ್ಕೆ ಪದೇ ಪದೇ ಇದನ್ನೇ ಹಾಕಿಕೊಳ್ತೀನಿ ಎನ್ನುತ್ತಿದ್ದೆ ಎಂದು ಹೊಸ ಬಟ್ಟೆ ಕಳುಹಿಸಿದವರಿಗೆ ಕೈಮುಗಿದು ಥ್ಯಾಂಕ್ಸ್ ಹೇಳ್ತೀನಿ ಎಂದು ಭಾವುಕರಾಗಿದ್ದರು.. ಇದೀಗ ಬಿಗ್ ಬಾಸ್ ಅವಕಾಶವನ್ನು ಇನ್ನೂ ಚೆನ್ನಾಗಿ ಬಳಸಿಕೊಂಡು ಮತ್ತಷ್ಟು ವಾರಗಳ ಕಾಲ ಉಳಿಯಬಹುದಾಗಿತ್ತು.. ಆದರೆ ಮನರಂಜನೆಯ‌ ಕೊರತೆಯಿಂದಾಗಿ ಬಿಗ್ ಬಾಸ್ ನಿಂದ ಎರಡೇ ವಾರಕ್ಕೆ ನವಾಜ್ ಹೊರ ಬಂದಾಗಿದೆ.. ಇನ್ನುಳಿದಂತೆ ದೀಪಿಕಾ ದಾಸ್ ಅಮೂಲ್ಯ ಗೌಡ ದರ್ಶ್ ಚಂದ್ರಪ್ಪ ಆರ್ಯವರ್ಧನ್ ಮಯೂರಿ ರೂಪೇಶ್ ರಾಜಣ್ಣ ಎಲ್ಲರೂ ಸಹ ಸೇಫ್ ಆಗಿದ್ದು ಬಿಗ್ ಬಾಸ್ ಮನೆಯಲ್ಲಿ ಮೂರನೇ ವಾರಕ್ಕೆ ಕಾಲಿಟ್ಟಿದ್ದಾರೆ..